ಪುರುಷೋತ್ತಮ ಬಿಳಿಮಲೆ: ಆಡಂ ಮತ್ತು ಈವ್ಗಳನ್ನು ಬಿಟ್ಟು ಜಿಗಣೆಗಳ ಕಡೆಗೆ

– ಪುರುಷೋತ್ತಮ ಬಿಳಿಮಲೆ

ಕರ್ನಾಟಕ ಎತ್ತ ನೋಡಿದೆ ಮತ್ತು ಅದೀಗ ನೋಡುತ್ತಿದೆ? ನನಗೆ ಅನ್ನಿಸಿದ ಹಾಗೆ ಅದಲು ಮೊದಲು ನೋಡುತ್ತಿದ್ದುದು ಉತ್ತರದ ವಿಂಧ್ಯ ಪರ್ವತದಆಚೆಗೆ ಮತ್ತು 19ನೇ ಶತಮಾನದ ಆನಂತರ ಪಶ್ಚಿಮದ ಕಡಲಾಚೆಯಕಡೆಗೆ. ಕನ್ನಡಕ್ಕೆ ಪರ್ವತಗಳನ್ನು ಸುಲಭವಾಗಿ ದಾಟುವ ಮತ್ತು ಕಡಲನ್ನುಆರಾಮವಾಗಿ ಹಾರುವ ವಿಶೇಷ ಶಕ್ತಿ ಇರುವುದು ಕೂಡಾ ತುಂಬಾ ಕುತೂಹಲಕಾರಿ ವಿಷಯ. ಮೂಲ ದ್ರಾವಿಡದಿಂದ ನಿಧಾನವಾಗಿ ಬೇರೆಯಾಗಿ, ಆನಂತರದ ಕಾಲದಲ್ಲಿ ಸ್ವತಂತ್ರವಾಗಿ ಬೆಳೆದ ಕನ್ನಡ ಭಾಷೆಯು ಅದರ ಆರಂಭಿಕ ಕಾಲದಲ್ಲಿ ನೋಡಿದ್ದು ಉತ್ತರದ ಕಡೆಗೆ. ಹಾಗೆ ನೋಡಿದ್ದರಿಂದಲೇಅದಕ್ಕೆಉತ್ತರದಿಂದ ಆಗಮಿಸಿದ ಬೌದ್ಧ-ಜೈನ ಧರ್ಮಗಳು ಆಪ್ತವಾದವು. ಸಂಸ್ಕೃತವನ್ನೂಅದುಆದರದಿಂದ ಸ್ವಾಗತಿಸಿತು.1799 ರಲ್ಲಿಟಿಪ್ಪೂವಿನ ಮರಣಾನಂತರ ವಸಾಹತೀಕರಣಕ್ಕೆ ಒಳಪಟ್ಟ ಕರ್ನಾಟಕವು ನಿಧಾನವಾಗಿಉತ್ತರದಕಡೆ ನೋಡುವುದನ್ನು ಬಿಟ್ಟು ಪಶ್ಚಿಮದ ಕಡೆ ನೋಡಲು ಆರಂಭಿಸಿತು.ವಸಾಹತೀಕರಣಕ್ಕೆ ಮೊದಲು ಒಳಪಟ್ಟ ಕರಾವಳಿ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ಕನ್ನಡದ ಮೊದಲ ಕಾದಂಬರಿಗಳು ಸಹಜವಾಗಿ ಕಾಣಿಸಿಕೊಂಡವು. ಬಿ.ಎಂ.ಶ್ರೀಕಂಠಯ್ಯನವರು ಅನುವಾದಿಸಿಕೊಟ್ಟ ಇಂಗ್ಲೀಷ್ ಗೀತೆಗಳು ಕನ್ನಡ ನವೋದಯಕಾವ್ಯಕ್ಕೆ ನಾಂದಿ ಹಾಡಿತು. ಬಿ. ಎಂ.ಶ್ರೀ ಅವರು ‘ಅವಳ ತೊಡವೆ ಇವಳಿಗಿಟ್ಟು” ಎಂದಾಗ ಅವರ ಮುಂದೆಇದ್ದ ಚೆಲುವೆ ಪಶ್ಚಿಮದವಳು. ಮುಂದೆ ಪಶ್ಚಿಮದ ಪ್ರಭಾವವನ್ನು ಅರಗಿಸಿಕೊಂಡು ಹೊಸಗನ್ನಡ ಸಾಹಿತ್ಯ ವಿಫುಲವಾಗಿ ಬೆಳೆಯಿತು.ಕನ್ನಡ ನವ್ಯಕಾವ್ಯ ಮತ್ತೆ ಪಶ್ಚಿಮದ ಅಸ್ತಿತ್ವವಾದವೇ ಮೊದಲಾದ ಬಗೆ ಬಗೆಯಚಿಂತನಾ ಕ್ರಮಗಳಿಂದ ಪ್ರೇರಣೆ ಪಡೆಯಿತು. ನವ್ಯದ ಆನಂತರ ಬಂದ ಬಂಡಾಯ-ದಲಿತ ಸಾಹಿತ್ಯವು ಅಂಬೇಡ್ಕರ್-ಮಾರ್ಕ್ಸ್-ಲೋಹಿಯಾ ವಾದಗಳಿಗಿಂದ ಪ್ರಭಾವಿತಗೊಂಡಿತು. ಹೀಗೆ ಕನ್ನಡವುಉತ್ತರ ಮತ್ತು ಪಶ್ಚಿಮದಿಂದ ಪ್ರೇರಣೆ ಪಡೆದು ಬೆಳೆದಿದೆ. ಹಾಗೆ ಬೆಳೆದಾಗ ಅದುತನ್ನ ಸ್ವಂತಿಕೆಯನ್ನು ಬಿಟ್ಟುಕೊಡದಿರುವುದುಅದರ ಹೆಚ್ಚುಗಾರಿಕೆ. ಆದರೆಉತ್ತರ ಮತ್ತು ಪಶ್ಚಿಮದ ಕಡೆ ನೋಡಿದಅದುಯಾಕೆದಕ್ಷಿಣ ಮತ್ತು ಪೂರ್ವದಕಡೆಗೆಯಾಕೆ ಮುಖ ಮಾಡಿಲ್ಲ? ಅಥವಾ ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಹಾಗೆ ಮಾಡಬಾರದೇಕೆ? ಹೀಗೆ ಮಾಡದ್ದರಿಂದಅದಕ್ಕಾದ ನಷ್ಟ ಎಷ್ಟು? ಕನ್ನಡವು ದಕ್ಷಿಣ ಮತ್ತು ಪೂರ್ವದಿಂದ ಪ್ರೇರಣೆ ಪಡೆಯಲು ಸಾಧ್ಯವುಂಟೇ?ಇಂಥ ಪ್ರೇರಣೆಗಳು ಕನ್ನಡವನ್ನುಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆಸಲಾರವೇ? ಶಿಷ್ಯವೇತನವೊಂದರ ಸಹಾಯದಿಂದ ನಾನು ಪೂರ್ವದಕಡೆಒಂದೆರೆಡು ವರ್ಷಗಳ ಹಿಂದೆ ಪಯಣ ಬೆಳೆಸಿದ್ದೆ.ಟೋಕಿಯೋದಲ್ಲಿ ಇಳಿದು ಅಲ್ಲಿಂದಉತ್ತರಕ್ಕೆ ಸುಮಾರು 300 ಕಿ.ಮಿ. ದೂರ ಪ್ರಯಾಣ ಬೆಳೆಸಿ ಹಾಯಚಿನೆ ಎಂಬ ಪರ್ವತದ ತಪ್ಪಲಲ್ಲಿ ಮೂರು ತಿಂಗಳ ಕಾಲ ಬದುಕಲು ನಿರ್ಧರಿಸಿದ್ದೆ. ನಮಗೆಲ್ಲ ಹಿಮಾಲಯ ಪರ್ವತವಿದ್ದ ಹಾಗೆ ಜಪಾನೀಯರಿಗೆ ಹಾಯಚಿನೆ ಪರ್ವತ. ಆ ಪರ್ವತದತುತ್ತತುದಿಯಲ್ಲಿ ನೀರಿನ ಹೊಂಡವೊಂದಿದ್ದು, ಅದುಅತ್ಯಂತ ಪವಿತ್ರ ಮಾತ್ರವಲ್ಲ, ಅಲ್ಲಿ ಆಗಲೇ ಸತ್ತ ಹಿರಿಯರ ಆತ್ಮಗಳು ‘ಕಮಿ’ಯರೂಪದಲ್ಲಿ ವಾಸಿಸುತ್ತವೆ. ಕಮಿಗಳು ಸತ್ತವರ ಆತ್ಮಗಳೂ ಹೌದು, ದೈವಗಳೂ ಹೌದು, ಜೊತೆಗೆಊರಿಗೆ ಮಳೆ, ಬೆಳೆ ತಂದುಕೊಟ್ಟುಜನರ ರೋಗಗಳನ್ನು ದೂರ ಮಾಡುವರಕ್ಷಕರೂ ಹೌದು.ಕರಾವಳಿ ಕನರ್ಾಟಕದ ಭೂತಾರಾಧನೆಯನ್ನು ಕಮಿಗಳ ಆರಾಧನೆಯಜೊತೆಗೆ ಸುಲಭವಾಗಿ ಹೋಲಿಸಬಹುದು.ಈ ಹಾಯಚಿನೆಪರ್ವತದ ಬುಡದಲ್ಲಿರುವತಾಕೆ ಎಂಬ ಹಳ್ಳಿಯಲ್ಲಿ ನನಗೆ ಜಪಾನೀಯರಉತ್ಪತ್ತಿಯನ್ನು ಹೇಳುವ ‘ಕೊಜಿಕಿ’ ಎಂಬ ಮಹಾಕಾವ್ಯದ ಕೆಲವು ಭಾಗಗಳನ್ನು ಕೇಳುವ ಮತ್ತುಅದರ ಕೆಲವು ಭಾಗಗಳನ್ನು ಅಭಿನಯಿಸಿ ತೋರಿಸುವ ‘ಕಾಗುರಾ’ ಎಂಬ ನೃತ್ಯ ಪ್ರಕಾರವನ್ನು ನೋಡುವ ಸದವಕಾಶಒದಗಿಬಂದಿತ್ತು.ಆ ಕೊಜಿಕಿಕಾವ್ಯದಕತಾ ನಾಯಕರುಇಜನಾಮಿ ಮತ್ತುಇಜನಾಗಿ ಎಂಬ ದಂಪತಿಗಳು.ಈ ದಂಪತಿಗಳಿಂದ ದಿನ ಬೆಳಗಾಗುವುದರೊಳಗಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಮನುಷ್ಯರು ಹುಟ್ಟಿದರುಎಂದುಕೊಜಕಿ ಹೇಳುತ್ತದೆ.ಕಾವ್ಯ ಬೆಳೆಯು ತ್ತಿದ್ದಂತೆ, ಅದರ ವಿವರಣೆಗಳು ದಟ್ಟವಾಗುತ್ತಿರುವಂತೆ ಇಜನಾಮಿ ಮತ್ತು ಇಜನಾಗಿಯರು ಜಿಗಣೆ ದಂಪತಿಗಳೆಂಬುದು ಖಚಿತವಾಗತೊಡಗಿತು.ನನ್ನ ಜೊತೆಗೆ ಅನುವಾದಕಿಯಾಗಿ ಸಹಕರಿಸುತ್ತಿದ್ದ ಮಿನಕವ ಅದನ್ನು ಧೃಢ ಪಡಿಸಿದಳು.ಎಲುಬಿಲ್ಲ, ರಕ್ತವಿಲ್ಲ, ಬಾಯಿಯಿಲ್ಲ, ಕಣ್ಣಿಲ್ಲ, ಕಾಲಿಲ್ಲ, ಕೈಯಿಲ್ಲ, ಆದರೆಜೀವವಿದೆ.ಕ್ಷಣಮಾತ್ರದಲ್ಲಿ ಇದ್ದಕ್ಕಿದ್ದಂತೆ ಸಹಸ್ರ ಸಂಖ್ಯೆಯಲ್ಲಿ ಸೃಷ್ಟಿಯಾಗಿಬಿಡುವ ಈ ಜಿಗಣೆಗಳನ್ನು ನಾನು ಹುಟ್ಟಿ ಬೆಳೆದ ಬಂಟಮಲೆ, ಎಳವೆಯಲ್ಲಿ ಓಡಾಡಿದಕರಿಮಲೆ, ಮೀನು ಹಿಡಿಯತ್ತಿದ್ದಗೋಣಗುಂಡಿ (ಪಶ್ಚಿಮ ಘಟ್ಟದ ಭಾಗಗಳು) ಗಳಲ್ಲಿ ಹೇರಳವಾಗಿ ಕಂಡಿದ್ದೇನೆ. ಅವು ವಾಸನೆ ಹಿಡಿದು ಹಿಂಬಾಲಿಸುತ್ತವೆ, ಗೊತ್ತಾಗದ ಹಾಗೆ ಮೈಮೇಲೇರುತ್ತವೆ. ಹಾಗೆ ನೋಡಿದರೆ ನಾನು ಬೆಳೆದದ್ದೇ ಜಿಗಣೆಗಳ ಜೊತೆಗೆ. ಬೇಸಗೆಯಲ್ಲಿ ಅವು ಕಾಣಿಸುವುದೇಇಲ್ಲ. ಆದರೆಒಂದು ಮಳೆ ಬಿದ್ದರೆ ಸಾಕು, ಮರುದಿನ ಸಹಸ್ರ ಸಂಖ್ಯೆಯಲ್ಲಿ ತರಗೆಲೆಗಳ ಅಡಿಯಿಂದಇದ್ದಕ್ಕಿದ್ದಂತೆ ಹುಟ್ಟಿಕೊಳ್ಳುತ್ತವೆ. ಆಕಾರಇದ್ದರೂ, ಇಲ್ಲದಂತಿರುವ, ಜೀವವವಿದ್ದರೂ, ಜೀವಿಗಳ ಯಾವಗುಣ ಲಕ್ಷಣವೂಇಲ್ಲದಿರುವ ಈ ಜಿಗಣೆಗಳೇ ನಮ್ಮ ಪೂರ್ವಜರು ಎಂಬ ಜಪಾನೀಯರ ನಂಬಿಕೆ ನನಗೆ ‘ ನಾವೆಲ್ಲಆಡಂ ಮತ್ತುಈವ್’ ಎಂಬ ದೇವ ದಂಪತಿಗಳಿಂದ ಹುಟ್ಟಿದೆವು’ ಎಂಬ ಪಾಶ್ಚಿಮಾತ್ಯ ಚಿಂತನಾಕ್ರಮದಿಂದತುಂಬ ಬೇರೆಯಾಗಿಕಂಡದ್ದಲ್ಲದೆ ಹೆಚ್ಚು ಆಪ್ತವಾಗಿಯೂಕಂಡಿತು. ಸ್ವರ್ಗದಿಂದದೂರವಾಗಿ, ಜಿಗಣೆಗಳಿಗೆ ಹತ್ತಿರವಾಗಿ ಬೆಳೆದ ನನಗೆ ಕೊಜಿಕಿಕಾವ್ಯವನ್ನುಅರ್ಥ ಮಾಡಿಕೊಳ್ಳುವುದು ಸುಲಭ ಅನಿಸಿತು. ನಮ್ಮಜನಪದ ಕಾವ್ಯಗಳ ಕೆಲವು ಭಾಗಗಳು ವಾಷರ್ಿಕ ಜಾತ್ರೆಗಳಲ್ಲಿ ಪುನರಭಿನಯಗೊಂಡು ನವ ನವೀನವಾಗಿ ಬದುಕುಳಿಯುತ್ತವೆ. ಕೊಜಿಕಿಕಾವ್ಯದ ಕೆಲವು ಭಾಗಗಳು ಕೂಡಾ ಹಾಯಚಿನೆ ಪರ್ವತದ ಬುಡದಲ್ಲಿಕಾಗುರಾ ಎಂಬ ಹೆಸರಿನರಂಗರೂಪವಾಗಿ ಕಾಣಿಸಿಕೊಳ್ಳುತ್ತದೆ.ಯಕ್ಷಗಾನದಲ್ಲಿ ಹೇಗೆ ತೆಂಕು -ಬಡಗು ಎಂಬ ಪ್ರಾದೇಶಿಕ ರೂಪಗಳು ಕಾಲಾಂತರದಲ್ಲಿ ಕಾಣಿಸಿಕೊಂಡವೋ ಅದೇರೀತಿಕಾಗುರಾದಲ್ಲಿಯೂ ಹಾಯಚಿನೆಕಾಗುರಾ, ತಾಕೆಕಾಗುರಾ, ಒತ್ಸುಗುನಾಯ್ಕಾಗುರಾ ,ಚಿಚಿಬುಕಾಗುರಾ ಮತ್ತಿತರ ಪ್ರಾದೇಶಿಕ ರೂಪಗಳಿವೆ. ನಾನು ಹಾಯಚಿನೆ ಪರ್ವತದ ಬುಡದ ಹಳ್ಳಿಯಲ್ಲಿ ಇಡೀರಾತ್ರಿ ‘ಹಾಯಚಿನೆಕಾಗುರಾ’ ಪ್ರದರ್ಶನವನ್ನು ನೋಡಿದ್ದೆ. ನಾನು ನೋಡಿದ ಆ ರಾತ್ರಿಯ ಪ್ರಸಂಗವನ್ನು ‘ಕೊಜಿಕಿ ಮಹಾಕಾವ್ಯದಿಂದ ಆಯ್ದುಕೊಳ್ಳಲಾಗಿತ್ತು. ಆ ಪ್ರಸಂಗದ ಪ್ರಕಾರಜಗತ್ತಿಗೆ ಬೆಳಕು ನೀಡುವ ‘ಅಮತೆರಸು’ ಎಂಬ ಸೂರ್ಯದೇವತೆಗೆ (ಜಪಾನೀಯರ ಪ್ರಕಾರ ಸೂರ್ಯದೇವತೆ ಹೆಣ್ಣು) ಒಮ್ಮೆ ಬದುಕು ಬೇಸರವಾಗುತ್ತದೆ. ಆಕೆ ಗುಹೆಯೊಳಕ್ಕೆ ನುಗ್ಗಿ ಮಲಗಿ ಬಿಡುತ್ತಾಳೆ.ಲೋಕವೆಲ್ಲಕತ್ತಲಾಗುತ್ತದೆ.ಆಗ ಆಕೆಯ ಬೇಸರವನ್ನು ಕಳೆಯಲು ಬಗೆ ಬಗೆಯ ಜಿಗಣೆಗಳ ಜೊತೆಗೆ ಪ್ರಕೃತಿಯ ವಿಭಿನ್ನ ಶಕ್ತಿಗಳು ಬೇರೆ ಬೇರೆ ವೇಷ ಧರಿಸಿ ಚಿತ್ರ ವಿಚಿತ್ರವಾಗಿ ನರ್ತಿಸುತ್ತವೆ. ಈ ನರ್ತನಗಳು ಕೊನೆಗೂ ಅಮತೆರಸುವಿನ ಬೇಸರ ಕಳೆಯುತ್ತಿವೆ. ಆಕೆಯು ಮುಖದಲ್ಲಿ ಮಂದಹಾಸ ಮೂಡುತ್ತದೆ.ಆಕೆ ಗುಹೆಯಿಂದ ಹೊರಬರುತ್ತಾಳೆ.ಲೋಕಕ್ಕೆ ಬೆಳಕು ಮೂಡುತ್ತದೆ.ರಂಗಸ್ಥಳದಎಲ್ಲ ಪಾತ್ರಗಳೊಡನೆ ತಾನೂ ನತರ್ಿಸುತ್ತಾಳೆ. ಚಿತ್ರ 1: ಅಮತೆರಸು ಗುಹೆಯಿಂದ ಹೊರಬರುತ್ತಿರುವುದು. ಚಿತ್ರ 2: ಅಮತೆರಸು ನರ್ತಿಸುತ್ತಿರುವುದು. ಸೂರ್ಯನನ್ನುಗಂಡಾಗಿ ಕಲ್ಪಿಸಿಕೊಂಡ ನಮ್ಮ ಚಿಂತನೆಗಳಿಗೆ ವಿರುದ್ಧವಾಗಿ ಜಪಾನೀಯರು ಸೂರ್ಯನನ್ನು ಹೆಣ್ಣಾಗಿ ಕಲ್ಪಿಸಿಕೊಂಡದ್ದು ನನಗೂನು ಇಷ್ಟವಾಯಿತು. ಎಳವೆಯಲ್ಲಿ ಕರೆದೆಬ್ಬಿಸಿ ಬೆಳಕು ಕಾಣಿಸುತ್ತಲಿದ್ದತಾಯಿ, ಈಗ ನಾನೇಳುವ ಮೊದಲೇಎದ್ದು ಬೆಳಗಿನ ಸುದ್ಧಿ ಸಾರುವ ಪತ್ನಿಇವರೆಲ್ಲ ಹೆಂಗುಸರೇತಾನೇ? ಪಶ್ಚಿಮದ ಪುರುಷಕೇಂದ್ರಿತ ಯೋಚನಾಕ್ರಮಗಳನ್ನು ಭಂಗಗೊಳಿಸಿಕೊಳ್ಳಲು ಪೂರ್ವದಕಡೆ ಹೊರಳಿಕೊಳ್ಳುವುದರಿಂದ ಕನ್ನಡಕ್ಕೆ ಲಾಭವಿದೆ.]]>

‍ಲೇಖಕರು G

June 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಗಿಫ್ಟ್’ ಕೊಡ್ತಾರೆ ಹುಷಾರ್..!!

‘ಗಿಫ್ಟ್’ ಕೊಡ್ತಾರೆ ಹುಷಾರ್..!!

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಮಕ್ಕಳ ಹಕ್ಕಿನ ಪಾಠಗಳು

ಮಕ್ಕಳ ಹಕ್ಕಿನ ಪಾಠಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್...

ಅಂಗಡಿಗಳು ಊರಿನಲ್ಲಿ ಅರಳಿ ಹೊರಳಿದ್ದು

ಅಂಗಡಿಗಳು ಊರಿನಲ್ಲಿ ಅರಳಿ ಹೊರಳಿದ್ದು

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ,...

೧ ಪ್ರತಿಕ್ರಿಯೆ

  1. ಅಶೋಕವರ್ಧನ ಜಿ.ಎನ್

    ಅಂದ್ರೇ ನಮ್ಮ ತರಣಿ ತರುಣಿ ಎಂದ ಹಾಗಾಯ್ತು, ಮೀರಾಳ ಅಕ್ಕ ಸಮೀರ ಇರಬಹುದು. ಅದ್ಕೇ ನಮ್ಮಪಕ್ಕದ ಮನೆ ಹುಡುಗಿ ಅರುಣ. ಇನ್ನು ಜಿಗಣೆಗಳನ್ನು ಯಃಕಶ್ಚಿತ್ ಮಾಡುವ ಬದಲು ಮಂಗನಿಗೆ ಸಮಾನವಾಗಿ ನೋಡಬೇಕೋ? ಅಥವಾ ಮಂಗ ನಮ್ಮ ಪೂರ್ವಜ ಎನ್ನುವ ಕಲ್ಪನೆ ಪಶ್ಚಿಮದಿಂದ (ಡಾರ್ವಿನ್) ಬಂದ ಕಾರಣಕ್ಕೆ ಅದನ್ನು ಪೀಠದಿಂದ ಇಳಿಸಿಯೇಬಿಡೋಣವೇ? 🙂
    ತಮಾಷೆ ಪ್ರತ್ಯೇಕ, ಚೆನ್ನಾಗಿದೆ, ಮುಂದುವರಿಯಲಿ.
    ಅಶೋಕವರ್ಧನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: