ಪ್ರಸಾದ್ ರಕ್ಷಿದಿ ಬರುತ್ತಿದ್ದಾರೆ…ದಾರಿ ಬಿಡಿ…

bellekere
ಗೆಳೆಯ ಪ್ರಸಾದ್ ರಕ್ಷಿದಿ ತನ್ನ ಈ ಬರೆಹವನ್ನು ‘ಒಂದು ಗ್ರಾಮೀಣ ರಂಗಭೂಮಿಯ ಆತ್ಮಕಥನ’ವೆಂದು ಕರೆದುಕೊಂಡಿದ್ದಾರೆ. ರಂಗಭೂಮಿಯ ಮುಖಾಂತರ ಮಲೆನಾಡಿನ ಪುಟ್ಟ ಜನಸಮುದಾಯವೊಂದು ತನ್ನ ಮಿತಿ ಮತ್ತು ಸಾಧ್ಯತೆಗಳನ್ನು ಕಂಡುಕೊಳ್ಳುವುದರ ನಿರೂಪಣೆ ಎಂಬ ಅರ್ಥದಲ್ಲಿ ಇದು ಒಂದು ಆತ್ಮಕಥನವೇ ಹೌದು. ಆದರೆ ಬೆಳ್ಳೇಕೆರೆ ಹಳ್ಳಿ ಥೇಟರ್, ಮಲೆನಾಡಿನ ಹಳ್ಳಿಯೊಂದರ ರಂಗ ಚಳವಳಿಯ ಕಥನವನ್ನಷ್ಟೇ ಅಲ್ಲ, ಅದು ಆ ಪ್ರದೇಶದ ಜನರ, ಅಂದರೆ ಮನೆಗಳ, ಸಂಸಾರಗಳ ದುಃಖ ದುಮ್ಮಾನ ಹಾಗೂ ಸುಖ ಸಂತೋಷಗಳ ಕಥನವೂ ಆಗಿದೆ.
ಈ ಕೃತಿ ರಂಗ ಅಧ್ಯಯನದ ದೃಷ್ಟಿಯಿಂದ ಉಪಯುಕ್ತ ಮಾಹಿತಿ ಒದಗಿಸುವುದರ ಜತೆಗೆ ಸೊಗಸಾದ ಕಾದಂಬರಿಯಂತೆಯೂ ಓದಿಸಿಕೊಳ್ಳುತ್ತದೆ. ರಂಗ ನಿಷ್ಠೆಯ ಜೊತೆ ಮನುಷ್ಯ ಸ್ವಭಾವದ ಓರೆಕೋರೆಗಳ ಬಗೆಗೂ ಲೇಖಕರು ತೋರುವ ಗಾಢ ಅನುರಕ್ತಿಯಿಂದಾಗಿ ಈ ಕೃತಿಯ ಗದ್ಯ ಹೃದಯಂಗಮವಾಗಿದೆ.ಅಕ್ಷರ ಜ್ಞಾನವಿಲ್ಲದ ಆದರೆ ಸ್ವಾಭಿಮಾನಿಯಾದ ದುಡಿಮೆಗಾರ ತರುಣನೊಬ್ಬ ಸ್ವಾಧ್ಯಾಯಿಯಾಗಿ ಅಕ್ಷರ ಕಲಿಯುವ ವೃತ್ತಾಂತದೊಂದಿಗೆ ಪ್ರಾರಂಭವಾಗುವ ಈ ಕೃತಿ, ಸಮುದಾಯವೊಂದು ಅಕ್ಷರ ಮತ್ತು ರಂಗಭೂಮಿಗಳ ಜೊತೆ ಅನುಸಂಧಾನದ ಮುಖಾಂತರ ಸ್ವಾತಂತ್ರ್ಯ, ಅಸ್ಮಿತೆಗಳತ್ತ ನಡೆಯುವುದರ ರೋಮಾಂಚಕ ಕಥನವಾಗಿದೆ.
-ಜಿ.ರಾಜಶೇಖರ ಬೆನ್ನುಡಿಯಲ್ಲಿ
ಇನ್ನೂ ಓದಬೇಕಾದರೆ: ಚಂಪಕಾವತಿ

‍ಲೇಖಕರು avadhi

January 10, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This