'ನೀನಾಸಂ' ನಿಂದ ವಾಪಾಸ್ ಬಂದುಬಿಟ್ಟೆ…!

 
ಶ್ರೀದೇವಿ ಕಳಸದ ಸುವರ್ಣ ಚಾನಲ್ ನಲ್ಲಿ ಪತ್ರಕರ್ತೆ. ಅದಕ್ಕೂ ಮಿಗಿಲಾಗಿ ಸಂಗೀತದ ಮೂಲಕ ಸಮಾಜವನ್ನು ಅರಿಯುವ ಪ್ರಯತ್ನದಲ್ಲಿರುವವರು. ಇತ್ತೀಚಿಗೆ ನೀನಾಸಂ ನಲ್ಲಿ ನಡೆದ ಸಂಸ್ಕೃತಿ ಶಿಬಿರದ ಬಗ್ಗೆ ಒಂದು ಪುಟ್ಟ ಟಿಪ್ಪಣಿಯನ್ನು ಬರೆದಿದ್ದಾರೆ. ಅದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಚರ್ಚೆಗೆ ಸ್ವಾಗತ-

ಸುಮಾರು ಐದಾರು ವರ್ಷದ ಹಿಂದೆ ವೈದೇಹಿಯವರು ಬರೆದ ಪುಸ್ತಕ ನನ್ನನ್ನು ಅಲ್ಲಿಗೆ ಹೋಗುವಂತೆ ಮಾಡಿತ್ತು. ಸಂಗೀತ ನಿರ್ದೇಶಕ ಭಾಸ್ಕರ್‍ ಚಂದಾವರ್‌ಕರ್‍ ಅವರು ನಡೆಸಿದ ರಸಗ್ರಹಣ ಶಿಬಿರದ ಸಂವಾದವನ್ನು ವೈದೇಹಿಯವರು ಸರಳವಾಗಿ, ಮನಮುಟ್ಟುವಂತೆ ಆ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದೇ ನಾನು ಹೆಗ್ಗೋಡಿಗೆ ಹೋಗಲು ಕಾರಣ.
ಈ ಬಾರಿಯ ನೀನಾಸಂ ಸಂಸ್ಕೃತಿ ಶಿಬಿರದ ವಿಷಯ ‘ಹಿಂದ್ ಸ್ವರಾಜ್’ ನೆನಪಿನಲ್ಲಿ ಮನೋಭೂಮಿಕೆಯಲ್ಲಿ ಸ್ವರಾಜ್ಯ . ಇದರ ಸುತ್ತವೇ ಏಳುದಿನಗಳ ಕಾರ್ಯಕ್ರಮವನ್ನು ಹೆಣೆಯಲಾಗಿತ್ತು. ಸುಮಾರು ಇನ್ನೂರು ಜನ ಶಿಬಿರಾರ್ಥಿಗಳು. ಹೆಚ್ಚಿನ ಪಾಲು ವಿದ್ಯಾರ್ಥಿ-ವಿದ್ಯಾರ್ಥಿನಿಯರೇ. ಉತ್ಸುಕತೆಯಿಂದಲೇ ಎಲ್ಲರೂ ಪಾಲ್ಗೊಳ್ಳುತ್ತಿದ್ದರು. ಸಂಪನ್ಮೂಲ ವ್ಯಕ್ತಿಗಳೂ ಅದ್ಭುತವಾಗಿಯೇ ಮಾತನಾಡುತ್ತಿದ್ದರು. ಸಂವಾದಿಸುತ್ತಿದ್ದರು. ಸಂಜೆ ನಡೆವ ನಾಟಕಗಳಂತೂ ಇನ್ನೂ ಚೆಂದ.
ಆದರೆ ಶಿಬಿರ ಯಾಕೋ ಏಕಮುಖವಾಗಿ ಚಲಿಸುತ್ತಿದೆ ಎಂದೆನಿಸಿದಾಗ ನಾನು ಬೆಂಗಳೂರಿಗೆ ವಾಪಸಾಗಿಬಿಟ್ಟೆ. ಶಿಬಿರದಲ್ಲಿ motivation ಮತ್ತು interaction ಅಷ್ಟೊಂದು ಸಮರ್ಪಕವಾಗಿ ಕಾಣಿಸದಿದ್ದುದು ಇದಕ್ಕೆ ಕಾರಣ. ಹೊಸ ಪೀಳಿಗೆಯ ಗ್ರಹಿಕೆ, ಆಶೋತ್ತರಗಳಿಗೆ ಅಲ್ಲಿ ಜಾಗವಿಲ್ಲವೇನೋ ಎನಿಸಿತು. ಇದ್ದರೂ ಅದು ನನಗೆ ನಿಲುಕಲಿಲ್ಲವೇನೋ.. ಅಥವಾ ಶಿಬಿರದ ಉದ್ದೇಶದ ಬಗ್ಗೆ ಸ್ಪಷ್ಟ ಕಲ್ಪನೆ ನನಗಿರಲಿಲ್ಲವೇನೋ…. ನನ್ನ ನಿರೀಕ್ಷೆಯೇ ಬೇರೆಯದಾಗಿತ್ತೇನೋ…
ಆದರೆ ಮನಸಿನಲ್ಲುಳಿದದ್ದು, ಕೊಟ್ಟ ಕಾಲುಗಂಟೆಯಲ್ಲಿಯೇ ದೇಸಿ ಮಾತು-ನಗೆಯೊಂದಿಗೆ ಕಾಣಿಸಿಕೊಂಡ ವೈದೇಹಿ ಮತ್ತವರ ಕವನಗಳು. ಕೆಲ ನಾಟಕಗಳು. ಹೆಗ್ಗೋಡಿನ ಪ್ರಕೃತಿ.
ಅಷ್ಟೊಂದು ಹಿರಿಕಿರಿಯ ಜೀವಗಳಿದ್ದರೂ ‘ಆಪ್ತತೆ’ ಯಾಕೋ ಕೈಕಟ್ಟಿ ದೂರವೇ ನಿಂತಿತ್ತು.

‍ಲೇಖಕರು avadhi

October 14, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. natarajhuliyar

    this layout is much much readable and there is still lot of scope for improvement,ofcourse!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: