ನೃತ್ಯ ಸಂಶೋಧನೆ : ಪ್ರಕ್ರಿಯೆ ಮತ್ತು ಸವಾಲುಗಳು – ರಾಜ್ಯಮಟ್ಟದ ಕಮ್ಮಟಕ್ಕೆ ಸ್ವಾಗತ

ನೂಪುರ ಭ್ರಮರಿ ಸಂಶೋಧನಾ ಪ್ರತಿಷ್ಠಾನ(ರಿ.)

ಆಶ್ರಯದಲ್ಲಿ

ಕರ್ನಾಟಕ ಸಂಶೋಧಕರ ಒಕ್ಕೂಟದ

ಸಹಯೋಗದೊಂದಿಗೆ

‘ನೃತ್ಯ ಸಂಶೋಧನೆ : ಪ್ರಕ್ರಿಯೆ ಮತ್ತು ಸವಾಲುಗಳು’ರಾಜ್ಯಮಟ್ಟದ ಕಮ್ಮಟ/ ನೃತ್ಯ ಸಂಶೋಧಕರ ವಿಚಾರಮಂಡನೆ

 

ಸ್ಥಳ : ನಯನ ಸಭಾಂಗಣ ಫೆಬ್ರವರಿ 20,2012

ಸಹೃದಯರಿಗೆ ಆದರದ ಸ್ವಾಗತ ಬೆಳಿಗ್ಗೆ 9.30 ಗಂಟೆಗೆ.. ಉದ್ಘಾಟನೆ : ಲೀಲಾ ದೇವಿ.ಆರ್.ಪ್ರಸಾದ್, ಮಾಜಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ‘ನೂಪುರ ಭ್ರಮರಿ’ ವಿಶೇಷ (ನೃತ್ಯ ಸಂಶೋಧನಾ ಸೂಚಿ) ಸಂಚಿಕೆ ಬಿಡುಗಡೆ: ಡಾ. ಶತಾವಧಾನಿ ಗಣೇಶ್, ಅವಧಾನಿಗಳು ಮತ್ತು ವಿದ್ವಾಂಸರು, ಬೆಂಗಳೂರು. ಅಧ್ಯಕ್ಷತೆ : ಡಾ. ಆರ್. ಶೇಷ ಶಾಸ್ತ್ರಿ, ಕನ್ನಡ ಪ್ರಾಧ್ಯಾಪಕರು( ನಿವೃತ್ತ) ಹಾಗೂ ಸಾಂಸ್ಕೃತಿಕ ಇತಿಹಾಸ ತಜ್ಞರು, ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ, ಅನಂತಪುರ. ಆಶಯ : ಡಾ. ಎಚ್.ಎಸ್.ಗೋಪಾಲ ರಾವ್, ಶಾಸನ/ಇತಿಹಾಸ ಸಂಶೋಧಕರು, ಅರಸಿನಕುಂಟೆ. ನಮ್ಮೊಂದಿಗೆ ವಿಷಯ ತಜ್ಞರಾಗಿ: ಡಾ. ಶತಾವಧಾನಿ ಗಣೇಶ್ ಡಾ. ಆರ್. ಶೇಷ ಶಾಸ್ತ್ರಿ ಡಾ. ಎಚ್.ಎಸ್.ಗೋಪಾಲ ರಾವ್ 11 ಗಂಟೆಯಿಂದ ಮಧ್ಯಾಹ್ನ 1.30 ವರೆಗೆ ವಿಚಾರ ಮಂಡನೆ, ಸಂವಾದ ಮತ್ತು ನಿರ್ಣಯ · ‘ಮಹಾನಟ’ – ಡಾ. ಕರುಣಾ ವಿಜಯೇಂದ್ರ, ನೃತ್ಯ-ಇತಿಹಾಸ ಸಂಶೋಧಕರು, ಬೆಂಗಳೂರು. · ‘ ಭರತನಾಟ್ಯ- ಶಾಸ್ತ್ರ ಮತ್ತು ಪ್ರಯೋಗಗಳ ಸಂಗಮ‘ – ಡಾ. ಶೋಭಾ ಶಶಿಕುಮಾರ್, ನೃತ್ಯ ಸಂಶೋಧಕರು, ಬೆಂಗಳೂರು. · ‘ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ನೃತ್ಯದ ಅಭಿವ್ಯಕ್ತಿ ’- ಮನೋರಮಾ ಬಿ.ಎನ್, ಸಂಶೋಧಕರು, ‘ನೂಪುರ ಭ್ರಮರಿ’ ಸಂಪಾದಕರು. ಮಧ್ಯಾಹ್ನ 2.15 ಗಂಟೆಯಿಂದ 3 ಗಂಟೆಯ ವರೆಗೆ ಯುವ ಸಂಶೋಧಕರಿಂದ ಸಂಶೋಧನಾ ಪ್ರಬಂಧ ಮಂಡನೆ Ø ‘ಇಂದಿನ ಭರತನಾಟ್ಯ ಸಂಗೀತದಲ್ಲಿ ತಂಜಾವೂರು ಸಹೋದರರ ರಚನೆಗಳ ಪ್ರಸ್ತುತತೆ – ಬೆಂಗಳೂರು ಒಂದು ಅಧ್ಯಯನ ‘ – ಶಾಲಿನಿ ವಿಠಲ್, ಬೆಂಗಳೂರು.Ø ‘ಭರತನಾಟ್ಯದ ಆಹಾರ್ಯ ಪರಂಪರೆಯ ಬೆಳವಣಿಗೆ ಮತ್ತು ಪಲ್ಲಟ: (1910- 200೦ರ ಕಾಲ) ‘ – ಸಪ್ನಾ ನಾಯಕ್, ಗೋವಾ.Ø ‘ಭರತನಾಟ್ಯಕ್ಕೆ ಪೂರಕವಾಗುವ ಕನ್ನಡ ಚಲನಚಿತ್ರ ಗೀತೆಗಳು ’ – ಎ.ಎನ್. ಸುಧೀರ್ ಕುಮಾರ್, ಬೆಂಗಳೂರು.Ø ‘ಸಂವಹನ ಮಾಧ್ಯಮವಾಗಿ ಜನಪದ ಕುಣಿತಗಳು: ಕರಾವಳಿ ಕರ್ನಾಟಕದ ಜನಪದ ಕುಣಿತಗಳ ಒಂದು ಅಧ್ಯಯನ’ – ಡಾ. ಸತೀಶ್ ಕುಮಾರ್ ಅಂಡಿಂಜೆ, ಶಿವಮೊಗ್ಗ. 3.15 ಗಂಟೆಯಿಂದ ವಿಷಯ ತಜ್ಞರೊಂದಿಗೆ ಸಂವಾದ ಮತ್ತು ನಿರ್ಣಯ ವಿಷಯ : ‘ನೃತ್ಯ ಸಂಶೋಧನೆಯ ಪ್ರಸ್ತುತತೆ, ಜವಾಬ್ದಾರಿಗಳು, ವಿಧಾನ ಮತ್ತು ಅವಕಾಶಗಳು’ 4.15 ರಿಂದ 5 ಗಂಟೆಯ ವರೆಗೆ ಶತಾವಧಾನಿ ಡಾ. ಆರ್ ಗಣೇಶ್‌ರಿಂದ ಸಂವಾದಕ್ಕೆ ನಿರ್ಣಯ, ಅನಿಸಿಕೆ ಮತ್ತು ಮಾರ್ಗದರ್ಶನ ಸಮಾರೋಪ ಮತ್ತು ಪ್ರಮಾಣ ಪತ್ರ ವಿತರಣೆ 5.15 ಗಂಟೆಯಿಂದ ಮುಖ್ಯ ಅತಿಥಿ : ಶ್ರೀಯುತ ಶ್ರೀಧರ್, ನೃತ್ಯಪಟು, ಚಲನಚಿತ್ರ ನಟ‘ವರ್ಷದ ಶ್ರೇಷ್ಠ ನೃತ್ಯ ವಿಮರ್ಶೆ ಪ್ರಶಸ್ತಿ’ ಪ್ರದಾನ – ಶ್ರೀಮತಿ ಪ್ರತಿಭಾ ಸಾಮಗ, ಉಡುಪಿ ಇವರಿಗೆ,  ಸಂಶೋಧನಾಧಾರಿತ ನೃತ್ಯ ಪ್ರಸ್ತುತಿ ಸಂಜೆ 6 ಗಂಟೆಯಿಂದಡಾ. ಶೋಭಾ ಶಶಿಕುಮಾರ್ ಇವರಿಂದ ನಟುವಾಂಗ : ವಿದ್ವಾನ್ ಪ್ರಸನ್ನ ಕುಮಾರ್, ಬೆಂಗಳೂರು ಹಾಡುಗಾರಿಕೆ: ಕಾಂಚನ ಶ್ರೀರಂಜಿನಿ, ಬೆಂಗಳೂರು ಮೃದಂಗ : ವಿದ್ವಾನ್ ಜನಾರ್ಧನ್, ಬೆಂಗಳೂರು ಕೊಳಲು: ವಿದ್ವಾನ್ ವೇಣುಗೋಪಾಲ್, ಬೆಂಗಳೂರು · ಕಮ್ಮಟದ ಪ್ರಮುಖ ವಿಷಯಗಳು: ನೃತ್ಯ ಇತಿಹಾಸ, ನೃತ್ಯಶೈಲಿಯ ಪುನರ್ ರಚನೆ ಮತ್ತು ಸಾಹಿತ್ಯ ಸಂಬಂಧದ ವಿಶ್ಲೇಷಣೆ. ವಿಚಾರ ಪ್ರಸ್ತಾಪಗಳು : ನೃತ್ಯದ ಶಾಸ್ತ್ರೀಯತೆ, ವ್ಯಾಖ್ಯಾನ, ಶೈಕ್ಷಣಿಕ ನೆಲೆ, ಮಾಧ್ಯಮ ಸಂಬಂಧ, ಸಮಕಾಲೀನ ಬೆಳವಣಿಗೆ, ಸಾಮಾಜಿಕ ಪರಿಕಲ್ಪನೆ, ಸಂಗೀತ, ಜನಪದ. · ಕಾರ್ಯಕ್ರಮಗಳು ನಿಗದಿತ ಸಮಯ ಮಿತಿಗೊಳಪಟ್ಟು ಜರುಗುವುದು. ಸಮಯಪಾಲನೆ ಎಲ್ಲರ ಆದ್ಯ ಕರ್ತವ್ಯ. · ವಸ್ತುನಿಷ್ಠ ಅಧ್ಯಯನ, ಕ್ರಮಬದ್ಧವಾದ ಸಂಶೋಧನಾಕ್ರಮ ಮತ್ತು ಅವಕಾಶಗಳಿಗಾಗಿ ಕಮ್ಮಟ ಆಯೋಜಿಸಲಾಗಿದೆ. ಆದ್ದರಿಂದ ನೃತ್ಯ ಸಂಶೋಧನೆಯ ಕುರಿತಂತೆಯೇ ಪ್ರಶ್ನೆ- ವಿಚಾರ-ಸಂವಾದಗಳಿದ್ದು ಕಮ್ಮಟದ ನಡಾವಳಿಯಿಂದ ಹೊರಗಿನ ಚರ್ಚೆಗಳಿಗೆ ಮಹತ್ತ್ವವನ್ನೀಯಲಾಗುವುದಿಲ್ಲ. ಕರ್ನಾಟಕ ನೃತ್ಯಸಂಸ್ಕೃತಿ ಪರವಾದ ವಿಚಾರಗಳ ಮಂಥನಕ್ಕೆ ಅನುಕೂಲವೆನಿಸುವ ಚರ್ಚೆ, ನಿರ್ಣಯಗಳಿಗೆ ಮುಕ್ತವಾಗಿರುವ ಪ್ರಾಯೋಗಿಕ ನೆಲೆಯುಳ್ಳ ವಿಚಾರಗಳಿಗೆ ಮೊದಲ ಆದ್ಯತೆ. · ಪಾಲ್ಗೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಕಮ್ಮಟದ ಮೊದಲು ( ಈ ಮೈಲ್- ಪತ್ರ- ದೂರವಾಣಿಯ ಮೂಲಕವಾಗಿ ) ಅಥವಾ ಕಮ್ಮಟದ ದಿನ ಬೆಳಗ್ಗೆ ನೋಂದಾಯಿಸಿಕೊಳ್ಳತಕ್ಕದ್ದು. ಕಮ್ಮಟದ ದಿನ ಬೆಳಗ್ಗೆ 9-11 ಗಂಟೆಯ ಅವಧಿಯಲ್ಲಿ ಮಾತ್ರ ನೋಂದಣಿಯ ಕೌಂಟರ್ ತೆರೆದಿರುತ್ತದೆ. ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟವರಾಗಿದ್ದು; ನೃತ್ಯದಲ್ಲಿ ಪ್ರೌಢ ಶಿಕ್ಷಣ, ಅನುಭವ ಮತ್ತು ಸಂಶೋಧನಾಸಕ್ತಿ ಹೊಂದಿದ್ದು ; ಇಡೀ ದಿನದ ಸಂವಾದ ಮತ್ತು ಪ್ರಶ್ನೋತ್ತರ ಸರಣಿಗಳಲ್ಲಿ ಪೂರ್ಣವಾಗಿ ಭಾಗವಹಿಸತಕ್ಕದ್ದು. · ಕಮ್ಮಟದಲ್ಲಿ ಮಂಡಿಸಲ್ಪಡುವ ಲೇಖನ ಪ್ರಕಟಣೆಯ ಸಂಪೂರ್ಣ ಹಕ್ಕು ಪ್ರತಿಷ್ಠಾನದ್ದು. ಆದ್ದರಿಂದ ಯಾವುದೇ ಬಗೆಯ ರೆಕಾರ್ಡಿಂಗ್‌ಗಳಿಗೆ ಅವಕಾಶಗಳಿರುವಿಲ್ಲ.· ಸಂಶೋಧನಾ ಪ್ರತಿಷ್ಠಾನದ ಸದಸ್ಯರಾಗುವಲ್ಲಿಯೂ ಆಸಕ್ತರಿಗೆ ಅವಕಾಶವಿದ್ದು, ಸಂಶೋಧನಾ ಮಾರ್ಗದರ್ಶನಗಳನ್ನು ಪಡೆದುಕೊಳ್ಳಲು ಸಂಪನ್ಮೂಲ ವ್ಯಕ್ತಿಗಳ ಲಭ್ಯತೆಯಿದೆ. ಅಂತೆಯೇ ಕರ್ನಾಟಕ ಸಂಶೋಧಕರ ಒಕ್ಕೂಟದ ಸದಸ್ಯರಾಗುವಲ್ಲಿಯೂ ಅವಕಾಶಗಳು ಮುಕ್ತವಾಗಿವೆ. · ಕರ್ನಾಟಕದಲ್ಲಿಯೇ ಮೊತ್ತ ಮೊದಲ ಬಾರಿಗೆ ಎಂಬಂತೆ ಆಯೋಜನೆಯಾಗುತ್ತಿರುವ ಕಾರ್ಯಕ್ರಮವಿದು. ಮುಂದಿನ ದಿನಗಳಲ್ಲೂ ಪ್ರತಿಷ್ಠಾನವು ಅಭಿವೃದ್ಧಿಯ ಹಲವು ಹಂತಗಳನ್ನು ಕ್ರಮಿಸಲಿದೆ. ನಿಮ್ಮ ಸಹಕಾರ ಅತ್ಯಗತ್ಯ. ಪ್ರತಿಷ್ಠಾನವು ದೇಣಿಗೆಗಳನ್ನು ಗೌರವಪೂರ್ವಕವಾಗಿ ಕೃತಜ್ಞತೆಯಿಂದ ಸ್ವೀಕರಿಸುತ್ತದೆ.

ಸಹ ಪ್ರಾಯೋಜಕರು : ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ, ಕಲ್ಲುಗುಂಡಿ, ದ.ಕ

 

]]>

‍ಲೇಖಕರು G

February 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This