ನೀನಾಸಮ್ ಸಂಸ್ಕೃತಿ ಶಿಬಿರ: ಅಕ್ಟೋಬರ್ 2012

ಕಳೆದ ಎರಡೂವರೆ ದಶಕಗಳಿಂದ ಚಲನಚಿತ್ರ-ಸಂಸ್ಕೃತಿ ಶಿಬಿರಗಳನ್ನು ಪ್ರತಿ ಅಕ್ಟೋಬರ್‌ನಲ್ಲಿ ನಡೆಸುತ್ತ ಬಂದಿರುವ ನೀನಾಸಮ್ ಈ ವರ್ಷವೂ ‘ಸಂಸ್ಕೃತಿ ಶಿಬಿರ 2012’ನ್ನು ಸಂಘಟಿಸುತ್ತಿದೆ. 2012 ಅಕ್ಟೋಬರ್ 7 ರಿಂದ 13ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ, ಚಲನಚಿತ್ರ ಮುಂತಾದ ಸಾಂಸ್ಕೃತಿಕ ಮಾಧ್ಯಮಗಳ ಸ್ವರೂಪ ಮತ್ತು ಪರಸ್ಪರ ಸಂಬಂಧ, ಹಾಗೂ ಒಟ್ಟೂ ಸಮಾಜದೊಂದಿಗೆ ಸಂಸ್ಕೃತಿಯ ಸಂಬಂಧ — ಈ ವಿಷಯಗಳ ಬಗ್ಗೆ ಕನ್ನಡದ ಹಾಗೂ ಹೊರನಾಡುಗಳ ಅನೇಕ ಗಣ್ಯರು ಉಪನ್ಯಾಸ, ಚರ್ಚೆ, ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡಲಿದ್ದಾರೆ. ಪ್ರತಿದಿನ ಸಂಜೆ ನಾಟಕ, ಸಂಗೀತ, ನೃತ್ಯ ಇತ್ಯಾದಿ ಕಾರ್ಯಕ್ರಮಗಳನ್ನೊಳಗೊಂಡ ಸಾಂಸ್ಕೃತಿಕ ಉತ್ಸವವನ್ನು ಕೂಡಾ ಏರ್ಪಡಿಸಲಾಗಿದೆ. ಶಿಬಿರದ ಎಲ್ಲ ದಿನಗಳ ಊಟ-ವಸತಿ ಸೇರಿ ಶಿಬಿರದ ಒಟ್ಟು ಶುಲ್ಕ ರೂ. 2000-00 (ವಿದ್ಯಾರ್ಥಿಗಳಿಗೆ ರೂ. 1500). ಸಾಂಸ್ಕೃತಿಕ ಕಾರ್ಯಕರ್ತರು, ಶಿಕ್ಷಕರು, ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಗ್ರಾಮೀಣ ಪ್ರದೇಶದ ಆಸಕ್ತರುಗಳಿಗೆ ಶಿಬಿರದಲ್ಲಿ ಆದ್ಯತೆ ಇರುತ್ತದೆ. ಭಾಗವಹಿಸಲಿಚ್ಛಿಸುವವರು ಅಭ್ಯರ್ಥಿ ಪತ್ರವನ್ನು ತರಿಸಿಕೊಂಡು ತುಂಬಿ — ನೀನಾಸಮ್, ಹೆಗ್ಗೋಡು, ಸಾಗರ, ಕರ್ನಾಟಕ 577 417 — ಈ ವಿಳಾಸಕ್ಕೆ ಸೆಪ್ಟೆಂಬರ್ 25ರ ಒಳಗೆ ತಲುಪುವಂತೆ ಕಳಿಸಿಕೊಡಬೇಕು. ನೀನಾಸಮ್‌ನ ಅಂತರ್ಜಾಲ ತಾಣದಲ್ಲೂ ಕೂಡ ನೇರವಾಗಿ ಅರ್ಜಿ ಸಲ್ಲಿಸಬಹುದು.

ಶಿಬಿರ ಯೋಜನೆ 1979ರಿಂದ ಸತತವಾಗಿ ನೀನಾಸಮ್ ಪ್ರತಿ ಅಕ್ಟೋಬರಿನಲ್ಲಿ ಚಲನಚಿತ್ರ-ಸಂಸ್ಕೃತಿ ಶಿಬಿರಗಳನ್ನು ನಡೆಸುತ್ತ ಬಂದಿದೆ. ಈ ವರ್ಷದ ಸಂಸ್ಕೃತಿ ಶಿಬಿರವೂ ಅದೇ ಮಾದರಿಯಲ್ಲಿ ಯೋಜಿತವಾಗಿದೆ. ಈ ಶಿಬಿರದಲ್ಲಿ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ, ಚಲನಚಿತ್ರ ಮುಂತಾದ ಸಾಂಸ್ಕೃತಿಕ ಮಾಧ್ಯಮಗಳ ಸ್ವರೂಪ, ವೈವಿಧ್ಯ, ಮೀಮಾಂಸೆ, ವಿಮರ್ಶೆ, ಈ ಮಾಧ್ಯಮಗಳ ಪರಸ್ಪರ ಸಂಬಂಧ ಹಾಗೂ ಒಟ್ಟೂ ಸಮಾಜದೊಂದಿಗೆ ಸಂಸ್ಕೃತಿಯ ಸಂಪರ್ಕ — ಈ ವಿಷಯಗಳ ಬಗ್ಗೆ ಅಭ್ಯಾಸ, ಚರ್ಚೆ, ವಿಚಾರ ವಿನಿಮಯ ನಡೆಯುತ್ತದೆ. ಜತೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಸವ ನಡೆಯುತ್ತದೆ. ಶಿಬಿರ ಪ್ರಾರಂಭವಾಗುವುದು ಒಟ್ಟೂ ಕಾರ್ಯಕ್ರಮದ ಸ್ಥೂಲ ಸ್ವರೂಪವನ್ನು ಪರಿಚಯಿಸುವ ಕಿರು ಅಧಿವೇಶನದಿಂದ. ಆಮೇಲಿನ ದಿನಗಳಲ್ಲಿ ರಂಗಭೂಮಿಯ ಬಗ್ಗೆ, ಸಂಗೀತ-ನೃತ್ಯ ಮಾಧ್ಯಮಗಳ ಬಗ್ಗೆ, ಸಾಹಿತ್ಯದ ವಿವಿಧ ಪ್ರಕಾರಗಳ ಬಗ್ಗೆ, ಚಲನಚಿತ್ರ ಸಹೃದಯತೆಯ ಬಗ್ಗೆ ಮತ್ತು ಒಟ್ಟೂ ಸಂಸ್ಕೃತಿ-ಸಂವಹನದ ಪ್ರಕ್ರಿಯೆಯ ಬಗ್ಗೆ ಉಪನ್ಯಾಸ-ಪ್ರಾತ್ಯಕ್ಷಿಕೆ-ಚರ್ಚೆಗಳು ನಡೆಯುತ್ತವೆ.ಪ್ರತಿಯೊಂದು ವಿಷಯದ ಬಗ್ಗೆ ಶಿಬಿರ ನಡೆಯುವಾಗಲೂ ಆಯಾ ಮಾಧ್ಯಮದ ಆಯ್ದ ಕೃತಿಗಳನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಗುತ್ತದೆ. ಶಿಬಿರ ಪ್ರತಿನಿತ್ಯ ಬೆಳಿಗ್ಗೆ 9 ಗಂಟೆಯಿಂದ 1 ಗಂಟೆ ಹಾಗೂ ಮಧ್ಯಾಹ್ನ 2.30 ರಿಂದ 6ರ ತನಕ ನಡೆಯುತ್ತದೆ. ಇದಲ್ಲದೆ ಪ್ರತಿದಿನ ಸಂಜೆ ರಂಗಪ್ರದರ್ಶನಗಳು (ತಿರುಗಾಟ 2012ರ ಪ್ರಥಮ ಪ್ರದರ್ಶನಗಳು),ಸಂಗೀತ, ನೃತ್ಯ ಹಾಗೂ ಇನ್ನಿತರ ಕಾರ್ಯಕ್ರಮಗಳು ಶಿಬಿರಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಏರ್ಪಾಟಾಗಿರುತ್ತದೆ. ಭಾಗವಹಿಸುವವರಲ್ಲಿ ವಿನಂತಿ 1. ಗ್ರಾಮೀಣ ಮತ್ತು ನಗರೇತರ ಪ್ರದೇಶಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಂಘಟಿಸಲು ಆಸಕ್ತಿಯಿರುವವರಿಗಾಗಿ ಈ ಶಿಬಿರ ವಿಶೇಷವಾಗಿ ಯೋಜಿಸಲ್ಪಟ್ಟಿದೆ. ಆದ್ದರಿಂದ ಗ್ರಾಮೀಣ ಮತ್ತು ನಗರೇತರ ಪ್ರದೇಶಗಳಲ್ಲಿ ದುಡಿಯುತ್ತಿರುವ ಸಾಂಸ್ಕೃತಿಕ ಸಂಘಟನೆಗಳ ಕಾರ್ಯಕರ್ತರು, ಸಂಸ್ಕೃತಿಯ ಬಗ್ಗೆ ಆಸಕ್ತಿಯಿರುವ ಉಪಾಧ್ಯಾಯರು, ವಿದ್ಯಾರ್ಥಿಗಳು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಈ ಶಿಬಿರದಲ್ಲಿ ಆದ್ಯತೆ ನೀಡಲಾಗುತ್ತದೆ. ಹಾಗೆಯೇ ಒಟ್ಟೂ ಸಾಂಸ್ಕೃತಿಕ ಮಾಧ್ಯಮಗಳಲ್ಲಿ ಆಸಕ್ತಿಯಿರುವ ಇತರರೂ ಈ ಶಿಬಿರದಲ್ಲಿ ಭಾಗವಹಿಸಬಹುದು. ಶಿಬಿರದ ಹಲವು ಉಪನ್ಯಾಸಗಳನ್ನು ಕನ್ನಡದಲ್ಲೇ ಯೋಜಿಸಲಾಗದೆಯಾದರೂ ಕೆಲವು ಉಪನ್ಯಾಸಗಳು ಅನಿವಾರ್ಯವಾಗಿ ಇಂಗ್ಲಿಷಿನಲ್ಲಿ ನಡೆಯುತ್ತವೆ (ಮತ್ತು ಸಾಧ್ಯವಾದಷ್ಟೂ ಅಂಥ ಉಪನ್ಯಾಸಗಳ ಸಂಕ್ಷಿಪ್ತ ಕನ್ನಡ ಅನುವಾದವನ್ನೂ ಕೊಡಲು ಪ್ರಯತ್ನಿಸಲಾಗುತ್ತದೆ). ಆದ್ದರಿಂದ ಶಿಬಿರದಲ್ಲಿ ಭಾಗವಹಿಸುವವರಿಗೆ ಇಂಗ್ಲಿಷಿನ ಪ್ರಾಥಮಿಕ ಜ್ಞಾನ ಇದ್ದರೆ ಅನುಕೂಲ. 2. ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರು, ವಿಳಾಸ, ವಯಸ್ಸು, ವಿದ್ಯಾಭ್ಯಾಸ, ವೃತ್ತಿ ಇವುಗಳ ವಿವರಗಳನ್ನೂ, ತಮಗೆ ಸಾಂಸ್ಕೃತಿಕ ಸಂಘಟನೆಗಳ ಬಗ್ಗೆ ಇರುವ ಅನುಭವ, ಆಸಕ್ತಿಯ ವಿವರಗಳನ್ನೂ, ತಾವು ಯಾವುದಾದರೂ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದರೆ ಅದರ ವಿವರಗಳನ್ನೂ ತಿಳಿಸಿ, ತಾ. 25 ಸೆಪ್ಟಂಬರ್ 2012ರೊಳಗೆ ತಮ್ಮ ಅಭ್ಯರ್ಥಿ ಪತ್ರ ಕಳಿಸಬೇಕು. ಆಯ್ಕೆಯಾದವರಿಗೆ ಆ ಬಗ್ಗೆ ಸೂಚನೆ ಕೊಡಲಾಗುವುದು. 3. ಶಿಬಿರಕ್ಕೆ ಬರುವ ಎಲ್ಲ ಅಭ್ಯರ್ಥಿಗಳು ಶಿಬಿರದ ಅಷ್ಟೂ ದಿನ ಭಾಗವಹಿಸುವುದು ಅಗತ್ಯ. ಭಾಗಶಃ ಪಾಲ್ಗೊಳ್ಳುವುದಕ್ಕೆ ಅವಕಾಶವಿಲ್ಲ. 4. ಶಿಬಿರದಲ್ಲಿ ಭಾಗವಹಿಸಲು ಪ್ರತಿಯೊಬ್ಬ ಅಭ್ಯರ್ಥಿ ಕೊಡಬೇಕಾದ ಒಟ್ಟು ಶುಲ್ಕ ರೂ. 2000-00 (ಸಂಜೆಯ ಕಾರ್ಯಕ್ರಮಗಳಿಗೆ ಪ್ರವೇಶ ಮತ್ತು 7 ದಿನಗಳ ಊಟ ವಸತಿಗಾಗಿ). ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ ಸಲ್ಲಿಸುವ ವಿದ್ಯಾರ್ಥಿಗಳಿಗೆ ಶಿಬಿರ ಶುಲ್ಕ ರೂ. 1500. ಈ ಹಣವನ್ನು ಅಭ್ಯರ್ಥಿಪತ್ರದ ಜತೆಗೆ ಅಥವಾ ಆಮೇಲೆ ನಮ್ಮಿಂದ ಪತ್ರ ಬಂದಮೇಲೆ “ನೀನಾಸಮ್, ಹೆಗ್ಗೋಡು ಎಂಬ ಹೆಸರಿಗೆ ಕರ್ನಾಟಕ ಬ್ಯಾಂಕ್, ಹೆಗ್ಗೋಡು ಅಥವಾ ಬೇರಾವುದೇ ಬ್ಯಾಂಕಿನ ಸಾಗರ ಶಾಖೆಗೆ ಡಿ.ಡಿ. ತೆಗೆಸಿ ಕಳಿಸಬೇಕು. ಇನ್ನು, ಇದಲ್ಲದೆ ಶಿಬಿರಕ್ಕೆ ಬರುವ ಇನ್ನೆಲ್ಲಾ ಖರ್ಚುಗಳನ್ನೂ ನೀನಾಸಮ್ ಸಂಸ್ಥೆಯು ದೇಣಿಗೆ ಮತ್ತು ಅನುದಾನಗಳಿಂದ ಸಂಗ್ರಹಿಸುವ ಯೋಜನೆ ಹಾಕಿಕೊಂಡಿದೆ. ಆಸಕ್ತಿಯಿರುವವರಿಂದ ಅಭ್ಯರ್ಥಿ ಪತ್ರವನ್ನು ನೀನಾಸಮ್ ಸ್ವಾಗತಿಸುತ್ತದೆ. ಜತೆಗಿರುವ ಅಭ್ಯರ್ಥಿ ಪತ್ರದಲ್ಲಿ ವಿವರಗಳನ್ನು ತುಂಬಿಸಿ ಕಳಿಸಬೇಕಾಗಿ ವಿನಂತಿ. ನೀನಾಸಮ್‌ನ ಅಂತರ್ಜಾಲ ತಾಣದಲ್ಲೂ ಕೂಡ ಅರ್ಜಿ ಸಲ್ಲಿಸಬಹುದು. ವಿಳಾಸ: ನೀನಾಸಮ್, ಹೆಗ್ಗೋಡು, ಸಾಗರ ಕರ್ನಾಟಕ 577 417 ದೂರವಾಣಿ: 08183-265646

ಆಹ್ವಾನಿತ ಅತಿಥಿಗಳು (ತಾತ್ಕಾಲಿಕ ಪಟ್ಟಿ)

ಶ್ರೀ ಯು.ಆರ್. ಅನಂತಮೂರ್ತಿ (ಶಿಬಿರ ನಿರ್ದೇಶಕರು) Sri. U R Ananthamurthy ( Course Director ) ಶ್ರೀ ಸಮೀಕ್ ಬ್ಯಾನರ್ಜಿ Sri Samik Banarjee ಶ್ರೀ ಮನು ಚಕ್ರವರ್ತಿ Sri Manu Chakravarthy ಡಾ. ಚಂದ್ರಶೇಖರ ಕಂಬಾರ Dr. Chandrashekhara Kambara ಡಾ. ಸಿದ್ದಲಿಂಗಯ್ಯ Dr. Siddalingayya ಶ್ರೀ ಎಚ್.ಎಸ್. ವೆಂಕಟೇಶ ಮೂರ್ತಿ Sri. H S Venkateshmurthy ಡಾ. ಸುಂದರ ಸಾರುಕ್ಕೈ Dr. Sundar Sarukkai ಶ್ರೀ ಶಿವ ವಿಶ್ವನಾಥನ್ Sri. Shiv Viswanathan
Date Time Event/s
07-10-2012 7 PM Tirugata Play: Vigadavikramaraya Dir. by: Manju Kodagu
08-10-2012 7 PM Tirugata Play: Mukkam Post Bombilwadi Dir. by: Omkar KR
09-10-2012 7 PM Ninasam Play: Uttararamacharite Dir. by: B.R. Venkataramana Aithala
10-10-2012 7 PM Karnatak Music Recital: Bombay Jayashree and group
11-10-2012 7 PM Traditional Theatre performance: Srikrishnaparijatha by the group, Mallikarjuna Mudakavi Dadanatti, Mudhola
12-10-2012 7 PM  8.30 PM Contemporary musical rendering of Kanada poems MD Pallavi and her group  Play Vanity Bag Dir by Mangala N.
13-10-2012 7 PM Odissi Dance performance: Madhulita Mohapatra and her group Nrityantar
Venue: Shivarama Karantha Rangamandira, Heggodu   ಶ್ರೀ ಸದಾನಂದ ಮೆನೊನ್ Sri. Sadananda Menon ಶ್ರೀ ಅತುಲ್ ತಿವಾರಿ Sri. Atul Tiwari ಶ್ರೀ ಗಿರೀಶ್ ಕಾಸರವಳ್ಳಿ Sri. Girish Kasaravalli ಶ್ರೀ ವಿವೇಕ ಶಾನಭಾಗ Sri. Vivek Shanabhag ಶ್ರೀಮತಿ ವೈದೇಹಿ Smt. Vaidehi ಶ್ರೀ ಪ್ರಕಾಶ ಬೆಳವಾಡಿ Sri. Prakash Belawadi ಶ್ರೀ ಎಸ್. ಆರ್. ವಿಜಯಶಂಕರ Sri. Vijayashankara S R ಶ್ರೀ ಚನ್ನಕೇಶವ, Sri. Channakeshava ಶ್ರೀ ಚರಣ Sri. Charana ಶ್ರೀ ಕೆ.ಎಸ್. ರಾಜಾರಾಮ Sri. K S Rajarama ಶ್ರೀ ಎ.ಎನ್. ಮುಕುಂದ್ Sri. A N Mukund ಮೊದಲಾದವರು ಶ್ರೀ ಟಿ.ಪಿ. ಅಶೋಕ್, ಶ್ರೀ ಜಸವಂತ ಜಾಧವ್ (ಶಿಬಿರ ಸಂಚಾಲಕರು) Sri. T P Ashok and Sri. Jasawanth Jadav (Course Coordinators)  ]]>

‍ಲೇಖಕರು G

September 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

೧ ಪ್ರತಿಕ್ರಿಯೆ

  1. Jayalaxmi Patil

    ದಯವಿಟ್ಟು ಅಂತರ್ಜಾಲ ತಾಣದ ಕೊಂಡಿಯನ್ನು ಲಗತ್ತಿಸಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: