ಪಡೆಯುವುದಕ್ಕಿ೦ತ, ಕೊಟ್ಟು ಆತ ಕೃಷ್ಣನಾದ….

ರಾಘವೇ೦ದ್ರ ಜೋಶಿ ಕ೦ಡ ಕೃಷ್ಣ         – ರಾಘವೇ೦ದ್ರ ಜೋಶಿ

ರಾವಣ, ಕೀಚಕ, ವಾಲಿ – ಇವರೆಲ್ಲರೂ ಹೆಣ್ಣಿನ ಹಿಂದೆ ಬಿದ್ದವರೇ. ಕೃಷ್ಣ ಕೂಡ. ಆದರೆ ಅವರೆಲ್ಲ ಆಯಾ ಹೆಣ್ಣುಗಳಿಂದ ಏನೋ ಪಡೆಯಲೆತ್ನಿಸಿದವರು. ಕೃಷ್ಣ ಬರೀ ಕೊಡಲು ಯತ್ನಿಸಿದವ. Mostly, ಪಡೆಯುವದಕ್ಕಿಂತ​ ಕೊಡುವದು ಆತನಿಗೆ ಬಹುಶಃ ಸುಲಭವಾಗಿ ಕಂಡಿರಬೇಕು. ಅಥವಾ ಹಾಗೆ ಕೊಡುವದರಿಂದ ಮಾತ್ರ ಪಡೆಯುವದು ಸಾಧ್ಯ ಅಂತ ಅನಿಸಿರಬೇಕು. ಒಮ್ಮೆ ಭಗವಂತನಿಗೆ ಆತನದೇ ಅಂತಃಶಕ್ತಿ ಕೇಳಿತಂತೆ: “ಏನೂ? ಬರೀ ನೀನೇ ಎಲ್ಲಾ ಕಡೆ show ಕೊಡುತ್ತ ನನ್ನನ್ನು ಮಾತ್ರ ಶೇಷನಾಗ, ಗರುಡ, ಲಕ್ಷ್ಮಣ ಮುಂತಾದ ಪಾತ್ರಗಳಿಗೆ ಸೀಮಿತನಾಗಿಸುತ್ತೀಯಲ್ಲ..” ಅಂತ. ಆಗ ಭಗವಂತ, “ಆಯ್ತು,ಒಮ್ಮೆ ನನ್ನ ಅಣ್ಣನಾಗು..” ಅಂತ ನಕ್ಕನಂತೆ. ಹಾಗೆ ಹುಟ್ಟಿದ್ದು ಬಲರಾಮ. ಹೀಗೆ ಕೃಷ್ಣ ತನ್ನ ನಂಬಿ ಬಂದವರಿಗೆಲ್ಲ ಜಾಗಬಿಟ್ಟು ಔದಾರ್ಯ ಮೆರೆಯಬಲ್ಲ. ತಮ್ಮನಾಗಿಯೂ ದೊಡ್ದವನಾಗಬಲ್ಲ. ಆತನಿಗೆ ಯಾರ ಕುಪ್ಪಸ ಕದಿಯಬೇಕೆಂಬ ಪ್ರಜ್ಞೆಯಿದೆ. ಯಾರಿಗೆ ಸೀರೆ ಕೊಡಬೇಕೆಂಬ ಅರಿವಿದೆ. ಹಾಗೆಯೇ ಯಾರಿಗೆ ವಿಶ್ವರೂಪ ತೋರಿಸಬೇಕೆಂಬ ಜವಾಬ್ದಾರಿಯಿದೆ. ಆತ ಪ್ರೀತಿಗಾಗಿ ತಂಗಿಯನ್ನು ಓಡಿಸಬಲ್ಲ; ಪ್ರೇಮಕ್ಕಾಗಿ ತಾನೇ ಓಡಬಲ್ಲ. ಪೂಜಿಸಲೆಂದು ಇಡೀ ಜಗತ್ತಿಗೆ ಮುಕ್ಕಾಲು ಕೋಟಿ ದೇವರುಗಳನ್ನು ಸೃಷ್ಟಿಸಿಕೊಟ್ಟು ತಾನು ಮಾತ್ರ ಕಳ್ಳ, ಸುಳ್ಳ, ಉಲಕೋಚಿ, ಕಪಟನಾಟಕ ಸೂತ್ರಧಾರಿಯೆಂದು ಬಿಂಬಿಸಿಕೊಳ್ಳುತ್ತ, ಯಾರ್ಯಾರದೋ ಕನಸಿಗೆ ಕಮಾನು ಕಟ್ಟುತ್ತಲೇ ಹಲವಾರು ಮನಸುಗಳನ್ನು ಸಂತೈಸುತ್ತ ಇದ್ದುಬಿಡಬಲ್ಲ.ಬಹುಶಃ ಅವನಿರುವದು-ಪೂಜೆಗಲ್ಲ; ಆರಾಧನೆಗೆ! ಹೀಗಿರುವಾಗ, ಹೆಣ್ಣೊಬ್ಬಳು ರಾಮನಂಥ ಗಂಡನಲ್ಲೂ ಇಂಥ ಕೃಷ್ಣನಿಗಾಗಿ ಆಗಾಗ ಹುಡುಕಾಡಿದರೆ, ಹಂಬಲಿಸಿದರೆ ಅದು ವ್ಯಾಸರ ತಪ್ಪೇ?  ]]>

‍ಲೇಖಕರು G

August 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

  1. Gopaal Wajapeyi

    ಅಹುದಹುದು ರಾಘಣ್ಣಾ… ಒಪ್ಪಿದೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: