ಕಥೆಗಾರ ಎಂ. ವ್ಯಾಸ ನಿಧನರಾದ ಸುದ್ದಿಯು ಪತ್ರಿಕೆಗಳಲ್ಲಿ ನಿಧನ ವಾರ್ತೆ ಕಾಲಮ್ಮಿನಲ್ಲಿ
(ಎಲ್ಲೋ ಮೂಲೆಯಲ್ಲಿ) ಪ್ರಕಟವಾಯಿತು. ಎಲ್ಲೋ ರಸ್ತೆಯ ಮೇಲೊಂದು ಅಪಘಾತ ಸಂಭವಿಸಿದರೆ ಫೋನ್-
ಇನ್, ನೇರ ಪ್ರಸಾರ ಅಂತೆಲ್ಲ ಅರ್ಧ ಗಂಟೆಗಟ್ಟಲೇ ಪದೇ ಪದೇ ಅಪಘಾತದ ಭೀಕರ ದೃಶ್ಯ ತೋರಿಸಿ,
ವೀಕ್ಷಕರಿಗೆ ಮಾನಸಿಕ ಹಿಂಸೆ ನೀಡುವ ಟಿವಿ ವಾಹಿನಿಗಳು ಕಥೆಗಾರ ವ್ಯಾಸರನ್ನು ಮರೆತೇ
ಬಿಟ್ಟವು.
”ಪ್ರಚಾರದ ಅಬ್ಬರದಿಂದ ದೂರ ಉಳಿದು, ತಣ್ಣಗೇ ‘ಶಾಕ್’ ಕೊಡುವ ಕಥೆಗಳನ್ನು ಕೊಟ್ಟ ವ್ಯಾಸ
ಎಷ್ಟು ಜನ ಪತ್ರಕರ್ತರಿಗೆ ಗೊತ್ತು?” ಎಂದು ನಮ್ಮೂರಿನ ಸಾಹಿತಿಯೊಬ್ಬರು ಕೇಳಿದರು.
ಕಾರ್ಯಕ್ರಮ, ಪತ್ರಿಕಾಗೋಷ್ಠಿಗಳ ಭರಾಟೆ ಮಧ್ಯೆ ಸಿಲುಕಿರುವವರಿಗೆ ಈ ಪ್ರಶ್ನೆ ಕೊಂಚ ವಿಚಿತ್ರ
ಅನಿಸಲೂಬಹುದು. ಆದರೆ ಪ್ರಶ್ನೆಗೆ ಉತ್ತರ ಕೊಡಲೇಬೇಕಲ್ಲವೇ?
– ಆನಂದ, ಜಿಎಲ್ಬಿ
+++
ವ್ಯಾಸರಷ್ಟು ಅವಜ್ಞೆಗೊಳಗಾದ ಇನ್ನೊಬ್ಬ ಕತೆಗಾರ ಕನ್ನಡದಲ್ಲಿ ಇರಲಿಕ್ಕಿಲ್ಲ. ಇದನ್ನು
ವ್ಯಾಸರು ಅತ್ಯಂತ ಆರೋಗ್ಯಕರವಾಗಿ ನಿಭಾಯಿಸಿದರು ಮತ್ತು ಹಾಡುಹಕ್ಕಿಯಂತೆ ಬರೆಯುತ್ತ
ಉಳಿಯಬಲ್ಲವರಾದರು ಎನ್ನುವುದೇ ಮುಖ್ಯ.
-ನರೇಂದ್ರ
ಡಾ.ಶ್ರೀಧರ ಉಪ್ಪೂರ ಇನ್ನಿಲ್ಲ: ಶಿಷ್ಯನ ನೆನೆದ ವಿವೇಕ ರೈ
ಬಿ ಎ ವಿವೇಕ ರೈ ನನ್ನ ವಿದ್ಯಾರ್ಥಿ ಡಾ. ಶ್ರೀಧರ ಉಪ್ಪೂರ ಅವರು ಇವತ್ತು ನಿಧನರಾದ ಸುದ್ದಿ ತಿಳಿದು ಬಹಳ ದುಃಖವಾಯಿತು. ಮೈಸೂರು...
0 ಪ್ರತಿಕ್ರಿಯೆಗಳು