ಪೋಲಿ ಪಟಾಲಂ ಸಾಹಸಕ್ಕೆ ಚಪ್ಪಾಳೆ

ಈ ಚಿತ್ರ ನೋಡಿದಿರಲ್ಲಾ? ಇಂತಹ ಪೋಲಿ ಸಾಹಸಕ್ಕೆ ಕೈ ಹಾಕಿ ನಮ್ಮನ್ನೆಲ್ಲಾ ಒಂದು ಒಳ್ಳೆ ಟೇಸ್ಟ್ ದಡಕ್ಕೆ ಕರೆದೊಯ್ದದ್ದು ಮೋಟುಗೋಡೆ ಬಳಗ. ಈ ಬಳಗ ಈಗ 2 ಲಕ್ಷ ಹಿಟ್ಸ್ ಗಳನ್ನೂ ಪಡೆದಿದೆ. ಈ ಸಾಹಸಕ್ಕೆ ಹರ್ಷ, ಸಂದೀಪ್ ನಡಹಳ್ಳಿ,  ಶ್ರೀನಿಧಿ ಡಿ ಎಸ್, ಸುಶ್ರುತ ದೊಡ್ಡೇರಿ ಅವರಿಗೆ ಅಭಿನಂದನೆ ಅವರ ಬ್ಲಾಗಿನ ಬಗ್ಗೆ ಅವರೇ ಬರೆದುಕೊಂಡಿರುವ ಕಥೆ ಓದಿ ನಿಮಗಷ್ಟೇ ಅಲ್ಲ; ಇಣುಕಿದಾಗ ಏನು ಕಂಡೀತೆಂಬ ಕುತೂಹಲ ನಮಗೂ ಇದೆ! ಆ ಕುತೂಹಲವನ್ನು ತಣಿಸುವ ಪ್ರಯತ್ನವೇ ಈ ಬ್ಲಾಗು. ನಮ್ಮಲ್ಲಿ ಇತ್ತೀಚಿನ ವರೆಗೂ ಪ್ರೀತಿಯ ಬಗ್ಗೆ ಸಹ ಸಾರ್ವಜನಿಕವಾಗಿ ಮಾತನಾಡಬಾರದು ಎಂಬ ಅಘೋಷಿತ ನಿಯಮವಿತ್ತು. ಪೋಷಕರ ಬಳಿ ತಮ್ಮ ಪ್ರೇಮದ ಬಗ್ಗೆ ಹೇಳಲು ಹೆದರುತ್ತಿದ್ದ ಹುಡುಗ-ಹುಡುಗಿಯರ ಕಾಲವದು. ಆದರೆ ಆ ನಿಯಮ ಮುರಿದಾಗಿದೆ. ನಾವು ಮುಂದುವರೆದಿದ್ದೇವೆ! ಆದರೆ ಕಾಮದ ಬಗ್ಗೆ ಮಾತ್ರ ಈಗಲೂ ನಾವು ಮುಕ್ತವಾಗಿ ಮಾತನಾಡಲೊಲ್ಲೆವು. ನಮ್ಮ ಕಾಲೇಜಿನಲ್ಲಿ ಒಮ್ಮೆ ಒಂದು ಚರ್ಚಾಸ್ಪರ್ಧೆ ಏರ್ಪಡಿಸಿದ್ದರು. ‘ಯುವಕರ ನೈತಿಕತೆಯ ಅಭಿವೃದ್ಧಿಗೆ ಲೈಂಗಿಕ ಶಿಕ್ಷಣದ ಅಗತ್ಯತೆ ಇದೆಯೇ? ಇಲ್ಲವೇ?’ -ಎಂಬುದು ವಿಷಯ. ಸಾಮಾನ್ಯವಾಗಿ ಚರ್ಚಾಸ್ಪರ್ಧೆಗಳಲ್ಲಿ ತುಂಬಾ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರಾದರೂ ಈ ಸ್ಪರ್ಧೆಗೆ ಹೆಸರು ಕೊಟ್ಟಿದ್ದವರು ಕೇವಲ ಇಬ್ಬರು! ಇಬ್ಬರೂ ಹುಡುಗರು. ನಾನೊಬ್ಬ; ಮತ್ತೊಬ್ಬ ನನ್ನ ಗೆಳೆಯ. ನಾವಾದರೂ ಸ್ಪರ್ಧೆಯ ವಿಷಯವನ್ನು declare ಮಾಡಿದ್ದ ಆ ಲೆಕ್ಚರರ್ರಿಗೆ ಬೇಜಾರಾಗಬಾರದು ಎಂಬ ದೃಷ್ಟಿಯಿಂದ ಸೇರಿದ್ದವರು! ಮಾತನಾಡಲಿಕ್ಕಂತೂ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಾಜಕುಮಾರನೆದುರು ಪ್ರೇಮ ನಿವೇದನೆಗೆ ನಿಂತ ರಾಜಕುವರಿಯಂತೆ, ಪೂರ್ತಿ ನೆಲವನ್ನೇ ನೋಡುತ್ತಾ, ಕತ್ತೆತ್ತದೇ, ಒಂದೆರಡು ಮಾತಾಡಿ ಮುಗಿಸುವಷ್ಟರಲ್ಲಿ ಸಾಕುಬೇಕಾಗಿತ್ತು! ಪೋಲೀ ಜೋಕುಗಳು ಸಮಾನ ವಯಸ್ಕ ಗೆಳೆಯರ/ಗೆಳತಿಯರ ನಡುವೆ ಎಸ್ಸೆಮ್ಮೆಸ್ಸಾಗಿ ಓಡಾಡುತ್ತವೆಯಾದರೂ ಅದೇ ಜೋಕುಗಳು ಹುಡುಗರ ಮೊಬೈಲಿನಿಂದ ಹುಡುಗಿಯರ ಮೊಬೈಲಿಗಾಗಲೀ ಹುಡುಗಿಯರ ಮೊಬೈಲಿನಿಂದ ಹುಡುಗರ ಮೊಬೈಲಿಗಾಗಲೀ ಹರಿದಾಡುವುದೇ ಇಲ್ಲ. ಹುಡುಗರು ಹುಡುಗರ ಜೊತೆ ಮಾತಿಗೆ ಕುಳಿತಾಗ ಅದೆಷ್ಟೋ ಕೆಟ್ಟಾಕೊಳಕ ಜೋಕುಗಳನ್ನು, double meaning ಜೋಕುಗಳನ್ನು ಆಡಿಕೊಂಡು ನಕ್ಕಿರುತ್ತೇವೆ. ಆದರೆ ಅವನ್ನು ನಾವು publicನಲ್ಲಿ ಆಡುವಂತಿಲ್ಲ. ಅಂತಹ ಅನೇಕ ಜೋಕುಗಳು ನಿಮಗೆ ಈ ಬ್ಲಾಗಿನಲ್ಲಿ ಸಿಗುತ್ತವೆ. ಹಾಗಂತ ಇದೇನು ಕೇವಲ ಅಶ್ಲೀಲ ಜೋಕುಗಳ ತಾಣವಲ್ಲ. ಅಶ್ಲೀಲ ಎಂಬ ಪದವೇ ಒಂಥರಾ ಅಶ್ಲೀಲ ಕಣ್ರೀ. ಇಷ್ಟಕ್ಕೂ ಯಾವುದು ಅಶ್ಲೀಲ? ಬಟ್ಟೆ ಬಿಚ್ಚಿದರೆ ಅಶ್ಲೀಲ ಅಂತಲಾ? ಎಷ್ಟು ಬಿಚ್ಚಿದರೆ?? ಮಲ್ಲಿಕಾ ಶೆರಾವತ್‍ನಷ್ಟು? ಅಶ್ಲೀಲತೆಯ ಪರಿಧಿ ಯಾವುದು? ಯಾವುದನ್ನು ಬರೆಯಬಹುದು, ಯಾವುದನ್ನು ಬರೆಯಬಾರದು? ಬರೆದರೆ ಅದಕ್ಕೆ ಪ್ರತಿಕ್ರಿಯೆ ಹೇಗಿರಬಹುದು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಈ ಬ್ಲಾಗನ್ನು ಓಪನ್ನು ಮಾಡುತ್ತಿದ್ದೇವೆ. ಕಾಮ ಬರೆಯಬಾರದ ವಿಷಯವೇನಲ್ಲ. ಕನ್ನಡದಲ್ಲಿ ಜನ್ನ, ಪಂಪರಂತಹ ಆದಿಕವಿಗಳಿಂದ ಹಿಡಿದು ನವ್ಯಕವಿಗಳವರೆಗೆ ಎಲ್ಲರೂ ಕಾಮದ ಬಗ್ಗೆ, ಶೃಂಗಾರದ ಬಗ್ಗೆ ಬರೆದಿದ್ದಾರೆ. ಪುರುಸೊತ್ತಾದಾಗಲೆಲ್ಲ ಹೆಣ್ಣಿನ ಮೊಲೆಯ ಸೆಳಕಿನ ಬಗ್ಗೆ, ಸೊಂಟದ ಬಳುಕಿನ ಬಗ್ಗೆ, ನಿತಂಬದ ಝಳಕಿನ ಬಗ್ಗೆ ತಮ್ಮ ಕಾವ್ಯದಲ್ಲಿ ಬಳಸಿದ್ದಾರೆ. ಶೃಂಗಾರ ರಸಕಾವ್ಯಗಳಿಗೇನೂ ಕೊರತೆಯಿಲ್ಲ ನಮ್ಮಲ್ಲಿ. ನಿನ್ನೆ ತಾನೇ ರವಿ ಬೆಳಗೆರೆ ಬರೆದದ್ದು ಓದುತ್ತಿದ್ದೆ: “ಹೇಳಿದಷ್ಟೂ ಮುಗಿಯುವುದಿಲ್ಲ ಕಾಮದ ಬಗ್ಗೆ; ಅದಕ್ಕೇ ಅದನ್ನು ‘ಕೇಳಿ’ ಅನ್ನುವುದು!” ಅಂತ. ಹಾಗೆ ಅವರು ಬರೆದ ಕಾವ್ಯಸಾಲುಗಳ ಬಗ್ಗೆ ಸಹ ಇಲ್ಲಿ ಮಾತಾಡೋಣ. ದಿನನಿತ್ಯವೂ ನಮ್ಮ ಕಣ್ಣೆದುರೇ ನಡೆಯುವ ಅದೆಷ್ಟೋ ಘಟನೆಗಳಲ್ಲಿ, ಆಡುವ ಮಾತುಗಳಲ್ಲಿ ದ್ವಂದ್ವಾರ್ಥಗಳಿರುತ್ತವೆ. ‘ಹೀಗೆ’ ಹೇಳಿದ್ದನ್ನೇ ‘ಹಾಗೆ’ ಸಹ ಅರ್ಥ ಮಾಡಿಕೊಳ್ಳಬಹುದು. ಅವನ್ನೇ ನೆನಪಿಟ್ಟುಕೊಂಡು ಒಂದೆಡೆ ಬರೆದಿಟ್ಟರೆ ಮುಂದೆಂದೋ ಬಿಡುವಿದ್ದಾಗ, mood out ಆಗಿದ್ದಾಗ ಓದಿಕೊಂಡು ನಕ್ಕು, ಮನಸ್ಸನ್ನು ಸರಿ ಮಾಡಿಕೊಳ್ಳಬಹುದು. ಖಿನ್ನತೆಗೆ ನಗುವಿನಷ್ಟು ಒಳ್ಳೆಯ ಔಷಧ ಬೇರೆ ಯಾವುದಿದೆ ಹೇಳಿ? ಅಶ್ಲೀಲತೆಯೆಂಬ ಪರಿಧಿಯನ್ನು ಸ್ವಲ್ಪವೇ ದಾಟಿ, ಆ ಮೋಟುಗೋಡೆಯನ್ನು ಹತ್ತಿ, ಆಚೆ ಇಣುಕಿ ನೋಡಲಿದ್ದೇವೆ. ಕಂಡದ್ದನ್ನು ಕಂಡಹಾಗೆ, ಆದರೂ ತುಂಬಾ ಅಶ್ಲೀಲವಾಗದ ಹಾಗೆ present ಮಾಡಲಿಕ್ಕೆ ಆದಷ್ಟೂ ಪ್ರಯತ್ನ ಮಾಡುತ್ತೇವೆ. ಈ ಬ್ಲಾಗಿಗೆ ನಾವು ಐವರು contributors ಇದ್ದೇವೆ: ನಾನು- ಸುಶ್ರುತ, ಶ್ರೀನಿಧಿ, ಸಂದೀಪ ನಡಹಳ್ಳಿ (Alpazna), ಹರ್ಷ ಮತ್ತು ಪರಿಸರಪ್ರೇಮಿ ಅರುಣ್. ಬರೆದ ಜೋಕು, ಲೇಖನ, ಅಂತಃಪುರಗೀತೆ…. ಇತ್ಯಾದಿಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ಬಯಸುತ್ತೇವೆ. ನಮ್ಮ ಪ್ರಯತ್ನವನ್ನು ನೀವು ಪ್ರೋತ್ಸಾಹಿಸುತ್ತೀರೋ ಅಥವಾ ‘ಛೀ!’ ಅನ್ನುತ್ತೀರೋ ಎಂಬ ಅನುಮಾನದಲ್ಲೇ, -ನಾವು!]]>

‍ಲೇಖಕರು avadhi

August 23, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

2 ಪ್ರತಿಕ್ರಿಯೆಗಳು

 1. ಶ್ರೀವತ್ಸ ಜೋಶಿ

  * ಮೋಟುಗೋಡೆ ಕಾದಿರುತ್ತದೆ (ಬಿಸಿಯಾಗಿರುತ್ತದೆ ಎಂದಾದರೂ ಅರ್ಥೈಸಿ, ಅಥವಾ wait ಮಾಡುತ್ತಿರುತ್ತದೆ ಅಂತಾದರೂ ಬಗೆಯಿರಿ :-).
  * ಬಿಸಿ ಕಾವಲಿಯ ಮೇಲೆ ಹಿಟ್ಟು ಬಿದ್ದರೆ ದೋಸೆ. ಮೋಟುಗೋಡೆಯ ಮೇಲೆ ಹಿಟ್ಟು (ಅದೂ ಎರಡು ಲಕ್ಷ!) ಬಿದ್ದರೆ? ಓವರ್ Dose?
  * ಮೋಟುಗೋಡೆ ಈಗ “ಮೋ two ಲಕ್ಷ ಗೋಡೆ”!
  Wall (well) done Sushruta+Srinidhi & Co!

  ಪ್ರತಿಕ್ರಿಯೆ
 2. ಶ್ರೀವತ್ಸ ಜೋಶಿ

  “ಈಗ 2 ಲಕ್ಷ ಹಿಟ್ಸ್ ಗಳನ್ನೂ” ಎಂದು ಬರೆಯುವಾಗ redundancy (double plural) ಆಗುವುದರ ಬಗ್ಗೆ ಇನ್ನೊಂದು ‘ಲಕ್ಷ್ಯ’ ಕೊಡಿ ಮೋಹನಮಹಾಶಯರೇ!
  🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: