ಪಾಣಿನಿ ದೇರಾಜೆ ಜೊತೆ ‘ಫಟಾ ಫಟ್’

ಪಾಣಿನಿ ದೇರಾಜೆ ಹಲವಾರು ಸಂಗೀತದ ವಾದ್ಯಗಳನ್ನ ಚಿಕ್ಕಂದಿನಿಂದಲೇ ನುಡಿಸುತ್ತ ಬಂದವರು. ತಂದೆ ತಾಯಿ ಕೂಡ ಸಂಗೀತಗಾರರಾಗಿದ್ದರಿಂದ ಸಹಜವಾಗಿಯೇ ಸಂಗೀತಕ್ಕೆ ಒಗ್ಗಿಕೊಂಡವರು. ಇವರ ಇನ್ನೊಂದು ವಿಶೇಷತೆ ಏನೆಂದರೆ ಹಾಡುಗಳನ್ನು ಉಲ್ಟಾ ಹಾಡುತ್ತಾರೆ.

ಯಾವುದೇ ಹಾಡಿನ ಸಾಹಿತ್ಯವನ್ನು ನೆನಪಿನಲ್ಲಿಟ್ಟುಕೊಂಡು ಹಾಡುವುದೇ ಕಷ್ಟ. ಅದರಲ್ಲೂ ಹಾಡನ್ನು ಉಲ್ಟಾ ಹಾಡುವುದು ಇನ್ನೂ ಕಷ್ಟ. ಆದರೆ ಪಾಣಿನಿ ಅವರು ಹಾಡಿನ ಸಾಹಿತ್ಯವನ್ನ ತಿರುವಾಗಿ ಹಾಡಿ, ಹಾಡಿನ ದಾಟಿ ಒಂಚೂರು ಹದಗೆಡದಂತೆ ಬಹಳ ಸುಲಭವಾಗಿ ಹಾಡುತ್ತಾರೆ.

ಇವರ ಈ ವಿಶೇಷ ಪ್ರತಿಭೆಯ ಕುರಿತಾಗಿ ʼಅವಧಿʼಯು ನಡೆಸಿದ ಫಟಾ ಫಟ್‌ ಸಂದರ್ಶನ ಇಲ್ಲಿದೆ.

 ಉಲ್ಟಾ ಹಾಡಬೇಕು ಅನ್ನೋ ಐಡಿಯಾ ಹೇಗೆ ಬಂತು ?

>  ನಾನು 4 ಅಥವಾ 5ನೇ ತರಗತಿ ಇದ್ದಾಗ ನನ್ನ ಕಜಿನ್‌ ಈ ಥರಹ ಉಲ್ಟಾ ಹಾಡುಗಳನ್ನ ಹಾಡಿದ್ದರು. ಅವರಿಂದ ನಾನು ಕಲಿತೆ.

ಪಾಣಿನಿ ಅನ್ನೋದು ಕೂಡಾ ಉಲ್ಟಾ ಹೆಸರೆನಾ ?

> ಅಲ್ಲಾ. ಅದೊಂದು ಮಹರ್ಷಿಯ ಹೆಸರು.

ಲೈಫ್‌ ಏನಾದ್ರೂ ಉಲ್ಟಾ ಹೊಡದಿದೆಯಾ ?

> ನಾನು ಲೈಫ್‌ ನಿಂದ ಎಕ್ಸ್‌ ಪೆಕ್ಟ್  ಮಾಡೋದು ಕಡಿಮೆ. ಅದು ಹೇಗೆ ಬರುತ್ತೋ ಹಾಗೆ ಎಕ್ಸೆಪ್ಟ್‌ ಮಾಡ್ತೀನಿ. ಹಾಗಾಗಿ ಉಲ್ಟಾ ಹೊಡದಿದೆ ಅಂತಾ ಹೇಳಕಾಗಲ್ಲ.

ಸಂಗೀತದ ಹಿಂದೆ ಬಿದ್ದದ್ದು ಯಾವಾಗಿನಿಂದ ?

> ಹುಟ್ಟಿನಿಂದ ಅಂತ ಹೇಳ್ಬೋದು.

ಮೌತಾರ್ಗನ್‌, ಕೊಳಲು, ಗಿಟಾರ್‌, ಸ್ಯಾಕ್ಸ್ ಫೋನ್‌ ಇನ್ನು ಏನೇನ್‌ ನುಡಿಸ್ತೀರಾ ?

>  ತಕ್ಕಮಟ್ಟಿಗೆ ಡ್ರಮ್ಸ್‌, ಕಾಂಗೋ- ಬಾಂಗೋ, ಕಹೂನ್‌, ಜಂಬೆ ನುಡಸ್ತೀನಿ.

‍ಲೇಖಕರು Avadhi

September 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಶೇಷಗಿರಿ’ಯೆಂಬ ರಂಗಪಟ್ಟಣ

‘ಶೇಷಗಿರಿ’ಯೆಂಬ ರಂಗಪಟ್ಟಣ

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This