ನೀವು ನೋಡಲೇ ಬೇಕಾದ ಸಿನೆಮಾಗಳು – ರವೀ೦ದ್ರ ಬರಹ

ರವೀ೦ದ್ರ ಟಾಕೀಸ್ ಎ೦ಬ ಬ್ಲಾಗ್ ನಲ್ಲಿ ಸಿನಿಮಾಗೆ ಸ೦ಬ೦ಧಿಸಿದ೦ತೆ ವಿಮರ್ಶೆ, ಲೇಖನ ಬರೆಯುವ ರವೀ೦ದ್ರ ನೋಡಲೇ ಬೇಕಾದ ಚಿತ್ರಗಳು ಎ೦ದು ಜಗತ್ತಿನ ಒಳ್ಳೊಳ್ಳೆಯ ಚಿತ್ರಗಳನ್ನು ಪಟ್ಟಿ ಮಾಡಿ, ಅದರ ಬಗ್ಗೆ ಲೇಖನ ಬೆರೆಯುತ್ತಿದ್ದಾರೆ. ಆ ಚಿತ್ರಗಳ ಬಗ್ಗೆ ಮಾಹಿತಿ ಅವಧಿ ಓದುಗರಿಗಾಗಿ :

ನೋಡಲೇ ಬೇಕಾದ ಚಿತ್ರಗಳು – ೧

– ರವೀ೦ದ್ರ

ಕೆಲವೊಂದು ಸಿನಿಮಾಗಳು ಬರೀ ಮನರ೦ಜನೆಯನ್ನಷ್ಟೇ ನೀಡುವುದಿಲ್ಲ.ಅದರ ಜೊತೆಗೆ ಚಿಂತನೆಯನ್ನೂ ಹಚ್ಚುತ್ತವೆ. ಪಾತ್ರಗಳು ನಮ್ಮ ಮುಂದೆ ಬಂದು ಎಡಬಿಡದೆ ಕಾಡುತ್ತವೆ..ನನಗಂತೂ ಕೆಲವು ಚಿತ್ರಗಳು ಅದರಲ್ಲಿನ ಪಾತ್ರಗಳು ನನ್ನ ಪಕ್ಕದಲ್ಲಿ ಇದೆಯೇನೋ ಅನ್ನಿಸುತ್ತದೆ.ನನ್ನ ಜೊತೆ ಮಾತಾಡಿದಂತೆ ಭಾಸವಾಗುತ್ತದೆ.ಭಾಷೆ, ದೇಶ , ಪರಿಸರ ಯಾವ ಹಂಗೂ ಇಲ್ಲದೆ ಯಾವ ಮಿತಿಯನ್ನೂ ಹೇರದೆ ಅದು ನಮ್ಮವೇ ಆಗಿಬಿಡುತ್ತವೆ.

ಜಪಾನಿನಲ್ಲಿ ಶಿಯಾನ್ ಸೋನು ಎನ್ನುವ ನಿರ್ದೇಶಕನಿದ್ದಾನೆ. ಆತನ ಸಿನೆಮಾಗಲೆ೦ದರೆ ನನಗೆ ಭಾರಿ ಇಷ್ಟ. ಅದರಲ್ಲೂ ಅವನ ಲವ್ ಎಕ್ಸ್ ಪೋಸೆರ್ ಎಂಬ ಚಿತ್ರವನ್ನು ಸುಮಾರು ಭಾರಿ ನೋಡಿಬಿಟ್ಟಿದ್ದೇನೆ. ಸುಮಾರು ನಾಲ್ಕು ಘ೦ಟೆಯಷ್ಟು ಉದ್ದವಿರುವ ಈ ಸಿನಿಮಾ ನೀವು ನೋಡುತ್ತಾ ಕುಳಿತುಬಿಟ್ಟರೆ ಅವಧಿಯ ಯಾವ ಇರವನ್ನೂ ತೋರಗೊಡದ೦ತೆ ಅನುಭವಕ್ಕೆಡೆಮಾಡದ೦ತೆ ನೋಡಿಸಿಕೊಂಡು ಹೋಗಿಬಿಡುತ್ತದೆ.

ಚಿತ್ರದಲ್ಲೊಂದು ಸನ್ನಿವೇಶವಿದೆ. ಚರ್ಚೋ೦ದರಲ್ಲಿ ಪಾದ್ರಿಯಾಗಿ ಕೆಲಸ ಮಾಡುವ ಅಪ್ಪ ಹೆಂಡತಿ ದೂರವಾದ ಮೇಲೆ ಒ೦ದು ರೀತಿಯಲ್ಲಿ ಸ್ಯಾಡಿಸ್ಟ್ ಆಗಿಬಿಡುತ್ತಾನೆ. ಅಷ್ಟೊಂದು ಪ್ರೀತಿಸುತ್ತಿದ್ದ ಮಗನನ್ನು ದೂರವಿಡಲು ಪ್ರಾರಂಭಿಸುತ್ತಾನೆ. ಆದರೆ ಮಗನಿಗೆ ಅಪ್ಪನ ಮೇಲೆ ಅತೀವ ಪ್ರೀತಿ.ದಿನವೂ ಅಪ್ಪನನ್ನು ಮಾತಾಡಿಸಬೇಕು, ಕಾಣಬೇಕೆಂಬ ತವಕ ಆತನದು. ಅಪ್ಪನನ್ನು ಭೇಟಿ ಮಾಡುವ ಒಂದೆ ಒಂದು ಮಾರ್ಗವೆಂದರೆ ಚರ್ಚಿನಲ್ಲಿ ತಪ್ಪೊಪ್ಪಿಗೆ ಪೆಟ್ಟಿಗೆಯ ಮುಂದೆ ಹೋಗಿ ತಪ್ಪೋಪ್ಪಿಕೊಳ್ಳುವುದು. ಅದಕ್ಕಾಗಿ ದಿನವೂ ಒಂದೊಂದು ತಪ್ಪು ಮಾಡತೊಡಗುವ ಮಗ ಅಪ್ಪನ ಭೇಟಿಗೆ ಅವನ ತೃಪ್ತಿಗಾಗಿ ತನ್ನನ್ನೇ ದ೦ಡಿಸಿಕೊಳ್ಳಲು ಪ್ರಾರಂಭಿಸುತ್ತಾನೆ. ಇಡೀ ಸಿನೆಮಾ, ಅದರಲ್ಲಿನ ಚಿತ್ರಕಥೆ ಎಲ್ಲೂ ದಿಕ್ಕು ತಪ್ಪುವುದಿಲ್ಲ. ನಾಲ್ಕು ಘ೦ಟೆಗಳಷ್ಟು ಉದ್ದವಿದ್ದರೂ ಎಲ್ಲೂ ಬೋರ್ ಆಗುವುದಿಲ್ಲ. ಬದಲಿಗೆ ಅಲ್ಲಿನ ಪಾತ್ರಗಳು ಸನ್ನಿವೇಶಗಳು ನಮ್ಮನ್ನು ಎವೆಯಿಕ್ಕದ೦ತೆ ಮಾಡಿಬಿಡುತ್ತದೆ. ಹಾಗೆ ಚಿತ್ರಿಕೆಗಳ ಸಂಯೋಜನೆ ಮತ್ತು ಹಿನ್ನೆಲೆ ಸಂಗೀತವೂ ಸಿನಿಮಾಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದೆ ಎನ್ನಬಹುದು..2008ರಲ್ಲಿ ತೆರೆಗೆ ಬಂದ ಈ ಯಶಸ್ವೀ ಚಿತ್ರವನ್ನೊಮ್ಮೆ ನೋಡಿ..

]]>

‍ಲೇಖಕರು G

May 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇನ್ನೂ ಎಷ್ಟು ದಿನ?

ಇನ್ನೂ ಎಷ್ಟು ದಿನ?

ಚೈತ್ರಾ ಶಿವಯೋಗಿಮಠ ತಣ್ಣಗೆ ಸಣ್ಣಗೆ ಇನ್ನೂ ಹಾಡುತ್ತಲೇ ಇದ್ದಾಳೆ ಸೋಗೆಯ ನಡುವೆ ಹಣಿಕುವ ಸೂರ್ಯರಶ್ಮಿಯ ಸ್ನಾನ, ಇಬ್ಬನಿಯ ಪಾನ. ಅಲಂಕಾರಕ್ಕೆ...

ಅಪ್ಪನ ಪದಕೋಶದಲಿ..

ಅಪ್ಪನ ಪದಕೋಶದಲಿ..

ಪ್ರವೀಣ ಹಿರೇಮಠ / ಬೋಡನಾಯಕದಿನ್ನಿ ಅಪ್ಪನ ಏಟುಗಳನ್ನು ಲೆಕ್ಕವಿಡುವ ಅಗತ್ಯವೇ ಇಲ್ಲ ಒಂದು ಏಟೂ ಕೊಟ್ಟ ಚಿಕ್ಕ ನೆನಪೂ ನನಗಿಲ್ಲ ಆದರೆ...

ಅವ್ಯಕ್ತ‘ದೇಶ ದೇಹ ಮನಸ್ಸುಗಳ’ ಕತೆ

ಅವ್ಯಕ್ತ‘ದೇಶ ದೇಹ ಮನಸ್ಸುಗಳ’ ಕತೆ

ಅವ್ಯಕ್ತ - ನಿಮ್ಮ ನಿರೀಕ್ಷೆ ಯಲ್ಲಿ ಮಾಳವಿಕ ಸಂಚಾರಿ ವಿಜಯ್ ಅಭಿನಯದ ಕಿರುಚಿತ್ರ. ಇದೊಂದು ' ದೇಶ- ದೇಹ- ಮನಸ್ಸುಗಳ' ಕತೆ . ನಿಮ್ಮ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This