ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವರ್ಷಂಪ್ರತಿ ನಡೆಸುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010ರ ಸರ್ವಾಧ್ಯಕ್ಷರಾಗಿ ಪ್ರಸಿದ್ಧ ಲೇಖಕಿ ವೈದೇಹಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ .
ಸಮ್ಮೇಳನವು ಅಕ್ಟೋಬರ ತಿಂಗಳ 29, 30 ಮತ್ತು 31ರ ಶುಕ್ರ, ಶನಿ ಮತ್ತು ಭಾನುವಾರಗಳಂದು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ.
ಕನ್ನಡ ಮನಸ್ಸು: ಜೀವನ ಮೌಲ್ಯಗಳು ಎಂಬ ಪ್ರಧಾನ ಪರಿಕಲ್ಪನೆಯಡಿ ಈ ಬಾರಿಯ ಸಮ್ಮೇಳನ ನಡೆಯಲಿದೆ ಎಂದು ಅವರು ಹೇಳಿದರು
ಅವಿಭಜಿತ ದಕ್ಷಿಣ ಕನ್ನಡದ ಹೆಸರಾಂತ ಸಾಹಿತಿ, ಇತ್ತೀಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ತಮ್ಮ ಕ್ರೌಂಚ ಪಕ್ಷಿಗಳು ಸಂಕಲನಕ್ಕೆ ಪಡೆದಿರುವ ವೈದೇಹಿಯವರು ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ವಹಿಸುವುದು ನಮಗೆ ಅತ್ಯಂತ ಸಂತೋಷವನ್ನುಂಟುಮಾಡಿದೆ. ಅವರು ಅಕ್ಟೋಬರ 29ರಂದು ಬೆಳಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ಡಾ.ಎಂ.ಮೋಹನ ಆಳ್ವ ತಿಳಿಸಿದರು.
ಈ ಬಾರಿಯ ಸಮ್ಮೇಳನವು ನುಡಿಸಿರಿಯ ಏಳನೇ ಸಮ್ಮೇಳನವಾಗಿದ್ದು ಈ ಹಿಂದಿನ ವರ್ಷಗಳಲ್ಲಿ ಬರಗೂರು ರಾಮಚಂದ್ರಪ್ಪ, ಚೆನ್ನವೀರ ಕಣವಿ, ಎಸ್ ಎಲ್ ಭೈರಪ್ಪ, ಚಂದ್ರ ಶೇಖರ ಕಂಬಾರ, ಜಿ. ವೆಂಕಟಸುಬ್ಬಯ್ಯ, ಹಂಪ ನಾಗರಾಜಯ್ಯ ಇವರು ಅಧ್ಯಕ್ಷತೆಯನ್ನು ವಹಿಸಿ ನುಡಿಸಿರಿಯನ್ನು ಮುನ್ನಡೆಸಿದ್ದರು.
ಮಾಹಿತಿ: ಹರೀಶ್ ಆದೂರ್
ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ.
ಜಿ ಎನ್ ಮೋಹನ್ ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.....
ನುಡಿಸಿರಿ ಅಧ್ಯಕ್ಷರಾಗಿ ವೈದೇಹಿ ಅವರನ್ನು ಆಯ್ಕೆ ಮಾಡಿದ್ದು ಅತ್ಯಂತ ಸಮರ್ಪಕ ಮತ್ತು ಸೂಕ್ತವಾದ ನಿರ್ಧಾರ. ಇದಕ್ಕಾಗಿ ಡಾ. ಮೋಹನ ಆಳ್ವ ಮತ್ತು ನುಡಿಸಿರಿ ಬಳಗವನ್ನು ಅಭಿನಂದಿಸುತ್ತೇನೆ.
ಈ ಸಲದ ಥೀಮ್ ‘ಜೀವನಮೌಲ್ಯ’ ಕೂಡ ಸಮಯೋಚಿತವಾಗಿದೆ. ಬದುಕಿನ ಸೊಕಾಲ್ಡ್ ಅರ್ಥ ಮತ್ತು ಮೌಲ್ಯಗಳು ಈ ವರ್ತಮಾನದಲ್ಲಿ ಕುಸಿಯುತ್ತಿವೆಯೇನೋ ಎಂಬ ಆತಂಕ ಎದುರಿಗಿರುವ ಸ್ಥಿತಿಯಲ್ಲಿ ಆ ಕುರಿತ ಚಿಂತನೆಯ ಅಗತ್ಯವಂತು ಇದ್ದೇ ಇದೆ. ಒಟ್ಟಿನಲ್ಲಿ ಸಂತಸ ತಂದಿದೆ.