ಪಿ ಸಾಯಿನಾಥ್ ಪ್ರಶಸ್ತಿಗೆ ಆಹ್ವಾನ

Counter Media Awards

ಕೌಂಟರ್ ಮೀಡಿಯಾ ಪ್ರಶಸ್ತಿಗೆ ಆಹ್ವಾನ

ಪ್ರಶಸ್ತಿ ವಿಜೇತರಿಗೆ ರೂ ೨೫,೦೦೦ ಮತ್ತು ಡಿಜಿಟಲ್ ಕ್ಯಾಮೆರಾ ಬಹುಮಾನ

  ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ ಪತ್ರಕರ್ತರನ್ನು ಗುರುತಿಸಲು ಇದೇ ಮೊದಲ ಬಾರಿಗೆ ‘ಕೌಂಟರ್ ಮೀಡಿಯಾ’ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಅಭಿವೃದ್ಧಿ ಪತ್ರಿಕೋದ್ಯಮದ ಮುಖ್ಯಸ್ಥರಾದ ಪಿ ಸಾಯಿನಾಥ್ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿ, ಬಡತನ, ಹಸಿವಿನ ಬಗ್ಗೆ ಬರೆದು ಸಾಮಾಜಿಕ ಉನ್ನತಿಗೆ ಶ್ರಮಿಸಿದ ಇಬ್ಬರು ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಲು ನಿರ್ಧಸಿಸಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಯಾವುದೇ ಭಾಗದಿಂದ, ಯಾವುದೇ ಭಾರತೀಯ ಭಾಷೆಯಲ್ಲಿ ಬರೆಯುವ, ೩೫ ವರ್ಷದೊಳಗಿನ ಪತ್ರಕರ್ತರು ತಮ್ಮ ಉತ್ತಮ ಅಭಿವೃದ್ಧಿ ವರದಿಗಳನ್ನು ಪ್ರಶಸ್ತಿಗಾಗಿ ಸಲ್ಲಿಸಬಹುದು. ಎರಡು ಬಹುಮಾನಗಳಲ್ಲಿ ಒಂದು ಬಹುಮಾನ ಮಹಿಳಾ ಪತ್ರಕರ್ತರಿಗಾಗಿ ಮೀಸಲು. ಅರ್ಹ ಪತ್ರಕರ್ತರಿಗೆ – ಅದರಲ್ಲೂ ಮಹಿಳೆಯರಿಗೆ ವಯೋಮಾನ ಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಯಾವುದೇ ಮುದ್ರಣ, ಟೆಲಿವಿಷನ್ ಮತ್ತು ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟಿಸಲಾಗಿರುವ ವರದಿ / ಲೇಖನಗಳು ಪ್ರಶಸ್ತಿಗೆ ಅರ್ಹ.

ಲೇಖನಗಳನ್ನು ಕಳಿಸಲು ಕೊನೆಯ ದಿನಾಂಕ ಜೂನ್ 12, 2012.

ಪತ್ರಕರ್ತರು ತಮ್ಮ ಲೇಖನ/ ವರದಿಗಳನ್ನು [email protected] ಗೆ ಅಥವಾ ಕೌಂಟರ್ ಮೀಡಿಯಾ ಅವಾರ್ಡ್ಸ್, ನಂ 142, 69 ನೇ ಕ್ರಾಸ್, ರಾಜಾಜಿನಗರ 5ನೇ ಬ್ಲಾಕ್, ಬೆಂಗಳೂರು – 560 010 ಈ ವಿಳಾಸಕ್ಕೆ ಕಳಿಸಲು ಕೋರಲಾಗಿದೆ. ಪತ್ರಕರ್ತರು ತಮ್ಮ ಸ್ವ ವಿವರಗಳನ್ನು ಮತ್ತು ತಾವು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ವಿವರಿಸುವ ಕಿರು ಬರಹವನ್ನು ಲೇಖನಗಳೊಂದಿಗೆ ಕಳಿಸಲು ಕೋರಲಾಗಿದೆ. ಟೆಲಿವಿಷನ್ ಮಾಧ್ಯಮದ ಪತ್ರಕರ್ತರು ತಮ್ಮ ವರದಿ ಪ್ರಸಾರವಾಗಿರುವ ಸಿಡಿ ಅಥವಾ ಡಿವಿಡಿಯನ್ನು ಅರ್ಜಿಯೊಂದಿಗೆ ಕಳಿಸಬೇಕಾಗಿದೆ. ಪ್ರಶಸ್ತಿಯು ರೂ ೨೫,೦೦೦ ಜೊತೆಗೆ ಒಂದು ಡಿಜಿಟಲ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ ೧, ೨೦೧೨ರಂದು ಬೆಂಗಳೂರಿನಲ್ಲಿ ನಡೆಯಲಿದೆ.   ಪ್ರಶಸ್ತಿಯ ವಿವರಗಳು ಈ ರೀತಿ ಇವೆ: ಪ್ರಶಸ್ತಿಯ ಮುಖ್ಯ ಉದ್ದೇಶ ಕರ್ನಾಟಕ ರಾಜ್ಯದ ಯಾವುದೇ ಭಾಗದಿಂದ ಯಾವುದೇ ಭಾರತೀಯ ಭಾಷೆಯಲ್ಲಿ ಉತ್ತಮ ಗುಣಮಟ್ಟದ ಗ್ರಾಮೀಣ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಕುರಿತಾಗಿ ಲೇಖನಗಳನ್ನು ಪ್ರಕಟಿಸಿದ ಪತ್ರಕರ್ತರನ್ನು ಗುರುತಿಸುವುದು. ಮಹಿಳೆಯರಿಗೆ ಆದ್ಯತೆಯನ್ನು ಕೊಡಲಾಗುವುದು. ಸಂಬಂಧಿತ ಕ್ಷೇತ್ರಗಳಲ್ಲಿ ಪರಿಣಿತರ ಸಮಿತಿಯು ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಲಿದ್ದು, ತೀರ್ಪುಗಾರರ ತೀರ್ಪು ಅಂತಿಮ. ಪತ್ರಕರ್ತರು ಅವರ ಇತ್ತೀಚಿಗಿನ ಒಂದು ಲೇಖನ / ವರದಿ ಅಥವಾ ವಿಷಯಕ್ಕೆ ಸಂಬಂಧಪಟ್ಟಂತೆ ಅನೇಕ ವರದಿಗಳನ್ನು ಪ್ರಶಸ್ತಿಗಾಗಿ ಕಳಿಸಬಹುದು. ಈ ಪ್ರಶಸ್ತಿಯನ್ನು ಪಿ ಸಾಯಿನಾಥ್ ಅವರು ತಮ್ಮ (’ಎವರಿ ಬಡಿ ಲವ್ಸ್ ಎ ಗುಡ್ ಡ್ರಾಟ್) ಪುಸ್ತಕದ ಸಂಭಾವನೆಯ ಹಣದಿಂದ ಸ್ಥಾಪಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಟಿ ಆರ್ ಮಹೇಶ್ ಬಾಬು ಮೊಬೈಲ್: 98443 79722  ]]>

‍ಲೇಖಕರು G

June 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇಶಾಂಶ ಹುಡಗಿ, ಎಂ ನಾಗಪ್ಪ, ಪಿ ಎಂ ಮಣೂರ ಸೇರಿದಂತೆ ಐವರಿಗೆ ‘ಅಮ್ಮ’ ಗೌರವ ಪುರಸ್ಕಾರ

ದೇಶಾಂಶ ಹುಡಗಿ, ಎಂ ನಾಗಪ್ಪ, ಪಿ ಎಂ ಮಣೂರ ಸೇರಿದಂತೆ ಐವರಿಗೆ ‘ಅಮ್ಮ’ ಗೌರವ ಪುರಸ್ಕಾರ

ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ʼಅಮ್ಮ ಗೌರವʼ ಪುರಸ್ಕಾರಕ್ಕೆ ಐವರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This