ಪನ್-Fun!! – ಸೂತ್ರಧಾರ ರಾಮಯ್ಯ

ಪನ್ – ಫನ್

– ಸೂತ್ರಧಾರ ರಾಮಯ್ಯ.

ಗಾಡ್ ಪ್ರೊಪೋಸಸ್? ಹಕ್ಕಿ ಹಾರುತಿದೆ ನೋಡಿದಿರಾ! ಎನ್ನುತ್ತಾ, ನೀಲಿ ಬಾನಲ್ಲಿ ದೇವರು ರುಜು( ಸೈನ್) ಮಾಡಿದ – ಗಾಡ್ ಪ್ರೋಪೋಸಸ್. ಆದರೆ ಹಾರುತ್ತಿದ್ದ ಹಕ್ಕಿಗಳಿಗೆ ಬಂದೂಕು ಗುರಿಯಿಟ್ಟು, ಹೇಗೆ ಹೊಡೆ-ದುರುಳಿಸಿದೆ ನೋಡಿದಿರಾ? ಎನ್ನುತ್ತಾ ಮನುಷ್ಯತ್ವಕ್ಕೇ ರಿಸೈನ್ ಮಾಡಿದ ಮನುಷ್ಯ! – ಮ್ಯಾನ್ ಡಿಸ್ಪೋಸಸ್. ಅಭಿಪ್ರಾಯ ಕಡ್ಡಾಯ? ಗಡ್ಡದಮೇಲೆ(CHIN) ಕೈಹೊತ್ತು ಶೂನ್ಯ ದಿಟ್ಟಿಸುತ್ತಾ ಕೂತವನನ್ನು ಮಹಾನ್ ಚಿಂತಕ ಎಂತಲೂ, ಪುಸ್ತಕ/ ಗ್ರಂಥಗಳ ಪೇರಿಸಿದ ಕಪಾಟಿನ ಮುಂದೆ ಕೂತು, ಕ್ಯಾಮರಾಗೆ, ಸಂದರ್ಶನಗಳಿಗೆ ಪೋಸ್ ಕೊಡುವವನನ್ನು ಮಹಾನ್ ವಿದ್ವಾಂಸ ( ಲರ್ನೆಡ್) ಎಂತಲೂ ಪರಿಗಣಿಸಬೇಕಾದ್ದು ‘ಕಂಪೆಲ್’ ಸರಿ. ನೊರೆಯೋ ಸೋಪಜ್ಞತೆಯೋ? ಪುರ್ವಾಭಾದ್ರ: ಹಾಸ್ಯ ಸಾಹಿತಿ ಸೂ.ರಾ. ವೊರೆಶಿಯಸ್ ರೀಡರ್..,ಓದುಬಾಕ. ಮನೇಲಿ ಎಲ್ಲಿ ನೋಡಿದರೂ ಹೊರೆಹೊರೆ ಪುಸ್ತಕಗಳು. ಕಾಲಿಡೋಕೂ ಜಾಗ ಇಲ್ಲಾ ಅಂತೀನಿ!ಉತ್ತರಾಭಾದ್ರ: ಪಾಪ! ಎಲ್ಲಾ (ಪುಸ್ತಕಗಳೆಲ್ಲಾ) ಅವರ ಸ್ವಯಂ ಕೃತ(?) ಐ ಮೀನ್, ಅವರೇ ಬರೆದ ಬುಕ್ಕುಗಳು. ಸಾಲ ದ್ದಕ್ಕೆ ಸ್ವಯಂ ಪ್ರಕಾಶಿ ಬೇರೆ. (ಪ್ರಕಾಶಕ) ಪ್ರಿಂಟಾದ ಒಂದು ಬುಕ್ಕೂ ಖರ್ಚಾಗ್ಲಿಲ್ಲಾ ಅಂದ್ರೆ ಪಾಪ ಅವರೂ ಏನ್ ಮಾಡ್ತಾರೆ ಹೇಳು. ಮಾಡಿದ್ದುಣ್ಣೋ.. ಅಂದಹಾಗೆ ತನ್ನ ಬರ ವಣಿಗೇನ ತಾನೇ ಓದೋದು, ಜೊತೆಗೆ ಮನೆಗೆ ಬಂದವರ ಬಳಿ ತಾವು ಬರೆದುದ ನೊರೆಯೋ ಸೋಪಜ್ನತೆ ಕೂಡಾ ಸೂ.ರಾ.ಗೆ ದಕ್ಕಿದ್ದು ಹಾಗೆ- ಸ್ವಂತದ ‘ಶಾಶ್ವತ ಸಾಹಿತ್ಯ’ದಿಂದಾ! ರೀಕಾಲ್ ವಾದರೆ? ಹರಕು ಮುರುಕು ಕನ್ನಡ ಬರೋ ಚಾರ್ಲಿ, ನಮ್ಮ ಚಾಪ್ ನ ಕೇಳಿದ ” ನಿಮ್ಮ ಫಾದರ್ ಈಗ ಎಲ್ಲಿ ಇದ್ದಾನೆ? ಚಾಪ್: “ಅವರು ಕಾಲವಾದರು. ಐ ಮೀನ್ ವಾಪಸ್ ದೇವರ ಹತ್ತಿರಾ..( ಮೇಲೇ,ಕೈ ತೋರಿಸುವನು) ಚಾರ್ಲಿ: ಓ ಹೋ, ರೀಕಾಲ್ ಆದರು. ಓ.ಕೆ. ಏನಾಗಿ ಸಾಯಿತು ನಿಮ್ಮ ಫಾದರ್? ಚಾಪ್: ವಯಸ್ ಸಾಯಿತು, ಹೋಯಿತು! ಅನ್ಯಾಯವನು ರಕ್ಷಿಪನ ನ್ಯಾಯ ಭಕ್ಷಿಪುದು?” ಹೆಡ್ ಲೆಸ್ ಆಗಿ ಆಡಳಿತ ನಡೆಸಿದ ತಪ್ಪಿಗೆ, ಕಾನೂನಿನ ಕಬಂಧ ಬಾಹುವಿಗೆ ಸಿಕ್ಕಿ ಒದ್ದಾಡುತ್ತಿದ್ದರೂ, “ನ್ಯಾಯಾ ಲಯದ ಬಗ್ಗೆ ತನಗೆ ಅಪಾರ ಗೌರವವಿದೆ, ಎಂದು (ಭಯದಿಂದ?) ವಿಲ ವಿಲಾಪಿಸುವ ನಾಯಕರುಗಳ ಮಾತು ಎಷ್ಟು ಪ್ರಾಮಾಣಿಕ? ಹಾಗೊಂದು ವೇಳೆ ಗೌರವವಿದ್ದಿದ್ದರೆ, ಅಧಿಕಾರ ನಡೆಸುವಾಗ, ಕಡತ ಗಳಿಗೆ ಸಹಿ ಮಾಡುವಾಗ-ಘಳಿಗೆ , ತಾನು ಸಹಿ ಮಾಡಿದ್ದು ನಿಯಮಗಳಿಗೆ ಅನುಗುಣವಾಗಿದೆಯೇ ಎಂದು ಚೆಕ್( cheque ಅಲ್ಲಾ) ಮಾಡಿ, ಯೋಚಿಸಿದ್ದರೆ, ‘ನ್ಯಾಯವನ್ನು ರಕ್ಷಿಪನ ನ್ಯಾಯ ರಕ್ಷಿಪುದು’ ಅಂತಾಗುತಿತ್ತು – ನ್ಯಾಯದ ಕತ್ತಿ ತಾಗುತ್ತಿರಲಿಲ್ಲ. ಮರಿ ಗುಂಡೋಪಾಖ್ಯಾನ! ಬೇಸಿಗೆ ರಜೆ ಬಂತು. ಗುಂಡ ತನ್ನ ಮಗನನ್ನ ಕರೆದುಕೊಂಡು ಹೋಗಿ ಪ್ಲ್ಯಾನೆಟೂರಿಯಂ ತೋರಿಸಿದ. ( ತಾರಾಲಯ) ಮರಿಗುಂಡ ಸಖತ್ ಎಂಜಾಯ್ ಮಾಡಿದ. ಅದಾದ ಒಂದು ವಾರಕ್ಕೆ ಗುಂಡುಮರಿಯೊಡನೆ ಹಳ್ಳಿಗೆ ಹೋದ ಸಂಸಾರ ಸಮೇತ. ಹಳ್ಳಿಮನೆಯಲ್ಲಿ ಒಂದು ಮಧ್ಯರಾತ್ರಿ ” ಅಪ್ಪಾ ಒಂದಾ ಮಾಡ್ಬೇಕು” ಅಂದ ಮರಿಗುಂಡ. ಗುಂಡಾ ಗೊಣಗುತ್ತಾ, “ಆಯ್ತು ನಡಿ ಬೀದಿಗೆ” ಅಂತಾ ಬೀದಿಗೆ ಕರೆದುಕೊಂಡು ಹೋಗಿ ” ಹೂಂ ಒಂದಾ ಮಾಡು” ಅಂದ ಗುಂಡಾ. ಬಟಾಬಯಲು ಬೀದೀಲಿ ಕೂತು ಒಂದ ಮಾಡುತ್ತಲೇ ತಲೆ ಎತ್ತಿ, ಮೇಲೆ ಹೊಳೆವ ಅಸಂಖ್ಯ ತಾರೆಗಳ, ನಕ್ಷತ್ರಗಡಣವ ನೋಡಿ ಬೆಕ್ಕಸ ಬೆರಗಾಗಿ ” ಅಪ್ಪಾ, ಮೇಲೆ ನೋಡು, ಥೇಟ್ ಪ್ಲ್ಯಾನೆಟೋರಿಯಂ ಇದ್ದ ಹಾಗೇ ಇದೆ ಆಕಾಶ” ಉದ್ಗರಿಸಿದ ಗುಂಡುಮರಿ! ಮನುಷ್ಯತ್ವದ ಎಚ್ ಗಾರಿಕೆ! ಹ್ಯೂಮನ್ ರೇಸ್ ಅನ್ನೋ ಪದ ಶುರುವಾಗೋದೇ ಎಚ್ ಅಕ್ಷರದಿಂದ. ಇದೇ ಮನುಷ್ಯನ ಹೆಚ್ ಗಾರಿಕೆಗೆ ಕಾರಣವಿರಬಹುದು. ಅಂತೆಯೇ ಅವನ ಬದುಕನ್ನು ಎಚ್ ನಿಂದಲೇ ಶುರುವಾಗುವ ಪದಗಳೇ ನಿಯಂತ್ರಿಸುತ್ತವೆ: ಹೆಡ್ ಅಂಡ್ ಹಾರ್ಟ್. ಒಮ್ಮೊಮ್ಮೆ ಹೆಡ್ ಹಾರ್ಟನ್ನು ಆಳಿದರೂ, ಹಾರ್ಟೆ ಹೆಡ್ಡನಾಳಿದರೂ ಈ ಎರಡು ಪದಗಳ ಸಮನ್ವಯದಿಂದಲೇ ‘ಹ್ಯೂಮನ್ ರೇಸ್ ‘ ಗೆದ್ದಿದೆ. ಬದುಕುಳಿಯುವ ಓಟದಲ್ಲಿ ಸಮನ್ವಯತೆ ಹೆಚ್ಚು ಕಮ್ಮಿ ಆದಾಗಲೇ ‘ಹ್ಯೂ ಅಂಡ್ ಕ್ರೈ ಸಿಸ್’ ತಲೆ ಎತ್ತುವುದು. end ಗುಟುಕು ಸಗಣೀಕೃತ ಸಾಹಿತ್ಯ. ಬದುಕನ್ನು ‘ಹಿಂಡಿ’ ಹಿಡಿದಿಟ್ಟ ರಸ, ಪುಟಪುಟದಲ್ಲೂ ಪುಟಿದೇಳದಿದ್ದರೆ ಅದೊಂದು ಪುಸ್ತಕವೇ? ಅಲ್ಲಾ, ಬದಲಿಗೆ ಹಿಂಡಿ ತಿಂದು ಸಗಣಿ ಹಾಕುವ ಬೂಸವಪುರಾಣ]]>

‍ಲೇಖಕರು G

February 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಿರಿಯಾನಿಯಿಂದ ಫಿರ್ನಿವರೆಗೆ..

ಬಿರಿಯಾನಿಯಿಂದ ಫಿರ್ನಿವರೆಗೆ..

ಕೆ ಮುದ್ದುಕೃಷ್ಣ  ಮೈಸೂರಿಗರಿಗೆ ಒಂದು ಸಿಹಿ ಸುದ್ದಿ. ಬಹಳ ವರ್ಷಗಳಿಂದ ದೊಡ್ಡ ಚರ್ಚ್ ಬಳಿ ಮಾತ್ರವೇ ಇದ್ದ ಪ್ರಸಿದ್ದ “ನಶೇಮನ್” ಹೋಟೆಲ್ ಈಗ...

ಪೂಜೆ!!

ಪೂಜೆ!!

ಎಸ್.ಜಿ.ಶಿವಶಂಕರ್ ನನ್ನ ಚಡ್ಡಿ ಫ್ರೆಂಡು ಸುಬ್ಬು ಯಾನೆ ಸುಭಾಶ್ ಲಂಚ್‍ಗೆ ಮುಂಚೆ ಮನೆಗೆ ಹೋಗಿದ್ದು ತಿಳಿದು ಆತಂಕಗೊಂಡೆ. ಕಾರಣ...

ಇದು ನನ್ನ ಸವಾಲ್..

ಇದು ನನ್ನ ಸವಾಲ್..

ನಾಗೇಂದ್ರ ಶಾ  ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ....

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: