ಪರದೆ ಸರಿಯುವ ಮೊದಲೇ ಅಭಿನಯ ಮುಗಿಸಿದ ನಟರಾಜ್….

– ಧನ೦ಜಯ ಕುಲಕರ್ಣಿ

ಅದೇಕೋ ಗೊತ್ತಿಲ್ಲ ಮನಸ್ಸು ತುಂಬಚಡಪಡಿಸಿದೆ….ಪದೇ ಪದೇ ಧಾರವಾಡದ ನನ್ನ ಗೆಳೆಯರಿಗೆ ಫೋನಾಯಿಸುತ್ತಿದ್ದೇನೆ..ಕರ್ನಾಟಕ ಕಂಡ ಅದ್ಭುತನಟ ಆಸ್ಪತ್ರೆಗೆ ದಾಖಲಾಗಿದ್ದ…ಅವರನ್ನು ರಂಗದ ಮೇಲೆ ನೋಡಿದ್ದು ಇತ್ತೀಚೆಗೆ ಕೇವಲ ಒಂದು ತಿಂಗಳಹಿಂದೆ….ಸೂರಿ ನಿರ್ದೇಶನದ “ನಾ ತುಕಾರಾಮ್ ಅಲ್ಲ…” ನಾಟಕದ ೪೩ ನೇ ಪ್ರದರ್ಶನವೇ ಅವರುಅಭಿನಯಿಸಿದ ಕೊನೆಯ ನಾಟಕವಾಗಬಹುದು ಅಂತ ಕನಸು ಮನಸಿನಲ್ಲಿಯೂ ಅಂದು ಕೊಂಡಿರಲಿಲ್ಲ….ನಾ ತುಕಾರಾಮ್ಅಲ್ಲ ನಾಟಕದ ೪೪ ನೇ ಪ್ರದರ್ಶನಕ್ಕೆ ಎಲ್ಲರಿಗಿಂತಲೂ ಮುಂಚಿತವಾಗಿಯೇ ಮುಖಕ್ಕೆ ಬಣ್ಣ ಹಚ್ಚಿದ್ದರು…..ದೇಹತೀರ ದಂಡನೆಗೆ ಒಳಗಾಗಿತ್ತು..ಸಂಜೆ ೭.೩೦ಕ್ಕೆ ಆರಂಭವಾಗಬೇಕಿತ್ತು ಪ್ರದರ್ಶನ..ಆದರೆ ನಾನು ೬ ಗಂಟೆಗೆಅವನನ್ನು ಭೇಟಿಯಾಗಲು ಹೋದಾಗ ನಿಂತುಕೊಳ್ಳಲೂ ಆಗದೇ, ಮಾತನಾಡಲೂ ಆಗದೇ…ನೆಲದ ಮೇಲೆ ಕುಸಿದು ಬಿದ್ದರು….ಬದುಕೆಂಬನಾಟಕದ ಕೊನೆಯ ಅಧ್ಯಾಯ ಆರಂಭವಾದದ್ದೇ ಅಂದು….. ಪ್ರದರ್ಶನವನ್ನು ರದ್ದು ಪಡಿಸಿ,ನಟರಾಜ್ ಅವರನ್ನು ಬೆಂಗಳೂರಿನಿಂದ ಧಾರವಾಡಕ್ಕೆ ಕಳುಹಿಸಿಕೊಡುವ ಕೊನೆಯ ಕ್ಷಣದವರೆಗೂ ನನ್ನ ಕೈಹಿಡಿದುಕೊಂಡು “ನಿಮಗೆಲ್ಲ ನನ್ನಿಂದ ಭಾಳ ತ್ರಾಸಾತು….ಪ್ರೇಕ್ಷಕರೆಲ್ಲ ನಾಟಕಾ ನೋಡ್ಲಾರ್ದ..ತಿರುಗಿಹೋದ್ರು..ಇದೆಲ್ಲ ನನ್ನಿಂದ ಆದದ್ದು….”ಹೀಗೆಲ್ಲ ಬಡಬದಿಸುತ್ತಿದ್ದ ನಟರಾಜ್ ಅವರ ಕಣ್ಣಂಚಿನಲ್ಲಿನೀರಿಳಿಯುತ್ತಿದ್ದವು…..ಬಹುಶಃ ಅದೇ ನನ್ನ ಮತ್ತು ನಟರಾಜನ ಕೊನೆಯ ಭೇಟಿಯಾಗಲಿದೆ ಎಂದು ನಾನು ಅಂದುಕೊಂಡಿರಲಿಲ್ಲ…ಮೇ ತಿಂಗಳಿನಲ್ಲಿ ಧಾರವಾಡ ರಂಗಾಯಣದವರು ಮಕ್ಕಳಿಗಾಗಿ ಆಯೋಜಿಸಿದ್ದ ರಂಗ ತರಬೇತಿಶಿಬಿರಕ್ಕೆ ಗೆಳೆಯ ಜಗುಚಂದ್ರ ಬರುವಂತೆ ತುಂಬಾ ಒತ್ತಾಯ ಮಾಡಿದ್ದ….ಆ ನೆಪದಲ್ಲಾದರೂ ನಟರಾಜ್ ಭೇಟಿಯಾಗಬಹುದುಎಂದು ಧಾರವಾಡ ರಂಗಾಯಣಕ್ಕೆ ಹೋದರೆ ಅಲ್ಲಿಯೂ ಅವರ ಭೇಟಿಯಾಗಲಿಲ್ಲ…. ಬೆಂಗಳೂರಿನಿಂದ ಧಾರವಾಡಕ್ಕೆ ವಾಪಸಾದನಂತರ ನಿರಂತರ ಸಂಪರ್ಕದಲ್ಲಿದ್ದ ನಟರಾಜ, ಧಾರವಾಡ ರಂಗಾಯಣಕ್ಕೆ ನನ್ನಿಂದ ಒಂದು ನಾಟಕವನ್ನು ನಿರ್ದೇಶನಮಾಡಿಸುವ ಆಸೆ ಹೊಂದಿದ್ದರು..ಆ ಕುರಿತು ಅನೇಕ ಸುತ್ತಿನ ಮಾತುಕತೆಗಳು ಸಹ ನಡೆದಿದ್ದವು….ಇನ್ನೇನುನಾಟಕದ ತಯಾರಿ ಆರಂಭಿಸಬೇಕು ಎನ್ನುವಷ್ಟರಲ್ಲಿ ಅನಾರೋಗ್ಯ ಮತ್ತೆ ಅವರನ್ನು ಕಾಡತೊಡಗಿತು…..ವಾರದಲ್ಲಿಎರಡುದಿನ ಮನೆಯಲಿದ್ದರೆ ೪ ದಿನ ಆಸ್ಪತ್ರೆಯಲ್ಲಿರ ಬೇಕಾದಂತಹ ಪರಿಸ್ಥಿತಿ….. ನನ್ನ ಮತ್ತು ನಟರಾಜ್ ಅವರ ಗೆಳೆತನ೨೦ ವರ್ಷಗಳ ಹಿಂದಿನದು….೧೯೯೨ ರಲ್ಲಿ ಗೆಳೆಯ ಪ್ರಮೋದ್ ಶಿಗ್ಗಾಂವ್ ಧಾರವಾಡದಲ್ಲಿ ಕಂಬಾರರ”ಸಾಂಬಶಿವ ಪ್ರಹಸನ” ಮಾಡಿಸುತ್ತಿದ್ದ ಸಮಯದಲ್ಲಿ ತಾಲೀಮು ನೋಡಲು ಬಂದ ನಟರಾಜನೊಂದಿಗಿನಗೆಳೆತನ ಇಂದಿನ ವರೆಗೆ ಸಾಗಿ ಬಂದಿತ್ತು. ಬದುಕಿನ ಅನೇಕ ಜಂಜಡಗಳಿಂದ ಹೊರಬರಲು ರಂಗಭೂಮಿಯ ಒಡನಾಟ ಬಿಟ್ಟುನಟರಾಜ್ ಅವರಿಗೆ ಬೇರೆ ಮಾರ್ಗವಿರಲಿಲ್ಲ….ಧಾರವಾಡದ ಹಿರಿಯ ರಂಗಾಸಕ್ತರು ಸೇರಿಕೊಂಡು ಅವರಿಗಾಗಿ”ಮ್ಯಾಳ” ತಂಡವನ್ನು ಹುಟ್ಟು ಹಾಕಿದರು. ಗೆಳೆಯ ಬಂಡು ಕುಲಕರ್ಣಿಯ ನಿರ್ದೇಶನದಲ್ಲಿ”ಬೂರ್ಜ್ವಾ ಜಂಟಲ್‍ಮನ್” ನಾಟಕದಲ್ಲಿ ಅಮೋಘವಾಗಿ ಅಭಿನಯಿಸಿ, ರಂಗಭೂಮಿಯಲ್ಲಿ ತನ್ನ ಜೀವಂತಿಕೆಯನ್ನುಸಾಬೀತು ಪಡಿಸಿದ್ದರು ನಟರಾಜ. ಮುಂದೆ ಅನೇಕ ನಾಟಕಗಳನ್ನು ನಿರ್ದೇಶಿಸಿದರು, ನಾಟಕಗಳಲ್ಲಿ ನಟಿಸಿದ.ದಾರಾವಾಹಿ, ಸಿನೆಮಾಗಳಲ್ಲಿಯೂ ಅಭಿನಯಿಸಿ ಸೈ ಅನ್ನಿಸಿಕೊಂಡ. ಕೆಲವೊಂದು ಪಾತ್ರಗಳಲ್ಲಂತೂ ಇವರನ್ನುಬಿಟ್ಟರೆ ಬೇರೆ ಯಾರೂ ಅಭಿನಯಿಸಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ತಲ್ಲೀನನಾಗಿ ಹೋದರು….. ನಟರಾಜ್ ಅವರ ಬದುಕೇ ಒಂದು ವಿಕ್ಷಿಪ್ತ….ಯಾರನ್ನೂನಂಬುವ ಸ್ವಭಾವದವರಲ್ಲ….ಯಾರೊಂದಿಗೂ ಸರಿಯಾದ ಗೆಳೆತನವನ್ನಿಟ್ಟುಕೊಂಡಿರಲಿಲ್ಲ…ಕ್ಷುಲ್ಲಕ ಕಾರಣಗಳಿಗಾಗಿಎಲ್ಲರೊಂದಿಗೆ ಜಗಳಗಳು, ರಗಳೆಗಳು……ಅವುಗಳನ್ನೇ ನೆಪವಾಗಿರಿಸಿಕೊಂಡು ಮಾತು ಬಿಡುವುದು….ಆದರೆಅವರು ಮುಖಕ್ಕೆ ಬಣ್ಣ ಹಚ್ಚಿಕೊಂಡು ರಂಗದ ಮೇಲೆ ಬಂದರೆಂದರೆ ಅವರೊಬ್ಬ ದೈತ್ಯ…..ಅವರೊಂದಿಗೆ ಅಭಿನಯಿಸುವಸಹಕಲಾವಿದರು ಹರ ಸಾಹಸ ಪಡಬೇಕಾಗಿತ್ತು….ಎಲ್ಲರನ್ನೂ ನುಂಗಿಹಾಕಿಬಿಡುತ್ತಿದ್ದರು….ಹೊರಗಡೆ ಅವರೊಂದಿಗೆಯಾವುದೇ ರೀತಿಯ ಭಿನ್ನಾಭಿಪ್ರಾಯವಿರಲಿ, ಸ್ವತಃ ಅವರ ವೈರಿಗಳೂ ಸಹ ಅವರ ನಟನೆಗೆ ಸೋತು, ಅವನೊಬ್ಬ ಅದ್ಭುತನಟ ಎನ್ನುತ್ತಿದ್ದರು….ಇಷ್ಟು ಸಾಕಲ್ಲವೇ ಅವರಲ್ಲಿರುವ ಪ್ರತಿಭೆಗೆ ಸಾಣೆ? ಮರಾಠಿಯ “ನಟ ಸಾಮ್ರಾಟ”ನಾಟಕದಲ್ಲಿ ಒಂದು ದೃಶ್ಯ ಬರುತ್ತದೆ…..ತಂದೆ-ತಾಯಿ ಮಗಳ ಅಪವಾದದಿಂದ ಮನನೊಂದು, ಮಗನ ಕಡೆಗೆ ಹೋಗುವದೃಶ್ಯ….ವಯಸ್ಸಾದ ಮುದುಕ – ಮುದುಕಿ ಮಗನ ಮನೆಯ ಹತ್ತಿರ ಬಂದಾಗ ಮನೆಗೆ ಬೀಗ ಹಾಕಿರುತ್ತದೆ….ಹೆಂಡತಿಗಂಡನನ್ನು ಕೇಳುತ್ತಾಳೆ “ನಾವು ಬರ್ತೀವಿ ಅಂತ ತಾರ್ ಕಳಿಸಿದ್ವಿ ಹೌದಲ್ಲೋ?” ಅದಕ್ಕೆಗಂಡ ಹೇಳುತ್ತಾನೆ “ನಾವು ತಾರು ಕಳಿಸಿದ್ದು ಮನೀ ಅಡ್ರೆಸ್ಸಿಗೆ…ಅದು ಮನೀಗೆ ಮುಟ್ಟಿರತದ..ಆದ್ರಮನಸೀಗೆ ಮುಟ್ಟಿಲ್ಲ”…ಗಂಡನ ಪಾತ್ರದಲ್ಲಿ ನಟರಾಜನ ಅಭಿನಯ ಎಂದೂ ಮರೆಯಲು ಸಾಧ್ಯವಿಲ್ಲ……ಮರಾಠಿಯಲ್ಲಿಶ್ರೀರಾಮ್ ಲಾಗೂ ಅವರನ್ನು ಹೊರತು ಪಡಿಸಿದರೆ, ನಟರಾಜ ಮಾತ್ರ ಆ ಪಾತ್ರವನ್ನು ಮಾಡಲು ಸಾಧ್ಯ ಎನುವಷ್ಟರಮಟ್ಟಿಗೆ ಆ ಪಾತ್ರಕ್ಕೆ ಜೀವ ತುಂಬಿದ್ದರು…. ಜೀವನದ ಕೊನೆಯ ಅಧ್ಯಾಯವನ್ನು ನಟರಾಜಇಷ್ಟು ಬೇಗನೆ ಮುಗಿಸುತ್ತಾರೆ ಅಂತ ಅಂದು ಕೊಂಡಿರಲಿಲ್ಲ….ಕನ್ನಡ ರಂಗಭೂಮಿ ಅವರಿಂದ ಇನ್ನೂ ಹೆಚ್ಚಿನದನ್ನುಆಪೇಕ್ಷಿಸುತ್ತಿತ್ತು….ಈಗ ತಾನೇ ಧಾರವಾಡ ರಂಗಾಯಣದ ನಿರ್ದೇಶಕ ಹುದ್ದೆಯನ್ನು ಅಲಂಕರಿಸಿ, ಹೊಸ ಹೊಸಕಾರ್ಯಕ್ರಮಗಳನ್ನು ಮಾಡುವ ಕುರಿತು ಚರ್ಚೆ ನಡೆಸಿ, ಅವುಗಳನ್ನು ಕಾರ್ಯರೂಪಕ್ಕಿಳಿಸುವ ಹಂತದಲ್ಲಿರುವಾಗಲೇಅನಾಹುತ ಸಂಭವಿಸಿ ಹೋಗಿದೆ……ಪರದೆ ಸರಿಯುವ ಮೊದಲೇ, ಇಹ ಲೋಕದಲ್ಲಿ ತನ್ನ ಅಭಿನಯವನ್ನು ಮುಗಿಸಿ,ಬಾರದ ಲೋಕದ ಕಡೆಗೆ ತನ್ನ ಪಯಣವನ್ನು ನಟರಾಜ ಬೆಳೆಸಿಬಿಟ್ಟಿದ್ದಾರೆ……….  ]]>

‍ಲೇಖಕರು G

June 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

4 ಪ್ರತಿಕ್ರಿಯೆಗಳು

  1. meera

    nataraj sir nammannu bittu hoda vishaya tilidu tumba dukaha ayathu……magale antha kareyo ennondu jeeva nann bittu hoyaturi…..

    ಪ್ರತಿಕ್ರಿಯೆ
  2. keshav kulkarni

    ನಾನು ಮೊದಲ ಸಲ ಏಣಗಿಯವರನ್ನು ನೋಡಿದ್ದು, ’ಪುಂಟಿಲ’ದಲ್ಲಿ ಇರಬೇಕು, ಅಥವಾ ’ಬೂರ್ಜ್ವಾ ಜಂಟಲ್‍ಮನ್’ ಇರಬೇಕು. ಅಂದಿನಿಂದ ನಾನು ಅವರ ದೊಡ್ಡ ಫ್ಯಾನ್ ಆಗಿಬಿಟ್ಟೆ. ಯುಕೆಗೆ ಬಂದ ಮೇಲೆ ಎಲ್ಲ ಕೊಂಡಿ ಕಳಚಿ, ಈಗ ಮತ್ತೆ ಅವರ ನೆನಪು! ಶೃದ್ಧಾಂಜಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: