ಪುಣೆಯ ಆ ಎರಡು ಸಮಾಧಿಗಳು

ಆ ಎರಡು ಸಮಾಧಿಗಳ ಮುಂದೆ…

– ಶೂದ್ರ ಶ್ರೀನಿವಾಸ

ಕೃಪೆ : ವಾರ್ತಾ ಭಾರತಿ ಇವತ್ತಿನ ಪುಣೆ,ನಿನ್ನೆಯ ಪೂನಾ ಚಾರಿತ್ರಿಕವಾಗಿ ತನ್ನ ಪ್ರಾದೇಶಿಕತೆಯ ಮೈಗೆ ಏನೇನೋ ಅಂಟಿಸಿಕೊಂಡು ಬದುಕುತ್ತಿರುವಂಥದ್ದು.ದೂರದ ನಮಗೆ ನಾನಾ ಕಾರಣಗಳಿಗಾಗಿ ಒಂದು ಅರ್ಥಪೂರ್ಣ ನಗರ.ಅಲ್ಲಿಂದ ಏನೇನೋ ಚರ್ಚೆಗಳು ಮತ್ತು ಮಾತುಕತೆಗಳು ಬೇರೆ ಬೇರೆ ಕಡೆಗೆ ರವಾನೆ ಗೊಂಡಿದೆ. ಹಿಂದೆ ಪ್ರಸ್ತಾಪಿಸಿದಂತೆ ಇಲ್ಲಿಯ ಓಶೋ, ಭೀಮಸೇನ ಜೋಶಿ, ಬಿ.ಕೆ.ಎಸ್.ಅಯ್ಯಂಗಾರ್, ಕೇಲ್ಕರ್ ಮ್ಯೂಸಿಯಂ ಮುಂತಾದವು ಒಂದು ರೀತಿಯ ಆಪ್ತ ಸಂದೇಶವನ್ನು;ನೆನಪು ಬಂದಾಗಲೆಲ್ಲ ಗುನುಗುನಿಸುವಂತೆ ಇಟ್ಟಿದೆ. ಈ ಗುನುಗುನುಸುವಿಕೆಗೆ ನಾನಾ ರೀತಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಗತಿಗಳು ಸೇರಿಕೊಳ್ಳುತ್ತ ಹೋಗಬಹುದು. ಇರಲಿ, ಇದರ ಮುಂದುವರಿದ ಭಾಗ ಎನ್ನುವಂತೆ ಆಗಾಖಾನ್ ಅರಮನೆ ತಲ್ಲಣಗೊಳಿ ಸಿದೆ. ಚಾರಿತ್ರಿಕವಾಗಿ ಈ ಅರಮನೆಗೆ ವೈವಿಧ್ಯಮಯವಾದ ಇತಿಹಾಸವಿರ ಬಹುದು. ಆದರೆ ನಾನು ಗಾಂಧೀಜಿ ಯವರ ತತ್ವ ಚಿಂತನೆಯ ಮತ್ತು ಮತೀಯ ಸಾಮರಸ್ಯದ ವಿದ್ಯಾರ್ಥಿ ಯಾಗಿರುವುದರಿಂದ, ಗಾಂಧೀಜಿಯ ವರಿಗೆ ಸಂಬಂಧಿಸಿದ ಒಂದೊಂದು ಚೂರು ವಿಶಾಲಾರ್ಥವನ್ನು ಪಡೆಯುತ್ತಾ ಹೋಗುತ್ತದೆ. ಮತ್ತೊಂದು ದೃಷ್ಟಿಯಿಂದ ಈ ಅರಮನೆಯನ್ನು ನೋಡಲೇಬೇಕು; 1942ರ ‘ಭಾರತ ಬಿಟ್ಟು ಹೋಗಿ’ ಎಂಬ ಘೋಷಣೆಯ ಕಾರಣಗಳಿಗಾಗಿ ಗಾಂಧೀಜಿಯವರು ತಮ್ಮ ಶ್ರೀಮತಿ ಮತ್ತು ತಮ್ಮ ಅತ್ಯಂತ ಆಪ್ತ ಕಾರ್ಯದರ್ಶಿ ಮಹದೇವ ದೇಸಾ ಯಿಯವರ ಬದುಕಿನ ಕೊನೆಯ ದಿನಗಳನ್ನು ಕಂಡವರು. ಆ ವಿಷಾದದ ಕ್ಷಣಗಳನ್ನು ಗಾಂಧೀಜಿಯ ವರು ಸ್ವೀಕರಿಸಿದ ಕ್ರಮಕ್ಕೆ ಸಂಬಂಧಿಸಿದಂತೆ ‘ಹರಿಜನ್’ ಪತ್ರಿಕೆಗೆ ಬರೆದ ಪ್ರತಿಕ್ರಿಯೆ ಗಳನ್ನು ಸಾಕಷ್ಟು ಬಾರಿ ಓದಿಕೊಂಡಿರುವೆ:ಆ ಮಹಾನ್ ಚೈತನ್ಯದ ಮನಸ್ಥಿತಿಯನ್ನು ಅರಿಯಲು.     ಆ ಎರಡು ಪ್ರತಿಕ್ರಿಯೆಗಳ ಸ್ವಲ್ಪ ಭಾಗ ವನ್ನು ಇಲ್ಲಿ ದಾಖಲಿಸಿ; ಆಗಾಖಾನ್ ಅರ ಮನೆಯ ಆವರಣದೊಳಗೆ ಪ್ರವೇಶ ಮಾಡುವೆ.ಈ ಪ್ರತಿಕ್ರಿಯೆಯ ಭಾಗವಿರು ವುದು ‘ಗಾಂಧಿ ಗ್ರಂಥಮಾಲೆ’ಯ ‘ನನ್ನ ಸಮಕಾಲೀನರು’ ಕೃತಿಯಲ್ಲಿರುವಂಥದ್ದು. ಈ ಕೃತಿಯಲ್ಲಿ ಗಾಂಧೀಜಿಯವರು ತಮ್ಮ ಸುತ್ತಲೂ ಇದ್ದ ವ್ಯಕ್ತಿತ್ವಗಳ ಬಗ್ಗೆ ಎಂಥ ನಿರ್ವಿಕಲ್ಪ ಭಾವನೆಯಿಂದ ತೆರೆದುಕೊಳ್ಳುತ್ತಾ ರೆಂಬುದು ಮಹತ್ವಪೂರ್ಣವಾದದ್ದು. ಕರ್ನಾಟಕ ಶಾಖೆಯ ‘ಗಾಂಧಿಸ್ಮಾರಕ ನಿಧಿ’ಯವರು 1960ರಲ್ಲಿ ಪ್ರಕಟಿಸಿರುವಂಥದ್ದು. ಕುವೆಂಪು ಅವರು ಅನುವಾದಿಸಿದ್ದಾರೆ.   ಹಾಗೆ ನೋಡಿದರೆ ಮಹದೇವ ದೇಸಾಯಿಯವರು ಗಾಂಧೀಜಿಯವರ ಬದುಕಿನಲ್ಲಿ ಹಾಗೂ ಕುಟುಂಬದಲ್ಲಿ ಒಬ್ಬ ಮಗನಿಗಿಂತ ಹೆಚ್ಚಿನ ರೀತಿಯಲ್ಲಿ ಇದ್ದವರು. ಇಪ್ಪತ್ತೈದು ವರ್ಷಕ್ಕೂ ಮೇಲ್ಪಟ್ಟು ಅತ್ಯಂತ ತಾದಾತ್ಮತೆಯಿಂದ ಗಾಂಧೀಜಿ ಯವರ ಚಿಂತನೆಗಳನ್ನು ಅವರ ದಿನಚರಿಯನ್ನು ನಿರ್ದಿಷ್ಟತೆಯ ಚೌಕಟ್ಟಿನಲ್ಲಿ ನಮಗೆ ಸಿಗುವಂತೆ ಮಾಡಿದ ಅತ್ಯಂತ ದೂರದೃಷ್ಟಿಯ ಚಿಂತಕ.ಕೇವಲ ಐವತ್ತೊಂದು ವರ್ಷ ಬದುಕಿದರೂ ಎಷ್ಟು ಅನನ್ಯತೆ ಯಿಂದ ಇತಿಹಾಸಕ್ಕೆ ತೆರೆದುಕೊಂಡರು.ಅಹ್ಮದಾ ಬಾದ್‌ನಲ್ಲಿ ಕ್ರಿಯಾಶೀಲ ವಕೀಲರಾಗಿದ್ದವರು.   ಗಾಂಧೀಜಿಯವರ ಒಡನಾಡಿಯಾಗಿ ಕೆಲಸ ಮಾಡಬೇಕೆಂದು ತಮ್ಮ ಜೊತೆ ನರಹರಿ ಪಾರಿಖ್, ಮೋಹನಲಾಲ್ ಪಾಂಡ್ಯ ಮತ್ತು ರವಿಶಂಕರ ವ್ಯಾಸ್‌ರ ಜೊತೆ ಬಂದವರು. 1917ರಿಂದ 1949 ಆಗಸ್ಟ್ 15ರವರೆಗೆ ಮಹಾದೇವ ದೇಸಾಯಿಯವರ ಕಾರ್ಯಶ್ರದ್ಧೆ ಅಪರೂಪ ವಾದದ್ದು. ಇಪ್ಪತ್ತೈದು ವರ್ಷ ಗಾಂಧೀಜಿಯವರಂಥ ವಿಶ್ವವ್ಯಾಪಿ ವ್ಯಕ್ತಿತ್ವದ ದಿನಚರಿಯ ಘಟನೆಗಳನ್ನು ಕಿಂಚಿತ್ತು ತಪ್ಪದೆ ಕಾಪಾಡಿದ್ದು ನಿಜವಾಗಿಯೂ ಘನತರವಾದದ್ದು. ಚಿಕ್ಕವಯಸ್ಸಿಗೆ ಗಾಂಧೀಜಿಯ ವರು ಮತ್ತೊಬ್ಬ ಮಹಾನ್ ಕವಿ ಮತ್ತು ದಾರ್ಶನಿಕ ರವೀಂದ್ರನಾಥ ಟಾಗೋರ್‌ರಿಂದ ‘ಮಹಾತ್ಮ’ ಎಂದು ನಾಮಕರಣಗೊಳ್ಳುವುದಕ್ಕೆ ಮುಂಚೆಯೇ; ಆತನಲ್ಲಿ ಮಾನವ ಕೋಟಿಗೆ ಸಂಬಂಧಿಸಿದ ‘ಬೆಳಕು’ ಇದೆಯೆಂದು ವೈಯಕ್ತಿಕ ಬದುಕನ್ನು ತೊರೆದು ಬರುವುದಿದೆಯಲ್ಲ ಅದು ನಿಜವಾ ಗಿಯೂ ಮಮಕಾರ ಪೂರ್ಣವಾದದ್ದು.   ಈ ದೃಷ್ಟಿಯಿಂದ ಗಾಂಧೀಜಿಯವರಿಗೆ ಅನ್ವಯಿಸಿದ ಮಹಾದೇವ ದೇಸಾಯಿಯವರ ಒಟ್ಟು ಬರವ ಣಿಗೆಗೆ ಎಂಥ ಅಪೂರ್ವ ಗುಣವಾಚಕಗಳನ್ನು ಸೇರಿಸಿದರೂ ಸಾಲದು. ಇರಲಿ, ಮಹಾದೇವ ದೇಸಾಯಿಯವರ ಬಗ್ಗೆ ಗಾಂಧೀಜಿಯವರ ಮಾತು ಹೀಗಿದೆ: ‘‘ಮಹಾದೇವ ಅಕಸ್ಮಾತ್ ಮೃತ್ಯುವಶರಾದರು. ಮೊದಲು ಏನೇನೂ ಸೂಚನೆಯೇ ಸಿಕ್ಕಲಿಲ್ಲ. ರಾತ್ರಿ ಚೆನ್ನಾಗಿಯೇ ನಿದ್ರೆ ಮಾಡಿದ್ದರು. ಬೆಳಗ್ಗೆ ಉಪಹಾರವನ್ನು ಮಾಡಿದರು. ನನ್ನೊಡನೆ ಅಡ್ಡಾಡಲಿಕ್ಕೆ ಬಂದಿದ್ದರು. ಸುಶೀಲಾ ಮತ್ತು ಜೈಲಿನ ಡಾಕ್ಟರರು ಸಾಧ್ಯವಿದ್ದುದನ್ನೆಲ್ಲ ಮಾಡಿದರು.   ಆದರೆ ಭಗವಂತನ ಇಚ್ಛೆ ಬೇರೆಯಾಗಿತ್ತು. ಸುಶೀಲಾ ಮತ್ತು ನಾನು ಶವಕ್ಕೆ ಸ್ನಾನ ಮಾಡಿಸಿದೆವು. ಶರೀರ ಶಾಂತಿಯಿಂದ ಪವಡಿಸಿದೆ. ಹೂವಿನಿಂದ ಮುಚ್ಚಲ್ಪಟ್ಟಿದೆ. ಧೂಪ ಉರಿಯುತ್ತಿದೆ. ಸುಶೀಲಾ, ನಾನು ಗೀತಾ ಪಾಠ ಮಾಡುತ್ತಿದ್ದೇವೆ. ಮಹಾದೇವ್ ಯೋಗಿಯಂತೆ, ದೇಶಭಕ್ತನಂತೆ ನಿಧನರಾದರು. ದುರ್ಗಾ, ಬಾಬಲಾ ಹಾಗೂ ಸುಶೀಲಾ ಇವರಿಗೆ ದುಃಖ ಪಡುವುದು ಸಲ್ಲದು ಎಂದು ಹೇಳು. ಇಂಥಾ ಮಹಾ ಮೃತ್ಯುವಿನ ಬಗೆಗೆ ಹರ್ಷಿಸಬೇಕು. ಅಂತ್ಯಕ್ರಿಯೆ ನನ್ನ ಎದುರಿಗೆ ನಡೆಯುತ್ತಿದೆ. ಭಸ್ಮವನ್ನು ತೆಗೆದಿಟ್ಟುಕೊಳ್ಳುವೆನು….ಭಾವನೆಯೇ ಮಹಾದೇವರ ಆಹಾರವಾಗಿತ್ತು.   ಮಹಾದೇವ ಬಲಿದಾನ ಸಾಮಾನ್ಯವಾದುದಲ್ಲ. ನನ್ನ ಅಭಿಪ್ರಾ ಯದಲ್ಲಿ ಅವಶ್ಯಕತೆ ಒದಗಿದಾಗ ತಮ್ಮನ್ನು ತಾವು ಮರೆತು ‘ಶೂನ್ಯ’ವಾಗುವ ಶಕ್ತಿಯೇ ಮಹಾದೇವರ ಶ್ರೇಷ್ಠಗುಣ… ಅವರು ನನ್ನ ಜೀವನ ಚರಿತ್ರೆ ಬರೆಯಲು ಅಪೇಕ್ಷಿಸುತ್ತಿದ್ದರು; ಆದರೂ ನನಗಿಂತ ಮೊದಲು ಸಾಯಲು ಅಪೇಕ್ಷಿಸುತ್ತಿದ್ದರು. ಅದಕ್ಕಿಂತ ಉತ್ತಮವಾದದನ್ನು ಅವರು ಏನು ಮಾಡಿ ಯಾರು? ಸರಿ… ಅವರು ಹೊರಟು ಹೋದರು. ಅವರ ಜೀವನ ಚರಿತ್ರೆಯನ್ನು ಬರೆಯಲು ನನಗೆ ಬಿಟ್ಟು ಹೋದರು.’’ ಇಂಥ ಸಾಲುಗಳು ನಮ್ಮ ಮನಸ್ಸನ್ನು ಕಲಕುತ್ತಲೇ ಇರುತ್ತದೆ. ಇದರ ಮುಂದುವರಿದ ಭಾಗವಾಗಿ ಗಾಂಧೀಜಿಯವರು ಕಸ್ತೂರ ಬಾ ಅವರ ಸಾವನ್ನು ಕುರಿತು ಬರೆದಿರು ವಂಥದ್ದು ಎಷ್ಟೊಂದು ತಲ್ಲಣಗೊಳಿಸುತ್ತದೆ.     ಅದು ಹೀಗಿದೆ: ‘‘ನಿನ್ನೆ ಓರ್ವ ವ್ಯಕ್ತಿ ಬಾ ಅನ್ನು ನನ್ನ ತಾಯಿ ಎಂಬುದಾಗಿ ತಪ್ಪು ತಿಳಿದುಕೊಂಡ. ಆ ತಪ್ಪು ನನ್ನ ಹಾಗೂ ಆಕೆಯ ದೃಷ್ಟಿಯಿಂದ ಕ್ಷಮ್ಯವೇ; ಏಕೆಂದರೆ, ನಮ್ಮಿಬ್ಬರ ನಡುವೆ ಆಗಿ ರುವ ಸಮಾಲೋಚನೆಯ ಪರಿಣಾಮವಾಗಿ ಆಕೆ ಎಷ್ಟೋ ವರ್ಷಗಳಿಂದ ನನ್ನ ಪತ್ನಿಯಾಗಿ ಉಳಿದೇ ಇಲ್ಲ; ನಾನು ತಾಯಿತಂದೆಗಳನ್ನು ಕಳೆದುಕೊಂಡು ನಲವತ್ತು ವರ್ಷಗಳಾದವು; ಕಳೆದ ಮೂವತ್ತು ವರ್ಷಗಳಿಂದ ಆಕೆಯೇ ನನ್ನ ತಾಯಿಯ ಕೆಲಸ ಮಾಡುತ್ತಿದ್ದಾಳೆ. ಆಕೆ ನನ್ನ ತಾಯಿ, ಸೇವಕಿ, ಅಡಿಗೆ ಮಾಡುವವಳು, ಮುಸುರೆ ತಿಕ್ಕುವವಳು-ಎಲ್ಲವೂ ಆಗಿದ್ದಾಳೆ.   ತಾವು ಬೆಳಗ್ಗೆ ಇಷ್ಟು ಮುಂಚೆ ಏರ್ಪಡಿಸುವ ಈ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದರೆ, ನನಗೆ ಉಪವಾಸವೇ ಗತಿಯಾಗುತ್ತಿತ್ತು; ನನ್ನ ಶಾರೀರಿಕ ಸುಖದ ಚಿಂತನೆಯನ್ನು ಮಾಡುವವರು ಯಾರೂ ಇರುತ್ತಿರಲಿಲ್ಲ. ಅಂತಲೇ ನಾವು ನಮ್ಮ ಲ್ಲಿಯೇ ಹೀಗೆ ಒಪ್ಪಂದ ಮಾಡಿಕೊಂಡಿ ದ್ದೇವೆ: ಸನ್ಮಾನ ಸ್ವೀಕಾರವೆಲ್ಲ ನನ್ನ ಪಾಲಿಗೆ; ಪರಿಶ್ರಮ ಮಾಡುವುದೆಲ್ಲ ಆಕೆಯ ಪಾಲಿಗೆ… ಬಾ ತೀರಿಕೊಂಡುದು ಒಂದು ‘ಕಲ್ಪನೆ’ಯಂ ತೆಯೇ ತೋರುತ್ತದೆ. ಅದಕ್ಕೆ ನಾನು ಸಿದ್ಧವಾ ಗಿಯೇ ಇದ್ದೆ.   ಆದರೆ ಆಕೆ ನಿಜಕ್ಕೂ ತೀರಿಕೊಂಡಾಗ ನನಗೆ ಕಲ್ಪನೆಗಿಂತ ಹೆಚ್ಚಿನ ಹೊಸ ಅನುಭವವೊಂದು ಆಯಿತು: ‘ಬಾ’ಳ ಹೊರತು ನಾನು ನನ್ನ ಜೀವನವನ್ನು ಸರಿಯಾಗಿ ಅಳ ವಡಿಸಿಕೊಳ್ಳಲಾರೆನೆಂದೇ ಈಗ ನನಗೆ ಅನ್ನಿಸುತ್ತಿದೆ… ಕೇವಲ ಸ್ವಇಚ್ಛೆಯಿಂದ ನನ್ನಲ್ಲಿ ಸಮಾ ವೇಶವಾಗಿ ಹೋಗುವುದೇ ‘ಬಾ’ಳ ಪ್ರಬಲ ಗುಣವಾಗಿತ್ತು. ಅದು ನನ್ನ ಆಗ್ರಹದಿಂದ ಬಂದ ಗುಣವೇನೂ ಅಲ್ಲ. ಕಾಲ ಕ್ರಮದಲ್ಲಿ ಆಕೆಯಲ್ಲೇ ಆ ಗುಣ ವಿಕಾಸವಾಗಿತ್ತು. ಆ ಗುಣ ‘ಬಾ’ಳಲ್ಲಿ ಅಡಗಿದ್ದುದು ನಮಗೆ ತಿಳಿದಿ ರಲಿಲ್ಲ. ನನ್ನ ಮೊದ ಮೊದಲ ಅನುಭವದ ಮೇಲಿಂದ ಹೇಳುವುದಾದರೆ, ‘ಬಾ’ ಬಹಳ ಹಠ ಸ್ವಭಾವದವಳಿದ್ದಳು. ನಾನು ಒತ್ತಾಯ ಮಾಡಿದರೂ, ಆಕೆ ತನ್ನ ಮನಸ್ಸಿಗೆ ಬಂದುದನ್ನೇ ಮಾಡುತ್ತಿದ್ದಳು.   ಅದರ ಕಾರಣದಿಂದ ನಮ್ಮಿಬ್ಬರ ನಡುವೆ ಅಲ್ಪಕಾಲದ ಅಥವಾ ದೀರ್ಘಕಾಲದ ‘ವಿರಸ’ ಉಂಟಾಗುತ್ತಿತ್ತು. ಆದರೆ, ನನ್ನ ಸಾರ್ವಜನಿಕ ಜೀವನ ಉಜ್ವಲವಾದಂತೆ, ‘ಬಾ’ ಜೀವನವೂ ಅರಳಿ ನನ್ನ ವಿಚಾರಗಳೊಡನೆ, ನನ್ನಲ್ಲಿ-ಅಂದರೆ ನನ್ನ ಕಾರ್ಯದಲ್ಲಿ ಅಂತರ್ಗತಳಾದಳು…ಆಕೆ ಸದಾಕಾಲಕ್ಕೂ ದೃಢ ಇಚ್ಛಾಶಕ್ತಿಯುಳ್ಳ ಸ್ತ್ರೀ ಆಗಿದ್ದಳು. ನಾನು ನನ್ನ ನವ ವಿವಾಹಿತ ಸ್ಥಿತಿಯಲ್ಲಿ ಆಕೆಯನ್ನು ಹಠಮಾರಿ ಎಂಬುದಾಗಿ ತಿಳಿದಿದ್ದ್ದೆ; ಆದರೆ ತನ್ನ ದೃಢ ಇಚ್ಛಾಶಕ್ತಿಯ ಕಾರಣದಿಂದ ಆಕೆ ಅರಿವಿಲ್ಲದೆಯೇ ಅಹಿಂಸಾತ್ಮಕ ಅಸಹಯೋಗದ ಕಲೆಯ ಆಚರಣೆಯಲ್ಲಿ ನನ್ನ ‘ಗುರು’ ಆದಳು.   ಆಚರಣೆಯನ್ನು ನಾನು ನನ್ನ ಕುಟುಂಬದಿಂದಲೇ ಆರಂಭಿಸಿದೆ.. ’’ ನನ್ನ ಹುಡುಕಾಟದ ಶಬ್ದಗಳ ಬದಲಾಗಿ ಪೂರ್ತಿ ಗಾಂಧೀಜಿಯವರ ಅಂತರಾಳದ ನುಡಿಗಳನ್ನೇ ‘ಮಾತು ವೌನದ ಮುಂದೆ’ಯ ಅಂಕಣದಲ್ಲಿ ದಾಖಲಿಸುವ ಆಸೆಯಾಗುತ್ತದೆ. ಯಾಕೆಂದರೆ ಒಂದು ಅದ್ಭುತ ಚಿತ್ರಣ ಈಗಾಗಲೇ ನನ್ನ ಮನ ಸ್ಸಿನ ತುಂಬ ದೃಢಗೊಂಡಿದೆ. ಈ ದೃಢತೆಯ ಸಾಕ್ಷ ಚಿತ್ರವನ್ನು ಎಷ್ಟೋ ವರ್ಷಗಳಿಂದ ಮೆಲುಕು ಹಾಕುತ್ತಲೇ ಬಂದಿದ್ದೇನೆ.ಒಮ್ಮೊಮ್ಮೆ ಯೋಚಿಸುವೆ. ಗಾಂಧೀಜಿಯವರ ಪ್ರತಿಯೊಂದು ಕಾಲಘಟ್ಟವೂ ಎಂಥ ಅಚ್ಚರಿ ಗಳನ್ನು ತುಂಬಿಕೊಂಡು ನಿಂತಿದೆ.        ]]>

‍ಲೇಖಕರು G

July 13, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This