ಪತ್ರಕರ್ತೆಯೊಳಗಿನ ಕಾರ್ಯಕರ್ತೆ – ವಿ ಗಾಯಿತ್ರಿ

ಪಿ ಸಾಯಿನಾಥ್ ಅವರು ಸ್ಥಾಪಿಸಿದ ‘ಕೌಂಟರ್ ಮೀಡಿಯಾ’ ಪ್ರಶಸ್ತಿ ವಿಜೇತರಾದ ವಿ ಗಾಯತ್ರಿಯವರ ವಿಸ್ತಾರ ಕೆಲಸಗಳನ್ನು ಕಟ್ಟಿಕೊಡುವ ಒಂದು ಆತ್ಮೀಯ ಬರಹ ಇಲ್ಲಿದೆ.

ಅಷ್ಟೇ ಕಾಳಜಿಯಿಂದ ಕೃಷಿ ಪತ್ರಿಕೋದ್ಯಮಕ್ಕೆ ಹೊಸ ರೂಪು ನೀಡುತ್ತಿರುವ ಅನಿತಾ ಪೈಲೂರು ಈ ಲೇಖನ ಬರೆದಿದ್ದಾರೆ. ಅವರಿಗೆ ವಂದನೆಗಳು

– ಅನಿತಾ ಪೈಲೂರ್

ಪ್ರಾರಂಭದಿಂದಲೂ ಗಾಯತ್ರಿ ಅವರ ಸಂಪಾದಕತ್ವದ ‘ಸಹಜ ಸಾಗುವಳಿ’ ಪತ್ರಿಕೆಯ ಓದುಗಳಾದ ನಾನು ಪ್ರಕಟವಾದ ಪ್ರತಿ ಲೇಖನವನ್ನೂ ಅಚ್ಚರಿಭರಿತ ಆಸಕ್ತಿಯಿಂದಲೇ ಓದಿದ್ದೇನೆ. ಕೃಷಿ ಅನುಭವಗಳನ್ನು ದಾಖಲಿಸುವುದು ಸುಲಭದ ವಿಷಯವೇನಲ್ಲ. ಭೂತಾಯಿಯ ಒಡನಾಟದ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲು ರೈತರೊಡನೆ ಉತ್ತಮ ಬಾಂಧವ್ಯ ಇರುವುದು ಎಷ್ಟು ಅಗತ್ಯವೋ, ಆ ಪ್ರದೇಶದ ಭೌಗೋಳಿಕ, ವ್ಯಾವಸಾಯಿಕ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಪರಿಚಯವೂ ಅಷ್ಟೇ ಮುಖ್ಯ. ಅಂತಹದ್ದರಲ್ಲಿ ಗಾಯತ್ರಿ ರಾಜ್ಯದ ಉದ್ದಗಲದ ಹಲವಾರು ಕೃಷಿಕರ ಅನುಭವ ಕಥನಗಳನ್ನು ಸಾದ್ಯಂತವಾಗಿ ನಿರೂಪಿಸಿದ್ದಾರೆಂದರೆ ಅವರ ಬದ್ಧತೆ ನಮಗೆ ಅರ್ಥವಾಗುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ಅಗತ್ಯವಿರುವ ಪ್ರಮುಖ ಪ್ರಯತ್ನಗಳನ್ನು ಕುರಿತ ಲೇಖನಗಳ ಸಂಗ್ರಹ ‘ಸಾವಯವ ಪರಂಪರೆಯ ಕಥನ’ ಗಾಯತ್ರಿ ಅವರ ಸಂಪಾದಕತ್ವದಲ್ಲಿ ಎರಡು ಭಾಗಗಳಲ್ಲಿ ಪ್ರಕಟವಾಗಿದೆ. ಆನಪ್ರಿಯವೂ ಆಗಿದೆ. ರಾಸಾಯನಿಕ ರಹಿತ ಕೃಷಿಗೆ ಪೂರಕವಾದ ಇನ್ನಷ್ಟು ಪುಸ್ತಕಗಳನ್ನು ಬರೆದ, ನಿರೂಪಿಸಿದ, ಅನುವಾದಿಸಿದ ಹೆಗ್ಗಳಿಕೆ ಅವರದು. ಸಹಜ ಸಾಗುವಳಿಯ ಮೂಲಕ ಪರಿಚಿತವಾದ ಅನೇಕ ಕೃಷಿ ಪ್ರಯತ್ನಗಳು ನಂತರದ ದಿನಗಳಲ್ಲಿ ಕೃಷಿರಂಗದಲ್ಲಿ ಮಹತ್ವ ಪಡೆದಿವೆ. ಅನೇಕ ಕೃಷಿಕರು ಇದರಿಂದ ಪ್ರಭಾವಿತರಾಗಿ ಪರಿಸರಸ್ನೇಹಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ಸಾವಯವ ಬೇಸಾಯದಲ್ಲಿ ರೈತರೇ ನಮ್ಮ ಗುರುಗಳು’, ‘ರೈತರಿಂದ ಸಾವಯವ ತರಬೇತಿ’, ‘ಗಮನಕೊಟ್ಟು ಮಾಡಿದ ಬೇಸಾಯ ಕಲಿಸಿದ್ದೇನು?’, ‘ಸಾವಯವ ಗ್ರಾಮದ ರೂವಾರಿಗಳ ಅಂತರಂಗ-ಬಹಿರಂಗ’ – ಇಂತಹ ಶೀರ್ಷಿಕೆಗಳು ಈ ಕೃಷಿಪತ್ರಿಕೆಯ ರೈತಪರ ನಿಲುವನ್ನು ತೋರಿಸುತ್ತವೆ. ಅಗತ್ಯ ಬಿದ್ದಾಗ ಈ ಪತ್ರಕರ್ತೆಯೊಳಗಿನ ಹೋರಾಟಗಾರ್ತಿ  ಎದ್ದು ಕಾಣುತ್ತಾರೆ. ಪತ್ರಿಕೆಯ ಉದ್ದೇಶ ಹಾಗೂ ವಿಸ್ತಾರವನ್ನು ಗಾಯತ್ರಿ ಹೀಗೆ ವಿವರಿಸುತ್ತಾರೆ ‘ಕಾರ್ಪೊರೇಟ್ ದುರಾಕ್ರಮಣ ವಿರೋಧಿಸಿ ಸಹಜ/ಸಾವಯವ ಕೃಷಿಗೆ ಮೀಸಲಾದ ದ್ವೈಮಾಸಿಕ ಪತ್ರಿಕೆ ಹತ್ತನೇ ವರ್ಷ ಪೂರೈಸುತ್ತಿದೆ. ಚೈತನ್ಯ ಕಳೆದುಕೊಳ್ಳುತ್ತಿರುವ ಭೂಮಿ, ಆದಾಯ ಮೀರಿಸಿದ ಖಚರ್ು, ಸಾಲದ ಬಲೆ, ಕೈತಪ್ಪುವ ಮಾರುಕಟ್ಟೆ, ತೀವ್ರ ಅತಿವೃಷ್ಟಿ-ಅನಾವೃಷ್ಟಿಗಳು ಒಂದು ಕಡೆಯಾದರೆ ರೈತರ ಭೂ ಕಬಳಿಕೆಗೆ, ಕೃಷಿಯ ಮೇಲೆ ಕಾರ್ಪೊರೇಟ್ ದುರಾಕ್ರಮಣಕ್ಕೆ ಅನುವು ಮಾಡಿಕೊಡುವ ಕಾನೂನು ಮತ್ತು ನೀತಿಗಳು ಇನ್ನೊಂದು ಕಡೆ. ಇದು ಕೃಷಿರಂಗದ ಬಿಕ್ಕಟ್ಟಿನ ಒಂದು ಪಕ್ಷಿ ನೋಟ. ಇಂತಹ ಬಿಕ್ಕಟ್ಟನ್ನು ಎದುರಿಸುವ ರೈತಾಪಿಯ ವಿಧಾನ ಬಹುಮುಖಿಯೂ ಸಮಗ್ರವೂ ಆಗಿದ್ದಾಗ ಮಾತ್ರ ಈ ಆಪತ್ತಿನಿಂದ ಪಾರು. ಈ ನಿಟ್ಟಿನಲ್ಲಿ ಸುಸ್ಥಿರ ಸಾವಯವ ಕೃಷಿಯನ್ನು ವ್ಯವಸ್ಥಿತವಾಗಿ ಗಟ್ಟಿಗೊಳಿಸಿ ರೈತರ ಆಹಾರ ಭದ್ರತೆಯನ್ನು ಕಾಪಾಡುವುದು ಒಂದು ಕಡೆಯಾದರೆ, ಸಂಘಟಿತ ಪ್ರಯತ್ನದಿಂದ ವಿನಾಶಕಾರಿ ನೀತಿಗಳನ್ನು ಹಿಮ್ಮೆಟ್ಟಿಸುವುದು ಇನ್ನೊಂದು ಕಡೆ. ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿರುವ ಸಹಜ ಸಾಗುವಳಿ ರೈತರ ಜ್ಞಾನ ವ್ಯವಸ್ಥೆಯನ್ನು ಮುಖ್ಯ ರಂಗಕ್ಕೆ ತಂದು ರೈತರ ಜ್ಞಾನ ಪ್ರಸರಣದ ಮೂಲಕ ಕೃಷಿ ರಂಗದ ಪುನರ್ ವಿನ್ಯಾಸಗೊಳ್ಳಬೇಕು ಎಂಬ ಆಶಯಕ್ಕೆ ಒತ್ತು ಕೊಟ್ಟು ಕೆಲಸ ಮಾಡುತ್ತಿದೆ. ರೈತರ ಶ್ರೀಮಂತ ಅನುಭವ-ವಿಚಾರಗಳೇ ಪತ್ರಿಕೆಯ ಜೀವಾಳ. ಜಾಹಿರಾತುಗಳಿಗೆ ಪುಟ ವ್ಯಯಿಸದೆ 28 ಪುಟಗಳ ಪ್ರತಿ ಸಾಲನ್ನೂ ರೈತರ ಧ್ವನಿಗಾಗಿ ಮೀಸಲಿಡುವ ಪತ್ರಿಕೆಯ 54 ಸಂಚಿಕೆಗಳು ಈ ವರೆಗೆ ಪ್ರಕಟವಾಗಿವೆ.’ ಗಾಯತ್ರಿ ಬರವಣಿಗೆಯ ಜೊತೆಜೊತೆಗೆ ‘ಇಕ್ರಾ’ದ ಕೃಷಿ ಸಂಬಂಧೀ ಚಟುವಟಿಕೆಗಳ ಮೂಲಕ ರೈತರ ಸಂಘಟನೆ, ಸಭೆ, ಕಾಯರ್ಾಗಾರಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ‘ಇಕ್ರಾ’ ಸಂಸ್ಥೆಯ ಸದಸ್ಯರು ಸುಸ್ಥಿರ ಸಾವಯವ ಕೃಷಿಯ ಅಳವಡಿಕೆ, ವೈವಿದ್ಯಮಯ ಬೆಳೆ ಪದ್ಧತಿಗಳ ಮೂಲಕ ಮಳೆಯಾಶ್ರಿತ ಸಣ್ಣ ಹಿಡುವಳಿಗಳನ್ನು ಉತ್ಪಾದನಾಶೀಲವಾಗಿಸಿ ರೈತರು ಕೃಷಿಯಲ್ಲಿ ನೆಲೆಯೂರುವಲ್ಲಿ ಶ್ರಮಿಸುತ್ತಿದ್ದಾರೆ. ಕೃಷಿಯ ಸುಸ್ಥಿರತೆಗೆ ಅಗತ್ಯವಾದ ಬೀಜ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಕೆಲಸಗಳು ಇವರ ನೇತೃತ್ವದಲ್ಲಿ ನಡೆದಿವೆ. ಮಹಾತ್ಮ ಗಾಂಧಿ ಅವರ ನೇತೃತ್ವದ ಉಪ್ಪಿನ ಸತ್ಯಾಗ್ರಹದ ಮಾದರಿಯನ್ನಿಟ್ಟುಕೊಂಡು ‘ಬೀಜ ಸ್ವಾವಲಂಬನೆ ರೈತರ ಹಕ್ಕು’ ಎಂಬ ಸಂದೇಶದೊಂದಿಗೆ ಕೆಲ ತಿಂಗಳ ಹಿಂದೆ ರಾಜ್ಯಾದ್ಯಂತ ಜಾಗೃತಿ ಜಾಥಾ ಮಾಡಿ ಈ ಕುರಿತ ಅರಿವನ್ನು ವಿಸ್ತರಿಸುವಲ್ಲಿ ಇಕ್ರಾ ಹಾಗೂ ಗಾಯತ್ರಿ ಅವರ ಪಾತ್ರ ಪ್ರಮುಖ. ಕೃಷಿ ಮತ್ತು ಆಹಾರದಲ್ಲಿ ಕುಲಾಂತರಿಯನ್ನು, ಕೃಷಿಯ ಮೇಲೆ ಕಾಪರ್ೊರೆಟ್ ಪ್ರಹಾರವನ್ನು ವಿರೋಧಿಸುವ ಗಾಯತ್ರಿ ಈ ನಿಟ್ಟಿನಲ್ಲಿ ನಡೆಯುತ್ತಿರುವ ಆಂದೋಲನಗಳಲ್ಲಿ ಸಕ್ರಿಯರಾಗಿದ್ದಾರೆ. ಬೆಂಗಳೂರಿನ ಮೈಖೇಲ್ ಪಾಳ್ಯದಲ್ಲಿರುವ ಇಕ್ರಾ ಕಚೇರಿ ಕೃಷಿಕರು, ಕೃಷಿ ಆಸಕ್ತರು, ನಾಗರಿಕ ಸಮುದಾಯಗಳಲ್ಲಿ ತೊಡಗಿಸಿಕೊಳ್ಳುವ ಇಚ್ಛೆಯಿರುವವರು ಹೀಗೆ ಅನೇಕರಿಗೆ ಚಟುವಟಿಕೆ ಹಾಗೂ ಕಲಿಕೆಯ ತಾಣ. ತಮ್ಮ ಕೆಲಸದ ನಡುವೆಯೇ ಇವರಿಗೂ ಸಮಯ ನೀಡಿ, ಹೊರಟಾಗ ಎದುರಿರುವ ಪಪಾಯಿ ಗಿಡದಿಂದ ಹಣ್ಣೊಂದನ್ನು ನಮ್ಮ ಚೀಲಕ್ಕಿಳಿಸುವ ಗಾಯತ್ರಿ ಆಗ ಸಹಜ ಸಾಗುವಳಿ ಪತ್ರಿಕೆಯ ಸಂಪಾದಕಿ ಅಥವಾ ಇಕ್ರಾ ಸಂಸ್ಥೆಯ ಕಾರ್ಯಕತರ್ೆಯಷ್ಟೇ ಆಗಿರುವುದಿಲ್ಲ. ಕಚೇರಿಯ ಮುಂಭಾಗದಲ್ಲಿರುವ ಪುಟ್ಟ ಕೈತೋಟವನ್ನು ವಿವರಿಸುವ ಹೊತ್ತಿನಲ್ಲಿ ಅವರಲ್ಲಿರುವ ‘ತುಂಗಾ’ ಎದ್ದುಕಾಣುತ್ತಾಳೆ. ತೊತ್ತೊ-ಚಾನ್ನ್ನು ಕನ್ನಡಕ್ಕೆ ತಂದ ಹಿರಿಮೆ ಕಳೆದ ಕೆಲವು ದಶಕದಲ್ಲಿ ಶಿಕ್ಷಣ ರಂಗದಲ್ಲಾದ ಬದಲಾವಣೆಗಳು, ಮಕ್ಕಳ ಬಾಲ್ಯವನ್ನು ಕಿತ್ತುಕೊಂಡದ್ದನ್ನು ನಾವೆಲ್ಲ ಗಮನಿಸಿದ್ದೇವೆ. ಅದಕ್ಕೆ ಅಲ್ಲಲ್ಲಿ ಪ್ರತಿರೋಧಗಳೂ, ಮಗುಸ್ನೇಹಿ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಪರ್ಯಾಯ ಪ್ರಯತ್ನಗಳೂ ನಡೆಯುತ್ತಲೇ ಇದ್ದವು. ಇಂತಹ ಸನ್ನಿವೇಶದಲ್ಲಿ 1996ರಲ್ಲಿ ಪ್ರಕಟವಾದ ಜಪಾನೀ ಮೂಲದ ತೊತ್ತೊ-ಚಾನ್ ಪುಸ್ತಕ ವಿಶ್ವದಲ್ಲೆ ಹೊಸ ಅಲೆಯನ್ನೆಬ್ಬಿಸಿತು. ಮಗುವಿನ ಆಸಕ್ತಿಯನ್ನು ಪೋಷಿಸಿ, ಸಾಮರ್ಥ್ಯವನ್ನು ಅರಳಿಸುವ, ನಲಿಯುತ್ತಲೇ ಕಲಿತ ತಮ್ಮ ಶಾಲೆ, ಅಲ್ಲಿನ ವಾತಾವರಣ ಅದು ಪ್ರತಿಯೊಬ್ಬ ಮಗುವಿನ ಆತ್ಮಸ್ಥೈರ್ಯ, ವ್ಯಕ್ತಿತ್ವ ಬೆಳೆಸುವಲ್ಲಿ ಎಷ್ಟು ಸಹಕಾರಿಯಾಯಿತು ಎಂದು ಜಪಾನಿನ ಟೆಲಿವಿಷನ್ ಕ್ಷೇತ್ರದ ದೊಡ್ಡ ಹೆಸರು ತೆತ್ಸುಕೋ ಕುರೋಯಾನಾಗಿ ಈ ಶಾಲೆಯಲ್ಲಿ ಕಳೆದ ಬಾಲ್ಯವನ್ನು ಈ ಪುಸ್ತಕದಲ್ಲಿ ತೆರೆದಿಡುತ್ತಾರೆ. ಈ ಅಪರೂಪದ ಆತ್ಮಕಥೆಯನ್ನು ಕನ್ನಡಕ್ಕೆ ತಂದದ್ದು ಗಾಯತ್ರಿ. ಸಮಾಜಕ್ಕೆ ಒಳಿತಾಗುವ ಕೆಲಸಗಳಿಗೆ ತೆರೆದುಕೊಳ್ಳುವ ಅವರ ಸ್ವಭಾವ ಹಾಗೂ ಅಗತ್ಯ ಪರಿಣತಿ ಇಂದು ಸಾಹಿತ್ಯ ವಲಯದಲ್ಲೂ ಅವರನ್ನು ಪರಿಚಿತರನ್ನಾಗಿ ಮಾಡಿದೆ. ಗಾಯತ್ರಿ ಬರೆದ ‘ತುಂಗಾ’ ಕಾದಂಬರಿ ತೊತ್ತೊ-ಚಾನ್ ಪುಸ್ತಕದ ಭಾವಾನುವಾದ ಎಂದರೂ ಸರಿಯಾಗಬಹುದೇನೋ. ‘ತೊತ್ತೊ-ಚಾನ್’ ಪುಸ್ತಕದ ಎಳೆಯನ್ನು ಹಿಡಿದು ಅದಕ್ಕೆ ದೇಸೀ ಸೊಗಡನ್ನು ತುಂಬಿದ್ದಾರೆ. ಮಲೆನಾಡಿನ ಪರಿಸರದಲ್ಲಿ ಮೂಡಿಬರುವ ಈ ಕಥನ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಒಂದು ಉತ್ತಮ ಪುಸ್ತಕ ಓದಿದ ತೃಪ್ತಿಯೊಂದಿಗೆ ಜೀವಕಳೆಯಿಲ್ಲದ ಇಂದಿನ ಶಾಲೆಗಳ ಮಧ್ಯೆ ಅಂತಹ ಶಾಲೆಯೊಂದು ನಮ್ಮ ಮಕ್ಕಳಿಗೆ ಸಿಕ್ಕಲು ಸಾಧ್ಯವೇ ಎಂಬ ಬಯಕೆಯೂ ಜೊತೆಗೂಡುತ್ತದೆ. ಸೃಜನಶೀಲ ಕಲಿಕೆಯ ಆಶಯದ ಶಾಲೆಗಳಿಗೆ ‘ತುಂಗಾ’ ನೈತಿಕ ಬೆಂಬಲವನ್ನೂ ನೀಡುತ್ತದೆ. ಈ ಪುಸ್ತಕ ಮಕ್ಕಳಿಗಿಂತ ಪಾಲಕರು ಹಾಗೂ ಶಿಕ್ಷಕರಿಗೆ ಬೆಳಕಿಂಡಿಯಾಗಬಲ್ಲುದು. ಸರಳ, ನೇರ ವ್ಯಕ್ತಿತ್ವ ಹತ್ತಾರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗಾಯತ್ರಿ ದೃಢ ನಿಲುವಿನ ಹೋರಾಟಗಾರರು, ಆಳ ಚಿಂತನೆಯ ಬರಹಗಾರರು. ನೆಲಮೂಲವನ್ನು ಬಲಗೊಳಿಸುವ ಅವರ ಚಟುವಟಿಕೆಗಳು ಅತ್ಯಂತ ವಿವೇಚನೆಯಿಂದ ಕೂಡಿವೆ. ಮೌನವಾಗಿ ರೈತಹಿತದ ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವರು ಸಮಾಜದ ಒಳಿತಿಗೆ ಧಕ್ಕೆಯಾಗುತ್ತಿದೆ ಎನಿಸಿದ ತಕ್ಷಣ ಗಟ್ಟಿ ದನಿ ಎತ್ತಿದ್ದಾರೆ. ಸರಳ ವ್ಯಕ್ತಿತ್ವದ ಅವರು ಮಾತಿಗೆ ನಿಂತರೆ ಗ್ರಾಮೀಣ ಸೊಗಡಿನ ಹತ್ತಾರು ಪಾರಂಪರಿಕ ಜ್ಞಾನವ್ಯವಸ್ಥೆಯನ್ನು ನಮ್ಮೆದುರು ತೆರೆದಿಟ್ಟು, ಅದರ ಹಿಂದಿನ ವಿಜ್ಞಾನ, ಸಾಮುದಾಯಿಕ ಮನೋಭಾವವನ್ನೂ ವಿವರಿಸುತ್ತಾರೆ. ತಮ್ಮ ಕೆಲಸ ಹಾಗೂ ಬರವಣಿಗೆಯ ಮೂಲಕ ಕೃಷಿರಂಗದ ಹತಾಶೆಯನ್ನು ಹೋಗಲಾಡಿಸಿ, ಸುಸ್ಥಿರ ಕೃಷಿಯೆಡೆಗೆ ಪ್ರೋತ್ಸಾಹಿಸುವ ಗಾಯತ್ರಿ ಅವರಿಗೆ ‘ಕೌಂಟರ್ ಮೀಡಿಯಾ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’ ಸಂದದ್ದು ಅತ್ಯಂತ ಸಂತಸ ತಂದಿದೆ. ಅವರ ಕೆಲಸ ಇನ್ನಷ್ಟು ವೇಗ ಪಡೆಯಲಿ ಎಂದು ಹಾರೈಸುತ್ತೇನೆ.  ]]>

‍ಲೇಖಕರು G

July 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾತಿನ ಶೈಲಿ, ಪ್ರಸ್ತುತಪಡಿಸುವಿಕೆ,  ನಿರೂಪಣೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದವರು. ನಿರೂಪಣೆ ಕುರಿತ ಇವರ ಕೃತಿ 'ಮಾತಲ್ಲ ಗೀತೆ'.  ಕರೋನ...

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಕೇಸರಿ ಹರವೂ  ಮಹಾರಾಷ್ಟ್ರದ ವಿದರ್ಭ ಜಿಲ್ಲೆ ಬಹಳ ಮುಂಚಿನಿಂದಲೂ ಹತ್ತಿ ಬೆಳೆಗೆ ಹೆಸರುವಾಸಿಯಾಗಿತ್ತು. ಅಲ್ಲಿಯ ರೈತರು ಹತ್ತಿ ಬೆಳೆಯನ್ನು...

೧ ಪ್ರತಿಕ್ರಿಯೆ

  1. Nataraju S M

    ಗಾಯತ್ರಿ ಮೇಡಂ ಅವರ ಕುರಿತ ಇಂತಹುದೊಂದು ಒಳ್ಳೆಯ ಲೇಖನದ ಅವಶ್ಯಕತೆ ಖಂಡಿತಾ ಇತ್ತು.. ಧನ್ಯವಾದಗಳು ಹಂಚಿಕೊಂಡಿದ್ದಕ್ಕೆ.. ಶುಭವಾಗಲಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: