ಪುರುಷೋತ್ತಮ ಬಿಳಿಮಲೆ ಕಾಲ೦ : ರಾಜಧಾನಿ ದೆಹಲಿಗೆ ನೂರು ವರುಷ

– ಪುರುಷೋತ್ತಮ ಬಿಳಿಮಲೆ

ಕೃಪೆ : ವಿಜಯ ಕರ್ನಾಟಕ

ಚಿತ್ರ ಕೃಪೆ : ದಿನೇಶ್ ಶೆಣೈ

ಜಗತ್ತಿನ ಪ್ರಖ್ಯಾತ ನಗರಗಳಲ್ಲೊಂದಾದ ದೆಹಲಿಯು ಭಾರತ ದೇಶದ ರಾಜಧಾನಿಯಾಗಿ ಘೋಷಣೆಗೊಂಡು ದಶಂಬರ 12, 2011ಕ್ಕೆ ಒಂದು ನೂರು ವರುಷವಾಯಿತು. ಮುಂದಿನ ಒಂದು ವರುಷಗಳವರೆಗೆ ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸಲು ದೆಹಲಿ ಸಜ್ಜಾಗಿದೆ. ದೆಹಲಿಯು ವಿಶ್ವದ ಅತ್ಯಂತ ಪುರಾತನ ಜನವಸತಿಯ ಸ್ಥಳಗಳಲ್ಲಿ ಒಂದು. ಯಮುನಾ ನದಿಯ ದಂಡೆಗೆ ನೀಳವಾಗಿ ಉದ್ದಕ್ಕೆ ಚಾಚಿಕೊಂಡಿರುವ ಅರಾವಳಿ ಪರ್ವತಪ್ರದೇಶಗಳಲ್ಲಿ ಪ್ರಾಚೀನ ಜನವಸತಿಯ ನೆಲೆಗಳಿರುವುದನ್ನು ಗುರುತಿಸಲಾಗಿದೆ. ಕಡಿಮೆ ಮಳೆಬೀಳುವ ಈ ಪ್ರದೇಶದಲ್ಲಿ ಬೆಳೆಯುವ ಕುರುಚಲು ಪೊದರುಗಳು ವಲಸೆಗಾರ ಕುರುಬರಿಗೋ, ದನಗಾಹಿಗಳಿಗೋ ಅತ್ಯಂತ ಪ್ರಶಸ್ತವಾಗಿದ್ದು, ಕೃಷ್ಣನ ಓಡಾಟದ ಜಾಗವಾಗಿದ್ದುದು ಸಹಜವೇ ಸರಿ. ದೆಹಲಿಯ ಉತ್ತರ ದಿಕ್ಕಿನಲ್ಲಿ ಒಂದು ಕಾಲಕ್ಕೆ ಹರಿಯುತ್ತಿದ್ದ ಸರಸ್ವತೀ ನದಿದಂಡೆಯಲ್ಲಿ ವೇದಕಾಲೀನ ಸಮಾಜ ಕ್ರಿಯಾಶೀಲವಾಗಿತ್ತೆಂದೂ ಹೇಳಲಾಗುತ್ತಿದೆ. ಪಾಂಡವರು ಖಾಂಡವವನ ದಹನ ಮಾಡಿ ಕಟ್ಟಿದ ಇಂದ್ರಪ್ರಸ್ಥವೇ ದೆಹಲಿಯೆಂದೂ ಹೇಳಲಾಗುತ್ತಿದೆ. ಈಗಿನ ಪುರಾನಾ ಕಿಲ್ಲಾ ಜಾಗದಲ್ಲಿ ಧರ್ಮರಾಯನ ಅರಮನೆ ಇತ್ತೆಂಬ ನಂಬಿಕೆ ಅಲ್ಲಿ ಓಡಾಡುವ ನಮ್ಮಲ್ಲಿ ಸಂಭ್ರಮ ಮೂಡಿಸುತ್ತದೆ. ಚಾರಿತ್ರಿಕವಾಗಿ ದೆಹಲಿಯ ಅಸ್ತಿತ್ವದ ಮೊದಲ ಉಲ್ಲೇಖ ಮಾಡಿದವನು ಟಾಲೆಮಿ. ಅಲೆಕ್ಸಾಂಡ್ರಿಯಾದಿಂದ ಆಗಮಿಸಿದ ಆತ ಹೇಳಿದ ‘ದೈದಲಾ’ ಎಂಬ ಪದವು ದೆಹಲಿಯೇ ಆಗಿರಬೇಕೆಂದು ಸಾಧಾರವಾಗಿ ತಕರ್ಿಸಲಾಗಿದೆ. ಕ್ರಿ.ಶ. 736 ರಲ್ಲಿದ್ದ ರಾಜಾ ತೋಮರನ ರಾಜಧಾನಿ ‘ದಿಲ್ಲಿಕೆ’ ಆಗಿತ್ತಂತೆ! ಪ್ರವಾಸಿಗ ಫರಿಸ್ತಾ ‘ರಾಜಾದಿಲು’ ಎಂಬ ಹೆಸರಿನ ಅರಸನಿದ್ದುದನ್ನು ವಿವರಿಸುತ್ತಾನೆ. ರಜಪೂತ ಅರಸ ಪೃಥ್ವಿರಾಜನು (11 ನೇ ಶತಮಾನ) ದೆಹಲಿಯನ್ನು ಆಳಿದ ಕೊನೆಯ ಹಿಂದೂ ಅರಸ. ಇಷ್ಟಿದ್ದರೂ ದೆಹಲಿ ಎಂಬ ಪದದ ನಿಜವಾದ ಅರ್ಥ ಏನೆಂದು ಯಾರಿಗೂ ತಿಳಿಯದು.

ಪುರಾನ ದೆಹಲಿ

ಕ್ರಿ.ಶ. 1192 ರಲ್ಲಿ ಭಾರತಕ್ಕೆ ಬಂದ ಘೋರಿ ಮಹಮ್ಮದನ ಜೊತೆಗಿದ್ದ ಗುಲಾಮೀ ವಂಶದ ಕುತುಬುದ್ದೀನನು ದೆಹಲಿಗೆ ಹೊಸ ಆಯಾಮ ನೀಡಿದ ಸ್ವತಂತ್ರ ಬುದ್ಧಿಯ ಅರಸ. ಆತ ದೇಶವನ್ನು ದೋಚಲಿಲ್ಲ. ಬದಲು ದೆಹಲಿಯಲ್ಲಿಯೇ ನೆಲೆನಿಂತು ಅದನ್ನು ಬೆಳೆಸಿದ. ಆತನ ಕಾಲದಲ್ಲಿ ತಲೆ ಎತ್ತಿ ನಿಂತ ಕುತುಬ್ ಮಿನಾರ್ ಇಂದು ದೆಹಲಿಯ ಪ್ರತಿಷ್ಠೆಯ ಸಂಕೇತಗಳಲ್ಲಿ ಒಂದು. ಕುತುಬುದ್ದೀನ್ನ ತರುವಾಯ ದೆಹಲಿಯನ್ನಾಳಿದ ಇಲ್ತ್ಮುಷ್ನ ಸೌಂದರ್ಯ ಪ್ರಜ್ಞೆಯನ್ನು ದೆಹಲಿ ಇಂದಿನವರೆಗೆ ಬೇರೆ ಬೇರೆ ರೂಪಗಳಲ್ಲಿ ಉಳಿಸಿಕೊಂಡು ಬಂದಿದೆ. ದೆಹಲಿಯ ಆಳ್ವಿಕೆಗೆ ಮಾತೃತ್ವದ ಸ್ಪರ್ಶ ನೀಡಿದ ರಜಿಯಾ ಸುಲ್ತಾನಳ ಪರಂಪರೆಯನ್ನೂ ರಾಜಧಾನಿ ಈಗಲೂ ಮುಂದುವರೆಸಿಕೊಂಡು ಬರುತ್ತಿದೆ. ಗುಲಾಮಿ ವಂಶಾಡಳಿತವನ್ನು ಕೊನೆಗೊಳಿಸಿ ಅಧಿಕಾರ ಹಿಡಿದ ಖಿಲ್ಜಿ ವಂಶದ ಅಲ್ಲಾವುದ್ದೀನನು ದೆಹಲಿಗೆ ಮಾರುಕಟ್ಟೆ ಮಂತ್ರ ಹೇಳಿಕೊಟ್ಟ ಮಹನೀಯ. ಆತನ ಕಾಲದಲ್ಲಿ ದೆಹಲಿಗೆ ಆಗಮಿಸಿದ ಟಕರ್ಿಶ್ ಜನರಿಂದಾಗಿ ಒಂದೇ ಸಮನೆ ಏರತೊಡಗಿದ್ದ ಬೆಲೆಗಳನ್ನು ನಿಯಂತ್ರಿಸಲು ಆತ ಹೆಣಗಾಡಿದ್ದು ಕುತೂಹಲಕರವಾಗಿದೆ. ಅಲೈ ದವರ್ಾಜಾ, ಹೌಸ್ ಖಾಸ್ ಕೆರೆಗಳನ್ನು ನಿಮರ್ಿಸಿದ ಆತ ದೆಹಲಿಯ ಜನರಿಗೆ ಇಂದಿಗೂ ಪ್ರಿಯ. ಖಿಲ್ಜಿ ವಂಶ ಕೊನೆಗೊಂಡಾನಂತರ ದೆಹಲಿ ಆಡಳಿತ ಹಿಡಿದ ತುಘಲಕ್ ವಂಶಸ್ಥರು ಬೃಹತ್ ಕೋಟೆಗಳನ್ನು ಕಟ್ಟಿದ್ದು, ದೆಹಲಿಯನ್ನು ದೇವಗಿರಿಗೆ ವಗರ್ಾಯಿಸಲು ಪ್ರಯತ್ನಿಸಿದ್ದು ನಮಗೆಲ್ಲಾ ತಿಳಿದೇ ಇದೆ. ಲೋಧಿ ಅರಸರ ಸಮಾಧಿ ಸ್ಥಳ ಇಂದು ಪ್ರೇಮಿಗಳ ಸಂಧಿಸ್ಥಳವಾಗಿದೆ. 1500 ರ ಸುಮಾರಿಗೆ ದೆಹಲಿಯನ್ನಾಳಲು ಆರಂಭಿಸಿದ ಮೊಗಲರ ನೆನಪುಗಳು ಇಂದಿನ ದೆಹಲಿಯ ತುಂಬ ಹರಡಿಕೊಡಿದೆ. ಹುಮಾಯೂನ, ಅಕ್ಬರ, ಜಹಾಂಗೀರ, ಷಹಾಜಹಾನ, ದಾರಾಶಿಖೋ, ಔರಂಗಜೇಬ ಮೊದಲಾದವರು ದೆಹಲಿಯ ಮುಖ್ಯ ರಸ್ತೆಗಳ ಹೆಸರಾಗಿಯಾದರೂ ಹೊಸ ತಲೆಮಾರಿಗೆ ತಿಳಿದಿದೆೆ. ಯಮುನೆಯ ದಡದಲ್ಲಿ ತಲೆ ಎತ್ತಿ ನಿಂತಿರುವ ಕೆಂಪುಕೋಟೆಯಿಂದ ಇಂದು ಸ್ವತಂತ್ರ ಭಾರತದ ಬಾವುಟ ಹಾರಾಡುತ್ತಿದೆ. ಮೊಗಲರ ಕೊನೆ ಅರಸನಾದ ಬಹದೂರ್ ಶಾ ಜಫರ್ನಿಗೆ ಊಟ ತಯಾರು ಮಾಡಿಕೊಡುತ್ತಿದ್ದ ಕರೀಂ ಸಾಬರ ಚಿಕನ್ ಶಾಪ್ ಈಗಲೂ ಜಾಮಾ ಮಸೀದಿ ಬಳಿ ಕಾರ್ಯನಿರತವಾಗಿದೆ. ಮೊಗಲರ ಕೊನೆಯ ಅರಸನನ್ನು ಸುಲಭವಾಗಿ ಸೋಲಿಸುವುದರೊಂದಿಗೆ ದೆಹಲಿಗೆ ಪ್ರವೇಶ ಪಡೆದ ಬ್ರಿಟಿಷರು ಆರಂಭಿಕ ಹಂತಲ್ಲಿ ಕಲ್ಕತ್ತವನ್ನೇ ರಾಜಧಾನಿ ಮಾಡಿಕೊಂಡಿದ್ದರು. ಆದರೆ 1900 ರ ಬಳಿಕ ಕಾಣಿಸಿಕೊಂಡ ಬಂಗಾಳ ಪ್ರಕ್ಷುಬ್ಧತೆ, ಕಲ್ಕತ್ತದ ಪ್ರತಿಕೂಲ ಹವೆಗಳಿಂದ ಬೇಸತ್ರ ಬ್ರಿಟಿಷರು ಕಲ್ಕತ್ತ ತೊರೆದು ದೆಹಲಿಗೆ ರಾಜಧಾನಿಯನ್ನು ವಗರ್ಾಯಿಸಲು ಯೋಚಿಸಿದರು. 1906 ರಲ್ಲಿ ಭಾರತಕ್ಕೆ ಆಗಮಿಸಿದ ಬ್ರಿಟಿಷ್ ಚಕ್ರವತರ್ಿ ಐದನೇ ಜಾಜರ್್ ಈ ಕುರಿತು ಆದೇಶ ಹೊರಡಿಸಿದ. ಆನಂತರ ‘ರಾಜಧಾನಿ ನವದೆಹಲಿ’ಯನ್ನು ಕಟ್ಟಲು ಆರಂಭಿಸಲಾಯಿತು. ದೆಹಲಿಯನ್ನು ಬ್ರಿಟಿಷ್ ಸಾಮ್ರಾಜ್ಯದ ‘ಇಂಡಿಯಾ ಕ್ಯಾಪಿಟಲ್’ ಆಗಿಸುವ ಹೊಣೆ ಹೊತ್ತವನು ಲ್ಯುಟಿನ್ಸ್ ಎಂಬ ಅಸಾಧಾರಣ ಪ್ರತಿಭೆಯ ವಾಸ್ತುಶಿಲ್ಪಿ. ಆ ಕಾಲದ ಜಗತ್ತಿನ ಪ್ರಮುಖ ನಗರಗಳಾದ ಪ್ಯಾರಿಸ್, ಬಲರ್ಿನ್, ಲಂಡನ್, ಸಿಡ್ನಿ ಮತ್ತು ವಾಷಿಂಗ್ಟನ್ ಡಿ ಸಿ. ನಗರಗಳ ಬಗ್ಗೆ ಆಳವಾದ ತಿಳಿವಳಿಕೆ ಹೊಂದಿದ್ದ ಲುಟಿನ್ಸ್ ಬಹಳ ದುರಹಂಕಾರಿಯೂ ಆಗಿದ್ದುದು ಬ್ರಿಟಿಷ್ ಸಂಸತ್ತಿನಲ್ಲಿ ಚಚರ್ೆಯಾದ ವಿಚಾರ. ಇಷ್ಟಿದ್ದರೂ, ಪ್ರತಿಭೆಗೆ ಮನ್ನಣೆ ನೀಡುವ ಬ್ರಿಟಿಷ್ ಸಂಸತ್ತು ಲ್ಯುಟಿನ್ಸ್ನ್ನು ಕೇಳಿಕೊಂಡಾಗ “ನೀನು ಕಟ್ಟಲಿರುವ ಆಧುನಿಕ ದೆಹಲಿಯ ವಾಸ್ತುಶಿಲ್ಪಕ್ಕೆ ಭಾರತದ ಪಾರಂಪರಿಕ ವಾಸ್ತುಶಿಲ್ಪದ ಸ್ಪರ್ಶ ಇರಲಿ” ಎಂಬ ಸೂಚನೆ ನೀಡಿದರು. ಸಿಟ್ಟಿಗೆದ್ದ ಲ್ಯುಟಿನ್ಸ್ನು ಚಕ್ರವತರ್ಿ ಜಾರ್ಜನ ಚಿತ್ರ ಬರೆದು ಅವನ ಮುಖಕ್ಕೆ ಷಹಜಹಾನನ ಗಡ್ಡ ಅಂಟಿಸಿ, ಮಹಾರಾಣಿಯ ಚಿತ್ರ ಬರೆದು ಅದಕ್ಕೆ ಬುರುಖಾ ಹಾಕಿ “ಬ್ರಿಟಿಷರ ಆಧುನಿಕತೆಗೆ ಭಾರತದ ಪರಂಪರೆಯನ್ನು ಜೋಡಿಸುವುದೆಂದರೆ ಹೀಗೆ” ಅಂತ ಹೇಳಿ ಬ್ರಿಟಿಷ್ ಪತ್ರಿಕೆಗಳಲ್ಲಿ ಅವಳಿ ಚಿತ್ರಗಳನ್ನು ಪ್ರಕಟಿಸಿಬಿಟ್ಟ. ಇಷ್ಟಿದ್ದರೂ ಆತ ಕೊನೆಗೆ ಮೊಗಲ್ ವಾಸ್ತುಶಿಲ್ಪದ ಕೆಲವು ಅತ್ಯುತ್ತಮ ಭಾಗಗಳನ್ನು ಅಳವಡಿಸಿಕೊಂಡು, ಅರಾವಳಿ ಪರ್ವತಶ್ರೇಣಿಯ ಭಾಗವಾದ ರೈಸ್ನಾ ದಿಬ್ಬದ ಮೇಲೆ ಅದ್ಭುತವಾದ ‘ವೈಸರಾಯ್ ಬಂಗಲೆ’ ಯನ್ನು, ಅದರ ಎಡಬಲಗಳಲ್ಲಿ ಕಚೇರಿಗಳನ್ನು ಕಟ್ಟಿದ. ಇದಕ್ಕೆ ಸುಮಾರು 35 ವರ್ಷಗಳ ಕಾಲ ಸಾವಿರಾರು ಜನ ದುಡಿದರು. ಸ್ವಾತಂತ್ರ್ಯಾನಂತರ ಈ ‘ಬಂಗಲೆ’ಯನ್ನು ‘ರಾಷ್ಟ್ರಪತಿ ಭವನ’ವನ್ನಾಗಿ ಮಾರ್ಪಡಿಸಲಾಯಿತು. ಅದರ ಎಡಬಲದ ಕಚೇರಿಗಳಲ್ಲಿ ಇಂದು ಪ್ರಧಾನಮಂತ್ರಿಗಳ ಮತ್ತು ಇತರ ಮಂತ್ರಿಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಲ್ಯುಟಿನ್ಸ್ ವೈಸರಾಯ್ಗೆ ಕಟ್ಟಿದ ಅರಮನೆಯಂಥ ಬಂಗಲೆಗೆ ಹೈದರಾಬಾದಿನ ನಿಜಾಮ, ಬರೋಡದ ಮತ್ತು ಜೈಪುರದ ಅರಸರು ಉದಾರವಾಗಿ ದೇಣಿಗೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಆ ಅರಸರು ಇಂದಿನ ‘ಇಂಡಿಯಾ ಗೇಟ್’ನ ಸುತ್ತ ಸ್ವಲ್ಪ ಜಾಗ ಪಡಕೊಂಡರು. ಲ್ಯುಟಿನ್ಸ್ ಅವರಿಗೂ ಬಂಗಲೆ ಕಟ್ಟಿಸಿದ. ನಮ್ಮ ಮೈಸೂರಿನ ಅರಸರು ಮಾತ್ರ ದೇಣಿಗೆಯೂ ನೀಡಿಲ್ಲ, ಪ್ರತಿಯಾಗಿ ಆಯಕಟ್ಟಿನ ಜಾಗದಲ್ಲಿ ಬಂಗಲೆಯನ್ನೂ ಪಡೆದಿಲ್ಲ.

ಆಧುನಿಕ ದೆಹಲಿ

ಇಂದು ದೆಹಲಿಯ ಸುತ್ತ ನೊಯ್ಡಾ – ಗುಗರ್ಾಂವ್ಗಳು ಇತಿಹಾಸದ ಭಾರವಿಲ್ಲದೆ ಅತ್ಯಾಧುನಿಕವಾಗಿ ಬೆಳೆದುನಿಂತಿವೆ. ದೆಹಲಿ ಮಾತ್ರ ಒಂದೆಡೆಯಲ್ಲಿ ಹಜರತ್ ನಿಜಾಮುದ್ದೀನ್ನಲ್ಲಿನ ಮಧ್ಯಕಾಲೀನ ಯುಗದ ಕವಾಲಿಗಳಿಗೆ ಇನ್ನೂ ಕಿವಿಗೊಡುತ್ತಿದೆ, ಆದರೆ ಅಲ್ಲಿಯೇ ನಿಲ್ಲದೆ ಇನ್ನೊಂದೆಡೆ ಮೆಟ್ರೋ ರೈಲಿಗೆ ಯೋಜನೆಗಳನ್ನು ರೂಪಿಸಿ ಅದನ್ನೂ ಸಾಧ್ಯವಾಗಿಸಿದೆ. ಜೊತೆಗೆ ಮಹಾಭಾರತದ ಕುರುಕ್ಷೇತ್ರ ಯುದ್ಧದಿಂದ ಆರಂಭವಾದ ದೆಹಲಿಯ ರಕ್ತ-ಸಿಕ್ತ ಇತಿಹಾಸ ಆಗಾಗ ಮರುಕಳಿಸುತ್ತಾ ಬಂದಿರುವುದೂ ನಿಜ. ಕಳೆದ ನೂರು ವರ್ಷ ನಮಗೆ ತಿಳಿದಿದೆ, ಮುಂದಿನ ನೂರು ವರ್ಷಗಳನ್ನು ಮಾತ್ರ ಊಹಿಸಲಾಗದು.    ]]>

‍ಲೇಖಕರು G

July 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This