ಪ್ರತಿಭಾ ನ೦ದಕುಮಾರ್ ಅವರಿಗೆ

ಸುನಿಲ್ ಹೊಸಕೋಟೆ

ಪ್ರತಿಭಾ ನಂದಕುಮಾರ್ ಅವರಿಗೆ, ತಾವು ಕ್ಷೇಮವೆಂದು ಭಾವಿಸುವೆ.ಮೊನ್ನೆ ನನ್ನ ಅಕ್ಕ ಭಾರತಿ ಬೆಳಗ್ಗೆ ಇಂದಲೇ phoneಗೂ ಸಿಗದಂತೆ, ಸಿಕ್ಕರೂ ಸರಿಯಾಗಿ ಮಾತಾಡಿಸದಂತೆ ವರ್ತಿಸುತ್ತಿದ್ದಳು. ಮಾರನೆ ದಿನ ಕಾಲ್ ಮಾಡಿ ನಿಮ್ಮ ‘ಅನುದಿನದ ಅಂತರಗಂಗೆ’ ಪುಸ್ತಕ ಓದುತ್ತಿದ್ದಳಾಗಿ, ಅದರಲ್ಲೇ ಮಗ್ನಳಾಗಿ ಇದ್ದುದ್ದರಿಂದ ಆ ರೀತಿ ವರ್ತಿಸಿದೆ ಅಂತ ಸಮಜಾಯಷಿ ಕೊಟ್ಟಳು… ಪ್ರತಿ ಸಲ ಅರ್ಧ ಗಂಟೆಯಂತೆ ಸುಮಾರು ಆರು ಬಾರಿ ದಿನಕ್ಕೆ ಇಬ್ಬರು ಮಾತಾಡಿಕೊಳ್ಳುತ್ತಿದ್ದ ನಮ್ಮ ಮಧ್ಯೆ ಇದ್ಯಾವ ಪುಸ್ತಕ ಹೀಗೆ ಅಡ್ಡ ಬಂತು.. ಅದರಲ್ಲಿ ಏನಿರಬಹುದೆಂಬ ಹಪ ಹಪಿಗೆ ಅವಳಿಂದ ಪುಸ್ತಕ ತಂದು ಓದಲು ಆರಂಬಿಸಿದೆ, ಹಟಕ್ಕೆ ಬಿದ್ದು ಓದುವಷ್ಟು ಹಿಡಿದಿಟ್ಟ ಪುಸ್ತಕ ಈ ನಡುವೆ ಬಹಳವೇ ವಿರಳ…ಅವಳು ಒಂದೇ ದಿನದಲ್ಲಿ ಅದನ್ನು ಓದಿ ಮುಗಿಸಿದ್ದಳು,”ಎಹ್ ಪುಸ್ತಕ amazing ಆಗಿದೆ ಕಣೋ,ಪ್ರತಿಭಾ ಬಿಟ್ರೆ ಇನ್ಯಾರು ಹೀಗೆ ಬರ್ಯಕ್ ಆಗಲ್ಲ….” ಅಂತ ಹೇಳಿದಳು…. ನಾನು ಇದುವರೆಗೆ ನಿಮ್ಮ ಹೆಸರು ಭಾರಿ ಕೇಳಿದ್ದೆನಾದರು ನಿಮ್ಮ ಯಾವ ಪುಸ್ತಕಗಳನ್ನು ಓದಿರಲಿಲ್ಲ, ಆಗಾಗ ಪತ್ರಿಕೆಯಲ್ಲಿ ಕೆಲವೊಂದು ಲೇಖನ ಮಾತ್ರ ಓದಿದ್ದೆ…ಅನುದಿನದ ಅಂತರಗಂಗೆ ಪುಸ್ತಕ ಓದಲು ಶುರು ಮಾಡಿದ ನನಗೆ ಒಂದು ವಿಶಿಷ್ಟ ತೆರನಾದ ಅನುಭವ ಹಾಗು ಬದುಕುವ ವಿಧಾನ ತೀರ ಅಚ್ಚರಿಯಾಯ್ತು…ಅದೇ ಕಾರಣಕ್ಕೆ ಈ ಪತ್ರ ನಿಮಗೆ. ಪುಸ್ತಕ ಕೈಗೆತ್ತಿಕೊಂಡವನಿಗೆ ಮೊದಲು ಯು.ಆರ್.ಅನಂತಮೂರ್ತಿ ಅವರ ಮುನ್ನುಡಿ “ನೋ ಮ್ಯಾನ್ಸ್ ಲ್ಯಾಂಡ್” ಓದಿದೆ… ಇಟ್ ವಾಸ್ ಇಂಟರೆಸ್ಟಿಂಗ್, ಆದರೆ ಅವರು ಬರೆದ perspective ತೀರ ನಂಗೆ ಆರ್ಥ ಆಗಿದ್ದು ಇಡೀ ಪುಸ್ತಕ ಓದಿದ ಮೇಲೆ… ಎರಡು ದಿನದಲ್ಲಿ,ಸುಮಾರು ೫ ತಾಸಿನಲ್ಲಿ ಓದಿದೆ…. ಪುಸ್ತಕ ಓದಲು ಒಂದು ಪ್ರಾಬಲ್ಯ ಮನಸ್ಸಿನ ಸ್ಥಿತಿ ಅನಿವಾರ್ಯ ಅನಿಸಿತು… .ಅಷ್ಟೇ ಹೊರತು ಯಾವ ವಿಶೇಷ ಪರಿಣತಿ , ಬೌಧಿಕ ಸಿದ್ಧತೆ,ತಯಾರಿ ಬೇಡವೇ ಬೇಡ … ಪುಸ್ತಕ ಓದಿದಾಗ ಹಾಗನಿಸಿದ್ದು ಉಂಟು. ಲೇಖಕಿಯ ದರ್ಶನ ಯಾವುದೆಂದು ತಿಳಿಯಲು ಅಂತಹ ಮನಸ್ಸಿನ ಸ್ಥಿತಿ ಬೇಕು ಅಂತ ಭಾವಿಸಿದ್ದೇನೆ. ತೀರಾ ನೀವು ನಿಮ್ಮ ಜ್ಞಾನದ,ತತ್ವ ಜ್ಞಾನದ, ಪರಿಭಾಷಿಕತೆಯ ಕಸರತ್ತು ಮಾಡಿಲ್ಲ, ಪ್ರತಿಯೊಂದು ಗಹನ ವಿಚಾರವನ್ನು ತುಂಬಾ ಸಿಂಪಲ್ ಆಗಿ ಬಿಂಬಿಸಿದ್ದೀರಿ, ಬಹುಷ ಇದು ತಾವು ಬದುಕುವ ಶೈಲಿ ಇರಬಹುದು ಎಂಬುದು ನನ್ನ ಕಲ್ಪನೆ. ಒಬ್ಬ ಸಾಮಾನ್ಯ ಮನುಷ್ಯನಿಗೆ ಅಸಮಾನ್ಯವಾದದ್ದು ಅಂದರೆ ಮತ್ತೊಬ್ಬರಿಗೆ ತನ್ನ ಜೀವನದ ಗೌಪ್ಯಗಳನ್ನು,ಮುಚ್ಚಿಡುವಿಕೆಯನ್ನು ನೇರವಾಗಿ,ಆಪ್ತವಾಗಿ,ಸರಳವಾಗಿ ಹಾಗು ಮುಕ್ತವಾಗಿ ಮಾತಾಡೋದು ಬಹಳವೇ ಕಷ್ಟ ಅಥವಾ ವಿವಿಧ ಕಾರಣಗಳಿಂದ ಮಾತಾಡುವುದಿಲ್ಲ….ಅಂತಹ ಮುಕ್ತ ಸಂಪ್ರದಾಯಕ್ಕೆ ಕೆಲವರು ಸಿದ್ಧರಾಗಿಲ್ಲ….ಒಳಗಿನ cadre ಗಳನ್ನೂ ದಾಟಿ ಬರಲು ಯಾರ ಅಂತರಂಗವೂ ಒಲ್ಲದು,ಅದಕ್ಕೊಂದು ಭದ್ರ ಕೋಟೆ ನಿರ್ಮಿಸಿ,ಸುಭದ್ರವಾದ ದೊಡ್ಡ ಕಬ್ಬಿಣದ ಬಾಗಿಲು ಮುಚ್ಚಿಕೊಂಡು ಬಿಡುತ್ತೇವೆ…ಅದನ್ನು ಕೆಲವೊಮ್ಮೆ ನಾವೇ ತೆಗೆದು ಇಣುಕಿ ನೋಡಿ ಆತ್ಮಾವಲೋಕನ ಮಾಡಿಕೊಳ್ಳೋಲ್ಲ…ಅದಕ್ಕೆ ಹಲವಾರು ಪೂರ್ವಾಗ್ರಹ ಹಾಗು judgementಗಳು ಅಡ್ಡಿ ಬರುತ್ತವೆ…ಅಥವಾ ಕೆಲವು ಜನಕ್ಕೆ ಅದನ್ನು express ಮಾಡಿಕೊಳ್ಳಲು ಬರುವುದೇ ಇಲ್ಲ..ಪ್ರತಿಯೊಬ್ಬನು ಒಂದಲ್ಲ ಒಂದು ವಿಚಾರಗಳನ್ನು ಮರೆಮಾಚಿಯೇ ಇರುತ್ತಾನೆ..ಅಪ್ಪನ ಜೇಬಿಗೆ ಕೈ ಹಾಕಿದ್ದರಿಂದ ಹಿಡಿದು…ವಯಸ್ಸಿನ ಆತುರತೆಗೆ ತನ್ನನೇ ಇನ್ನೊಬ್ಬರಿಗೆ ಅರ್ಪಿಸಿದ ದುಗುಡದ ವರೆಗೂ…ಇತ್ಯಾದಿಗಳು..ಇವೆಲ್ಲ ಭಾವಕ್ಕೆ ನೀವು ತುಂಬಾ ಭಿನ್ನ ಎನಿಸುತ್ತೀರಿ…. ಈ ಪುಸ್ತಕ ಓದಿದಾಗ ನನಗೆ ಹಾಗನಿಸಿದ್ದು ಉಂಟು,ನಿಮ್ಮ ಜೀವನದ ಬಹುಪಾಲು ರಹಸ್ಯವನ್ನು…ಅಥವಾ ನಿಮ್ಮ ಜೀವನದ ಇಷ್ಟೂ ದಿನಗಳನ್ನು ನೇರಾ ನೇರವಾಗಿ ನೀವು ಕಾಗದದ ಮೇಲೆ ಹರಿಸಿಬಿಟ್ಟಿದ್ದೀರಿ…ಇನ್ನು ಭರಿಸಲಾಗದ ವಿಚಾರಗಳು ನಿಮ್ಮಲೇ ಉಳಿದಿರಲೂ ಬಹುದು…ಆಮೇಲೆ ಭಾಷೆಯನ್ನೂ ನಾವೆಷ್ಟೇ ಚನ್ನಾಗಿ ಬಲ್ಲವರಾಗಿದ್ದರೂ ಕೂಡ,ಬರೀ ಭಾಷೆಯ ಮೂಲಕ ಓದುಗನನ್ನು ಸಂಪರ್ಕಿಸೋದು,ಹಿಡಿದು ಕೂಲಿಸೋದು ಕಷ್ಟ…ಇದು ಹಲವಾರು ಪುಸ್ತಕದ ನನ್ನ ಅನುಭವ..ಒಂದಷ್ಟು ಪುಟ ತಿರು ಹಾಕುವ ಹೊತ್ತಿಗೆ…ಹೊಟ್ಟೆ ಕಲಸಿ…ಕಣ್ಣಲ್ಲ್ಲಿ ನೀರು ಬಂದು…ನಿದ್ದೆಯೂ ಬಂದುಬಿಡುತ್ತದೆ…ಹಾಗು ಬಂದುಬಿಟ್ಟಿದೆ…ಪುಸ್ತಕ ಓದಿದ ೫ ತಾಸು ಕೂಡ ನಿಮ್ಮ ಆಂತರ್ಯದ ಯಾವುದೋ ಮೂಲೆಯಲ್ಲಿ ಓದುಗ ಅವಚಿ ಕೂತು…ಕಥೆ ಕೇಳಿಸಿಕೊಂಡಂತೆ ಭಾಸವಾಗುತ್ತದೆ.ಕಥೆಯ ಮಧ್ಯದಲ್ಲಿ ಬರುವ ಹೆಸರು ತಾವು ಎಲ್ಲೋ ಸೂಚಿಸಿಲ್ಲ.ಆ ಹೆಸರು ಗೊತ್ತಿದ್ದವರು,ಅದನ್ನು ಕಲ್ಪಿಸಿಕೊಳ್ಳಬಲ್ಲರು….ಗೊತಿಲ್ಲದವರು ಗೋಜು ಪಡುತ್ತಾರೆ….ನಿಮ್ಮ ಅವನು,ಅವರು,ಇವನು,ಆತ..ಗಳ ಮಧ್ಯೆ confusion ಹುಟ್ಟುತ್ತದೆ…ಆದ್ರೆ ನೀವೇ ಹೇಳಿದಂತೆ “ನಾಮ್ ಕ್ಯಾ ಫರಕ್ ಪಡ್ತಾ ಹೇ” ಎಂದು ಕೊಂಡು ಕೇವಲ ವಿಚಾರ ಹಾಗು ಸ್ವಾರಸ್ಯಕ್ಕೆ ಗಮನ ಕೊಡಬೇಕಾಗುವುದು ಅನಿವಾರ್ಯ…. ಮನೆ ಗೃಹ ಪ್ರವೇಶದ ವಿಡಂಬನೆ,ನಿಮ್ಮ ಸಾಂಸಾರಿಕ ಜೀವನದ ಖುಷಿ ಹಾಗು ಗೋಜಲುಗಳು,ನಿಮ್ಮ ಮುಂಬೈ ಆಸ್ಪತ್ರೆಯ ಘಟನೆಗಳು,ಆ ಬಾಬ ಮಾಡಿಸಿದ ಆಪರೇಷನ್ ನಿಜಕ್ಕೂ miracle ಅನಿಸುತ್ತದೆ,ತುಂಬಾ ಕಲುಕಿದ್ದು ನೀವು ಮೈ ಸುಟ್ಟುಕೊಂಡ ಘಟನೆ…ಕವಿಯೊಂದಿಗೆ ನಿಮ್ಮ ನಿರರ್ಗಳ ಪ್ರೀತಿ,ಆರ್.ಕೆ ಯೊಡನೆ ಆದ ಅಂತರಗಂಗೆಯ ಸಂವಾದ,ಒಬ್ಬ ಸಂಪಾದಕನ ಅಸಲಿಯತ್ತು……ಕೊನೆಗೆ ಇಷ್ಟೆಲ್ಲಾ…ಸವೆಸುವಾಗ ನಿಮ್ಮ “ಇವನ”ಚಿತ್ರಣ ಇದೆಯಲ್ಲ ಅಂದರೆ ನಿಮ್ಮ ಪತಿಯದು…ಕೊನೆ ಕೊನೆಗೆ ಅದು ಬದಲಾಗ್ತಾ ಹೋಗ್ತದೆ ಅನ್ಸತ್ತೆ….ಅಂದರೆ may be he took you….. as you are… ನಿಮ್ಮ ಹಾಗು ಮೂಲ ಪಾತ್ರಗಳ ಬಾಂಧವ್ಯ ಇದೆ ಸಮಾಜದ ಪ್ರತಿಬಿಂಬ ಅನಿಸುತ್ತದೆ,SOCIETY IS MERE EXTENSION OF YOUR SELF ಅಂತಾರಲ್ಲ ಹಾಗೆ.ಮೊದ ಮೊದಲು ಪಾತ್ರಗಳ ಒಡನಾಟ ನನಗೆ ಆಶ್ಚರ್ಯ ಉಂಟು ಮಾಡಿತು..ಹೀಗೋ ಸಂಬಂಧಗಳಲ್ಲಿ ಇರಬಹುದ??ಅಂತ…ಇದು ನಾನು ಬೆಳೆದ ವಾತಾವರಣ ಅಥವಾ ಸಂಪ್ರದಾಯದ ಬುನಾದಿಯ ಕಾರಣದಿಂದ ಅನಿಸಿತು…ಆಮೇಲೆ ಓದಿಕೊಳ್ಳುತ್ತ ಹೋದಂತ ಅಂತಹ ಯಾವ perceptionಗಳು ಕಾಡಲಿಲ್ಲ…ಬರೀ ಎರಡು ಆತ್ಮಗಳ…ಆಂತರ್ಯಗಳ ಬಾಂದವ್ಯ ಹಾಗು ಮಿಲನ ಎಂದಷ್ಟೇ ಅನಿಸಿತು..ಆಗಲೇ ನಾನು ಹೇಳಿದಂತೆ ಇಂತಹ ವಿಚಾರಗಳಲ್ಲಿ ಮಿಂದಾಗ ಬೌಧಿಕ ಸತ್ತೆಗಿಂತ…ಮಾನಸಿಕವಾದ ಒಂದು space ನ ಅನಿವಾರ್ಯತೆ ಇದೆ. ಪುಸ್ತಕ ಓದಿದ ಮೇಲೆ ನಾನು ಹಲವರಲ್ಲಿ ಹಂಚಿಕೊಂಡೆ,ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ,ಕೆಲವರು ತಪ್ಪು ಎಂದರು ,ಕೆಲವರು ಸರೀ ಅಂದರು,ಕೆಲವರು ಹಂಚಿಕೊಳ್ಳಲಾಗದೆ ಸುಮ್ಮನಾದರು…ಒಮ್ಮೊಮ್ಮೆ ಗೊಂದಲ ಆಗಿದ್ದಂತೂ ನಿಜ….ಸರಿಯಾದ ಜೀವನದ ನಿರ್ವಹಣೆ ಹೇಗೆ??ನಿಮ್ಮ ಜೀವನದಲ್ಲಿ ಆದಂತೆ ಆದಾಗ ಅದನ್ನ್ನು ನೋಡುವ ಬಗೆ ಹೇಗಿರಬಹುದು?ಎಲ್ಲರು ಆ ರೀತಿ ಸ್ವೀಕರಿಸಲು ಸಾಧ್ಯವ??ತಪ್ಪಾ??ಸರಿಯ??….. ಕೊನೆಯಲ್ಲಿ ನಿಮ್ಮ ಪದ್ಯ ಇದೆಯಲ್ಲ…ಅದು ಇಡೀ ನಿಮ್ಮ ಪುಸ್ತಕದ ಸಾರಾಂಶ….ಇಷ್ಟು ದಿನದ ಬಾಳ್ವೆಯ ಸಂಕೇತ….ವ್ಯಕ್ತಿಗಳನ್ನು ನೀವು ನೋಡುವ ಭಾವ…ನನಗೆ ಖಾಲಿಲ್ ಗಿಬ್ರಾನ್ ನ ಪುಸ್ತಕ ಓದಿದ ನೆನಪು ಆಗ್ತದೆ…ಅದರಲ್ಲಿ ಹೀಗೆ ಬರೆದಿತ್ತು…”half of what i say is meaningless,but i say it so that the other half may reach you “ಅಂತ…ನಿಮ್ಮೆಲ್ಲ ವಯಕ್ತಿಕ ಅನುಭವಕ್ಕೋ ಮೀರಿದ ಒಂದು moral ನಿಮ್ಮ ಪುಸ್ತಕದಿಂದ ಅರ್ಥವಾಗುತ್ತದೆ…ಹೀಗೆ ಎರಡನೇ ಭಾಗವೂ ಬರಲಿ ಎಂದು ಹಾರೈಸುವೆ….ನಿಮ್ಮ ಕಾಪೀ ಹೌಸ್ ಪುಸ್ತಕದ ಅಭಿಪ್ರಾಯದೊಂದಿಗೆ ಇನ್ನೊಮ್ಮೆ ಸಿಗೋಣ…. but ಕೊನೆಯಲ್ಲಿ…ನಿಮ್ಮ ಜೊತೆ ನೀವೇ ಇದ್ದಾಗ… ನೀವು unsecured ಅಂತ ಅನ್ಸ್ತೀರ!!!!ಹೌದಾ?? ಇಂತಿ, ಸುನಿಲ್]]>

‍ಲೇಖಕರು G

May 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

18 ಪ್ರತಿಕ್ರಿಯೆಗಳು

  • akshatha

   ಯಾವುದೇ ಬರಹಕ್ಕೆ ಯುವ ಮನಸ್ಸೊಂದು ತುಡಿದು ಸ್ಪಂದಿಸಿದರೆ ಆ ಬರವಣಿಗೆಯ ಸಾರ್ಥಕತೆ ಮತ್ತು ಅದರ ಪ್ರಕಟಣೆಯ ಸಾರ್ಥಕತೆ ಅದರಲ್ಲಿ ಅಡಗಿರುತ್ತದೆ; ಥ್ಯಾಂಕ್ಸ್ ಹೊಸಕೋಟೆ . ನಾನು ಒಂದು ವರ್ಷ ಕಾದು, ಪ್ರತಿಬಾ ಮೇಡಂ ಜೊತೆ ಹಠ ಹಿಡಿದು , ಅವರನ್ನು ಒಪ್ಪಿಸಿ ಈ ಪುಸ್ತಕ ಪ್ರಕಟಿಸಿದಕ್ಕು ಸಾರ್ಥಕವೆನಿಸುವಂತೆ ನಿಮ್ಮಂತ ಹಲವು ಓದುಗ ಮಿತ್ರರು ಸ್ಪಂದಿಸುತಿದ್ದೀರಿ .
   ಅಕ್ಷತಾ . ಅಹರ್ನಿಶಿಯ ಪರವಾಗಿ .

   ಪ್ರತಿಕ್ರಿಯೆ
 1. badarinath palavalli

  ಪ್ರತಿಭಾ ಮೇಡಂ ಅವರು ಸಶಕ್ತ ಬರಹಗಾರ್ತಿ. ನಿಮ್ಮ ಅನಿಸಿಕೆಯೂ ಇಷ್ಟವಾಯಿತು. ಪುಸ್ತಕ ಸಾಧ್ಯಂತ ಓದಿ ಮತ್ತೆ ಪ್ರತಿಕ್ರಿಯಿಸುತ್ತೇನೆ. 🙂

  ಪ್ರತಿಕ್ರಿಯೆ
 2. ಕಾವ್ಯಾ ಕಡಮೆ

  ಪ್ರತಿಭಾರ ಬರಹಗಳೇ ಹಾಗೆ. ‘ಹಗ್ಗದ ಮೇಲೆ ನಡೆಯುವ ಧೀರೆ ಬೆಟ್ಟ ಹತ್ತಲು ಹೋಗಿ ಬಿದ್ದರೆ ಅದು ಬೆಟ್ಟದ ತಪ್ಪಲ್ಲ’, ‘ಹೆಣ್ಣಿನ ಪ್ರೀತಿಗೆ ಹೆದರುವಷ್ಟು ಧ್ವೇಷಕ್ಕೆ ಹೆದರುವುದಿಲ್ಲ ಗಂಡು’.. ಮುಂತಾದ ಸಾಲುಗಳನ್ನು ಪ್ರತಿಭಾ ಮಾತ್ರ ಬರೆಯಲು ಸಾಧ್ಯವೇನೋ ಅನ್ನಿಸುವುದು ಸುಳ್ಳಲ್ಲ. ಅವರ ‘ದೇವಿ’ ಕವಿತೆಯಂತೂ ಪ್ರತೀ ಆತ್ಮದ ಅಸ್ಮಿತೆಯೇ ಸರಿ. ‘ಅನುದಿನದ ಅಂತರಗಂಗೆ’ ಓದಲು ಕಾತುರಳಾಗಿದ್ದೇನೆ. ನಿಮ್ಮ ಫೀಡ್ ಬ್ಯಾಕ್ ಗೆ ಧನ್ಯವಾದಗಳು.

  ಪ್ರತಿಕ್ರಿಯೆ
 3. Manjunath Maravanthe

  ಸ್ವಲ್ಪ ಪುಸ್ತಕ ಪ್ರೀತಿ ಇರುವವರು, ನಿಮ್ಮ ಪತ್ರವನ್ನೋದಿದರೂ ತಾವೂ ಓದುವ ತುಡಿತಕ್ಕೆ ಒಳಗಾಗುತ್ತಾರೆ.
  ಪತ್ರ ಪತ್ರವಾಗಿರದೆ ಈ ಪುಸ್ತಕದ ಆಂತರ್ಯವನ್ನು ನಮ್ಮ ಮುಂದೆ ತಂದಿಟ್ಟಿತು.
  ನಾನೂ ಓದಲೇ ಬೇಕು!

  ಪ್ರತಿಕ್ರಿಯೆ
 4. pravara

  ಅವರು ಓದಬೇಕಿದ್ದ ಪತ್ರ ನಾವೆಲ್ಲರೂ ಪಬ್ಲಿಕ್ ಆಗಿ ಓದಿದಿವಿ…… ಪುಸ್ತಕ ಇನ್ನೂ ಓದಿಲ್ಲ, ಒಟ್ಟಾರೆಯಾಗಿ ಪುಸ್ತಕವನ್ನ ಪತ್ರದಲ್ಲಿ ಬರೆದಿಡುವ ಸಾಹಸ ಮಾಡಿದ್ದು ಖುಷಿ ಎನಿಸ್ತು…… ಅದರ ಅವಲೋಕನವೂ ಸಹ!!!! i liked ur involvement wit tat book….

  ಪ್ರತಿಕ್ರಿಯೆ
 5. jyothinag

  ಪುಸ್ತಕದ ಸಾರಾಂಶ ದಿಂದ ಪುಸ್ತಕ ಓದೋ ಹಂಬಲ ಇನ್ನೂ ಹೆಚ್ಚಾಗಿದೆ … ಜೊತೆಗೆ ನಿನ್ನ ಅನಿಸಿಕೆ ಇಷ್ಟವಾಯ್ತು…ಪ್ರತಿಭಾ ಅವ್ರು ಈ ಪತ್ರ ಓದಲಿ ಅನ್ನೋ ಆಸೆ ನನ್ನದು

  ಪ್ರತಿಕ್ರಿಯೆ
 6. sugunamahesh

  ಒಂದು ಪುಸ್ತಕ ಓದುವ ಹುಚ್ಚು ಹೆಚ್ಚಿಸಲು ಈ ಒಂದು ಲೇಖನ ಸಾಕು. ಸುನಿಲ್ ತುಂಬಾ ಚೆನ್ನಾಗಿ ಬರೆದಿದ್ದೀಯ ನನಗೂ ಓದುವಾ ಆಸೆಯಾಗಿದೆ…

  ಪ್ರತಿಕ್ರಿಯೆ
 7. umaprakash

  ‘ಅನುದಿನದ ಅಂತರಗಂಗೆ’ ಪುಸ್ತಕ ಓದುವಾ ಆಸೆಯಾಗಿದೆ… ನಿನ್ನ ಅನಿಸಿಕೆ ಇಷ್ಟವಾಯ್ತು N ಪ್ರತಿಭಾ ನಂದಕುಮಾರ್ ಯಾವ ಪುಸ್ತಕಗಳನ್ನು ಓದಿಲ್ಲ, ‘ಅನುದಿನದ ಅಂತರಗಂಗೆ’ ನಾನೂ ಓದಲೇ ಬೇಕು! Sunil bro thank u so much for ur feed back; Superb letter !
  I like it, i like it !

  ಪ್ರತಿಕ್ರಿಯೆ
 8. apoorva

  sunila..
  Pusthaka kondukondiddaru odalu adachaneyagithu.. pusthaka bidugadeya dina prathibha avaru odida kelavondu tuNukugalu odalebekada pusthaka emba bhavaneyannu moodisithu adu ninna e patra roopada vimarsheyannu odida mele innu jasthi yagide.. pusthakavannu athi sheeghradalle oduthene..Prathibha avra barahakke ondu vishishta shakthi ide.. adu nammammu odisikondu hoguvanthe maduthade.. neenu mele helidudara halavu anubhavagalannu avara bere barahagalannu odi padedidde.. haudu idondu vichitra anubhava.. Prathibha avra pusthaka oduva thuditha, hapa hapi yannu innashtu hechugolisida ninage, ninna patrakke, avadhige solmelu…
  pusthaka odi mathe nanna abhipraya ninage thilisuthene..

  ಪ್ರತಿಕ್ರಿಯೆ
 9. umaprakash

  ಅನುದಿನದ ಅಂತರಗಂಗೆ’ ಪುಸ್ತಕ ಓದುವಾ ಆಸೆಯಾಗಿದೆ… ನಿನ್ನ ಅನಿಸಿಕೆ ಇಷ್ಟವಾಯ್ತು N ಪ್ರತಿಭಾ ನಂದಕುಮಾರ್ ಯಾವ ಪುಸ್ತಕಗಳನ್ನು ಓದಿಲ್ಲ, ‘ಅನುದಿನದ ಅಂತರಗಂಗೆ’ ನಾನೂ ಓದಲೇ ಬೇಕು!
  Sunil bro thank u so much for ur feed back; Superb letter !
  Definitely I am going to read the book ASAP 🙂

  ಪ್ರತಿಕ್ರಿಯೆ
 10. malathi S

  abbaa puTTaNNa ninagannisiddannu esTu chennaagi barediddiyaa..khushiyaaytu…i am getting this book soon!!
  🙂
  akka

  ಪ್ರತಿಕ್ರಿಯೆ
 11. ananya

  bidi barahagala moolaka prathibha nandakumar allalli parichitaru. ‘…antaragange’ odalebekenisittu, saadhyavaagiralilla. wil read soon n share wit u. valleya vishleshane sir

  ಪ್ರತಿಕ್ರಿಯೆ
 12. ರವಿ ಮೂರ್ನಾಡು, ಕ್ಯಾಮರೂನ್

  ಅಭಿಪ್ರಾಯದ ಮಾತುಗಳು ತುಂಬಾ ಇಷ್ಟವಾಯಿತು.ಕನ್ನಡ ಸಾಹಿತ್ಯ ಅಂದಾಗ ಮನಸ್ಸು ಮಾತಾಡುವ ಭಾವ ವಿಶೇಷಣಗಳು ಮೈದಾಳುತ್ತವೆ.ಇಲ್ಲಿ ಈ ಲೇಖನ ಸಂಪೂರ್ಣವಾಗಿ ಕನ್ನಡದ ಚಿನ್ನದ ಅಕ್ಷರಗಳಿಗೆ ಸಂಬಂಧಿಸಿದ್ದು,ಆಂಗ್ಲ ಮಾತುಗಳು ಒಕ್ಕಣೆಯಾಗಿರುವುದು ತಿನ್ನುವ ಅನ್ನದಲ್ಲಿ ಕಲ್ಲು ಸಿಕ್ಕಂತೆ ಆಗಿದೆ. ಮಾಧ್ಯಮಗಳೂ ಪ್ರಕಟಣೆಗೆ ಮೊದಲು ಇದನ್ನು ಗಮನಿಸಬೇಕಿತ್ತು. ಹೀಗಿದ್ದಾಗ ಕನ್ನಡವನ್ನು ಪೋಷಿಸುವ ನಾವುಗಳು ಕನ್ನಡವನ್ನು ಎಷ್ಟು ಬೆಳೆಸುತ್ತಿದ್ದೇವೆ ಅನ್ನುವ ಪ್ರಶ್ನೆ ಮುಂದೆ ಬರುತ್ತದೆ. ಭಾಷೆ ನೆಲದ ತಾಯಿ ಬೇರು, ಸಾಹಿತಿಗಳು-ಬರಹಗಾರರು ಅದರ ಪ್ರವಾದಿಗಳು. ಕನ್ನಡದ ಹೃದಯ ಭಾಷೆಯ ಒಂದು ಸಾಹಿತ್ಯ ಬರಹದಲ್ಲಿ ಆಂಗ್ಲ ಮಿಶ್ರಣವಾಗಿದ್ದು ಸರಿಯಲ್ಲ. ಹಾಗಿದ್ದಾಗ ಕನ್ನಡ ರಾಜ್ಯೋತ್ಸವದ ಮೂಲಕ ಒಂದು ತಿಂಗಳ ಸಮಾರಂಭದಲ್ಲಿ ಈ ರೀತಿಯ ತಾಕತ್ತನ್ನು ಪಡೆದುಕೊಳ್ಳುವುದಾದರೂ ಹೇಗೆ ಅಂತ ಹೊರನಾಡಿನ ಕನ್ನಡಿಗರಾಗಿ ಅಹವಾಲು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: