ನೆಟ್ ಕನೆಕ್ಟ್ ಆದರೆ ಸಮ್ಮೇಳನ ‘ಅವಧಿ’ ಮೂಲಕ ನಿಮಗೂ..

dsc_1802-1

೭೫ ನೆಯ ಸಮ್ಮೇಳನದ ಹುರುಪು ಆಗಲೇ ಚಿತ್ರದುರ್ಗದ ಬೀದಿಗಳನ್ನೂ ದಾಟಿ ಕನ್ನಡ ನಾಡಿನ ಎಲ್ಲೆಡೆ ಹರಡಿಕೊಳ್ಳುತ್ತಿದೆ. ಚಳಿಯ ದಿನಗಳೂ ಒಂದಿಷ್ಟು ಕರುಣೆ ತೋರಿಸಿದೆ.

ಸಾಹಿತ್ಯದ ಹಬ್ಬದಲ್ಲಿ ಮೆರವಣಿಗೆ ಇರಬೇಕೋ, ಕೊನೆಯ ದಿನ ನಿರ್ಣಯ ತೆಗೆದುಕೊಳ್ಳಬೇಕೋ ಬೇಡವೋ ಎಂಬ ರೆಗ್ಯುಲರ್ ತಲೆಬಿಸಿಯ ಮಧ್ಯೆ ಎಲ್ಲಾ ಪತ್ರಿಕೆಗಳೂ ಸಾಹಿತ್ಯ ಸಮ್ಮೇಳನದ ವಿಶೇಷ ಪುರವಣಿಗೆ ಸಜ್ಜಾಗಿವೆ.

ಸಾಹಿತ್ಯದ ಹಬ್ಬ ಕೆಲವರಿಗೆ ಕೇವಲ ಭಾಷಣಗಳಾದರೆ, ಇನ್ನು ಕೆಲವರಿಗೆ ಗೆಳೆಯರೊಂದಿಗೆ ಕೈ ಕುಲುಕುವ ಹಬ್ಬ. ಇದೆಲ್ಲವನ್ನೂ ಬದಿಗಿಟ್ಟು ಒಂದೇ ಕಡೆ ಲಕ್ಷಾಂತರ ಕನ್ನಡ ಪುಸ್ತಕಗಳನ್ನು ನೋಡುವ ಸಂಭ್ರಮ ‘ಬುಕ್ ವರ್ಮ’ ರದ್ದು. ಆದರೆ ದೂರದ ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ ಚನ್ನಬಸವಣ್ಣ, ಬೆಂಗಳೂರಿನ ಅಂಕಿತಾ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಪುಸ್ತಕಗಳ ಅಂಗಡಿ ಇಡುತ್ತಿಲ್ಲ ಎಂಬುದು ಎಷ್ಟೊಂದು ಮಂದಿಗೆ ಬೇಜಾರು. ಈ ಮಧ್ಯೆಯೇ ಪರಿಷತ್ತು ದಾಖಲೆ ಸಂಖ್ಯೆಯಲ್ಲಿ ಮಳಿಗೆಗಳು ಬುಕ್ ಆಗಿದೆ ಎಂಬ ಸಂತಸದಲ್ಲಿದೆ.

ಅದು ಹೇಗಾದರೂ ಇರಲಿ ಎಂಬಂತೆ ತಮಿಳ್ ಸೆಲ್ವಿ ತಣ್ಣಗೆ ತಮ್ಮ ಅನುವಾದವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಸುಮ್ಮನಾಗಿದ್ದಾರೆ. ಅಭಿನವ ಊರಿಗೆ ಮುಂಚೆಯೇ ಚಿತ್ರದುರ್ಗದಲ್ಲಿ ಎರಡೆರಡು ಕಾರ್ಯಕ್ರಮ ನಡೆಸಿ ರಂಗ ಸಜ್ಜು ಮಾಡಿಕೊಂಡಿದೆ. ಸಂಚಯದ ಡಿ ವಿ ಪ್ರಹ್ಲಾದ್ ಬೇಂದ್ರೆ ಪುರಸ್ಕಾರ ಕೊಟ್ಟ ತಕ್ಷಣ ತಮ್ಮ ಹೊಸ ಸಂಚಿಕೆಯೊಂದಿಗೆ ಚಿತ್ರದುರ್ಗ ಮುಟ್ಟಿದ್ದಾರೆ.

ಸಮ್ಮೇಳನ ಮುಂದೂಡಬಾರದಿತ್ತು ಅಂತ ಕೆಲವರು, ಮುಂದೂಡಿದ್ದೆ ಒಳ್ಳೆಯದು ಅಂತ ಇನ್ನಷ್ಟು ಮಂದಿ ಚರ್ಚೆಯಲ್ಲಿ ಇನ್ನೂ ಕಾವು ಉಳಿಸಿಕೊಳ್ಳಲು ಯತ್ನಿಸುತ್ತಿರುವಾಗಲೇ ಅಹಾ..! ಸಮ್ಮೇಳನ ಬಂದು ಬಿಟ್ಟಿದೆ.

‘ಅವಧಿ’ ಈ ಸಮ್ಮೇಳನದ ಸಂಭ್ರಮವನ್ನು ಫೋಟೋಗಳ ಮೂಲಕ ಸಮಯ ಸಿಕ್ಕಿದಾಗಲೆಲ್ಲ ತಲುಪಿಸುವ ಯೋಚನೆ ಮಾಡಿದೆ. ಚಿತ್ರದುರ್ಗದಲ್ಲಿ ಲ್ಯಾಪ್ ಟಾಪ್ ಹಿಡಿದು ಸುಘೋಷ್ ಕುಳಿತುಕೊಂಡಿದ್ದಾರೆ. ಕ್ಯಾಮೆರಾದೊಂದಿಗೆ ನಂದೀಶ್ ಇದ್ದಾರೆ. ಸತೀಶ್ ಇಬ್ಬರಿಗೂ ಹೆಗಲು ಕೊಟ್ಟಿದ್ದಾರೆ.

ನೆಟ್ ಕನೆಕ್ಟ್ ಆದರೆ ಸಮ್ಮೇಳನ ‘ಅವಧಿ’ ಮೂಲಕ ನಿಮಗೂ…

‍ಲೇಖಕರು avadhi

February 3, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಡಿ.ಎಸ್.ರಾಮಸ್ವಾಮಿ

    ಬೇಡಾದ್ದೆಲ್ಲವನ್ನೂ ನೇರ ಪ್ರಸಾರ ಮಾಡುವ ನಮ್ಮ ವಾಹಿನಿಗಳು ಸಮ್ಮೇಳನವನ್ನು ಲೈವ್ ಆಗಿ ಪ್ರಸಾರ ಮಾಡಬಹುದಲ್ಲ ಅಂದ್ರೆ ’ಅದನ್ಯಾರೀ ನೋಡ್ತಾರೆ?’ ಅನ್ನೋ ಉಢಾಫೆ ತೋರಿಸ್ತವೆ.ಅವಧಿ ಚಿತ್ರಗಳನ್ನು ಹಾಕುತ್ತಿರುವುದು ಸಂತಸದ ವಿಷಯ. ಅಂದ ಹಾಗೆ ಸಮ್ಮೇಳನದ ಆವರಣದಲ್ಲಿರುವ ’ಸಂಚಯ’ಪುಸ್ತಕ ಮಳಿಗೆ ಸಂಖ್ಯೆ ೧೯೩ರಲ್ಲಿ ಸಮ್ಮೇಳನದ ನಾಲ್ಕೂ ದಿನ ಸಂಜೆ ೬.೩೦ರಿಂದ ಒಂದು ಗಂಟೆ ’ಕವಿಗೋಷ್ಠಿ’ ನಡೆಯಲಿದೆ.ಪದ್ಯಾಸಕ್ತರು ಭಾಗವಹಿಸಲು ಕೋರಿದೆ.

    ಪ್ರತಿಕ್ರಿಯೆ
  2. sunil

    Tumba santhosa…illindale kannadada habbavanna kantumbkollalu kaaturanaagiddene 🙂 Thank you very much 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: