ಪ್ರಕಾಶಕರಿಗೊಂದು ತರಬೇತಿ ಶಿಬಿರ ….

ಪುಸ್ತಕೋದ್ಯಮದ ಬಗ್ಗೆ ಆಸಕ್ತಿ ಇದ್ದರೂ, ಆ ಬಗ್ಗೆ ಯಾವುದೇ ತರಬೇತಿ ವ್ಯವಸ್ಥೆ ಪ್ರಸ್ತುತ ಕನ್ನಡ ಪುಸ್ತಕೋದ್ಯಮದಲ್ಲಿಲ್ಲ ಇದನ್ನು ಗಮನಿಸಿರುವ ಕರ್ನಾಟಕ ಪ್ರಕಾಶಕರ ಸಂಘವು , ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಹಕಾರದೊಂದಿಗೆ, ಹೊಸದಾಗಿ ಪುಸ್ತಕೋದ್ಯಮವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವವರಿಗೆ ತರಬೇತಿ ಶಿಬಿರವೊಂದನ್ನು ಅಕ್ಟೋಬರ್  12 ರಂದು ಬೆಂಗಳೂರಿನಲ್ಲಿ ಏರ್ಪಡಿಸಿದೆ.
ಆಸಕ್ತಿಯುಳ್ಳವರು ಸೆಪ್ಟೆಂಬರ್  30ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ .
ಸಂಪರ್ಕ ವಿಳಾಸ : ಕರ್ನಾಟಕ ಪ್ರಕಾಶಕರ ಸಂಘ
53, ಗಾಂಧಿ ಬಜಾರ್ ಮುಖ್ಯ ರಸ್ತೆ , ಬಸವನಗುಡಿ
ಬೆಂಗಳೂರು
ದೂರವಾಣಿ: 26617755 , 26617100

‍ಲೇಖಕರು avadhi

September 24, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

 1. ಅಶೋಕವರ್ಧನ ಜಿ.ಎನ್

  ಈ ಹಿಂದೆ ಕನ್ನಡ ಪುಸ್ತಕ ಪ್ರಾಧಿಕಾರ ಇಂಥದ್ದೇ ಒಂದು ಶಿಬಿರವನ್ನು ಅಂಕೋಲದಲ್ಲಿ ಶ್ರೀ ವಿಷ್ಣು ನಾಯಕ್ ಅವರ ಸಹಯೋಗದಲ್ಲಿ ನಡೆಸಿದ್ದಾಗ ನಾನು ಆಹ್ವಾನಿತನಾಗಿ ಭಾಗವಹಿಸಿದ್ದೆ. ಮತ್ತೂ ಹಿಂದೆ ಡಾ| ರಾಜಕುಮಾರ್ ಎನ್ನುವವರು ಕೆಲವು ಊರು ತಿರುಗಿ ಇಂಥವೇ ಕಮ್ಮಟಗಳನ್ನು ಹೆಚ್ಚುಕಡಿಮೆ ವೈಯಕ್ತಿಕ ನೆಲೆಯಲ್ಲೇ ನಡೆಸಿದ್ದೂ ನನಗೆ ತಿಳಿದಿದೆ. ಅಲ್ಲೆಲ್ಲ ಅಂತಿಮವಾಗಿ ಹೊಲ ಹಸನು ಮಾಡುವ, ಉತ್ತಮ ಬೆಳೆ ತೆಗೆಯುವ ಮಾತು ಬರಲಿಲ್ಲ; ಕೇವಲ ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ಚರ್ಚೆ ನಡೆಯಿತು. ಈಗ ಈ ಪ್ರಕಾಶಕರ ಸಂಘವಾದರೂ ಹೆಚ್ಚಿನದನ್ನು ಸಾಧಿಸುವ ನಿರೀಕ್ಷೆ ನನಗಿಲ್ಲ.
  ಕನ್ನಡ ಪುಸ್ತಕ ಪ್ರಾಧಿಕಾರ ಇದೇ ಅಕ್ಟೋಬರ್ ಸುಮಾರಿಗೆ ಮಂಗಳೂರಿನಲ್ಲಿ ‘ಪುಸ್ತಕ ಮೇಳ’ ನಡೆಸಲು ಭಾರೀ ರಂಗ ವ್ಯವಸ್ಥೆಗೆ ಟೆಂಡರ್ ಕರೆದದ್ದನ್ನು ನೋಡಿದೆ. ಇದರಲ್ಲಿ ಲಕ್ಷಾಂತರ (ಕೋಟಿಯೂ ಇರಬಹುದು) ಹುಡಿ ಹಾರಿಸಿದ ಮೇಲೆ ಸೇರುವ ಪುಸ್ತಕಗಳೇನೇನು ಎಂದು ಯೋಚಿಸಿದರೆ ವಿಷಾದವೊಂದೇ ಉಳಿಯುತ್ತದೆ. ಎಲ್ಲಾ ವಿವಿನಿಲಯಗಳು, ಇಲಾಖೆಗಳು ತಮ್ಮ ಮಾಸಲು, ಗೆದ್ದಲುಹಿಡುಕ ಪುಸ್ತಕಗಳ ಹೊರೆಯೊಡನೆ ಬೀಡುಬಿಟ್ಟು ಕನಿಷ್ಠ ೨೫% ರಿಂದ ೫೦%ರವರೆಗೆ ರಿಯಾಯ್ತೀ ವ್ಯಾಪಾರ ಭಯಂಕರವಾಗಿ ನಡೆಸುತ್ತಾರೆ. ಮತ್ತೆ ಕೆಲವು ತಾಕತ್ತಿನ ಪ್ರಕಾಶನ ಸಂಸ್ಥೆಗಳು ನಾಲ್ಕೆಂಟು ಗುಪ್ತನಾಮಗಳಲ್ಲಿ ಹರಡಿ, ಮೇಳದ ಆಯಕಟ್ಟಿನ ಜಾಗಗಳಲ್ಲೆಲ್ಲಾ ತಮ್ಮ ಪ್ರಕಟಣೆಗಳ ಹೆದ್ದೆರೆಗಳನ್ನು ಎಬ್ಬಿಸಿ ಗಿರಾಕಿಗಳನ್ನು ಕೆಡವಲು ವ್ಯೂಹ ರಚಿಸುತ್ತಾರೆ. ಅಪ್ಪಿ ತಪ್ಪಿ ನುಗ್ಗಿದ ಸಣ್ಣಪುಟ್ಟ ಪ್ರಕಾಶಕರು ಒಂದೋ ಶರಣಾಗಿ ಅಥವಾ ಹತಾಶೆಯಿಂದ ಬಳಲುತ್ತಿರುತ್ತಾರೆ. ಮತ್ತೆ ಚಾಟ್ ಜ್ಯಾಮ್‍ಗಳು, ಅತ್ಯುತ್ತಮ ಟೊಪ್ಪಿ ಹೊಲಿಯುವುದು ಹೇಗೆ, ಹಕ್ಕಿ ಕವಡೆ ಶಾಸ್ತ್ರದವರಂತೂ ಬೇಕೇ ಬೇಕು – ಮೇಳದ ಕೊನೆಯಲ್ಲಿ ‘ಯಶಸ್ಸಿನ ಮಾನಕ’ ಇರುವುದೇ ಇವರ ಕೈಯಲ್ಲಿ.
  ಹಾಯ್ ಕನ್ನಡ ತಾಯ್!
  ಅಶೋಕವರ್ಧನ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: