ಪಂಚರಂಗಿ..ಪಾಂ..ಪಾಂ

-ಅಲೆಮಾರಿ ಒಳಗೂ..ಹೊರಗೂ.. ದರಿದ್ರ ಈ ಲೈಫು ಹಿಂಗೆ ನೋಡಿ.. ಮಗಂದು.. ಅಂದುಕೊಳ್ಳೊದು ಒಂದು, ಆಗೋದು ಮತ್ತೊಂದು. ಕನಸು ಕಾಣ್ತೀವಿ… ಚೆನ್ನಾಗಿರುತ್ತೆ, ವಾಸ್ತವ ಭೀಕರವಾಗಿರುತ್ತೆ.. ನಾವು ಅಪ್ಪನ ದುಡ್ಡು ಉಡಾಯಿಸ್ತೀವಿ. ಆದ್ರೆ ನಮ್ ಮಗನ ಕೈಗೆ ಬಿಡಿಗಾಸು ಕೊಡಬೇಕಾದ್ರೆ ರೇಗ್ತೀವಿ. ಹುಡುಗಿ ಸಿಕ್ಲು ಅಂತಾ ಬೀಗ್ತೀವಿ. ಅರ್ಧ ಕಾಫೀನಲ್ಲೇ ಜಗತ್ತು ಅಂತೀವಿ.. ಅಂದ್ಕೊಂಡಿದ್ದೇ ಒಂದು, ಆಗಿದ್ದೇ ಒಂದು ಲೈಫು ಹಾಳಾದ್ದು ಸರಿ ಇಲ್ಲ ಅಂತೀವಿ. ಅಂದ್ಕೊಂಡಂಗೆ ಆಗ್ಬಿಟ್ರೆ.. ಬೇರೆಯವರಿಗೆ ಬೋಧನೆ ಮಾಡ್ತೀವಿ.. ಯೋಗರಾಜ್ ಭಟ್ರು ಬರೆದ ಪಂಚರಂಗಿ ಹಾಡುಗಳನ್ನು ಕೇಳಿ ಹಿಂಗೆ ಹುಚ್ಚು ಹುಚ್ಚು ಕಲ್ಪನೆಗಳು ತಲೆ ಸುತ್ತ ಸುತ್ತಾ ಇದ್ವು. ನಿನ್ನೆ ಸಿಕ್ಕಾಪಟ್ಟೆ ನಕ್ಕೆ… ಸ್ವಲ್ಪ ಹೊತ್ತು ಹಗುರಾಗಿ ಬಿಟ್ಟೆ. ಇಲ್ಲಿಗೆ ಸಾಕು ಅಂತಾ ನನ್ನ ಯೋಚನೆಗೆ ಫುಲ್ ಸ್ಟಾಪ್ ಹಾಕೋವಾಗ್ಲೂ ಭಟ್ರ ಹಾಡಿನ ಸಾಲೇ ಹೊಳೀತು.. “ಲೈಫು ಇಷ್ಟೇನೆ…”!! —- “ಹಳೇ ಪಾತ್ರೆ, ಹಳೇ ಕಬ್ಣ…….” ಅನ್ನೋ ತೀರಾ ಡಿಫರೆಂಟ್ ಆದ ಹಾಡು ಬರೆದು ಚಿತ್ರರಂಗದಲ್ಲಿ ಹಿಂಗೂ ಹಾಡ್ ಬರೀಬಹುದು ಅಂತಾ ತೋರಿಸಿದ್ರು ಭಟ್ರು. ಅದ್ನ ಪಂಚ್ರಂಗಿ ಚಿತ್ರದಲ್ಲೂ ಮುಂದುವರೆಸಿದ್ದಾರೆ. ಇದ್ರಲ್ಲಿರೋ ಮೂರು ಹಾಡು ತೀರಾ ಅನ್ಯೂಶ್ಯುವಲ್ ಆಗಿದ್ದಾವೆ. ಅದರಲ್ಲಿ ಲೈಫು ಇಷ್ಟೇನೆ 1 ಮತ್ತು 2, ಇನ್ನೊಂದು ಕಾಲೇಜಿನ ಬಗ್ಗೆ ಇರುವ ಹಾಡು. ಲೈಫು ಇಷ್ಟೇನೆ.. ಅನ್ನೋ ಅನಿರೀಕ್ಷಿತ, ಕಲ್ಪನೆಗೆ ಮೀರಿದ, ಅಸಾಧ್ಯವೂ, ಅಸಂಬದ್ಧವೂ ಅನ್ನಿಸುವ, ಆದರೂ ಇದರ ಹಣೇಬರಾನೆ ಇಷ್ಟು ಅಂತು ಸುಮ್ಮನೆ ಬದುಕಿ ಬಿಡುವ ಲೈಫಿನ ಬಗ್ಗೆ ಹೇಳ್ತಾರೆ. ಪಲ್ಲವಿಯೇ ಇಲ್ಲದೆ ಸುಮ್ಮನೆ ಮಾತಿನ ಧಾಟಿಯಲ್ಲಿ, ಆದರೆ ಲಯಬದ್ಧವಾಗಿ ಮೂರು ಸಾಲಿಗೆ ಒಂದು ಜಿಗಿತದೊಂದಿಗೆ ಏನೇನೋ ಹೇಳುತ್ತಾರೆ ಭಟ್ರು. ತುಂಬಾ ಸಿಂಪಲ್ಲಾದ ಪದಗಳು, ಸರಳವಾದ ಚಿತ್ರಗಳು, ಪನ್ನು, ಫನ್ನು, ಹಾಗೇ ಸ್ವಲ್ಪ ಗೇಲಿ, ವ್ಯಂಗ್ಯವನ್ನು ಬೆರೆಸಿದ್ದಾರೆ. ಉಡಾಫೆನೂ ಇದೆ, ಹಾಗೇ ಫಿಲಾಸಫಿನೂ ಇದೆ… ಕನ್ನಡದ ಮಟ್ಟಿಗೆ ಇಂಥ ಹಾಡು ತೀರಾ ಅನಿರೀಕ್ಷಿತ. ಅದೇ ಲವ್ವಿ ಡವ್ವಿ ಕರ್ಣ ಕಠೋರ ಹಾಡುಗಳನ್ನು ಕೇಳಿ ಕೇಳಿ ರೋಸಿದ್ದ ನಮಗೆ ಈ ಹಾಡುಗಳು ಹೊಸ ಅನುಭವ ಕೊಡುತ್ತವೆ ಅನ್ನೋದ್ರಲ್ಲಿ ಅನುಮಾನ ಇಲ್ಲ. ಆಧುನಿಕ ಜೀವನ ಶೈಲಿ, ರೇಸಿಗೆ ಬಿದ್ದ ಬದುಕು, ಒಳ್ಳೆ, ಕೆಲ್ಸ, ಹೆಂಡ್ತಿ, ಸೈಟು, ಮನೇನೆ ಬದುಕು ಅನ್ನೋ ಸರಳ ಸೂತ್ರಗಳ ಲೈಫಿನ ಬಗ್ಗೆ ಗೇಲಿ… ಇದೆ.. ಬದುಕು ನೀನು ವಾಸ್ತು ಪ್ರಕಾರ ಕುಬೇರ ಮೂಲೆ ಮಾತ್ರ ಕಟ್ಸು ಟಾಯ್ಲೆಟ್ ಒಳಗೆ ಹೋಗಿ ಮಲ್ಕೊ… ಲೈಫು ಇಷ್ಟೇನೆ… * ಹಿಂದಿನ ಜನ್ಮದ ರಹಸ್ಯ ತಿಳ್ಕಿ ಮುಂದಿನ ಜನ್ಮದ ಭವಿಷ್ಯ ತಿಳ್ಕೊ ಈಗಿನ ಜನ್ಮ ಹಾಳಾಗಿ ಹೋಗ್ಲಿ.. ಲೈಫು ಇಷ್ಟೇನೆ… ಬೆಂಗಳೂರಿನ ಅನಾಥ ಜೀವನ, ಕಾಲ್ ಸೆಂಟರ್ ಕೆಲಸ ಅನ್ನೋ ಒಣ ಪ್ರತಿಷ್ಠೆ, ಸಿಕ್ಕವಳ ಜತೆಗೆ ದಾಂಪತ್ಯ ಜೀವನ, ಕಂಪ್ಯೂಟರ್ರೇ ಸರ್ವಸ್ವ ಅನ್ನೋ ನಾವು ಲೈಫು ಕಲರ್ ಫುಲ್ಲಾಗಿದ್ರು ಬ್ಲಾಕ್ ಅಂಡ್ ವೈಟ್ ಜೀವನ ಮಾಡ್ತೀವಿ ಅಂತಾರೆ ಭಟ್ರು. ವಿಷಯಾ ಏನಪ್ಪಾತಂದ್ರೆ.. ಬೆಡ್ರೂಮ್ನಲ್ಲಿ ಹೆಗ್ಗಣ ಬಂದ್ರೆ ಇಂಟರನೆಟ್ನಲ್ಲಿ ದೊಣ್ಣೆ ಹುಡುಕಿ * ನೀರಿನ ಮೇಲೆ ಗುಳ್ಳೆ ಉಂಟು ಬಾಳಿನ ಬಣ್ಣ ನೂರ ಎಂಟು ನಮ್ಮದೇನಿದ್ರು ಬ್ಲಾಕ್ ಅಂಡ್ ವೈಟು. —– ಇನ್ನೊಂದು ಹಾಡು ಕಾಲೇಜ್ ಲೈಫ್ ಬಗ್ಗೆ ಇದೆ. ಇದು ಕಾಲೇಜು ಹುಡುಗ್ರಿಗೆ ಇಷ್ಟವಾಗಬಹದು. ಕಾಲೇಜು ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿರುವವರಿಗಂತೂ ಇಷ್ಟವಾಗುತ್ತೆ… ಈ ಹಾಡಿನಲ್ಲಿರುವ ಸಾಲುಗಳನ್ನು ನೋಡಿ.. ಎಸ್ಸೆಸ್ಸಲ್ಸಿಗಳು, ಪಿಯುಸಿಗಳು, ಸಿಇಟಿಗಳು, ಎಂಜಿನಿಯರಿಂಗು, ಪಂಜನಿಯರಿಂಗು, ಮೆಡಿಕಲ್ಗಳು, ಹಲ್ಲು, ಕಿವಿ, ಮೂಗು ಬಾಯಿ ಡಾಕ್ಟರ್ಗಳು ಕೈ ಬೀಸಿ ಕರೆದು ಕೆರೆದಲ್ಲಿ ಹೊಡೆಯುವ ಸಿಲಿಬಸ್ ಪಾಸು ಮಾಡಲು ಮನಸೇ ಬಾರದ ಕೋಸರ್್ಗಳು ಕಷ್ಟದ ಸೀಟುಗಳು, ಗುತ್ತಿಗೆ ಡೊನೆಷನ್ಗಳು, ಸತ್ತರು ಪೇರೆಂಟ್ಸ್ಗಳು, ಬಿದ್ದರು ಸ್ಟೂಡೆಂಟ್ಸ್ಗಳು ಕಿಲಿಕಿಲಿ ನಗುವ ಕಾಲೇಜುಗಳು, ಎಸ್ ಸರ್, ನೊ ಸರ್ ಅಟೆಂಡೆನ್ಸ್ಗಳು, ಕ್ಲಾಸ್ ರೂಮ್ಗಳು ಡೆಸ್ಕಿನ ಮೇಲೆ ಐ ಲವ್ ಯು ಸ್ಮಿತ, ಮಾಲಿನಿ, ಪ್ರಿಯ ಎಂಬ ಬರಹಗಳು, ಬ್ಲಾಕ್ ಬೋರ್ಡಿನ ಮೇಲೆ ಕೆಮಿಸ್ಟ್ರಿ, ಆಲ್ಜೀಬ್ರದ ವಿರಹಗಳು ಹೊಸ ಹುಡುಗಿಯರ ಮಿಡಿತಗಳು, ಹಳೇ ಹೃದಯಗಳ ಕೆರೆತಗಳು.. ಗುರು ವರ್ಯ ಇವತ್ತಿಗಿಷ್ಟು ಸಾಕು ನಾನು ನಾಳೇ ಮಾತಾಡಲೇ…? ** ಕೊನೆ ಪೇಜಲ್ಲಿ ಬರೆದ ಪ್ರಿನ್ಸಿಪಲ್ ಕಾರ್ಟೂನ್ ಗಳು, ಹಳೇ ಬುಕ್, ಹಳೆ ರಟ್ಟು, ಟ್ಯೂಷನ್ಗಳು, ಎಕ್ಸಾಮ್ಗಳು, ಡಿಬಾರ್ಗಳು, ಡಿಸ್ಮಿಸ್ಗಳು, ಪೇಪರ್ ದೋಣಿಯ ಮುಳುಗಡೆಗಳು, ಮಾರ್ಕ್ಸ್ ಕಾರ್ಡ್ ಗಳು, ಅಪ್ಪ ಅಮ್ಮಂದಿರ ಸೈನುಗಳು, ಉಳುಕೊಂಡ ಸಬ್ಜೆಕ್ಟ್ಗಳು, ಮಾಡಿಕೊಂಡ ಎಡವಟ್ಟುಗಳು, ಕಾಲೇಜ್ ಡೇಗಳು, ಲವ್ ಸ್ಟಾರ್ಟಿಂಗ್ ಗಳು, ಎಂಡಿಂಗ್ಗಳು, ಕೆಲಸಗಳು, ಸಂಬಳಗಳು, ಕಾಲೇಜಲ್ಲೇ ಉಳಿವ ಹಳೇ ಕನಸುಗಳು, ಆಫೀಸಲ್ಲಿ ಕೊಲ್ಲುವ ಹೊಸ ಕೆಲಸಗಳು… ಇಂಥ.. ಸಂದರ್ಭದಲ್ಲಿ.. ನಾವು ಓದುತ್ತಿದ್ದೇವೆ… ನೀವು ಪಾಠ ಮಾಡುತ್ತಿದ್ದೀರಿ.. ಗುರು ವರ್ಯ ಕ್ಲಾಸು ಬೋರು… ನಾ ತಿರುಗಿ ನಿದ್ರೆ ಮಾಡಲೇ… *** ಒಟ್ಟಾರೆ ಭಟ್ಟರ ಹಾಡಿನಲ್ಲೇ ಇರೋ ಕೆಲ ಪದಗಳನ್ನು ಅನಾಮತ್ತಾಗಿ ಎತ್ತಿ ಹೀಗೆ ಹೇಳಬಹುದು, ಪಂಚರಂಗಿ ಹಾಡುಗಳು, ಎಲ್ಲ ಬಿಟ್ಟಿ ಪದಗಳು, ಎಂಥ ಕನೆಕ್ಷನ್ಗಳು, ಬೆಣ್ಣೆ ಬಿಸ್ಕತ್ ಚಕ್ಲಿಗಳು.. ನಾವೇ ಮೆಂಟಲ್ ಕೇಸುಗಳು, ನಡೆದಾಡೋ ಸ್ಟ್ಯಾಚುಗಳು.. ಇಂಥ ಸರಳ, ಹಾಗೂ ತೀರಾ ಕಾಮನ್ ಆಗಿರುವ ಇಮೇಜ್ಗಳನ್ನಿಟ್ಟುಕೊಂಡು ಭಟ್ರು ಹಾಡು ಕಟ್ಟಿದ್ದಾರೆ. ಈ ಲೈಫೇ ನಿರರ್ಥಕ ಅನ್ನೋ ಹಾಗೇ ಬರೀತಾರೆ.. ಆದ್ರೆ ಲೈಫನ್ನ ನಿರರ್ಥಕವಾಗಿ ಕಳಿತಿದ್ದೀವಿ ಅಂತಾ ಕಾಲೆಳಿತಾರೆ. ಸಿಕ್ಕಾಪಟ್ಟೆ ಕನ್ ಫ್ಯೂಸ್ ಮಾಡ್ತಾರೆ. ಆದ್ರೆ ಲೈಫೆ ಹಿಂಗೇನೆ…ಅನ್ನಿಸುತ್ತೆ… ***]]>

‍ಲೇಖಕರು avadhi

September 1, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

2 ಪ್ರತಿಕ್ರಿಯೆಗಳು

  1. srinivas deshpande

    Dear Sir,
    Nimmadu adbhutavaada srijanasheela manassu-
    srinivas deshpande

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: