ಪ್ರಭಾಕರ ಚಿಕ್ಕಮಗಳೂರಿಗೆ ಹೋಗಿದ್ದಾನೆ, ಪ್ರಶಾಂತ ಯು ಎಸ್‌ನಲ್ಲಿದ್ದಾನಂತೆ

 

ಪರಮೇಶ್ವರ ಗುಂಡ್ಕಲ್ ಅವರ ‘ಪಿಚ್ಚರ್’ ಬ್ಲಾಗ್ನಲ್ಲಿ ಇದನ್ನು ಓದಿದಾಗ ಒಂದು ಕ್ಷಣ ಈ ಕವಿತೆಯಲ್ಲಿ ನಾವು ನೀವು ಅವರು ಇವರು ಎಲ್ಲರೂ .. ಇದ್ದೀವೇನೋ ಅನಿಸಿತು. ನಾವೆಲ್ಲಾ ಈ ಕವಿತೆಯಲ್ಲಿ ನಮ್ಮನ್ನು ಹುಡುಕಿಕೊಳ್ಳೋಣ ಎಂದು ಇದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.-

 
ಪೊಲೀಷ್‌ ಭಾಷೆಯ ನೊಬಲ್‌ ಪ್ರಶಸ್ತಿ ಪುರಸ್ಕೃತ ಕವಯಿತ್ರಿ ವಿಸ್ಲಾವಾ ಸಿಂಬೋರ್‌ಸ್ಕಾಳ ವಿಶಿಷ್ಟ ಶೈಲಿಯ ಕವಿತೆ ಇದು. ವ್ಯಕ್ತಿಯೊಬ್ಬ ಸತ್ತ ದಿನ ಅವನ ಸಾವನ್ನು ನಿರ್ಭಾವುಕವಾಗಿ `ಆಡಿಕೊಳ್ಳುವು’ದನ್ನು ಕವಯಿತ್ರಿ ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. ಅದನ್ನು ಅಷ್ಟೇ ಅದ್ಭುತವಾಗಿ ಕನ್ನಡಕ್ಕೆ ತಂದಿಡಲು ವಿಕಾಸ ನೇಗಿಲೋಣಿಪ್ರಯತ್ನಪಟ್ಟಿದ್ದಾರೆ!
 
`ಇಷ್ಟು ಬೇಗ, ಹೀಗಾಗುತ್ತೆ ಅಂತ ಯಾರೂ ಕನಸು ಮನಸಲ್ಲೂ ಎಣಿಸಿರಲಿಕ್ಕಿಲ್ಲ’.
`ಒತ್ತಡ ಮತ್ತೆ ಸಿಗರೇಟು, ನಾನು ಎಷ್ಟು ಸಲ ಹೇಳಿದ್ದೆ’.
`ಸದ್ಯ ಹಾಗಾಗಲಿಲ್ಲವಲ್ಲಾ, ಥ್ಯಾಂಕ್ಸ್‌’.
`ಆ ಹೂವಿನ ಬೊಕೆನ ತೆಗೆದುಕೊಡು’.
`ಅವನ ತಮ್ಮ ಇದ್ದನಲ್ಲಾ, ಅವನಿಂದಲೇ ಆಗಿದ್ದು. ಇಡೀ ಸಂಸಾರ ನೋಡಿಕೊಳ್ಳಬೇಕಿತ್ತು’.
`ಅರೆ ನೀನು ಗಡ್ಡ ಬಿಟ್ಟು, ನನಗೆ ಅದು ನೀನೇ ಅಂತ ಗುರುತೇ ಸಿಗಲಿಲ್ಲ ನೋಡು’.
`ಅದು ಅವನದೇ ತಪ್ಪು ಬಿಡು, ಯಾವಾಗಲೂ ಯಾವುದಾದರೂ ಒಂದರಲ್ಲಿ ಸಿಕ್ಕಿಬೀಳುತ್ತಲೇ ಇದ್ದ’.
`ಆ ಹೊಸ ಹುಡುಗ ಏನೋ ಹೇಳೋಕೆ ನೋಡ್ತಿದಾನೆ. ನಾನೆಲ್ಲೂ ಅವನನ್ನು ನೋಡಿದ ನೆನಪಿಲ್ಲವಪ್ಪಾ’.
`ಪ್ರಭಾಕರ ಚಿಕ್ಕಮಗಳೂರಿಗೆ ಹೋಗಿದ್ದಾನೆ, ಪ್ರಶಾಂತ ಯು ಎಸ್‌ನಲ್ಲಿದ್ದಾನಂತೆ’.
`ನೀನೊಬ್ಬನೇ ನೋಡು ಸರಿಯಾಗಿ ನೆನಪಿಟ್ಟುಕೊಂಡು ಕೊಡೆ ತಂದಿದೀಯಾ ಇವತ್ತು’.
`ಅವರೆಲ್ಲರಿಗಿಂತ ಇವನು ಬುದ್ದಿವಂತನಾಗಿದ್ದ ಹೌದು, ಏನಾಯ್ತು?’.
`ಅದು ಹೊಕ್ಕು ಹೊರಡೋ ಮನೆ, ಅಲ್ಲಿಗೆ ಹೋಗಲಿಕ್ಕಿಲ್ಲ ಬಿಡು’.
`ಸರಿ, ಇವನು ಹೇಳಿದ್ದು ಸರೀನೇ. ಆದರೆ ಅದೊಂದೇ ಕಾರಣ ಅಂತ ನನಗೆ ಅನ್ನಿಸೋದಿಲ್ಲವಪ್ಪಾ’.
`ಹೌದು, ಎರಡೂ ಬಾಗಿಲಿಗೆ ಪೈಂಟ್‌ ಮಾಡಬೇಕು, ಎಷ್ಟು ಆಗುತ್ತದೆ ಹೇಳು’.
`ಎರಡು ಕೋಳಿ ಮೊಟ್ಟೆ, ಒಂದು ಟೀಸ್ಪೂನ್‌ ಸಕ್ಕರೆ’.
`ಅದು ಅವನ ಕೆಲಸವೇ ಆಗಿರಲಿಲ್ಲ, ಯಾಕೆ ಸುಮ್ಮನೆ ಸಿಕ್ಕಿ ಹಾಕಿಕೊಳ್ಳಬೇಕಿತ್ತು?’
`ಹೌದು, ನೀಲಿ ಬಣ್ಣದ್ದು, ಸಣ್ಣ ಸೈಜಿಂದು ಬೇಕು’.
`ಐದು ಸಲ ಕೇಳಿದೆ, ಉತ್ತರವೇ ಇಲ್ಲ’.
`ಒಳ್ಳೇದು, ಪಾರ್ಟ್‌ ಟೈಂ ಕೆಲಸವಾದರೂ ಇದೆಯಲ್ಲಾ ಅವಳಿಗೆ ಸದ್ಯ’.
`ನನಗೆ ಗೊತ್ತಿಲ್ಲಪ್ಪಾ, ಅವನ ನೆಂಟರಿರಬೇಕು’.
`ನಾನು ಇಲ್ಲಿಗೆ ಬಂದಿದ್ದೆ, ಆದರೆ ಈ ಜಾಗಕ್ಕೆ ಬಂದಿರಲೇ ಇಲ್ಲ ನೋಡು’.
`ನಿನ್ನೆ ತಾನೇ ನಾನು ಅವನನ್ನು ಕನಸಲ್ಲಿ ಕಂಡಿದ್ದೆ, ಥಟ್ಟನೆ ಎಚ್ಚರವಾಯ್ತು’.
`ಮಗಳು ಅಷ್ಟು ಕೆಟ್ಟದಾಗೇನೂ ಇಲ್ಲ’.
`ಹೌದೌದು, ಅದು ನಮ್ಮೆಲ್ಲರಿಗೂ ಆಗಿದೆ’,
`ಆ ವಿಧವೆಗೆ ನನ್ನ ಹಾರೈಕೆ ಹೇಳಿಬಿಡು’.
`ಇದು ಲ್ಯಾಟೀನ್‌ ಮಂತ್ರದ ಥರ ಕೇಳತ್ತೆ’.
`ಅದು ಬಂತು ಹೋಯ್ತು’.
`ಬರ್ತೀನಿ ಮೇಡಮ್‌’.
`ಎಲ್ಲಾದರೂ ಬಿಯರ್‌ ಸಿಕ್ಕರೆ ತಗೊಂಡು ಹೋಗೋಣ’.
`ಸರಿ ಫೋನ್‌ ಮಾಡು, ಮಾತಾಡೋಣ’.
`ನಾಲ್ಕನೇ ನಂಬರ್ರೋ ಹನ್ನೆರಡನೇ ನಂಬರ್ರೋ’.
`ನಾನು ಈಕಡೆಯಿಂದ ಹೋಗ್ತೀನಿ’.
`ಇಲ್ಲ ಇಲ್ಲ ನಾನು ಬರಲ್ಲ’.
 
 
 

‍ಲೇಖಕರು avadhi

October 11, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

ಕೋಟೆ ಬಾಗಿಲಿಗೆ ಬಂದವರು..

ಕೋಟೆ ಬಾಗಿಲಿಗೆ ಬಂದವರು..

ಮಂಜುನಾಥ್ ಚಾಂದ್ ಧರೆಯ ಒಡಲಿನಿಂದತೊರೆಗಳಾಗಿ ಬಂದವರಗುಂಡಿಗೆಗೆ ತುಪಾಕಿಹಿಡಿಯುವ ಮುನ್ನದೊರೆ ತಾನೆಂದು ಬೀಗಿಸೆಟೆಯುವ ಮುನ್ನನಿನ್ನ ದುಃಖ ನನ್ನ...

ಕಲಾಕೃತಿಗೆ ಜೀವವಾಗಿ ಬಂದವಳು…

ಕಲಾಕೃತಿಗೆ ಜೀವವಾಗಿ ಬಂದವಳು…

ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು  ಕಡು ಬಿಸಿಲಿನ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: