ಪುರುಷೋತ್ತಮ ಬಿಳಿಮಲೆ ಕಾಲ೦ : ಕೆ ಆರ್ ಸುಬ್ಬಣ್ಣ

– ಪುರುಷೋತ್ತಮ ಬಿಳಿಮಲೆ

ಕೃಪೆ : ವಿಜಯ ಕರ್ನಾಟಕ

ಕೇಂದ್ರ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಕನ್ನಡಿಗ ಕೆ ಆರ್ ಸುಬ್ಬಣ್ಣ

ದೆಹಲಿಯಿಂದ ಪೂರ್ವಕ್ಕೆ ನಡೆದರೆ, ‘ಈಸ್ಟ್ ಆಫ್ ಕೈಲಾಸ್’ ಸಿಗುತ್ತದೆ. ಅದಕ್ಕೆ ತಾಗಿಕೊಂಡು ‘ಗಡಿ ಗ್ರಾಮ’ ವಿದೆ. ಈ ಕಲಾಗ್ರಾಮದಲ್ಲಿ ಕೆಲಸ ಮಾಡುತ್ತಿರುವ ಬೆರಳೆಣಿಕೆಯ ಕನ್ನಡದ ಕಲಾವಿದರಲ್ಲಿ ಶ್ರೀ ಕೆ ಆರ್ ಸುಬ್ಬಣ್ಣ ಅವರು ಒಬ್ಬರು. ಅವರೀಗ ಕೇಂದ್ರ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರು. ಅದು ಹಂಗಾಮಿಯೇ ಹೌದಾದರೂ ಕನ್ನಡಿಗರಿಗೆ ಇದೊಂದು ಹೆಮ್ಮೆಯ ವಿಚಾರ. ರಾಜಧಾನಿಯಲ್ಲಿ ಕನರ್ಾಟಕದ ಪ್ರತಿನಿಧೀಕರಣ ದುರ್ಬಲವಾಗಿರುವ ಸಂದರ್ಭದಲ್ಲಿ ಇದೊಂದು ಅಪೂರ್ವ ಘಟನೆ. ಗಡಿ ಗ್ರಾಮದಲ್ಲಿರುವ ಅವರ ಸ್ಟುಡಿಯೋದ ಒಳಹೊಕ್ಕರೆ, ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಮಲೆನಾಡೆಲ್ಲ ಅಲ್ಲಿ ಹೊಸ ಪ್ರತಿಮೆಗಳ ಮೂಲಕ ಮರುಜನ್ಮ ಪಡೆದಿರುವುದನ್ನು ಯಾರಾದರೂ ಕಾಣಬಹುದು. ಕಾಡೇ ಕಾಣದ ದೆಹಲಿಯ ಮಂದಿಗಳಿಗೆಲ್ಲ ಸುಬ್ಬಣ್ಣ ಮರು ನಿಮರ್ಿಸಿರುವ ಕಾಡುಗಳನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ಹೀಗಾಗಿಯೇ ಮಲೆನಾಡಿನ ಸುಬ್ಬಣ್ಣನವರು ರಾಜಧಾನಿಯಲ್ಲಿ ಪ್ರಖ್ಯಾತ.   ಈ ಕುರಿತು ಅವರನ್ನೇ ಕೇಳಿದಾಗ ಅವರು ಹೀಗನ್ನುತ್ತಾರೆ – 1952 ರಷ್ಟು ಹಿಂದೆ ಶಿವಮೊಗ್ಗದ ಸಾಗರದ ಸಮೀಪದಲ್ಲಿ ನಾನು ಹುಟ್ಟಿದೆೆ. ನಾನು ಕಣ್ಣು ಬಿಡುತ್ತಿದ್ದಾಗ ಕಂಡದ್ದು ದಟ್ಟ ಹಸುರಿನ ಕಾಡುಗಳನ್ನು. ಈ ಕಾಡುಗಳ ಗರ್ಭದಲ್ಲಿಯೋ ಎಂಬಂತೆ ಬಗೆ ಬಗೆಯ ದೈವಗಳ ವಿಗ್ರಹಗಳನ್ನು, ಗುಡಿಗಳನ್ನು ನೋಡುತ್ತಿದ್ದೆ. ಕುಸುರಿ ಕೆಲಸಗಳಿಗೆ ಹೆಸರಾದ ಹೊಯ್ಸಳ ದೇವಸ್ಥಾನಗಳ ಚೆಲುವಿಗೆ ನಾನು ಮಾರುಹೋಗಿದ್ದೆ. ಈಗ ಸುಮಾರು ಐವತ್ತು ವರ್ಷಗಳ ತರುವಾಯ ಆ ಕಾಡುಗಳು ಮತ್ತು ಕುಸುರಿ ಕೆಲಸದ ಗುಡಿಗಳು ಇಲ್ಲಿ ಮರು ಹುಟ್ಟು ಪಡೆಯುತ್ತಿವೆ. ಯಾವ್ಯಾವುದೋ ಆಕಾರಗಳಲ್ಲಿ, ಯಾವ್ಯಾವುದೋ ಬಣ್ಣಗಳಲ್ಲಿ.   ಹೀಗೆ ಹೇಳುವಾಗ ಗಡ್ಡಧಾರಿ ಸುಬ್ಬಣ್ಣ ಅವರ ಕಣ್ಣುಗಳಲ್ಲಿ ಮಿಂಚು ಹೊಳೆಯುತ್ತದೆ; ಗಡ್ಡದೊಳಗೆ ಕಿರುನಗೆ ಹೊಮ್ಮುತ್ತದೆ. ಮಲೆನಾಡಿನ ರಮ್ಯತೆ ಮತ್ತು ಹೊಯ್ಸಳ ವಾಸ್ತುಶಿಲ್ಪದ ಚೆಲುವುಗಳ ಸಂಗಮವೇ ಅವರ ಕಲಾಸೃಷ್ಟಿಯ ನೆಲೆ.   1974 ರಲ್ಲಿ ದಾವಣಗೆರೆಯ ಕಲಾಶಾಲೆಯಲ್ಲಿ ಡಿಪ್ಲೊಮಾ ಪಡೆದ ಅವರು 1995 ರಲ್ಲಿ ದೆಹಲಿಯ ಕಾಲೇಜ್ ಆಫ್ ಆಟರ್್ನಿಂದ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ‘ದಾವಣಗೆರೆ ಮತ್ತು ದೆಹಲಿಯ ನಡುವಣ ಯಾತ್ರೆಯೇ ನನ್ನೊಳಗಣ ಕಲಾವಿದನಿಗೆ ಒಂದು ಬಗೆಯ ಸವಾಲು ಒಡ್ಡಿತು’ ಎಂದು ಅವರು ತಮ್ಮ ಸುದೀರ್ಘ ಪಯಣದ ಪರಿಣಾಮವನ್ನು ವಿವರಿಸುತ್ತಾರೆ – ನನ್ನ ಸಾಂಪ್ರದಾಯಿಕ ತಿಳುವಳಿಕೆಗೂ ಆಧುನಿಕ ತಿಳುವಳಿಕೆಗೂ ನಡುವೆ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಯಿತು. ಈ ಬಿಕ್ಕಟ್ಟು ಒಂದು ಬಗೆಯ ದ್ವಂದ್ವವನ್ನು ಸೃಷ್ಟಿಸಿ, ನನ್ನ ಆರಂಭಿಕ ಕಲಾಕೃತಿಗಳಲ್ಲಿ ಹೊಸಬಗೆಯ ಪ್ರತಿಮೆಗಳನ್ನು ವಿನ್ಯಾಸಗೊಳಿಸಿತು. ಆದರೆ ಇದು ಬಹಳ ಕಾಲ ಹಾಗೆಯೇ ಮುಂದುವರಿಯುವಂತಿರಲಿಲ್ಲ. ಇದಕ್ಕಾಗಿ ನಾನು ‘ಸರ್ರಿಯಲಿಸಂ’ನ ಮೊರೆಹೋದೆ. ಭಾರತೀಯ ಸೌಂದರ್ಯ ಮೀಮಾಂಸೆ ತಿಳಿಹೇಳಿದ ವಿವರಗಳ ಮೇಲೆ ಆಧುನಿಕತೆಯನ್ನು ಹೇರತೊಡಗಿದೆ ಎಂದು ಅವರು ತಮ್ಮ ಕಲಾಚರಿತ್ರೆಯನ್ನು ಮುಂದಿಡುತ್ತಾರೆ.   ಇದು ನಿರಂತರ ಪ್ರಯೋಗ ನಿರತ ಕಲಾವಿದನ ಮಾತುಗಳು. ಇಲ್ಲಿ ಪ್ರಯೋಗಕ್ಕೆ ಕೊನೆ ಎಂಬುದಿಲ್ಲ. ಸುಬ್ಬಣ್ಣನವರ ಇಂಥ ಪ್ರಯೋಗಗಳೇ ಅವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದಿತ್ತಿತು. ಡೆನ್ಮಾಕರ್್, ಫ್ರಾನ್ಸ್, ಅಮೆರಿಕಾ, ಜರ್ಮನಿ, ಹಾಲೆಂಡ್ಗಳಿಗೆ ಅವರು ನೀಡಿದ ಭೇಟಿ ಮತ್ತು ಅಲ್ಲಿನ ಸಂಸ್ಕೃತಿಗಳೊಂದಿಗೆ ಅವರು ಮುಖಾಮುಖಿಯಾದ ರೀತಿ, ಅವರ ಕಲಾಸೃಷ್ಟಿಗೆ ಇನ್ನೊಂದು ಆಯಾಮವನ್ನು ನೀಡಿತು. ಈ ಕುರಿತು ಅವರು ಹೀಗನ್ನುತ್ತಾರೆ – ವಿದೇಶಗಳಿಗೆ ನಾನು ನೀಡಿದ ಭೇಟಿಯು ನನ್ನ ಕಲಾಸೃಷ್ಟಿಯಲ್ಲಿ ಮಾನವ ದೇಹವನ್ನು ಮುಂದಕ್ಕೆ ತಂದು, ಅದನ್ನು ಪ್ರಧಾನವಾಗಿ ಸ್ಥಾಪಿಸಿತು. ಪ್ರಕೃತಿಯ ನಡುವಿನಿಂದ ಹೊರಹೊಮ್ಮುವ ದೇಹಗಳು ಪ್ರಕೃತಿಯ ಭಾಗಗಳೇ ಆಗಿರುವುದರಿಂದ ಅಲ್ಲಿ ನಗ್ನತೆ ಎಂಬುದು ಅನಿವಾರ್ಯ ಘಟಕವಾಗಿಬಿಡುತ್ತದೆ. ಹೀಗಾಗಿ ನನ್ನ ಲಿಥೋಗ್ರಾಫ್ ಮತ್ತು ಎಚ್ಚಿಂಗ್ಗಳಲ್ಲಿ ಪ್ರಕೃತಿ-ಪುರುಷರು ಒಂದಾಗಿಬಿಡುತ್ತಾರೆ. ಇದು ಬಾಲ್ಯದ ಮತ್ತು ಯೌವನದ ನೆನಪುಗಳು ಹೌದಲ್ಲವೇ? ಎಂದು ಅವರು ನಮ್ಮನ್ನು ಪ್ರಶ್ನಿಸುತ್ತಾರೆ.   ಸಾಗರದ ಈ ಕಲಾವಿದ ಗುಲಬಗರ್ಾ, ದೆಹಲಿ, ದಕ್ಷಿಣ ಕೊರಿಯಾ, ಜಯಪುರ, ಫ್ರಾನ್ಸ್, ಇಂಗ್ಲೆಂಡ್ಗಳಲ್ಲಿ ಏಕವ್ಯಕ್ತಿ ಪ್ರದರ್ಶನ ನಡೆಸಿಕೊಟ್ಟಿದ್ದಾರೆ. ಭದ್ರಾವತಿ, ಹುಬ್ಬಳ್ಳಿ, ಬೆಂಗಳೂರು, ದೆಹಲಿ, ಮುಂಬೈ, ಚಂಡೀಗಢ ಮೊದಲಾದೆಡೆಗಳಲ್ಲಿ ಅವರ ಕಲಾಕೃತಿಗಳು ಒಂದಲ್ಲ ಒಂದು ಗುಂಪಿನೊಂದಿಗೆ ಪ್ರದರ್ಶನಗೊಳ್ಳುತ್ತಲೇ ಇವೆ. ವಿದೇಶಗಳಲ್ಲಿ ನಡೆದ ‘ಭಾರತ ಉತ್ಸವ’ಗಳಲ್ಲದೆ, ನಾವರ್ೆ, ಕೆನಡಾ, ನೇಪಾಲ, ಟೋಕಿಯೋಗಳಲ್ಲಿಯೂ ಅವರ ಕಲಾಕೃತಿಗಳ ಪ್ರದರ್ಶನಗಳು ನಡೆದು ಚಿತ್ರ ವಿಮರ್ಶಕರ ಮುಕ್ತಕಂಠದ ಶ್ಲಾಘನೆಗೆ ಪಾತ್ರವಾಗಿವೆ.   ಸುಬ್ಬಣ್ಣ ಅವರ ವ್ಯಕ್ತಿತ್ವದ ಇನ್ನೊಂದು ವೈಶಿಷ್ಟ್ಯವೆಂದರೆ ಕಲಾಪ್ರಕಾರದ ಬಗ್ಗೆ ಅವರಿಗಿರುವ ಆಸಕ್ತಿ. ಇದಕ್ಕಾಗಿ ಅವರು ತರಬೇತಿ ಶಿಬಿರಗಳನ್ನು ಏರ್ಪಡಿಸುತ್ತಲೇ ಇರುತ್ತಾರೆ. ಆತಂಕವಾದಿಗಳು ಪಾಲರ್ಿಮೆಂಟಿನ ಮೇಲೆ ಹಲ್ಲೆ ನಡೆಸಿದಾಗ ವಿಚಲಿತರಾದ ಸುಬ್ಬಣ್ಣ ದೆಹಲಿಯ ಹಿರಿಯ- ಕಿರಿಯ ಕಲಾವಿದರನ್ನೆಲ್ಲ ಒಟ್ಟು ಸೇರಿಸಿ, ಒಂದು ಕಲಾ ಪ್ರದರ್ಶನವನ್ನು ಇಂದಿರಾಗಾಂಧಿ ರಾಷ್ಟ್ರೀಯ ಕಲಾಶಾಲೆಯಲ್ಲಿ ನಡೆಸಿಯೇ ಬಿಟ್ಟರು. ಬೆಂಗಳೂರಿನಲ್ಲಿ ಕಿರಿಯ ಮಕ್ಕಳಿಗಾಗಿ ನಡೆಸಿದ ‘ಲಿಥೋಗ್ರಫಿ ಶಿಬಿರ; ಕಠ್ಮಂಡುವಿನಲ್ಲಿ ನಡೆಸಿದ ‘ಪ್ರಿಂಟ್ಮೇಕಿಂಗ್ ಶಿಬಿರ’, ಚಂಡೀಗಢದಲ್ಲಿ ನಡೆಸಿದ ‘ಎಚ್ಚಿಂಗ್ ಶಿಬಿರ’, ಡೆನ್ಮಾಕರ್್ನಲ್ಲಿ ನಡೆಸಿದ ‘ಲಿಥೋಗ್ರಫಿ’ ಶಿಬಿರ ಮೊದಲಾದುವುಗಳು ಅವರಿಗೆ ಹೆಸರು ತಂದುಕೊಟ್ಟಿವೆ. ಕಲೆಯ ಬಗೆಗೆ ಸರಳವಾಗಿ ತಿಳಿಸಿಹೇಳುವ ಕಲೆ ಅವರಿಗೆ ಕರಗತವಾಗಿದೆ. ಅವರ ಅಧ್ಯಾಪಕ ವೃತ್ತಿ ಇದಕ್ಕೆ ಪೂರಕವಾಗಿದೆ.   ಸುಬ್ಬಣ್ಣ ಅವರಿಗೆ ರಾಷ್ಟ್ರೀಯ – ಅಂತಾರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳು ಲಭ್ಯವಾಗಿವೆ. ಕನರ್ಾಟಕ ರಾಜ್ಯ ಲಲಿತಕಲಾ ಅಕಾಡೆಮಿಯು ನಡೆಸಿದ 13ನೇ ವಾಷರ್ಿಕ ಕಲಾ ಪ್ರದರ್ಶನದಲ್ಲಿ ಇವರಿಗೆ ರಾಜ್ಯ ಪ್ರಶಸ್ತಿ ದೊರೆತರೆ, ಹೈದರಾಬಾದಿನಲ್ಲಿ ನಡೆದ ಏಳನೆಯ ಗ್ರಾಫಿಕ್ ಪ್ರದರ್ಶನದಲ್ಲಿ ಅವರಿಗೆ ವಾಷರ್ಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇವೆಲ್ಲಕ್ಕೆ ಮುಕುಟಪ್ರಾಯವಾಗಿ 1984 ರಷ್ಟು ಹಿಂದೆಯೇ ಅವರಿಗೆ ಲಲಿತಕಲಾ ಅಕಾಡೆೆಮಿಯ ರಾಷ್ಟ್ರೀಯ ಪ್ರಶಸ್ತಿ ದೊರೆಯಿತು. ಫ್ರಾನ್ಸ್ ಸರಕಾರದ ಶಿಷ್ಯವೇತನ, ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಶಿಷ್ಯವೇತನ ಮತ್ತು ಬ್ರಿಟನ್ನಿನ ‘ಚಾಲ್ಸರ್್ ವಲೇಸ್’ ಶಿಷ್ಯ ವೇತನಗಳನ್ನು ಇವರು ಪಡೆದುಕೊಂಡಿದ್ದಾರೆ.   ಈಗ ಈ ಸಜ್ಜನಿಕೆಯ ಕನ್ನಡ ಕಲಾವಿದರ ಕಲಾಕೃತಿಗಳು ಜಗತ್ತಿನಾದ್ಯಂತ ಮುಖ್ಯ ಗ್ಯಾಲರಿಗಳಲ್ಲಿ ನೋಡಲು ಸಿಗುತ್ತವೆ. ದೆಹಲಿಯ ಲಲಿತಕಲಾ ಅಕಾಡೆೆಮಿ, ಬೆಂಗಳೂರಿನ ಲಲಿತಕಲಾ ಅಕಾಡೆಮಿ, ಮೈಸೂರಿನ ಜಾನಪದ ವಸ್ತು ಸಂಗ್ರಹಾಲಯ, ನೇಪಾಲದ ಸೋಲ್ಟಿ ಒಬೆರೊಯ್, ಡೆನ್ಮಾಕರ್ಿನ ಡೆಟ್ ಗ್ರಾಫಿಸ್ಕೆ, ಪ್ಯಾರಿಸ್ನ ಬೋಗುನೇರಿ ಇನ್ಸ್ಟಿಟ್ಯೂಟ್, ಮೊದಲಾದೆಡೆಗಳಲ್ಲಿ ಇವರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಸದ್ಯ ಕೇಂದ್ರ ಲಲಿತಕಲಾ ಅಕಾಡೆೆಮಿಯ ಅಧ್ಯಕ್ಷರಾಗಿರುವ ಸುಬ್ಬಣ್ಣ, ‘ಇಂಡಿಯನ್ ಪ್ರಿಂಟ್ ಮೇಕರ್ಸ್ ಗಿಲ್ಡ್’ನ ಕಾರ್ಯದಶರ್ಿಯಾಗಿ, ಡೆನ್ಮಾಕರ್ಿನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ.. ಹೀಗೆ ಹತ್ತು ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.   ಕನ್ನಡದ ಸುಬ್ಬಣ್ಣ, ಈಗ ಎಲ್ಲರಿಗೆ ಬೇಕಾದ ಕಲಾವಿದರಾಗಿ ದೆಹಲಿಯಲ್ಲಿ ಬೆಳೆಯುತ್ತಿದ್ದಾರೆ. ನನ್ನೊಳಗಿನ ಭಾವನೆಗಳನ್ನು ಹೊರತೆಗೆದು, ಅದನ್ನು ಅಷ್ಟೇ ಸಹಜವಾಗಿ ಆದರೆ ಭವ್ಯತೆಗೆ ಕುಂದು ಬರದಂತೆ ಕಲಾಕೃತಿಯಾಗಿಸಲು ನಾನು ನಿರಂತರವಾಗಿ ಹೆಣಗಾಡುತ್ತಿರುತ್ತೇನೆ ಎನ್ನುವ ಅವರು ಹೊರನಾಡು ಕನ್ನಡಿಗರ ಕೀಳರಿಮೆಯನ್ನು ಕಡಿಮೆ ಮಾಡಲು ಕಾರಣರಾಗಿದ್ದಾರೆ. ದೆಹಲಿಗೆ ಬರುವ ಕನ್ನಡಿಗರು ಈಗ ‘ಮಂಡಿ ಹೌಸ್’ನಲ್ಲಿರುವ ಲಲಿತಕಲಾ ಅಕಾಡೆಮಿವರೆಗೆ ಹೋಗಿ ಈ ಕನ್ನಡದ ಕಲಾವಿದನನ್ನು ಕಂಡುಬರಬಹುದು.  ]]>

‍ಲೇಖಕರು G

July 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

2 ಪ್ರತಿಕ್ರಿಯೆಗಳು

 1. D.RAVI VARMA

  ಗಡ್ಡಧಾರಿ ಸುಬ್ಬಣ್ಣ ಅವರ ಕಣ್ಣುಗಳಲ್ಲಿ ಮಿಂಚು ಹೊಳೆಯುತ್ತದೆ; ಗಡ್ಡದೊಳಗೆ ಕಿರುನಗೆ ಹೊಮ್ಮುತ್ತದೆ. ಮಲೆನಾಡಿನ ರಮ್ಯತೆ ಮತ್ತು ಹೊಯ್ಸಳ ವಾಸ್ತುಶಿಲ್ಪದ ಚೆಲುವುಗಳ ಸಂಗಮವೇ ಅವರ ಕನ್ನಡದ ಸುಬ್ಬಣ್ಣ, ಈಗ ಎಲ್ಲರಿಗೆ ಬೇಕಾದ ಕಲಾವಿದರಾಗಿ ದೆಹಲಿಯಲ್ಲಿ ಬೆಳೆಯುತ್ತಿದ್ದಾರೆ. ನನ್ನೊಳಗಿನ ಭಾವನೆಗಳನ್ನು ಹೊರತೆಗೆದು, ಅದನ್ನು ಅಷ್ಟೇ ಸಹಜವಾಗಿ ಆದರೆ ಭವ್ಯತೆಗೆ ಕುಂದು ಬರದಂತೆ ಕಲಾಕೃತಿಯಾಗಿಸಲು ನಾನು ನಿರಂತರವಾಗಿ ಹೆಣಗಾಡುತ್ತಿರುತ್ತೇನೆ ಎನ್ನುವ ಅವರು ಹೊರನಾಡು ಕನ್ನಡಿಗರ ಕೀಳರಿಮೆಯನ್ನು ಕಡಿಮೆ ಮಾಡಲು ಕಾರಣರಾಗಿದ್ದಾರೆ.
  ಈ ಅಪರೂಪದ ಕಲಾವಿದರಿಗೊಂದು ,ಅವರ ಬದುಕಿನ ಬದ್ದತೆ,ಪ್ರೀತಿಗೊಂದು, ಅನನ್ಯ ನಮಸ್ಕಾರಗಳು

  ಪ್ರತಿಕ್ರಿಯೆ
 2. Ambekar Pramod

  Mr. Subbanna,
  Nanobba Rnaga kalavida Nanu Belgaumdalli sri sumaru 35 varush dind natak madutta bandiruve, Nimma bagge oodi tumba snatosh vagide
  Ambekar Pramod
  +919844039532

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: