
ರೇಷ್ಮಾ ಗುಳೇದಗುಡ್ಡಾಕರ್
ಪ್ರಖರ ಬೆಳಕು ಕಾಣಿಸದು
ನನ್ನ ರೂಪವ ಅಂತರಂಗದ
ಪ್ರಲಾಪವ
ಗಾಢ ಕತ್ತಲೆ ಕಾಣಿಸುವದು
ನನ್ನೂಳಗಿನ ನನ್ನು
ಅಲ್ಲಿನ ಬೆರಗನ್ನು!
ಅಬ್ಬಾ.. ಎನಿದು
ನನ್ನೂಳಗಿನ ಸ್ವಾರ್ಥ, ಸೇಡು
ಕೋಪ, ತಾಪದ ಬೆಂಕಿ
ಜಗತ್ತಿಗೆಲ್ಲಾ ಹಂಚಿದರು ಉಳಿಯುವುದು!
ಆದರೂ ನಾನು ಎಂಬದು ಈ
ಜಗದ ಕಣ..!? ಹೊರಗೆ

ಗಾಂಧಿ, ಬುದ್ಧನ ಬಣ್ಣ
ನನ್ನೂಳಗಿನ ಮಾತು
ಜಗದೆಲ್ಲ ಶಬ್ದಗಳನು ಸರಿಗಟ್ಟಿ
ನಿಲ್ಲುವವು..!?
ಆದರೂ ನಾನು ಏಕಾಂಗಿ
ವ್ಯಕ್ತಿ ಒಂದು ಒಳಗಿನ
ಅಭಿವ್ಯಕ್ತಿ ಹಲವು..
ಕತ್ತಲೊಳಗಿನ ಬೆಳಕು
ದರ್ಶಿಸುವದು ಅಂತರಾಳವ
ಅಲ್ಲಿನ ನೈಜತನವ
ಕಪ್ಪು ಕತ್ತಲೆಯ ಮುಂದೆ
ಬಣ್ಣ ಬಣ್ಣದ, ದಿವ್ಯ
ಬೆಳಕು ಮಂಕಾಯಿತು

ಸತ್ಯವ ಅರಿಯಲು ಸೋತಿತು..
ಕಪ್ಪು ಎಂದರೆ ಅಜ್ಞಾನ, ನಿರಾಶೆಯ ಕೋಪ
ಎಂಬ ಹಲವು ಮೂದಲಿಕೆಗಳು..
ಇದ್ದರು ಅಂಧಕಾರ ನಿನಗೆ ಸಾಟಿ ಇಲ್ಲ
ನೀನೆಂದರೆ ಭಯ ಅಲ್ಲ
ಒಳಗಣ್ಣು ತೆರೆಯಲು ಕತ್ತಲೊಳಗಿನ ಬೆಳಕು
ಕಾಣುವುದಲ್ಲ..
0 ಪ್ರತಿಕ್ರಿಯೆಗಳು