ನ್ಯೂಯಾರ್ಕಿಗೆ ನು಼ಂಗಲಾರದ ತುತ್ತು!

burger.jpg

vnew3.jpg“ವೆಂಕಿ ಬರ್ಗರ್”

 

 

 

ವೆಂಕಿ

ವಾರ ನ್ಯೂಯಾರ್ಕಿಗೆ ಇರಾನ್ ಅಧ್ಯಕ್ಷ ಅಹಮದಿನೆಜಾದ್ ಬಂದಿದ್ದ. ಎಲ್ಲರ ಬಾಯಲ್ಲೂ ಆತನದೇ ಹೆಸರು. ನ್ಯೂಯಾರ್ಕಿನ ಆತಿಥ್ಯ ಗುಣಕ್ಕಂತೂ ಅಗ್ನಿಪರೀಕ್ಷೆಯೇ ಎದುರಾದಂತಿತ್ತು.

ಆ ವಾರ, ವಿಶ್ವಸಂಸ್ಥೆಯ ಮಹಾಧಿವೇಶನದ ಕಾರಣದಿಂದಾಗಿ ಅದರ ಹೆಡ್ ಕ್ವಾರ್ಟರ್ ಆದ ನ್ಯೂಯಾರ್ಕಿನಲ್ಲಿ ವಿಶ್ವದ ನಾಯಕರುಗಳೆಲ್ಲ ಬಂದಿಳಿದಿದ್ದರು. ವಿವಿಧ ರಾಷ್ಟ್ರಗಳ ಪ್ರಮುಖರು, ಅದರಲ್ಲೂ ವರ್ಣರಂಜಿತ ವ್ಯಕ್ತಿತ್ವವಿರುವ ಕೆಲವರು ನ್ಯೂಯಾರ್ಕಿಗೆ ಬಂದಿದ್ದ ವಾರವಾಗಿತ್ತು ಅದು. ಅಮೆರಿಕಾಕ್ಕೆ ಅವರ ಬಗ್ಗೆ ತಲೆಬಿಸಿ. ಆದರೆ ನ್ಯೂಯಾರ್ಕ್ ಮಾತ್ರ ಅವರನ್ನೆಲ್ಲ, ತನ್ನ ಜಾಗತಿಕ ನಗರಿ ಇಮೇಜನ್ನು ದಾಖಲಿಸಿಕೊಳ್ಳುವ ಹಾಗೆ ಉಪಚರಿಸಿತ್ತು.

hu.jpg

ಫಿಡೆಲ್ ಕ್ಯಾಸ್ಟ್ರೋ ೧೯೬೦ರಲ್ಲಿ ನ್ಯೂಯಾರ್ಕಿಗೆ ಬಂದಿದ್ದರು. ಆಗ ಅವರು ಮ್ಯಾನ್ ಹಟ್ಟನ್ ನಲ್ಲಿ ತಮಗೆ ನೀಡಿದ್ದ ಉಪಚಾರದ ಬಗ್ಗೆ ಸಿಟ್ಟಾಗಿದ್ದರು. ಮುನಿಸಿಕೊಂಡೇ ಆ ಹೊಟೇಲು ಬಿಟ್ಟಿದ್ದರು. ಬಳಿಕ ಹರ್ಲೆಮ್ಮಿನ ಮತ್ತೊಂದು ಸ್ಥಳದಲ್ಲಿ ಉಳಿದಿದ್ದರು. ಆಗ ಅವರು ಮಾಧ್ಯಮಗಳಿಗೆ ಹೇಳಿದ್ದು: “ನಾವು ಗುಡ್ಡಗಾಡು ಜನ. ಬಯಲಲ್ಲೇ ಮಲಗೋದೆಂದರೆ ಇಷ್ಟ.” ಹಾಗೆ ಹೇಳುವಾಗ ಅವರು ನ್ಯೂಯಾರ್ಕಿನ ಪ್ರಸಿದ್ಧ ಸೆಂಟ್ರಲ್ ಪಾರ್ಕಿನಲ್ಲಿರುವ ವ್ಯವಸ್ಥೆ ಬಗ್ಗೆ ಉಲ್ಲೇಖ ಮಾಡಿದ್ದರು.

ಈದಿ ಅಮಿನ್ ಗೊತ್ತಲ್ಲ? ಉಗಾಂಡದ ವಿವಾದಿತ ಅಧ್ಯಕ್ಷ. ಆತ ೧೯೭೫ರಲ್ಲಿ ಇಲ್ಲಿಗೆ ಬಂದಿದ್ದ. ತನ್ನ ವಿವಾದಾತ್ಮಕ ವ್ಯಕ್ತಿತ್ವ ಇನ್ನಷ್ಟು ಬೆಳಗೋ ಹಾಗೆ ಮಾಡಿಕೊಳ್ಳೋದರಲ್ಲಿ ಯಶಸ್ವಿಯೂ ಆಗಿದ್ದ. ಹೀಗೆ ಇಲ್ಲಿಗೆ ಬಂದು ರಂಪ ಮಾಡಿದ ಇತರರ ಪಟ್ಟಿಯಲ್ಲಿ, ೭೦ರ ದಶಕದ ಮಧ್ಯದಲ್ಲಿ ಬಂದಿದ್ದ ಪ್ಯಾಲೆಸ್ತೇನ್ ಅಧ್ಯಕ್ಷ ಯಾಸರ್ ಅರಾಫತ್ ಕೂಡ ಇದ್ದಾರೆ. ತೀರಾ ಈಚೆಗೆ ಅಂದರೆ ಕಳದ ವರ್ಷ ವೆನಿಜುವೆಲಾ ಅಧ್ಯಕ್ಷ ಹ್ಯುಗೋ ಚಾವೇಜ್ ಇಲ್ಲಿಗೆ ಬಂದಿದ್ದರು. ಅವರಂತೂ ಅಧ್ಯಕ್ಷ ಜಾರ್ಜ್ ಬುಷ್ ರನ್ನು “ದೆವ್ವ” ಎಂದೇ ಕರೆದು ವಿವಾದವೆಬ್ಬಿಸಿದ್ದರು.

ಅಹಮದಿನೆಜಾದರನ್ನು ಕೊಲಂಬಿಯ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಆಹ್ವಾನಿಸಿತ್ತು. ನ್ಯೂಯಾರ್ಕಿನಲ್ಲಿರುವ ಕೊಲಂಬಿಯ ವಿಶ್ವವಿದ್ಯಾಲಯ ಅಮೆರಿಕಾದ ಅತ್ಯಂತ ಪ್ರಸಿದ್ಧ ವಿಶ್ವವಿದ್ಯಾಲಯ. ಅಹಮದಿನೆಜಾದರನ್ನು ಆಮಂತ್ರಿಸಿದ ಅದರ ಕ್ರಮದ ಔಚಿತ್ಯವೇನೆಂಬ ಪ್ರಶ್ನೆ ಕ್ಯಾಂಪಸ್ಸಿನೊಳಗೆ ಮಾತ್ರವಲ್ಲ, ಇಡೀ ದೇಶದಲ್ಲೇ ಬಿಸಿ ಚರ್ಚೆಯನ್ನು ಹುಟ್ಟುಹಾಕಿತ್ತು. ಇರಾನ್ ಅಧ್ಯಕ್ಷರು ಎಷ್ಟು ಬಿಸಿ ಸರಕಾಗಿದ್ದರೆಂದರೆ, ಅವರ ಭಾಷಣ ಕೇಳಲು ಎಲ್ಲರೂ ತೀವ್ರ ಉತ್ಸುಕರಾಗಿದ್ದರು. ಸಭಾಂಗಣದೊಳಗೆ ಬಂದು ಸೇರಲು ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾಯಬೇಕಾಯಿತು. ಭಾಷಣ ಕೇಳುವುದಕ್ಕಾಗಿ ಕೊಂಡುಕೊಳ್ಳಬೇಕಾಗಿದ್ದ ಟಿಕೆಟ್ಟುಗಳು ರಾಕ್ ತಾರೆಯ ಕಾರ್ಯಕ್ರಮದ ಟಿಕೆಟ್ಟುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆನ್ ಲೈನಿನಲ್ಲಿ ಮಾರಾಟವಾಗಿ ಹೊಸ ದಾಖಲೆಯೇ ಸೃಷ್ಟಿಯಾಯಿತು.

ವಿಶ್ವಸಂಸ್ಥೆಯಿರುವ ಮ್ಯಾನ್ ಹಟ್ಟನ್ ಅಂತೂ ಆ ವಾರ ಅಕ್ಷರಶಃ ಸೈನಿಕರ ಕೋಟೆಯೇ ಆಗಿತ್ತು. ಅದ್ದೂರಿ ಹೊಟೇಲುಗಳೆಲ್ಲ ವಿವಿಧ ರಾಷ್ಟ್ರಗಳ ನಾಯಕರುಗಳಿಂದ ತುಂಬಿಹೋಗಿದ್ದವು. ಸಾರ್ವಜನಿಕರಂತೂ ಸುಳಿದಾಡುವ ಹಾಗೇ ಇರಲಿಲ್ಲ.

ಇದೆಲ್ಲ ವಿದ್ಯಮಾನಗಳ ಮಧ್ಯೆ ಭಾರತ ತನ್ನ ೬೦ನೇ ಸ್ವಾತಂತ್ರ್ಯೋತ್ಸವದ ಖುಷಿಯನ್ನು ನ್ಯೂಯಾರ್ಕಿನಲ್ಲಿ ದಾಖಲಿಸುವ ಯತ್ನದಲ್ಲಿತ್ತು. ಇಲ್ಲಿನ ಭಾರತೀಯ ಸಮುದಾಯ, ಟ್ವೆಂಟಿ ೨೦ ವರ್ಲ್ದ್ ಕಪ್ ಭಾರತದ ಹುಡುಗರ ಪಾಲಾದ ಸಂಭ್ರಮದಲ್ಲಿ ಮುಳುಗಿತ್ತು!

ಚಿತ್ರ: ಜಿ ಎನ್ ಮೋಹನ್

‍ಲೇಖಕರು avadhi

October 29, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

೧ ಪ್ರತಿಕ್ರಿಯೆ

  1. veena

    ನೀವಿರುವುದು ನ್ಯೂಯಾರ್ಕ್ ನಲ್ಲಾ?
    ಇ ಲೇಖನ ಅರ್ಥಗಾಂಬೀರ್ಯವುಳ್ಲದು. ನಿಮ್ಮ ಬ್ಲಾಗ್ ಚೆನ್ನಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: