ಪದ್ಯಕ್ಕೆ ಮತ್ತಿನ ರುಚಿ ತಂದು ಕೊಟ್ಟಿದ್ದು ರತ್ನಮಾಲಾ..

t n seetaraam bw

ಟಿ ಎನ್ ಸೀತಾರಾಂ 

ratnamala prakash.2jpgಗಾನ ಕೋಗಿಲೆ ರತ್ನಮಾಲಾ ಪ್ರಕಾಶ್ ಅವರಿಗೆ ಪ್ರತಿಷ್ಠಿತ ಸಂತ ಶಿಶುನಾಳ…ಪ್ರಶಸ್ತಿ ಸಿಕ್ಕಿದೆ..

ಅವರ ಕಂಠದಲ್ಲಿ ಒಟ್ಟುಗೂಡಿ ಬರುವ ಮಾರ್ದವತೆ ಮತ್ತು ವಿಷಾದ ನಾನು ಬೇರೆಯವರ ಕಂಠದಲ್ಲಿ ಕೇಳಿರುವುದು ಅಪರೂಪ….

ಅವರು ‘ಯಾವ ಮೋಹನ ಮುರಳಿ’ಯನ್ನು ಎಷ್ಟು ಆರ್ದ್ರತೆ ಮತ್ತು ಮೋಹಕತೆಯಿಂದ ಹಾಡಿದ್ದಾರೆಂದರೆ ಒಂದು ಕಾಲದಲ್ಲಿ ನನಗೆ ಅವರ ಈ ಹಾಡು ಹುಚ್ಚು ಹಿಡಿಸಿತ್ತು… ಒಂದು ಇಡೀ ಟೇಪಿನ ಎರಡೂ ಬದಿಯಲ್ಲಿ ಈ ಒಂದೇ ಹಾಡನ್ನು ರೆಕಾರ್ಡ್ ಮಾಡಿಸಿ ಒಂದೇ ಸಮ ಕೇಳುತ್ತಿದ್ದೆ… ಇದು ಮತ್ತು ಮುಖೇಶನ ‘ಜಾನೇ ಕಹಾ ಗಯೆ ವೊ ದಿನ್’ ಹಾಡನ್ನು ಆ ರೀತಿಯ ಹುಚ್ಚಿನಲ್ಲಿ, ಮತ್ತಿನಲ್ಲಿ ಇಡೀ ರಾತ್ರಿ ಟೇಪಿನಲ್ಲಿ ಕೇಳುತ್ತಾ ಅದರ ಜತೆಗೇ ಕಿರುಚಿ ಕೊಳ್ಳುತ್ತಿದ್ದೆ….

ಅಡಿಗರ ಪದ್ಯಕ್ಕೆ ಮತ್ತಿನ ರುಚಿ ತಂದು ಕೊಟ್ಟಿದ್ದು ರತ್ನಮಾಲಾ ಹಾಡುಗಾರಿಕೆ… ಅಂಥ ನೂರು ಹಾಡುಗಳನ್ನು ರತ್ನಮಾಲ ಹಾಡಿದ್ದಾರೆ. ನಾನೊಬ್ಬನೇ ಅಲ್ಲ‌ ಆ ಹಾಡನ್ನು, ಟೇಪಿನ ಎರಡೂ ಬದಿ ರೆಕಾರ್ಡ್ ಮಾಡಿಸಿಕೊಂಡು ಕೇಳುತ್ತಿದ್ದುದು…ಲಂಕೇಶ್ ಮೇಷ್ಟ್ರು ಮತ್ತು ರವಿ ಬೆಳಗೆರೆ ಕೂಡ… ಲಂಕೇಶರು ಒಮ್ಮೆ ರತ್ನಮಾಲರ ಬಗ್ಗೆ ವಿಶೇಷ ಸಂಚಿಕೆ ಮಾಡಿ ಆಕೆಯ ಚಿತ್ರವನ್ನು ಮುಖಪುಟವಾಗಿಸಿದ್ದರು…

She is such a great singer….ಅವರಿಗೆ ವಿಶೇಷ ಅಭಿನಂದನೆಗಳು..

‍ಲೇಖಕರು Admin

August 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪುರುಷೋತ್ತಮ ತಲವಾಟ ಅವರಿಗೆ ‘ಕರ್ನಾಟಕ ಕಲಾನಿಧಿ ಪ್ರಶಸ್ತಿ’

ಪುರುಷೋತ್ತಮ ತಲವಾಟ ಅವರಿಗೆ ‘ಕರ್ನಾಟಕ ಕಲಾನಿಧಿ ಪ್ರಶಸ್ತಿ’

ರಂಗ ಕುಸುಮ ಪ್ರಕಾಶನವು ಪ್ರತಿ ವರ್ಷದಂತೆ ಈ ಸಲವು ತನ್ನ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪ್ರತಿಸಲದಂತೆ ಕರ್ನಾಟಕದ...

4 ಪ್ರತಿಕ್ರಿಯೆಗಳು

 1. Anonymous

  congradulations to Rathnamalaji. ನನ್ನಂತ ಅನೇಕ ಸಾಮಾನ್ಯರಿಗೆ ಕವಿತೆಯ ಬಗ್ಗೆ ಅಭಿರುಚಿ ಹುಟ್ಟಿಸಿದ್ದು ರತ್ನಮಾಲಾರವರ ಗಾಯನ. ಕವಿ ಯಾರೆಂದೂ ತಿಳಿಯದೆ ಕಾವ್ಯವನ್ನು ಆಸ್ವಾದಿಸಿದ್ದು ರತ್ನಮಾಲಾರವರ ಕಂಠದಲ್ಲಿ. ರತ್ನಮಾಲಾರವರ ದನಿಗೆ ಸಾವಿಲ್ಲ.

  ಪ್ರತಿಕ್ರಿಯೆ
 2. kvtirumalesh

  ಶ್ರೀಮತಿ ರತ್ನಮಾಲಾ ಅವರಿಗೆ ಹಾರ್ದಿಕ ಶುಭಾಶಯಗಳು! ನಿಮಗೆ ಎಷ್ಟು ಪ್ರಶಸ್ತಿಗಳನ್ನು ಕೊಟ್ಟರೂ ಕಡಿಮೆಯೇ. ಅದೆಷ್ಟು ಜನ
  ನಿಮ್ಮಿಂದ ಹಾಡಿಸಿಕೊಳ್ಫಬೇಕು ಎಂದು ಬಯಸುತ್ತಾರೆ ಗೊತ್ತಿದೆಯೇ? ಆಂಥವರಲ್ಲಿ ನಾನೂ ಒಬ್ಫ!

  ಕೆ.ವಿ. ತಿರುಮಲೇಶ್

  ಪ್ರತಿಕ್ರಿಯೆ
 3. ಗುರುರಾಜ ಕತ್ತರಗುಪ್ಪೆ

  congratulations Rathnamalaji. ನನ್ನಂತ ಸಾಮಾನ್ಯರು ಕಾವ್ಯವನ್ನು ಆಸ್ವಾದಿಸಲು ಆರಂಬಿಸಿದ್ದೇ ನಿಮ್ಮ ಸಿರಿಕಂಠದ ಮೂಲಕ,,,,ಕನ್ನಡದ ಕವಿಗಳೂ ನಿಮ್ಮ ಮೂಲಕ ನಮ್ಮೊಳಗೆ ಬಂದವರು,
  ರತ್ನಮಾಲಾ ನಿಮ್ಮ ದನಿಗೆ ಸಾಟಿಯಿಲ್ಲ…

  ಪ್ರತಿಕ್ರಿಯೆ
 4. Abhimani

  eegina immitation gayakarannu nodidare , rathnamaala ravara prathibhe eshtu ananya endu arivaaguttade,

  congratulations rathnamaala ravarige

  nanna mattu nannathaha lakshanthara bhavageethe premigala mecchina haadugaarthi.

  ivaru mattu maalathi sharma are the best female singers in kannada.

  Eega ivara haadugalanne copy maadi swanthaddu annuva haage haaduvavaru ivarige kruthagnathe kooda thorisuvudilla.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: