ಪುಸ್ತಕ ಪ್ರೀತಿಸಲು ಬನ್ನಿ

ಕೇಳು ಜನಮೇಜಯ, ಬುಕ್ ಬಜಾರ್ ಸಾಲಿಗೆ ಈಗ ಮತ್ತೊಂದು ಸೇರ್ಪಡೆ- ‘ಪುಸ್ತಕ ಪ್ರೀತಿ’. ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಆರಂಭವಾಗಿರುವ ಈ ಬ್ಲಾಗ್ ಪುಸ್ತಕಕ್ಕೆ ಸಂಭಂದಿಸಿದಂತೆ ಒನ್ ಸ್ಟಾಪ್ ಶಾಪ್ ಆಗುವ ಕನಸು ಹೊಂದಿದೆ. ಪುಸ್ತಕದ ಬಗ್ಗೆ ಮಾಹಿತಿ, ವಿಮರ್ಶೆ ನೀಡುವುದೇ ಅಲ್ಲದೆ ರಾಜ್ಯಾದ್ಯಂತ ತನ್ನದೇ ಮಾರಾಟ ಜಾಲವನ್ನು ಹೊಂದುವ ಯೋಚನೆ ಇದೆ. ಪುಸ್ತಕವೆಂದರೆ ಪುಸ್ತಕವಲ್ಲ- ಅರಿವಿನ ಗೂಡು ಎಂಬ ಆಶಯದಲ್ಲಿ ನಂಬಿಕೆ ಹೊಂದಿರುವ ಈ ಬ್ಲಾಗ್ ಅಚ್ಚುಕಟ್ಟಾಗಿ ಟೇಕ್ ಆಫ್ ಆಗಿದೆ. ಈ ಬ್ಲಾಗ್ ‘ಚಿಂತನ’ ಸಂಸ್ಥೆಯ ಹಲವು ಯೋಜನೆಗಳಲ್ಲಿ ಒಂದು. 

ನೀವು ಪುಸ್ತಕ ಪ್ರೀತಿಸುತ್ತೀರಾ? ಪುಸ್ತಕ ಮತ್ತು ಅದರ ಪ್ರೀತಿಯನ್ನು ಹಂಚುವ ಆಸೆ ಹೊತ್ತವರ ‘ಒನ್ ಸ್ಟಾಪ್ ಶಾಪ್‘ ಇದು. ಇತ್ತೀಚಿಗೆ ಪ್ರಕಟವಾದ, ಪುಸ್ತಕಗಳ ಪರಿಚಯ, ವಿಮರ್ಶೆ ಇಲ್ಲಿ ಸಿಗುವಂತೆ ಮಾಡುವುದು ನಮ್ಮ ಆಶಯ. ಇದು, ನಮ್ಮ ಪತ್ರಿಕೆಗಳಲ್ಲಿ ಬರುವ ಪುಸ್ತಕ ಪರಿಚಯ-ವಿಮರ್ಶೆ ಯ ಡೈಜೆಸ್ಟ್ ಸಹ. ನೀವು ಓದಿದ, ಮೆಚ್ಚಿದ, ಎಲ್ಲರೂ ಓದಲೇಬೇಕೆಂದು ನೀವು ಬಯಸುವ ಪುಸ್ತಕದ ಬಗ್ಗೆ ಬರೆಯಿರಿ. ನಿಮಗೆ ಸಿಗದ ಪುಸ್ತಕ ಎಲ್ಲಿ ಸಿಗಬಹುದು ಎಂಬ ಬಗ್ಗೆ ಪ್ರಶ್ನೆ ಕೇಳಿ. ನೀವು ಲೇಖಕರು ಅಥವಾ ಪ್ರಕಾಶಕರಾಗಿದ್ದರೆ ನಿಮ್ಮ ಪುಸ್ತಕಗಳ ಮಾಹಿತಿ ಕಳಿಸಿ. ಪುಸ್ತಕದ ಎಲ್ಲಾ ಮಗ್ಗುಲುಗಳನ್ನು ಮುಟ್ಟುವ ನಮ್ಮ ಆಶಯದಲ್ಲಿ ಕೈಜೋಡಿಸಿ.

‍ಲೇಖಕರು avadhi

June 25, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

9 ಪ್ರತಿಕ್ರಿಯೆಗಳು

 1. jogi

  great idea. ಇಂಥದ್ದೊಂದು ಬೇಕಿತ್ತು. ನೀವು ಮಾಡಿದ್ದೀರಿ. ಪುಸ್ತಕ ಪ್ರೀತಿ ಬೆಳೆಯಲಿ. ನಾನು ಓದಿದ್ದರ ಬಗ್ಗೆ ಬರೆಯುತ್ತಿರುತ್ತೇನೆ, ನಾಲ್ಕೇ ಸಾಲಾದರೂ ಸರಿ
  -ಜೋಗಿ

  ಪ್ರತಿಕ್ರಿಯೆ
 2. ಸ್ವಾಮಿ

  ನಿಮ್ಮ ಈ ಪ್ರಯತ್ನ ತುಂಬಾ ಶ್ಲಾಗನಿಯ. ನಿಮ್ಮ ಜೊತೆ ನಾವು ಕೈಜೋಡಿಸುತ್ತೇವೆ. ನಾನು ಓದಿದ ಎಸ್. ಭೈರಪ್ಪನವರ “ತಬ್ಬಲಿಯು ನೀನಾದೆ ಮಗನೆ” ಹೊತ್ತಿಗೆಯ ಬಗ್ಗೆ ಕವನದ ಮೂಲಕ ಬರೆದಿರುವೆ.
  ಇನ್ನು ಹಲವಾರು ಪುಸ್ತಕಗಳ ಬಗ್ಗೆ ಬರೆದು ಕಳಿಸುವೆ.
  ಧನ್ಯವಾದಗಳೊಂದಿಗೆ.
  ಕುಮಾರಸ್ವಾಮಿ (ಕುಕೂಊ)
  ಪುಣೆ
  ** ತಬ್ಬಲಿಯು ನಿನಾದೆ ಮಗನೆ **
  ‘ತಬ್ಬಲಿಯು ನಿನಾದೆ ಮಗನೆ’
  ಎಂಬ ಹೊತ್ತಿಗೆ ಓದಿದೆನಗೆ|
  ಗೋವುಗಳೆಡಗಿನ ಒಲವು ಎನ್ನಲಿ
  ನೂರ್ಮಡಿ ಪುಟಿದೆದ್ದಿತು||
  ‘ಕಾಳಿಂಗ’ಜ್ಜನ ನಿಜ ನಂಬಿಕೆಯು
  ಭಾರತ ಜನತೆಯ ಮನದ ಬಿಂಬವು|
  ಮೊಮ್ಮಗ ‘ಕಲಿಂಗ್’ ನ ಆಧುನಿಕ ನಿಲುವು
  ಸಡಿಲಾದ ನಮ್ಮ ನಂಬಿಕೆಯ ತೋರಿಸುವ ಪಾತ್ರವು||
  ಮೂಖ ಮಾತೆ ‘ತಾಯವ್ವ’ನ ನಡೆತೆಯು
  ಹೇಳುತಿದೆ ಸನಾತನ ನಂಬಿಕೆಯ ಆಳವನು|
  ಅವರಿವರೇಳುವಂತೆ ಗೊಡ್ಡು ಸಂಪ್ರದಾಯವಿದಲ್ಲ
  ತಿಳಿಸುತಿದೆ ಭಾರತ ಜನಗಳ ಬದುಕಿನ ರೀತಿಯು||
  ಭೈರಪ್ಪನ ನಿಜ ಭಾವ ಸೆಲೆಯು
  ಹೊತ್ತಿಗೆಯ ಸಾಲಾಲ್ಲಿ ಬಿತ್ತಿರಲು|
  ಅಕ್ಷರ ರೂಪದಲಿ ಚಿಗುರೊಡೆದಿರಲು
  ಅದನು ಓದಿದ ನಾನು ಮೂಖವಿಸ್ಮಯನು||
  ಗೋತಾಯಿಯಡೆಗಿನ ಪಿರಿದಾದ ಪದಪು
  ಅದುವೆ ಭಾರತಾಂಬೆಯ ನೆಲದ ಸೊಗಸು
  ಮನದಲ್ಲಿ ನೆಚ್ಚು ಇನಿತು ಹೆಚ್ಚು ಗೊಳ್ಳಲು
  ಪ್ರೇರಕವಾಹಿತು ಭೈರಪ್ಪನ ಹೊತ್ತಿಗೆಯು||
  ಗೋವಿನೆಡಗಿನ ನಮ್ಮ ಎಣಿಕೆಯು
  ಪಾಶ್ಚಿಮಾತ್ಯರಂತೆ ಬದಲಾಗುತಿರಲು|
  ಅದರ ತಪ್ಪು ಸರಿಗಳ ಎಚ್ಚರಿಕೆ ನುಡಿಗಳು
  ತರ್ಕವಾಗಿ ಹೊತ್ತಿಗೆಯಲಿ ಮೂಡಿಹವು||
  ಗೋವಿಗಳ ಇಂದಿನ ವ್ಯತೆಯ ಕಥೆಯನ್ನು
  ಕಣ್ಣಿಗೆ ಕಟ್ಟುವ ರೋಚಕ ನಿರೂಪಣೆಯು|
  ‘ತಬ್ಬಲಿಯು ನೀನಾದ ಮಗನೆ ಹೊತ್ತಿಗೆ’ ಸಾರವು
  ನೀವು ಓದಿರೆಂಬ ನನ್ನ ಕೋರಿಕೆಯ ಒತ್ತಾಸೆಯು||
  ಪದಪು=ಭಕ್ತಿ
  ಎಣಿಕೆ=ಭಾವ
  ನೆಚ್ಚು= ನಂಬಿಗೆ, ವಿಶ್ವಾಸ
  ಇನಿತು= ಸ್ವಲ್ಪವಾದರು
  ** ಕುಕೂ…
  ಕುಮಾರಸ್ವಾಮಿ
  ಪುಣೆ

  ಪ್ರತಿಕ್ರಿಯೆ
 3. Yashoda

  poornachandra Tejaswi avaru bareda hechina pustaka odiddene, adare avaru bareda ella pustakagala list eddare mattu aa pustakagalu elli siguttade endu tilisidare olleyadu. avaru bareda pustakagalu thumba estavagide

  ಪ್ರತಿಕ್ರಿಯೆ
 4. Vishalamathi N K

  ಯಶೋದ ಅವರ ಕೇಳಿಕೆಯಂತೆ ಪುಸ್ತಕಪ್ರೀತಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಬರಹಗಳ ಪಟ್ಟಿಯನ್ನು ಶೀರ್ಘದಲ್ಲೇ ಪ್ರಕಟಿಸಲಾಗುವುದು – ವಿಶಾಲಮತಿ

  ಪ್ರತಿಕ್ರಿಯೆ
 5. ಗವಿಸಿದ್ಧ ಹೊಸಮನಿ

  “ಪುಸ್ತಕ ಪ್ರೀತಿ”ಗೆ ಅಭಿನಂದನೆಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: