ನೆನಪಿನ ಒಕ್ಕಲು

ಪ್ರವೀಣ

ನಮಗೊತ್ತು
ನಮ್ಮನ್ಯಾರೂ ಕೇಳಾಂಗಿಲ್ಲಾ
ನಮದ್ಯಾರೂ ಹರ್ಯಾಂಗಿಲ್ಲಾ

ನಮಗೊತ್ತು
ತಲೆತಲಾಂತರಗಳಿಂದ ಜೀವಜೀವಗಳ
ದಾಟಿ ನರಕೋಶಗಳಲಿ ಸಂಚರಿಸಿ
ವಂಶವಾಹಿನಿಗಳಲಿ ನೆಲೆಸಿದೆ ನೆನಪು
ಉಪಯೋಗಿಸಿದರೆ ಬೆಳೆದು
ನಿರ್ಲಕ್ಷಿಸಿದರೆ ಅಳಿಯುವ ನೆನಪು
ಪಾಪ ಡಾರ್ವಿನ್ ಅವಯವ ಮಾತ್ರ ಅನಕೊಂಡಿದ್ದ

ನಾವು ನೆನಪು ಸರದಾರರು
ಪ್ರೀತಿಯಿಂದ ನೇವರಿಸಿ ಸಾಕುತ್ತೇವೆ
ಅಭ್ಯಂಗ ಮೀಯಿಸಿ ಮೈಯೊರೆಸಿ
ಪುಟ್ಟ ರೆಕ್ಕೆಗಳ ನೋವಾಗದಂತೆ ಕತ್ತರಿಸಿ
ಉಗುರುಗಳ ಮಸೆದು ಹಲ್ಲು ಕಡಿಯುತ್ತೇವೆ
ಕನಸು ಹನಿಸಿ ಸುದ್ದಿ ಉಣಿಸಿ
ಪುಟಗಳ ಕಿತ್ತು ಬೈಗುಳ ಸಿಂಪಡಿಸಿ
ಒಪ್ಪವಾಗಿಸಿ ಮಲಗಿಸುತ್ತೇವೆ ಮಣ್ಣಿನಲಿ
ಅಗತ್ಯಕ್ಕೆ ಉಬ್ಬಿಸಿ ಹಬ್ಬಿಸಲು

ನಮಗೊತ್ತು
ರಾಜವೈಭವದ ನೆನಪು ಮಾಸುವುದಿಲ್ಲ
ರಾಜನೆಂದರೆ ನಿಮಗೆ ಬಲುಪ್ರೀತಿ
ರಾಜಠೀವಿಯೆಂದರೆ ಪಂಚಪ್ರಾಣ
ರಾಜಗಾಂಭೀರ್ಯ ಪುಳಕ
ಗತ್ತು ಗೈರತ್ತು ದೌಲತ್ತುಗಳ ಅಭಿಮಾನಿ ನೀವು

ನಮಗೊತ್ತು
ಯುಗಪ್ರವರ್ತಕನೇ ಬರಬೇಕು ಜಗದ್ಗುರುವಾಗಲು
ಲಗಾಮು ಹಿಡಿದು ಪ್ರಪಂಚ ಓಡಿಸಲು
ಎದುರಾಳಿಯ ಮರ್ಮಾಂಗ ಕವುಚಿ ಸೋಲಿಸಲು
ನಡೆದ ನೆಲ ಗಡಗಡ ನಡುಗಿಸಲು
ಬೇಕೊಬ್ಬ ನರಹಂತಕ

ನಮಗೊತ್ತು
ಒಮ್ಮೆ ನಂಬಿದರೆ ಬ್ರಹ್ಮ ಬಂದರೂ ಕೇಳರು
ಎದೆಗೊದ್ದರೆ ಮಗನೆಂದು
ಹೊಟ್ಟೆಗೆ ಬರೆ ಎಳೆದರೆ ಟ್ಯಾಟೂ ಎಂದು
ಕಸಿದುಕೊಂಡರೆ ಮಹತ್ಕಾರ್ಯವೆಂದು
ಕತ್ತು ಹಿಸುಕಿದರೆ ಮಹಾಬಲಿಯೆಂದು
ಗುಡಿ ಕಟ್ಟುವಿರಿ ತೇರು ಎಳೆಯುವಿರಿ

ನಮಗೊತ್ತು
ಪವಾಡಗಳ ನೆನಪು ಅಳಿಯದು
ಕಿವಿಯಲ್ಲಿ ಜಾಮೂನು ತಿನಿಸಿ
ಬಾಯಲ್ಲಿ ವಿಷ ಉಗಿಸಿದರೆ ನೆಮ್ಮದಿ
ನೋಟಗಳ ಮಂಗಮಾಯ ಮಾಡಿ
ರುಮಾಲುಗಳ ಹೊರತೆಗೆದರೆ ಅಚ್ಚರಿ
ಕಣ್ಮುಚ್ಚಿದಾಗ ಬೀಸಿದ ತಂಗಾಳಿ
ತೆರೆದಾಗ ದಾವಾನಲದ ವಿಸ್ಮಯ

ನಾವು ನೆನಪಿನ ಒಕ್ಕಲರು
ಮಣ್ಣ ಸರಿಸಿ ನೀರುಗ್ಗಿ ಮೈದಡವಿದ ಕ್ಷಣ
ಎಲ್ಲೆಲ್ಲೂ ಫಸಲು
ಉಕ್ಕಿ ಹರಿವ ಹೊನಲು
ಬೆಳೆ ಕಿತ್ತು ರಾಶಿ ಮಾಡಿ
ಮತ್ತೆ ಲಾಲಿ ಹಾಡಿ ಮಲಗಿಸುತ್ತೇವೆ
ಮುಂದಿನ ಕಟಾವಿಗೆ

ನಮಗೊತ್ತು
ನೆನಪುಗಳ ಕದಡಿ ತರ್ಕದ ಬೆಂಕಿ ಹೊತ್ತಿಸುವ ಮಂದಿ
ನಿಮಗೂ ಬಗ್ಗುಬಡಿವ ನೆನಪು
ಹೊತ್ತಿ ಉರಿಯುವುದು ಧಿಗ್ಗನೆ
ಅವರ ತಲೆಗೆ ನೀವು ಮೊಲೆ ಎಂದಾಕ್ಷಣ
ತಲೆ ತಿರುಗಿ ಬೀಳುತ್ತವೆ
ತಮ್ಮೆದೆಗೇ ಗುದ್ದಿಕೊಂಡು ಚೀರುತ್ತವೆ
ಕೈಯಲ್ಲಿ ಕೈ ತೊಡಕಿ ಉಳುಕುತ್ತವೆ
ನೆನಪು ಮತ್ತೆ ಗರ್ಜಿಸುತ್ತದೆ

ನಮಗೊತ್ತು ನಮಗೊತ್ತು
ನಮನ್ಯಾರೂ ಕೇಳಾಂಗಿಲ್ಲ
ಕೇಳಾವ್ರ ತಲಿ ಉಳ್ಯಾಂಗಿಲ್ಲ
ನಮದ್ಯಾರೂ ಹರ್ಯಾಂಗಿಲ್ಲ
ಹರದಾವ್ರ ಕುಣಿ ಹಡ್ಡಾಂಗಿಲ್ಲ

ನಿಮದಿನ್ನೂ ನಿದ್ದೆ ಮುಗಿವವರೆಗೆ
ಕನಸಿನ ಬೆಂಕಿ ಉರಿಸಿರತೇವಿ
ಕಾಸುವವರು ಕಾಸಿಕೊಳ್ಳಿ
ನಂದಿಸ ಹೋದವರು ಭಸ್ಮ

‍ಲೇಖಕರು Avadhi

September 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲೋಕದ ಕಣ್ಣು ಮರುಗಲೂಬಹುದು!

ಲೋಕದ ಕಣ್ಣು ಮರುಗಲೂಬಹುದು!

ಕೆ.ಜೆ.ಕೊಟ್ರಗೌಡ ತೂಲಹಳ್ಳಿ ಊರ ಬಯಲಿನ ದಿಬ್ಬದ ಮೇಲೆಈ ಮಳೆಗಾಲಕ್ಕೆಚಿಗುರೊಡೆದ ಹುಲ್ಲು ಗಂಬಳಿಯಹಾಸಿನಲಿನಾವಿಬ್ಬರೇ ಸಾನಿಧ್ಯವಹಿಸೋಣಅದೆಷ್ಟು...

ಸ್ಯಾನಿಟೈಜ್ ಆಗಬೇಕಾಗಿದೆ ಹೃದಯ

ಸ್ಯಾನಿಟೈಜ್ ಆಗಬೇಕಾಗಿದೆ ಹೃದಯ

ರಾಘವೇಂದ್ರ ದೇಶಪಾಂಡೆ ವಯಸ್ಸೊಂದಿತ್ತು ಆ ದಿನಗಳಲ್ಲಿಜಾದೂವಿನಲ್ಲು ನಂಬಿಕೆಯಿತ್ತು...ವಯಸ್ಸೊಂದಿದೆ ಇವಾಗವಾಸ್ತವತೆಯಲ್ಲು ಸಂಶಯವಿದೆ......

ಲಂಗರು ಕಚ್ಚಿದ ದೋಣಿ

ಲಂಗರು ಕಚ್ಚಿದ ದೋಣಿ

ಶ್ರೀಕಾಂತ್ ಪ್ರಭು ಲಂಗರು ಕಚ್ಚಿದ ದೋಣಿ ಮರಳ ಮೇಲೆಲ್ಲ ಹಾಯ್ದು ತೋಯಿಸಿ ಮೆತ್ತಗಾಗಿಸಿ ಮತ್ತೆ ಮತ್ತೆ ಮರಳುವ ಅಲೆ ಬೆಚ್ಚನೆಯ ಪಿಸು ಮಾತು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This