ನೀನು ನೋಯುತ್ತೀಯ, ನಾನು ಬೇಯುತ್ತೇನೆ….

ನೋವು… – ದಿನೇಶ್ ಕುಮಾರ್   ಹಾಗೆ ಯಾರ ದೇಹದ ನೋವನ್ನೂ ಯಾರೂ ಹೀರಿ ನೀಗಿಸುವಂತಿಲ್ಲ ಹೀರುವಂತಿದ್ದರೆ ನಿನ್ನ ನೋವನ್ನು ನಾನೇ ತುಟಿಯೊತ್ತಿ ಗಟಗಟನೆ ಕುಡಿದುಬಿಡುತ್ತಿದ್ದೆ   ಮನಸ್ಸು ನೋಯುತ್ತದೆ, ದುಃಖ ಕಟ್ಟಿ ನಿಲ್ಲುತ್ತದೆ ಎದೆಯಲ್ಲಿ, ಗಂಟಲಲ್ಲಿ, ಕಿಬ್ಬೊಟ್ಟೆಯಲ್ಲಿ ಒಂದು ಸಾಂಗತ್ಯದ ಮಾತಿಗೆ ದುಃಖ ಕರಗಬಹುದು ದೇಹದ ನೋವು ಹಾಗಲ್ಲ, ಅದು ಸುಲಭಕ್ಕೆ ಕರಗುವುದಿಲ್ಲ ದಿನೇದಿನೇ ಕರಗುವ ಕಸದಂತೆ ದೇಹ ನಮ್ಮದೇ ಅಂಗಾಂಗಗಳು ನಮಗೇ ಪರಕೀಯ ಆಪರೇಷನ್ ಥಿಯೇಟರಿನಲ್ಲಿ ಮಸುಕುಧಾರಿ ವೈದ್ಯರು ಒಂದೊಂದೇ ಅವಯವಗಳನ್ನು ನಿರ್ದಯವಾಗಿ ಕತ್ತರಿಸಿ ಎಸೆಯುತ್ತಾರೆ ನಿತ್ಯ ಒಂದು ವೈಕಲ್ಯ   ಮುಟ್ಟಿ, ತಬ್ಬಿ, ಮುತ್ತಿಟ್ಟು ನೋವ ಮರೆಸುವ ಜಾದೂ ನನಗೆ ಗೊತ್ತಿಲ್ಲ ಹಾಗೆ ಉಪಚರಿಸುವೆನೆಂಬ ನನ್ನ ಅಹಂಕಾರವೇ ಬೊಗಳೆ ನೀನು ನೋಯುತ್ತೀಯ, ನಾನು ಬೇಯುತ್ತೇನೆ ಇದಿಷ್ಟೇ ಸತ್ಯ   ಆದರೂ ನಿನ್ನ ಗಾಯಕ್ಕೆ ನನ್ನ ಹಲ್ಲನ್ನೂರುತ್ತೇನೆ ಬಾಯಿ ತುಂಬಾ ರಕ್ತ ರಕ್ತ ರಕ್ತ… ಮುಕ್ಕುಳಿಸಿ ಎಸೆದು ಮತ್ತೆ ಮತ್ತೆ ತುಟಿಯೊತ್ತಿ ನಿಲ್ಲುತ್ತೇನೆ   ನನ್ನವು ಅಸಹಾಯಕ ಕೈಗಳು ಸಂಜೀವಿನಿ ಪರ್ವತ ಹೊತ್ತು ತರಲಾರೆ ಗಂಟಲು ಒಣಗಿಹೋಗಿದೆ ಬಿಕ್ಕುವ ನಿನ್ನ ಕಣ್ಣಹನಿಗಳ ಕುಡಿದೇ ಉಪಚಾರಕ್ಕೆ ನಿಲ್ಲುವೆ, ನಿನ್ನ ನೋವ ಮರೆಸುವ ಶಕ್ತಿಯನ್ನು ನೀನೇ ನನಗೆ ಕೊಟ್ಟುಬಿಡು…      ]]>

‍ಲೇಖಕರು G

June 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

ಕೋಟೆ ಬಾಗಿಲಿಗೆ ಬಂದವರು..

ಕೋಟೆ ಬಾಗಿಲಿಗೆ ಬಂದವರು..

ಮಂಜುನಾಥ್ ಚಾಂದ್ ಧರೆಯ ಒಡಲಿನಿಂದತೊರೆಗಳಾಗಿ ಬಂದವರಗುಂಡಿಗೆಗೆ ತುಪಾಕಿಹಿಡಿಯುವ ಮುನ್ನದೊರೆ ತಾನೆಂದು ಬೀಗಿಸೆಟೆಯುವ ಮುನ್ನನಿನ್ನ ದುಃಖ ನನ್ನ...

ಕಲಾಕೃತಿಗೆ ಜೀವವಾಗಿ ಬಂದವಳು…

ಕಲಾಕೃತಿಗೆ ಜೀವವಾಗಿ ಬಂದವಳು…

ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು  ಕಡು ಬಿಸಿಲಿನ...

6 ಪ್ರತಿಕ್ರಿಯೆಗಳು

 1. RJ

  ನಿನ್ನ ನೋವ ಮರೆಸುವ ಶಕ್ತಿಯನ್ನು
  ನೀನೇ ನನಗೆ ಕೊಟ್ಟುಬಿಡು…
  -Classic End. Bingo!

  ಪ್ರತಿಕ್ರಿಯೆ
 2. ರವಿಮುರ್ನಾಡು,ಕ್ಯಾಮರೂನ್

  ಕಾವ್ಯ ಸಂವೇಧಿ ಸೂಕ್ಷ್ಮಗಳು ಭಾವಪಲ್ಲಟಗೊಳ್ಳುತ್ತಿರುವುದನ್ನು ಈ ಕವಿತೆಯಲ್ಲಿ ಕಾಣುತ್ತಿದ್ದೇನೆ. ಚೆನ್ನಾಗಿದೆ ಕವಿತೆ. ಪ್ರತಿಮೆ ಬೆಳಕಿಗೆ ಮುಖ ಮಾಡಿದಾಗ ,ಅದೇ ಪ್ರತಿಮೆ ಕತ್ತಲೆಯೂ ಬೇಕು ಅಂತ ಬೇಡುವುದು ಭಾವಪಲ್ಲಟ. ಒಮ್ಮೆ ಗಾಳಿ ಬಿಸಿಯಾಗುವುದು,ಮತ್ತೆ ತ೦ಗಾಳಿಯಾಗುವುದು. ಅಥವಾ ತ೦ಪಾದ೦ತೆ ತೇಲಿಸಿಕೊಳ್ಳುವುದು.ಈ ಕೆಳಗಿನ ಸಾಲು ನೋಡಿ :
  “ಆದರೂ,ನಿನ್ನ ಗಾಯಕ್ಕೆ ನನ್ನ ಹಲ್ಲನ್ನೂರುತ್ತೇನೆ ”
  ಇದೇ ತಿಕ್ಷಣ ಭಾವ ,ಅದೇ ವೇಗದಲ್ಲಿ ಜಿಗಿದು,
  “ಬಿಕ್ಕುವ ನಿನ್ನ ಕಣ್ಣಹನಿಗಳ ಕುಡಿದು” ಅಂತ ಹೇಳುವಾಗ ಭಾವ ತುಂಬಾ ಆರ್ತಸ್ವರವಾಗುವುದು. ಆಳವಾಗಿ ತಾಳ್ಮೆಗೆ ಒಗ್ಗಿಸಿ ತೆಗೆದ ಕವಿತೆ ಇದು.ಗಟ್ಟಿಯಾಗಿದೆ.ಕವಿತೆಗೆ ಇದು ಬೇಕು. ಅಲ್ಲಲ್ಲಿ ವ್ಯಾಚ್ಯಾರ್ಥ ಬಂದಿದ್ದರೂ,ಸರಿಪಡಿಸಿ, ಸಾರ್ವಕಾಲಿಕಗೊಳಿಸಲು ಅವಕಾವಿದೆ.ಹಂಚಿಕೊಂಡಿದ್ದಕ್ಕೆ ವಂದನೆಗಳು.

  ಪ್ರತಿಕ್ರಿಯೆ
 3. ಅಶೋಕ ಶೆಟ್ಟರ್

  ಈ ಕವಿತೆಯ ಸಾಲುಗಳಲ್ಲಿ ಹುದುಗಿರುವ ಧ್ವನಿಯ ಶಕ್ತಿ ಮನ ಸೆಳೆಯುವಂಥದು.

  ಪ್ರತಿಕ್ರಿಯೆ
 4. D.RAVI VARMA

  ನನ್ನವು ಅಸಹಾಯಕ ಕೈಗಳು
  ಸಂಜೀವಿನಿ ಪರ್ವತ ಹೊತ್ತು ತರಲಾರೆ
  ಗಂಟಲು ಒಣಗಿಹೋಗಿದೆ
  ಬಿಕ್ಕುವ ನಿನ್ನ ಕಣ್ಣಹನಿಗಳ ಕುಡಿದೇ
  ಉಪಚಾರಕ್ಕೆ ನಿಲ್ಲುವೆ,
  ನಿನ್ನ ನೋವ ಮರೆಸುವ ಶಕ್ತಿಯನ್ನು
  ನೀನೇ ನನಗೆ ಕೊಟ್ಟುಬಿಡು…
  ನಿಮ್ಮ ಕಾವ್ಯ gattirupagolluvude ಇಲ್ಲಿ .bikkuva ನಿನ್ನ kanna niirina hanigalanne kudidu ಉಪಚಾರಕ್ಕೆ ನಿಲ್ಲುತ್ತೇನೆ ,ನಿನ್ನ ನೋವ ಮರೆಸುವ ಶಕ್ತಿಯನ್ನು ನೀನೆ ಕೊಟ್ಟು ಬಿಡು ದೋಸ್ತ್ ನನಗೆ ಏನನ್ನು ಹೇಳಲಾಗದು ,ಇಲ್ಲಿ ಒಬ್ಬರಿಗೆ ಮತ್ತೊಬ್ಬರು ಅಸ್ತೆ, ಬಹಳ ಕಾಲದ ನಂತರ ಒಂದು ಅಂತರಾಳದ ನೋವನ್ನು,ಹಲಹಲಿಕೆಯನ್ನು ವೈಭವಿಕರಿಸದೆ, ಮನತುಂಬಿದ ಮಾತಿನಲ್ಲಿ ,ಹೇಳಿದ,ಒಳಗೊಳಗೇ ಅತ್ತ, ಸಂಕಟ ಅನುಭವಿಸಿದ , ಸ್ತಿತಿಯನ್ನು ಈ ಕಾವ್ಯದ ಸಾಲುಗಳು ಚಿತ್ರೀಕರಿಸಿವೆ. ನನಗೆ ನಿಜಕ್ಕೂ ಥ್ರಿಲ್ ಆಗಿದೆ, ನೋವನ್ನು ಬರೆದಾದರು ಬದುಕಬಹುದೇ ………..
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: