ಪ್ರತಿಭಾ ನಂದಕುಮಾರ್ ಎ೦ದರೆ..

‘ಇದನ್ನು ನಾನು ಸೃಷ್ಟಿಸಿದ್ದಾ?!’ ಅಂತ ನಾನು ಡಾಕ್ಟರನ್ನ ಕೇಳಿದೆ. ಅವರು ನಗುತ್ತಾ ‘ನಿನ್ನ ಬಸಿರಿಂದಲೇ ಬಂತು ಅಂದರೆ ಹಾಗನ್ನಿಸುತ್ತಪ್ಪಾ’ ಅಂದರು. ಇಬ್ಬರೂ ಜೋರಾಗಿ ನಗತೊಡಗಿದೆವು. ಅವರು tear ಹೊಲಿಗೆ ಹಾಕತೊಡಗಿದರು. ‘ಏನು ಮಾಡುತ್ತಿದ್ದೀರಿ?’ ಅಂದೆ. ‘ಎಂಬ್ರಾಯಿಡರಿ ಮಾಡುತ್ತಿದ್ದೀವಿ’ ಎಂದರು. ‘ಒಳ್ಳೆ design ಮಾಡಿ’ ಎಂದೆ. ಇಬ್ಬರೂ ಮತ್ತೆ ಜೋರಾಗಿ ನಗತೊಡಗಿದೆವು. ಹೊರಗೆ ನಿಂತಿದ್ದ ನನ್ನ ಅತ್ತಿಗೆ ಆ ಮೇಲೆ ನನಗೆ ಹೇಳಿದರು. ‘ಯಾವ ಲೇಬರ್ ವಾಡರ್ಿನಿಂದಲೂ ಅಂತ ಗಹಗಹಿಸುವ ನಗು ನಾನು ಯಾವತ್ತೂ ಕೇಳಿಲ್ಲ. ಹೆರಿಗೆ ಎಂದರೆ ಎಲ್ಲರೂ ಚೀರಿ ಚೀರಿ ಅಳ್ತಾರೆ’.

***

ಕಡ್ಡಿ ಗೀರಿದೆ. ಅದು ಕೈಜಾರಿ ನನ್ನ ಬಟ್ಟೆಯ ಮೇಲೆ ಬಿತ್ತು ಅಷ್ಟೇ. ಒಂದೇ ಕ್ಷಣಕ್ಕೆ ಭಗ್ಗೆಂದು ಹೊತ್ತಿಕೊಂಡು ಉರಿಯುತ್ತಿದ್ದೆ. ಜೋರಾಗಿ ಅವನ ಹೆಸರು ಕಿರುಚಿದೆ. ಕಣ್ಣುಬಿಟ್ಟ ಅವನು ಹೊತ್ತಿ ಉರಿಯುತ್ತಿದ್ದ ನನ್ನನ್ನು ನೋಡಿ ವಿಪರೀತ ಗಾಬರಿಯಾಗಿ ಓಡಿ ಬಂದು ಬಚ್ಚಲು ಮನೆಗೆ ಕರೆದುಕೊಂಡು ಹೋಗಿ ನೀರು ಸುರಿದ. ಷವರ್ ಆನ್ ಮಾಡಿದ, ಬಟ್ಟೆ ಕಿತ್ತು ಬಿಸಾಡಿದ. ಎಲ್ಲದಕ್ಕೂ ಬಹುಶಃ ಎರಡು ಸೆಕೆಂಡು ಕೂಡ ಹಿಡಿಸಿರಲಿಲ್ಲ. ಅಷ್ಟರಲ್ಲಾಗಲೇ ನಾನು ಪೂತರ್ಿ ಸುಟ್ಟು ಹೋಗಿದ್ದೆ.

***

‘ಒಂದೇ ಒಂದು ಸಲ ಹೇಳಿ ಬಿಡಲಾ? ಎಂದೋ ಹೇಳಬೇಕಾಗಿದ್ದ. ಆದರೆ ಎಂದೂ ನನ್ನಿಂದ ಹೇಳಲಾಗದ ಮಾತು’ ಹೇಳು ಎಂದಿತು ಅವರ ಕಣ್ಣು. ‘ಐ ಲವ್ ಯೂ’ ಅಂದೆ. ‘ಅದು ನಿನ್ನ ಜೀವನ ಪ್ರೀತಿ. You don’t love me, you love life’ ಎಂದರು. ‘Can I shake hands with you?’ ನನಗೆ ಅವರನ್ನು ಸ್ಪಶರ್ಿಸುವುದು ಅಷ್ಟು ಅಗತ್ಯವಾಗಿತ್ತು. ಅವರು ಒಂದು ಕ್ಷಣ ನನ್ನನ್ನೇ ದಿಟ್ಟಿಸಿ ನೋಡಿದರು. ಏನನ್ನಿಸಿತೋ, ಬಾಗಿ, ಹಗುರವಾಗಿ ನನ್ನ ಭುಜ ಬಳಸಿ, ಜಯನಗರ ನಾಲ್ಕನೇ ಬ್ಲಾಕಿನ ಸಮಸ್ತ ಜನ ಜಂಗುಳಿಯ ನಡುವೆ, ಇಡೀ ಭೂಮಿ, ಆಕಾಶಗಳ ಸಾಕ್ಷಿಯಲ್ಲಿ, ಪಂಚಭೂತಗಳ ಸನ್ನಿಧಿಯಲ್ಲಿ ನನ್ನ ಕೆನ್ನೆಗೆ ಹಗುರವಾಗಿ ಮುತ್ತಿಟ್ಟರು. ‘ಗೋಪ್ಯವಾದದ್ದು ಎನ್ನಿಸುವ ಯಾವುದನ್ನೂ ನನಗೆ ಬರೆಯಬೇಡಾ. ಯಾಕೆಂದರೆ ನನಗೆ ಯಾವುದನ್ನೂ ಮುಚ್ಚಿಡುವ ಅಭ್ಯಾಸವಿಲ್ಲ. ಯಾರಾದರೂ ನಿನ್ನ ಪತ್ರ ಓದಿದರೆ ನಿನಗೆ ಬೇಸರವಾಗಬಾರದು!’ ‘ಬೇಸರವೇ? ಬೇಕಾದರೆ ಐಫಲ್ ಟವರ್ ಮೇಲಿನಿಂದ, ಎಂಪೈರ್ ಸ್ಟೇಟ್ ಬಿಲ್ಡಿಂಗ್ನಿಂದ, ನಮ್ಮದೇ ಯುಟಿಲಿಟಿ ಬಿಲ್ಡಿಂಗ್ ಮೇಲಿನಿಂದ ಇಡೀ ಜಗತ್ತಿಗೆ ಕೂಗಿ ಕೂಗಿ ಹೇಳುತ್ತೇನೆ…. ಐ ಲವ್ ಯೂ….’ ಅದಕ್ಕೆ, ತುಂಬ ಆರ್ತವಾಗಿ ಅವರು ಪ್ರತಿಕ್ರಿಯಿಸಿದ್ದು ಹೀಗೆ ‘ಥ್ಯಾಂಕ್ಯೂ’!

***

`ನಾನು ಸತ್ತ ಮೇಲೆ ನೀನು ಬೇರೆ ಯಾರಿಗೂ ಸೇರಬಾರದು. ಬೇರೆ ಯಾರನ್ನೂ ಪ್ರೀತಿಸಿ ಮದುವೆಯಾಗಬಾರದು. ನಾನು ಸತ್ತ ಸುದ್ದಿ ತಿಳಿದ ತಕ್ಷಣ. ನೀನು ಆತ್ಮಹತ್ಯೆ ಮಾಡಿಕೊಳ್ಳಬೇಕು. ಹಾಗಂತ ಪ್ರಾಮಿಸ್ ಮಾಡು’. ನಾನು ಏನು ಹೇಳಲಿ? ಆ ಕ್ಷಣಕ್ಕೆ ಅವನಿಗೆ ಇಡೀ ಬದುಕಿನ ಅರ್ಥವೇ ನನ್ನ ಉತ್ತರವನ್ನು ಅವಲಂಬಿಸಿತ್ತು. ಅವನ ಹತಾಶೆ. ಆತಂಕ ಎದ್ದು ಕಾಣುತ್ತಿತ್ತು. ನಾನು ನಕ್ಕು ಅವನ ಕೈ ಮೇಲೆ ಕೈ ಹಾಕಿ ಹೇಳಿದೆ. ‘ಪ್ರಾಮಿಸ್, ನೀನು ಸತ್ತರೆ ತಕ್ಷಣ ನಾನು ಸಾಯ್ತೀನಿ’.

****

ನಾನು ಗೋಡೆಯ ಕಡೆಗೆ ಮುಖಮಾಡಿ ಸುಮ್ಮನೇ ದಿಟ್ಟಿಸುತ್ತಿದ್ದೆ. ನಾನು ಕೊನೇ ಗಳಿಗೆಯಲ್ಲಿ ಈ ಕಡೆ ತಿರುಗಿ ತಟಕ್ಕನೆ ಏನೂ ಪೂರ್ವ ಯೋಜನೆ ಇಲ್ಲದೆ ಕೇಳಿದೆ. ‘ನಾನು ಏನೂ ಗಲಾಟೆ ಮಾಡದೇ ಫಿಸಿಯೋಥೆರಪಿ ಮಾಡಿಸಿಕೊಂಡರೆ ಏನು ಕೊಡ್ತೀಯಾ?’ ‘ಏನು ಬೇಕು?’ ಏನು ಕೇಳಬೇಕೋ ಗೊತ್ತಾಗದೇ ಒಂದು ಕ್ಷಣ ಯೋಚಿಸಿ ನಾನು ಉತ್ತರಿಸಿದೆ. ‘ನನಗೊಂದು ಮುತ್ತು ಕೊಡುತ್ತೀಯಾ?’ ಪದ್ಯ- ಈ ಜ್ವರ ಇಳಿಯುವ ಮೊದಲು ಚೆನ್ನಾಗಿ ಬೆವರಬೇಕು ಒಳಗಿನದೆಲ್ಲ ಹೊರ ಬರಬೇಕು ಅನುದಿನದ ಅಂತರಗಂಗೆ ದಾಟುವ ಯತ್ನ ಇದು.]]>

‍ಲೇಖಕರು G

April 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

6 ಪ್ರತಿಕ್ರಿಯೆಗಳು

 1. D.RAVI VARMA

  ಮೇಡಂ, ತುಂಬಾ ಮಾರ್ಮಿಕವಾಗಿದೆ, ಮೊದಲಿಂದಲೂ ಅಸ್ತೆ ನೀವು ಏನ್ ಮಾಡಿದ್ರು ಅದು ವಿಭಿನ್ನ ಹಾಗು ವಿಸಿಸ್ತ ವಾಗಿರುತ್ತೆ, ನಿಮ್ಮ ಈ ಪುಸ್ತಿಕೆ ತಕ್ಷಣ ಓದುವ ಕುತೂಹಲ ಹೆಚ್ಚಾಗಿದೆ, ಪ್ರಕಾಶಕರು ಯಾರು ತಿಲಿಸಿಲ್ಲವಲ್ಲ. ಸಾದ್ಯ ವಾದರೆ ಒಂದು ಪುಸ್ತಿಕೆ ವಿ,ಪಿ,ಪಿ ಕಳಿಸಿಕೊಡಿ ರವಿ ವರ್ಮ ,ಭಾರತೀಯ ಜೀವ ನಿಮ ನಿಗಮ ,ಹೊಸಪೇಟೆ ೫೮೩೨೦೧
  ೯೯೦೨೫೯೬೬೧೪

  ಪ್ರತಿಕ್ರಿಯೆ
 2. Sandhya

  ಪ್ರತಿಭಾ ಅ೦ದರೆ ಜೀವ೦ತಿಕೆ, ಜೀವನದಿ, ಲ೦ಕೇಶರ ’ಅವ್ವ’, ತರ್ಕಶಾಸ್ತ್ರವನ್ನು ಮೀರಿದ ಜೀವಶಾಸ್ತ್ರ…. ಎಲ್ಲ ಹೆಣ್ಣುಗಳ ಬದುಕಿನ ಹನಿ ಹನಿ ನಿಮ್ಮ ಅ೦ತರಗ೦ಗೆ, ಹಾಗಾಗೆ ಇದು ನಮ್ಮೆಲ್ಲರ ಬದುಕು ಅನ್ನಿಸುತ್ತೆ, ನಮ್ಮಲ್ಲಿತ್ತು, ನೀವು ದನಿ ಕೊಟ್ಟಿರಿ… ಪುಸ್ತಕಕ್ಕಾಗಿ ಕಾಯುತ್ತಾ

  ಪ್ರತಿಕ್ರಿಯೆ
 3. akshatha

  D.RAVI VARMa sir , pustakakkaagi 9449174662 athava 08182-241681 duravani sankye samparkisi. danyvadagalu.-Akshatha.K

  ಪ್ರತಿಕ್ರಿಯೆ
 4. chandrashekhar.g.jadar

  aatma kathe odidaga pratibhaaravara naija jeevanada sulivu sigutte. jeevandalli nadedaddannu hagee helo koovattu yellarigoo barolla. tamma jote aadaddannu hanchikondiruva pratibha madam avarige dhanyavadagalu. jeevanadalli maadiro sangharsha apratima. begane second part bareyalu nanna prarthane. dhanyavadagalu.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ malathi SCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: