ನೈತಿಕತೆ ಸಂಸ್ಕೃತಿಯ ಮುಖವಾಡದಲ್ಲಿ…..

ಯಾವುದು ನೈತಿಕತೆ? ಯಾವುದು ಸಂಸ್ಕೃತಿ? – ಅನುಪಮಾ ಪ್ರಸಾದ್ ಚಿತ್ರ ಕೃಪೆ : ದೈಜಿ ವರ್ಲ್ಡ್ ಡಾಟ್ ಕಾಂ ಇಂದಿನ ರಾಜಕಾರಣದಲ್ಲಿ `ಸಂಸ್ಕೃತಿ’ ಹಾಗು `ನೈತಿಕತೆ’ ದಿನದಿಂದ ದಿನಕ್ಕೆ ಬೇಕಾಬಿಟ್ಟಿಯಾಗಿ; ಸ್ವಹಿತಾಸಕ್ತಿಗೆ; ಪುಕ್ಕಟೆ ಪ್ರಚಾರಕ್ಕೆ ಅನುಕೂಲವಾಗುವಂತೆ ಬಳಕೆಯಾಗುತ್ತ ನಿಜದ ಸಂಸ್ಕೃತಿಯ ಹಾಗು ನೈತಿಕತೆಯ ಅರ್ಥ ಕಳೆದು ಹೋಗುತ್ತಿದೆ. ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ಅಸಭ್ಯವಾಗಿ, ಅಸಹ್ಯಕರವಾಗಿ ವರ್ತಿಸುವವರನ್ನು `ಸಂಸ್ಕೃತಿಯಿಲ್ಲದ ಜನ’ ಎಂದು ಬೈಯುವ ವಾಡಿಕೆ ಜನ ಸಾಮಾನ್ಯರಲ್ಲಿದೆ. ಆದರೆ ಮಂಗಳೂರಿನ `ಮಾರ್ನಿ೦ಗ್ ಮಿಸ್ಟ್ ಹೋಂ ಸ್ಟೇ’ಯಲ್ಲಿ ಶನಿವಾರ ಸಂಜೆ ನಡೆದದ್ದೇನು? ನೈತಿಕತೆಯನ್ನು ಕಾಪಾಡಿ ಭಾರತೀಯ ಸಂಸ್ಕೃತಿಯನ್ನು ಉಳಿಸಲು ಜನಿಸಿ ಬಂದವರು ತಾವೆಂದುಕೊಂಡವರಲ್ಲಿ ಯಾವ ನೈತಿಕತೆಯಿತ್ತು? ಅವರ ಸಂಸ್ಕೃತಿ ಹೇಗಿತ್ತು? ಒಳಗೆ ಅನೈತಿಕ ವ್ಯವಹಾರ ನಡೆಯುತ್ತಿದೆ ಅನ್ನುತ್ತ ಖಾಸಗಿ ರೆಸಾರ್ಟ್ ನ  ಮುಚ್ಚಿದ ಬಾಗಿಲು ದೂಡಿ ಒಳ ನುಗ್ಗಿ ಅಲ್ಲಿದ್ದ ಯುವತಿಯರನ್ನು ಅಸಭ್ಯವಾಗಿ ಅಸಹ್ಯ ಹುಟ್ಟಿಸುವಂತೆ ಎಳೆದಾಡಿ; ಹಲ್ಲೆ ನಡೆಸಿ; ಅವರ ವಸ್ತ್ರಗಳನ್ನು ಹರಿದೊಗೆದು ಅವರ ಅಂಗಾಂಗಗಳನ್ನ ಹಿಸುಕಿ ಎಲ್ಲೆಂದರಲ್ಲಿ ಮನ ಬಂದಂತೆ ಕೈಯಾಡಿಸಿ ತಮ್ಮ ತೀಟೆ ತೀರಿಸಿಕೊಳ್ಳುತ್ತ ಅಟ್ಟಹಾಸ ಮೆರೆದ ಈ ಹಿಂಸ್ರ ಪಶುಗಳಲ್ಲಿ ಒಂದಿಷ್ಟು ಮಾನವೀಯತೆಯಾದರೂ ಇತ್ತೆ? ಇವರಲ್ಲಿ ಕಿಂಚಿತ್ತಾದರೂ ನೈತಿಕ ಪ್ರಜ್ಞೆ ಇದ್ದಿದ್ದರೆ ಒಂದುವೇಳೆ ಹೆಣ್ಣು ಮಕ್ಕಳ ಉಡುಪು ಅಸಭ್ಯವಾಗಿದ್ದಿದ್ದರೆ ಇವರದೇ ಸಂಸ್ಕೃತಿಯ ಬಗ್ಗೆ ಇವರೇ ವ್ಯಾಖ್ಯಾನಿಸುವಂತೆ ತಾವು ತೊಟ್ಟ ಅಂಗಿ ಕಳಚಿ ಅವರಿಗೆ ತೊಡಿಸಬಹುದಿತ್ತಲ್ಲವೆ? ನಿಜವಾಗಿಯೂ ಇವರದು ಸದುದ್ದೇಶವೇ ಆಗಿದ್ದರೆ ತಮ್ಮೊಂದಿಗೆ ಮಹಿಳಾ ಕಾರ್ಯಕರ್ತರನ್ನೂ ಕರೆಯಬೇಕಿತ್ತು. ಅವರನ್ನು ಅಟ್ಟಾಡಿಸಿ ಮೈ ಮೇಲೆ ಕೈ ಹಾಕಿದ ಇವರ ನೈತಿಕ ಪ್ರಜ್ಞೆ ಯಾವ ದರ್ಜೆಯದು? ಇವರ ಸಮರ್ಥನೆ ಏನು?   ಇವತ್ತಿನ ದಿನಗಳಲ್ಲಿ ಮಾಧ್ಯಮಗಳಂತೂ ಅಪರಾಧಗಳು ನಡೆದಾಗ, ನಡೆಯುತ್ತಿರುವಾಗ ಚಿತ್ರೀಕರಿಸಿ ನೇರ ಪ್ರಸಾರ ಮಾಡುವುದರಲ್ಲೇ ಮೇಲಾಟ ನಡೆಸುತ್ತ ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನೇ ನುಂಗಿ ನೀರು ಕುಡಿಯುತ್ತಿವೆ.]]>

‍ಲೇಖಕರು G

August 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

2 ಪ್ರತಿಕ್ರಿಯೆಗಳು

 1. Kiran

  The attack is to be condemned in harshest words; no doubt.
  But, does this attack take away the primary issue? Does the legalities of these unauthorized home-stays and all possible illegitimate activities possibly occurring there get diluted in our urgency to react?
  Animals dont attack without reason. Humans behaving like animals also are same. What is the actual reason for attack? Was the concept correct but the execution failed? HJV might wanted to draw attention to the issue by taking the media men there, but the word of mouth might have attracted rowdy elements causing events go beyond escape velocity? Please note I am neither supporting the HJV or the attack. But one should be mature enough to respond to an event than react.
  Primary question still remains: who controls these unlicenced home-stays? What is the political nexus? Why are the officers who attempted to rectify the issue were unceremoniously transferred? Can outcome of this incident take a positive angle and curb the unauthorised home-stay menace? Should we be happy to react and forget the root-cause altogether? What do the locals in the vicinity of these illegal home-stays have to say?
  One has to be paradoxically cynical to expect the authorities to act positive when the political system is licking the gutters. Lesser said, better.

  ಪ್ರತಿಕ್ರಿಯೆ
 2. vasanth

  Illegalities of homestay is not the issue. Who are these goondas to attack the girls. If the homestay is illegal there are authorities they look after it. Those who wants to partying in pubs can’t ask the pub owners the show the license.
  why we have police or revenue or corporations. Let us have these goondas and ask them to check the legalities of homestay or pubs. Is it good.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: