ಪುಡಿಪಕ್ಷಗಳ ಊರುಗೋಲು ಯಾತ್ರೆ!

ಅಮಾಸೆ ಟೈಮ್ಸ್. ಕನ್ನಡ ಟೈಮ್ಸ್ ಪತ್ರಿಕೆಯನ್ನು ರೆಗ್ಯೂಲರ್ ಆಗಿ ಓದುವವರಿಗೆ ಈ ಅಮಾಸೆ ಟೈಮ್ಸ್ ರುಚಿ ಗೊತ್ತಿರುತ್ತದೆ. ಇದರ ಆರೋಗ್ಯಕರ ಕೀಟಲೆ ಖುಷಿ ಕೊಡುವಂಥದ್ದು. ಇದರ ರುಚಿಯನ್ನು ಅವಧಿಯ ಓದುಗರಿಗೂ ಬಡಿಸೋಣ ಎಂಬ ಆಸೆ.

* * *

xclaimpt.gifಯಾವಾಗ ಕುಮಾರ್ ಸ್ವಾಮಿಯ ಜೈತ್ರಯಾತ್ರೆ ಶುರುವಾಯಿತೋ ಆಗ ಎಲ್ಲಾ ದೊಡ್ಡ ಪಕ್ಷಗಳೂ ಮೈಕೊಡವಿ ಎದ್ದವಷ್ಟೆ?

ಅದನ್ನು ನೋಡಿ ಸಣ್ಣಪುಟ್ಟ ಪಕ್ಷಗಳು ಕೊನೇಪಕ್ಷ “ಊರುಗೋಲು ಯಾತ್ರೆ”, ಸ್ಟ್ಯಾಂಡ್ ಅಪ್ ಯಾತ್ರೆ” ಮುಂತಾಗಿ ಶುರು ಮಾಡಬೇಕೆಂದು ತೀರ್ಮಾನಿಸಿದವಲ್ಲವೆ? ಅದರ ಎರಡು ದೃಶ್ಯಗಳನ್ನು ಕುರಿತು ಅಮಾಸೆ ವರದಿ:

ಸರ್ವೋದಯ ಕರ್ನಾಟಕ ಆಫೀಸ್ ವರದಿ

ನಿನ್ನೆ ಬೆಳಗ್ಗೆ ಹನ್ನೊಂದುವರೆ ಗಂಟೆಗೆ ಎದ್ದು ನಿಂತ ಸರ್ವೋದಯ ಪಕ್ಷದ ಅಧ್ಯಕ್ಷರು “ಎಲ್ಲರೂ ಉದಯವಾಗಲಿ” ಎಂದರು. ಅದೇ ಆಗ ಮಲಗಿದ್ದ ಪುಟ್ಟಣ್ಣಯ್ಯ, ಇಂದೂಧರ್, ಕೆರಗೋಡ್ ಮೊದಲಾದ ನಾಯಕರು “ಆಮೆನ್” ಎಂದು ಹೇಳಿ ಮತ್ತೆ ಮಲಗಿದರೆಂದು ವರದಿಯಾಗಿದೆ.

ಸ್ವಾಭಿಮಾನಿ ಕರ್ನಾಟಕ ಎಂಬ ಏಕವ್ಯಕ್ತಿ ಪಾರ್ಟಿ

(ಚಂಪಾಜಿ ಏಕಪಾತ್ರಾಭಿನಯದ ಇನ್ ಸ್ಟ್ರಕ್ಷನ್ಸ್ ಕೊಡುತ್ತಿದ್ದಾರೆ)

ಚಂಪಾ: ಇಲ್ಲಿ ಬಂದು ನಿಂತರೆ ಪಾರ್ಟಿ ಪ್ರೆಸಿಡೆಂಟ್ ಹಾಗೆ, ಅಲ್ಲಿ ಬಂದು ನಿಂತರೆ ಫಾಲೋಯರ್ಸ್ ಹಾಗೆ! ಓಕೆ?
(ಎದ್ದು ನಿಂತು ಕುರ್ಚಿ ಬಳಿ ಬರುವರು)

ಚಂಪಾ(ಕುರ್ಚಿಯಲ್ಲಿ ಕೂತು): ಕನ್ನಡಿಗರೇ ಎದ್ದೇಳಿ!

ಚಂಪಾ(ಪ್ರೇಕ್ಷಕನ ಸ್ಥಾನದಲ್ಲಿ): ಎದ್ದಿದ್ದೇವೆ ಮಹಾಪ್ರಭು!

ಚಂಪಾ(ಕುರ್ಚಿಯಲ್ಲಿ): ಕನ್ನಡಕ್ಕಾಗಿ ಕೈ ಎತ್ತು!

ಎಲ್.ಎಲ್.ಶೇಷಗಿರಿ(ಪ್ರವೇಶಿಸುತ್ತಾ): ಎತ್ತುತ್ತೇನೆ, ಮಹಾಪ್ರಭು! ಆದರೆ ಸ್ವಲ್ಪ ಏಜಾಗಿರೋದರಿಂದ ಒಂದೈದು ನಿಮಿಷ ಮಾತ್ರ ಕೈ ಎತ್ತುತ್ತೇನೆ!

ಚಂಪಾ: ಏನು? ಅಧ್ಯಕ್ಷರ ಮಾತನ್ನೇ ಮೀರುವಷ್ಟು ಸೊಕ್ಕೆ! ನೀನು ಪಾರ್ಟಿಯಿಂದ ಡಿಸ್ ಮಿಸ್!

(ಶೇಷು ನಿಶ್ಶೇಷವಾಗುವರು. ಚಂಪಾಗೂ ಬೋರಾಗಿ ಟಿಂಗರ ಬುಡ್ಡನಂತೆ “ನಾನೂ ಡಿಸ್ ಮಿಸ್!” ಎಂದು ಹೊರಡುವರು)

* * *

ಕಲಾಕ್ಷೇತ್ರದಲ್ಲಿ ಕಲ್ಚರ್ ವಲ್ಚರ್ ಗಳ ಬ್ಯಾನರ್ಸ್!

xclaimpt.gifವೀಂದ್ರ ಕಲಾಕ್ಷೇತ್ರದಲ್ಲಿ ಕಲ್ಚರಲ್ ರೌಂಡ್ ಅಪ್ ನಲ್ಲಿದ್ದ ಅಮಾಸೆಗೆ “ರಂಗಸಂಚಾರಿ ನಾಗರಾಜಮೂರ್ತಿ ೫೦” ಎನ್ನುವ ಬ್ಯಾನರ್ ಕಣ್ಣಿಗೆ ಬಿತ್ತು. ಅಮಾಸೆಗೆ ವಿಷಯ ಗೊತ್ತಾಗದೆ ಅಲ್ಲೇ ಇದ್ದ ಜರ್ನಲಿಸ್ಟ್ ಹೈಕಳನ್ನು ಕೇಳಿದರೆ, “ಅದೇ! ಸ್ಪೆಲಿಂಗ್ ಮಿಸ್ಟೇಕಾಗಿದೆ, ರಂಗಸಂಚಕಾರಿ ಅಂತ ಓದ್ಕೊಳಿ” ಎಂದರಲ್ಲ, ಕಾಮ್ರೇಡ್!

ಈ ನಾಗರಾಜಮೂರ್ತಿಯ ಬ್ಯಾನರ್ ನೋಡಿದ ಹೊಸ ತಲೆಮಾರಿನ ನಾಟಕದ ಎಳೇ ಹೈಕಳೆಲ್ಲ ಮೇಕಪ್ ರೂಂಗೆ ಹೋಗಿ ಕಪ್ಪು ತಲೆಗೆ ಬಿಳಿ ಬಣ್ಣ ಹಾಕಿಸಿಕೊಂಡು, ಕಲಾಕ್ಷೇತ್ರದ ಎದುರುಗಡೆ ನಿಂತು, ನಮಗೂ ಐವತ್ತಾಯ್ತು. ವಸಿ ಸನ್ಮಾನ ಮಾಡಿ ಅಂತ “ರಂಗ ವ್ಯಭಿಚಾರಿ”, “ರಂಗ ಸಂಚುಕೋರ”, “ರಂಗಕಿತಾಪತಿ”, “ಕಲಾಕ್ಷೇತ್ರ ಕಲಿವೀರ”… ಎಂದೆಲ್ಲ ಕೃಷ್ಣ ರಾಯಚೂರ್ ಕೈಲಿ ಬ್ಯಾನರ್ ಬರೆಸಿಕೊಂಡು ಅಡ್ಡಾಡುತ್ತಿದ್ದಾಗ, ಕೆಲವು ಲಲನಾಮಣಿಯರು “ರಂಗಮಂಚ ಚಕೋರಿ” ಎಂದು ಬಿರುದು ಬರೆಸಿಕೊಳ್ಳಲು ಪ್ರಶಸ್ತಿ ವಿಜೇತ ಕಲಾವಿದ ರಾಠೋಡ್ ಎದುರು ಕ್ಯೂ ನಿಂತಿದ್ದು ಅಮಾಸೆ ಟೈಮ್ಸ್ ಗಲ್ಲದೆ ಇನ್ನಾರಿಗೆ ಗೊತ್ತಾದೀತು!

‍ಲೇಖಕರು avadhi

March 13, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This