ಪ್ರಕಾಶ್ ಹೆಗ್ಡೆ punch : ಕಾಮ ಹಾಗಲ್ಲ ಕಣೆ..

– ಪ್ರಕಾಶ್ ಹೆಗ್ಡೆ

ಇಟ್ಟಿಗೆ ಸಿಮೆ೦ಟು

ಸುರುಳಿ..

ನಾನೇನೂ ಪೋಲಿಯಲ್ಲ.. ಹಾಗಂತ ಸಭ್ಯಸ್ಥನೂ ಅಲ್ಲ… ಹೊಸ ಹುಡುಗಿಯೊಬ್ಬಳು ನಮ್ಮ ಆಫೀಸಿಗೆ ಇವತ್ತು ಬಂದಿದ್ದಾಳೆ.. ಅವಳನ್ನು ನೋಡ್ತಾ ಇದ್ದೆ..                     ಕೆನ್ನೆಯ ಮೇಲಿನಿಂದ ಕೂದಲು ಜಾರಿ ಇಳಿದು .. ಕುತ್ತಿಗೆಯ ಬಳಿ ಸುರುಳಿ ಸುತ್ತಿದ್ದು ನೋಡ್ತಾ ಇದ್ದೆ… ಬಹಳ ಚಂದ ಆ ಕೆನ್ನೆಯ ಉಬ್ಬು..! ನೋಡ್ತಾನೇ ಇದ್ದೆ.. ತಟ್ಟನೆ ಅವಳೂ ನೋಡಿದಳು..! ನಾನು ಗಲಿಬಿಲಿಗೊಂಡು ದೃಷ್ಟಿ ಬದಲಿಸಿದೆ.. ಹೆಣ್ಣು ಮಕ್ಕಳಿಗೆ ಯಾರಾದರೂ ತಮ್ಮ ಬೆನ್ನಿನ ಹಿಂದೆ ನೋಡಿದರೂ ಗೊತ್ತಾಗಿ ಬಿಡುತ್ತದಂತೆ…   ಚಂದ ನೋಡುವ ವಯಸ್ಸು.. ಮನಸ್ಸು ಮತ್ತು ಮತ್ತೂ ನೋಡುವ ಆಸೆ… ಆಗಾಗ ಕದ್ದು ಕದ್ದು ನೋಡುತ್ತಿದ್ದೆ… ಆಕೆ ಜವಾನನ್ನು ಕರೆದು ಒಂದು ಚೀಟಿ ಕೊಟ್ಟಳು.. ಆತ ನನಗೆ ತಂದು ಕೊಟ್ಟ.. “ಕದ್ದು ನೋಡುವದೇಕೆ? ಕ್ಯಾಂಟೀನಲ್ಲಿ ಕಾಫೀ ಕುಡಿಯೋಣ ಬನ್ನಿ.. ಖರ್ಚೆಲ್ಲ ನನ್ನದು.. ಹಣ ಮಾತ್ರ ನಿಮ್ಮದು….” ನಾನು ಆಕೆಯನ್ನು ನೋಡಿದೆ.. ಆಕೆಯ ನಗುವೂ ಬಹಳ ಸುಂದರವಾಗಿತ್ತು… ಕೆಲವೊಬ್ಬರು ಹಾಗೇನೆ… ಬಲುಬೇಗ ನಮ್ಮನ್ನು ಆವರಿಸಿಕೊಂಡು ಬಿಡುತ್ತಾರೆ… ಹೇಗೆ? ಏನು? ಪೂರ್ವಾಪರ ವಿಚಾರ ಗೊತ್ತಿಲ್ಲದೆಯೇ ಆಕೆ ತುಂಬಾ ಹತ್ತಿರವಾಗಿಬಿಟ್ಟಳು… ದಿನಾಲೂ ಅವಳ ಕೆನ್ನೆ, ಉಬ್ಬುಗಳ ಮೇಲಿನ ಮುಂಗುರುಳನ್ನು ನೋಡುವದು.. ಆಕೆಯೊಡನೆ ಕಾಫೀ… ಹರಟೆ ತುಂಬಾ ಸೊಗಸಾಗಿರುತ್ತಿತ್ತು… “ನೀವು ನಿಮ್ಮ ಬಗೆಗೆ ಏನೂ ಹೇಳಲೇ ಇಲ್ಲ…” “ನಾನು ಕನ್ನಡಿಗಳದಾರೂ ಹೊರದೇಶದಲ್ಲೇ ಹುಟ್ಟಿದ್ದು.. ಬೆಳೆದದ್ದು.. ಅಪ್ಪ, ಅಮ್ಮ ಇನ್ನೂ ಅಲ್ಲಿಯೇ ಇದ್ದಾರೆ.. ಒಬ್ಬಳೇ ಮಗಳು… ಭಾರತ ನೋಡಬೇಕಿನಿಸಿತು… ಕೆಲಸವೂ ಸಿಕ್ಕಿತು.. ಇಲ್ಲಿಗೆ ಬಂದೆ…”   ಹುಡುಗಿ ತನ್ನ ಬಗೆಗೆ ಹೇಳಿ ನನ್ನೆಡೇಗೆ ಪ್ರಶ್ನಾರ್ಥಕವಾಗಿ ನೋಡಿದಳು.. “ನಾನು ತುಂಬಾ ಖುಷಿ ಮನುಷ್ಯ… ಅಪ್ಪ,ಅಮ್ಮ ಹಳ್ಳಿಯಲ್ಲಿರ್ತಾರೆ.. ಅಪ್ಪ, ಅಮ್ಮನ ಮುದ್ದಿನ ಮಗ…”   ದಿನಗಳು.. ದಿನ ನಿತ್ಯದ ಸಂಗತಿಗಳು ಹೀಗೆಯೇ ಇರುವದಿಲ್ಲವಲ್ಲ… ಬದಲಾಗುತ್ತದೆ.. ಬದಲಾಗುತ್ತಲೇ ಇರುತ್ತದೆ… ಆಫೀಸಿನಲ್ಲಿ ಒಂದು ಟ್ರಿಪ್ ಇಟ್ಟಿದ್ದರು… ಜಂಗಲ್ ರಿಸಾರ್ಟ್… ತುಂಬಾ ಸುಂದರ ತಾಣ… ರಾತ್ರಿ ಪಾರ್ಟಿ ಕೂಡ ಇತ್ತು…   ಎಲ್ಲರೂ ತಮ್ಮ ತಮ್ಮ ಗೆಳೆಯರ ಸಂಗಡ ಹರಟುತ್ತಿದ್ದರು… “ನಾನು … ಅಪರೂಪಕ್ಕೆ ಡ್ರಿಂಕ್ಸ್ ತೆಗೆದು ಕೊಳ್ಳುತ್ತೇನೆ… ನಿಮ್ಮ ಅಭ್ಯಂತರವಿಲ್ಲದಿದ್ದರೆ ಇವತ್ತೂ ಕೂಡ… ಪ್ಲೀಸ್…” ” ಪ್ಲೀಸ್ ಏನೂ ಬೇಡ.. ನನಗೂ ಒಂದು ತನ್ನಿ.. ನನಗೂ ರೂಢಿ ಇದೆ…” ಚಂದದ ಹುಡುಗಿ… ಸ್ವಲ್ಪ ಸ್ವಲ್ಪವಾಗಿ ಏರುತ್ತಿರುವ ನಶೆ… ಸಮಯ .. ಇಲ್ಲೇ ಎಲ್ಲೋ ಒಮ್ಮೆ ನಿಂತು ಹೋಗಬೇಕಿತ್ತು… ಆದರೆ ನಿಲ್ಲಲಿಲ್ಲ…   ” ಹುಡುಗಿ… ನೀವು ಅಪಾರ್ಥ ಮಾಡಿಕೊಳ್ಳದಿದ್ದಲ್ಲಿ ನನಗೆ ಒಂದು ಆಸೆ ಇದೆ… ಒಪ್ಪಿಗೆ ಕೊಟ್ಟರೆ ಕೇಳುತ್ತೇನೆ…” “ಕೇಳಿ.. ಅದಕ್ಕೇನಂತೆ..?” “ಈ ರಾತ್ರಿ ನಿಮ್ಮೊಡನೆ ಕಳೆಯುವಾಸೆ… ಇಬ್ಬರೂ .. ಒಂದಾಗುವಾಸೆ… ಪ್ಲೀಸ್… ಇಲ್ಲ ಅನ್ನಬೇಡಿ..”   “ನನ್ನನ್ನು ನೋಡಿ ಕಾಮಿಸುವ ಆಸೆ ಆಯ್ತಾ? ಅಷ್ಟೇನಾ? ನನ್ನಲ್ಲಿ ಪ್ರೀತಿ ಹುಟ್ಟಲಿಲ್ವಾ?” “ಹುಡುಗಿ.. ನಿನ್ನ ಬಗೆಗೆ ತುಂಬಾ ತುಂಬಾ ಪ್ರೀತಿ ಇದೆ.. ಪ್ರೀತಿ ಇರದಿದ್ದಲ್ಲಿ “ಕಾಮ” ಸಾಧ್ಯನಾ? ನನಗೆ ಈ ಸಮಯಕ್ಕೆ.. ಈ ಸಂದರ್ಭದಲ್ಲಿ ಈ “ಆಸೆ” ಹುಟ್ಟಿತು… ಇಷ್ಟವಿಲ್ಲದಿದ್ದಲ್ಲಿ ಬೇಡ.. ಯಾವುದಕ್ಕೂ ಬಲವಂತ ಇಲ್ಲ…” “ಹುಡುಗಾ… ಕಾಮ ದೈಹಿಕ ಅಗತ್ಯ… ಪ್ರೀತಿ ಮಾನಸಿಕ ಅಗತ್ಯ… ಅಪ್ಪ, ಅಮ್ಮರಿಂದ.. ಗೆಳೆಯರಿಂದ ದೂರವಿರುವ ನನಗೆ ನಿನ್ನ “ಪ್ರೀತಿ” ಬೇಕು… ನನಗೂ ಆಸೆ ಇಲ್ಲ ಅಂತ ಏನಿಲ್ಲ.. ಇದೆ.. ಆದರೆ….”   “ಆದರೆ…. ಏನು?” “ಗಂಡಿನ ಅನುಭವ ನನಗೂ ಇದೆ… ರೂಮಿನ ಕತ್ತಲೆಯಲ್ಲಿ ನಡೆಯುವದು ಕಾಮದಾಟವಲ್ಲ.. ಅದು ಒಂದು ಹೊಡೆದಾಟ.. ಅಲ್ಲಿ ಯಾರೋ ಒಬ್ಬರು ಸೋಲುತ್ತಾರೆ.. ಯಾರೋ ಒಬ್ಬರು ಗೆಲ್ಲುತ್ತಾರೆ..   ಸೋಲು, ಗೆಲುವಿನ ಮನಸ್ಥಿತಿಯನ್ನು.. ಗಂಡು, ಹೆಣ್ಣು ಹೇಗೆ ನಿಭಾಯಿಸುತ್ತಾರೆ ಎನ್ನುವದರ ಮೇಲೆ .. ಮುಂದಿನ ಸಂಬಂಧದ … ಅಳಿವು.. ಉಳಿವು… ಆಲ್ವಾ?   ಹುಡುಗಾ ದಾಂಪತ್ಯವೆಂದರೆ ಇದೇ ತಾನೆ? ದೌರ್ಬಲ್ಯದೊಡನೆಯ.. ಬೇಕು ಬೇಡಗಳೊಡನೆಯ ಅಡ್ಜಸ್ಟಮೆಂಟ್… ಹೊಂದಾಣಿಕೆ..”   ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ…   “ಹುಡುಗಾ.. ನಮ್ಮಿಬ್ಬರ ಇಷ್ಟು ಚಂದದ ಗೆಳೆತನ.. ಸೋಲು , ಗೆಲುವಿನಲ್ಲಿ ಹಳಸುವದು ಬೇಡ.. ಈ ಗೆಳೆತನಕ್ಕೆ ಇನ್ನಷ್ಟು ಸಮಯ ಕೊಡೋಣ… ಅದೃಷ್ಟವಿದ್ದಲ್ಲಿ… ಅವಕಾಶವಿದ್ದಲ್ಲಿ ಅನುಕೂಲವಾದ ಸಮಯ ಸಿಕ್ಕೇ ಸಿಗುತ್ತದೆ…” ನನಗೆ ಬಹಳ ನಿರಾಸೆಯಾಯಿತು… ಅವಳ ಮಾತಿಗೆ ಒಪ್ಪಿಕೊಂಡೆ.. ಮರುದಿನದಿಂದ ಮತ್ತೆ ಅದೇ ಆಫೀಸ್… ಕಾಫಿ ಹರಟೆ.. ಟ್ರಿಪ್ಪಿನ ನಂತರ ನನ್ನ ಆಸೆಗಳ.. ಕನಸುಗಳ ಬಣ್ಣ ಬದಲಾಗಿತ್ತು…

ಮಾತಿನ ಮಧ್ಯದಲ್ಲಿ ನಾನು ಮತ್ತೆ ..ಮತ್ತೆ ..

ನನ್ನ ಬೇಡಿಕೆ ಇಡುತ್ತಿದ್ದೆ… ಆಕೆ ನಗುತ್ತ ಬೇಡವೆನ್ನುತ್ತಿದ್ದಳು…   ನಾನು ಆಕೆಯ ಕೆನ್ನೆಯ ಉಬ್ಬು… ಮುಂಗುರುಳಗಳ ನೋಡುತ್ತಲೇ ಇರುತ್ತಿದ್ದೆ…   ಇಷ್ಟು ಮುಕ್ತವಾಗಿ ಮಾತನಾಡಿದ ಮೇಲೂ … ಸಂಬಂಧ ಮುಂದುವರೆಯುತ್ತಿರುವಾಗ.. ಕಂಡ ಕನಸುಗಳು ನನಸಾಗಲು ಹಾತೊರೆಯುತ್ತಿದ್ದವು… ಆಸೆಗಳನ್ನು ಬಲವಂತವಾಗಿ ಹತ್ತಿಕ್ಕುತ್ತಿದ್ದೆ… ಒಂದು ದಿನ ಆಕೆ ಬರಲಿಲ್ಲ… ಫೋನ್ ಮಾಡಿದೆ ಫೋನ್ ತೆಗೆದುಕೊಳ್ಳಲಿಲ್ಲ..   ಆ ದಿನ ನನಗೆ ಬಹಳ ಬೇಸರದ ದಿನ…   ಮರುದಿನವೂ ಹಾಗೇ ಆಯ್ತು…   ಒಂದು ವಾರ ಕಳೆಯಿತು… ಒಂದು ಅವಳಿಂದ ಎರಡಕ್ಷರದ ಮೇಲ್ ಬಂತು “ಹುಡುಗಾ .. ಹೇಗಿದ್ದೀಯಾ ?….” “ನನ್ನ ಪ್ರೀತಿಯ ಮುಂಗುರುಳೆ… ನಿನ್ನನ್ನು ಎಷ್ಟು ಮಿಸ್ ಮಾಡ್ಕೊಂಡೆ ಗೊತ್ತಿದೆಯಾ? ನೀನಿಲ್ಲದ… ನೀನು ಕಣ್ಣಿಗೆ ಕಾಣದ.. ನಿನ್ನೊಡನೆ ಮಾತನಾಡದ ದಿನಗಳನ್ನು ಕಳೆಯುವದು ಕಷ್ಟ… ಪ್ರೀತಿಯ ..ಸುರುಳಿ ಮುಂಗುರುಳೆ..! ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ… ನೀನಿಲ್ಲದ ಕ್ಷಣಗಳಲ್ಲಿ ನನಗೆ ಮತ್ತಷ್ಟು ಅರಿವಾಯ್ತು… ದಯವಿಟ್ಟು ಇಲ್ಲವೆನ್ನಬೇಡ… ನಮ್ಮಿಬ್ಬರ ಸಂಬಂಧಕ್ಕೆ “ಸಮಯ” ಕೊಟ್ಟಿದ್ದು ಸಾಕು… ನಾವಿಬ್ಬರೂ ಮದುವೆಯಾಗೋಣ…” ಮತ್ತೆ ನಾಲ್ಕಾರು ದಿನಗಳ ಮೌನ… ಯಾವ ಸುದ್ಧಿಯೂ ಇಲ್ಲ.. ಮತ್ತೊಂದು ದಿನ ಒಂದು ಎಸ್ಸೆಮ್ಮೆಸ್ಸ್ ಬಂದಿತು… “ಹುಡುಗಾ… ಅಂದು ನೀನು ನನ್ನನ್ನು.. ನನ್ನ ದೇಹವನ್ನು ಒಮ್ಮೆ ಬಯಸಿದ್ದೆ… ನೆನಪಿದೆಯಾ ?… ಇವತ್ತು ನಮ್ಮ ಮನೆಗೆ ಬರ್ತೀಯಾ? ಕಾಯ್ತಾ ಇರ್ತೀನಿ… ನಿನಗಾಗಿ ನಾನೊಬ್ಬಳೆ…” ವಾಹ್.. !! ನನಗೆ ಹಾರಿ ಕುಣಿಯಬೇಕೆನಿಸಿತು…! ಸ್ವಲ್ಪವೂ ತಡಮಾಡದೆ ಅವಳ ಮನೆಗೆ ಓಡಿದೆ…!! ಬಾಗಿಲು ಸಣ್ಣದಾಗಿ ತೆರೆದಿತ್ತು… ಎದೆಯಲ್ಲಿ ಢವ ಢವ….! ಒಂದು ಎಸ್ಸೆಮ್ಮೆಸ್ ಬಂದಿತು.. ” ಹುಡುಗಾ… ಒಳಗೆ ಬಾ.. ಅಲ್ಲಿ ಟಿಪಾಯಿಮೇಲೆ ಒಂದು ಪತ್ರವಿದೆ ದಯವಿಟ್ಟು ಓದು…” ನಾನು ಲಗುಬಗೆಯಿಂದ ಕೈಗೆತ್ತಿಕೊಂಡೆ… “ಹುಡುಗಾ… ಅಂದು ನೀನು ನನ್ನನ್ನು ಬಯಸಿದ್ದೆ.. ಆ ಆಸೆ ಇಂದು ನನ್ನ ಆಸೆ… ನನಗೂ ನಿನ್ನೊಡನೆ ಸೇರಬೇಕು… ಯಾಕೆಂದರೆ ನನ್ನೊಡನೆ ಸಮಯ ಜಾಸ್ತಿ ಇಲ್ಲ… ಹೋಗುವದೊರಳಗೆ ದಯವಿಟ್ಟು ನನ್ನ .. ಅಂತಿಮ.. ಕೊನೆಯ ಆಸೆಯನ್ನು ನೆರವೇರಿಸು… ಅರ್ಥ ಆಗಲಿಲ್ಲವಾ? ನಾನು ಕ್ಯಾನ್ಸರ್ ರೋಗಿ… ಅತ್ತು.. ಕರೆಯುವದು ಬೇಡ… ಪಾಲಿಗೆ ಬಂದಿದ್ದು ಇಷ್ಟು… ಸ್ವೀಕರಿಸಿದ್ದೇನೆ… “ಕಿಮೋಥೆರೆಪಿ” ಮಾಡಿದ್ದಾರೆ… ಅದರಿಂದ ಪ್ರಯೋಜನವಿಲ್ಲ… ನಿನ್ನ ಅನುಕಂಪವೋ.. ಪ್ರೀತಿಯೋ.., ಪ್ರೇಮವೋ ನನಗೆ ಗೊತ್ತಿಲ್ಲ…! ದಯವಿಟ್ಟು ಬಾ… ಇಂದು ನನಗೆ ನೀನು ನನ್ನಾಸೆಯಾಗಿ ಬಾ…                     ನನ್ನ ಸಾವು ನೆನಪಾಗಿ .. ಇದು ನಿನ್ನಿಂದ ಅಸಾಧ್ಯ ಅಂತ ಅನ್ನಿಸಿದರೆ ಬೇಡ ಬಿಡು.. ನನಗೆ ನಿನ್ನ ನಿರಾಕರಣದಲ್ಲೂ ದೂರು ಇಲ್ಲ… ಅಂದು ನಾನು ನಿರಾಕರಿಸಿದೆ.. ಇವತ್ತು ನೀನು… ಇಷ್ಟವಿಲ್ಲದಿದ್ದರೆ ಹಾಗೇಯೇ ಹೊರಟು ಹೋಗು… ಒಳಗೆ ಬರಬೇಡ… ನಿನ್ನನ್ನು ಬಯಸುವ ಈಗಿನ ನನ್ನ ಮನಸ್ಥಿತಿಯಲ್ಲಿ ನನಗೆ ಬೇರೆ ಏನೂ ಬೇಕಿಲ್ಲ.. ನಿನ್ನ ಅನುಕಂಪದ ಮಾತೂ ಕೂಡ ಬೇಡ.. ನಿನ್ನ ಯಾವುದೇ ನಿರ್ಣಯ ನನಗೆ ಸಮ್ಮತ…. ನಿನ್ನ ಪ್ರೀತಿಯ.. ಸುರುಳಿ ಮುಂಗುರುಳು…” ನನಗೆ ದಿಕ್ಕು ತೋಚಂದಂತಾಯಿತು… ಏನು ಮಾಡಲಿ……..? ಏನು ಮಾಡಲಿ…………? ಅವಳನ್ನು ಮನಸಾರೆ ಪ್ರೀತಿಸುತ್ತಿರುವದಂತೂ ನಿಜ… ಆಕೆಯ ಬದುಕಿನ ಕೊನೆಯ ಆಸೆ…! ಪ್ರೀತಿಯ ಮುಖವೇ ಇರದ ಯಾರ್ಯಾರೋ ಸಂಗಡ ಮಲಗಿದ್ದಿದೆ… ಹಣ ಕೊಟ್ಟು ಸುಖವನ್ನು ಅರೆಸಿದ್ದು ಇದೆ… ಇಷ್ಟು ದಿನ ಈಕೆಯನ್ನು ಪ್ರೀತಿಸಿದ್ದೇನೆ… ಬಯಸಿದ್ದೇನೆ.. ಅವಳ ಆಸೆಯನ್ನು ನೆರವೇರಿಸಿ ಬಿಡುವದೇ ಸೂಕ್ತ… ಸರಿ… ಹಾಲಿನಿಂದ ಬೆಡ್ ರೂಮಿನ ಹತ್ತಿರ ಬಂದೆ…! ಬಾಗಿಲು ಅಲ್ಲಿಯೂ ಸಣ್ಣಗೆ ತೆರೆದಿತ್ತು… ಒಳಗೆ ಪೂರ್ತಿಯಾಗಿ ಕತ್ತಲೆ ಇಲ್ಲದಿದ್ದರೂ.. ಯಾವುದೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ… ನಾನು ಅವಳಿದ್ದ ಹಾಸಿಗೆ ಕಡೆ ಹೋದೆ… ಚಾದರ ಹೊದ್ದು ನನಗಾಗಿ ಕಾಯುತ್ತಿದ್ದಳು… ಬಿಗಿದಪ್ಪಿದೆ…! ಮುತ್ತಿಟ್ಟೆ…! ಅಷ್ಟು ದಿನದಿಂದ ಕಾಯುತ್ತಿದ್ದ .. ಆ ಕೆನ್ನೆ ..! ಆ ಕುತ್ತಿಗೆ ಎಲ್ಲವನ್ನು ಮುತ್ತಿಡತೊಡಗಿದೆ…! ಅವಳ ಮುಚ್ಚಿದ ಕಣ್ಣುಗಳನ್ನೊಮ್ಮೆ ನೋಡಬೇಕೆನಿಸಿತು… ಕಿಡಕಿಯಿಂದ ಸಣ್ಣ ಬೆಳಕು ಬರುತ್ತಿತ್ತು… ಬೊಗಸೆಯಲ್ಲಿ ಅವಳ ಮುಖ ಹಿಡಿದು ನೋಡಿದೆ… ನನಗೆ ಆಘಾತವಾಯಿತು…! ನಿಸ್ತೇಜ ಕಣ್ಣುಗಳು…! ಸುಕ್ಕುಗಟ್ಟಿದ ಚರ್ಮ…! ಕಳೆಗುಂದಿದ ಕೆನ್ನೆ…! ನಾನು ನನಗರಿವಿಲ್ಲದಂತೆ ತಣ್ಣಗಾದೆ……… ನಿಸ್ತೇಜನಾದೆ… ಮಂಚದ ತುದಿಯಲ್ಲಿ ಕುಳಿತುಕೊಂಡೆ…   “ಹುಡುಗಾ ಏನಾಯ್ತು?… ಬಾ.. ಬೇಗ…” ಆಕೆ ಕೈ ಹಿಡಿದು ಎಳೆದಳು… “ಹುಡುಗಿ… ನಾನು ನಿನ್ನನ್ನು ಮನಸಾರೆ ಪ್ರೀತಿಸಿದ್ದು ನಿಜ… ನಿನ್ನನ್ನು … ನಿನ್ನ ದೇಹವನ್ನೂ ಬಯಸಿದ್ದೂ ನಿಜ… ಯಾರನ್ನಾದರೂ … ಯಾವಸ್ಥಿತಿಯಲ್ಲಾದರೂ ಪ್ರೀತಿಸ ಬಹುದು… ಕಾಮ ಹಾಗಲ್ಲ ಕಣೆ… ಇದಕ್ಕೆ ಇನ್ನೂ ಏನೇನೋ ಬೇಕು…! ನಿನ್ನ ಆಸೆ ಈಡೇರಿಸಲು ನನ್ನಿಂದ ಆಗ್ತಾ ಇಲ್ಲ… ದಯವಿಟ್ಟು ಕ್ಷಮಿಸು…”]]>

‍ಲೇಖಕರು G

March 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಡಲಂತರಾಳವ ಬಲ್ಲವರಾರು?

ಕಡಲಂತರಾಳವ ಬಲ್ಲವರಾರು?

ಶಿವಲೀಲಾ ಹುಣಸಗಿ ಯಲ್ಲಾಪುರ ಪ್ರತಿ ದಿನವೂ ಪ್ರೀತಿಯ ಹುಚ್ಚ ಹಿಡಿಸಿದವ ಒಮ್ಮಿಂದೊ ಮ್ಮೆಲೆ ಮೌನವಾಗಿದ್ದು, ಕೊನೆಗವನು ನನಗರಿವಿಲ್ಲದೆ ಮಂಪರು...

ಆರನೇ ಬೆರಳು

ಆರನೇ ಬೆರಳು

ಬಸವಣ್ಣೆಪ್ಪ ಕಂಬಾರ ಸುಂಕದ ಕಟ್ಟೇಲಿ ಚಿನ್ನವ್ವ ತುಂಬ ಅದೃಷ್ಟದ ಹೆಂಗಸು ಎಂದು ಮನೆಮಾತಾಗಿದ್ದಳು. ಮನೆ ಗುದ್ದಲಿ ಪೂಜೆ, ಬಾಣಂತನಕ್ಕೆ, ಮಗಳನ್ನು...

ಹಬ್ಬಿದಾ ಬಲೆ ಮಧ್ಯದೊಳಗೆ…

ಹಬ್ಬಿದಾ ಬಲೆ ಮಧ್ಯದೊಳಗೆ…

ರಾಜು ಎಂ ಎಸ್ ಸಾಲಿಗುಡಿ ಬಿಟ್ ಕೂಡ್ಲೇ ನಿಂಗಿ, ಗುಡ್ಲು ಕಡಿಕ್ ಹೊಂಟವ್ಳು... ತಾರ್ಸಿ ಮನೆ ಗುರ್ಲಿಂಗಪ್ಪನ್  ಮಗ್ಳು ಪರಿಮಳ ತನ್...

10 ಪ್ರತಿಕ್ರಿಯೆಗಳು

 1. Prashanth Dixit

  Excellent story,, touching lines….nicely written about the irony of love and sex !!

  ಪ್ರತಿಕ್ರಿಯೆ
 2. Uday Itagi

  ಪ್ರೀತಿಯ ಪ್ರಕಾಶ್,
  “ರೂಮಿನ ಕತ್ತಲೆಯಲ್ಲಿ ನಡೆಯುವದು ಕಾಮದಾಟವಲ್ಲ..
  ಅದು ಒಂದು ಹೊಡೆದಾಟ..
  ಅಲ್ಲಿ ಯಾರೋ ಒಬ್ಬರು ಸೋಲುತ್ತಾರೆ..
  ಯಾರೋ ಒಬ್ಬರು ಗೆಲ್ಲುತ್ತಾರೆ..”
  ಎಂಥ ಸುಂದರ ಸಾಲುಗಳಿವು! ಎಲ್ಲಿಂದ ತರುತ್ತೀರಿ ಇಂಥ ಸಾಲುಗಳನ್ನು?
  ನೀವು ಹೇಳುವಂತೆ ಸೆಕ್ಸ್ ಒಂದು ಆಟವಿದ್ದಂತೆ. ಅದರಲ್ಲಿ ಯಾರಾದರೊಬ್ಬರು ಸೋಲಲೇಬೇಕು. ಹೀಗಿದ್ದೂ ಇಬ್ಬರೂ ಗೆದ್ದೇ ಗೆಲ್ಲುತ್ತೇವೆ ಎಂದುಕೊಳ್ಳುವವರು ಹುಂಬರು ಅಷ್ಟೆ.
  ಚಂದದ ಕಥೆಗೆ ಧನ್ಯವಾದಗಳು.
  ಉದಯ್ ಇಟಗಿ

  ಪ್ರತಿಕ್ರಿಯೆ
 3. harsha

  ಪ್ರಕಾಶಣ್ಣ, ನಿಮ್ಮ ಬರವಣಿಗೆ ಒಳ್ಳೆ ಸಾವು ಮಾರಾಯ್ರೆ!

  ಪ್ರತಿಕ್ರಿಯೆ
 4. sandhya

  ಕೊನೇ ಕೆಲವು ಸಾಲುಗಳು….ಓದಿ ಮುಗಿಸೋ ಹೊತ್ತಿಗೆ…ತಣ್ಣಗಾಗಿದ್ದೆ! Excellent !

  ಪ್ರತಿಕ್ರಿಯೆ
 5. parameshwar hegde

  ಸುಂದರ ಕಥೆ …..ಅಸ್ಟೇ ಚಂದದ ಪದಗಳ ಜೋಡಣೆ ….ಅನಂತ ಅನಂತ ಧನ್ಯವಾದಗಳು …

  ಪ್ರತಿಕ್ರಿಯೆ
 6. seeta Ganesh

  wow…..”Kama Hagalla …………..koneya salugalu…….Oh!….excellent……

  ಪ್ರತಿಕ್ರಿಯೆ
 7. mamatha

  Respected Sir,
  nanu odutha ide konege yenagutho antha trilling agi ide thumba chanagide.
  Relay fine.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: