‘ಪ್ರಿಂಟ್ ಆನ್ ಡಿಮ್ಯಾಂಡ್’ ಶುರುವಾಗಿದ್ದು…

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

| ಕಳೆದ ಸಂಚಿಕೆಯಿಂದ |

ಸೆರೆಂಡಿಪಿಟಿ, ನಿರಾಮಯ ಈ ಪುಸ್ತಕಗಳು ಇ-ಪುಸ್ತಕಕ್ಕೇನೋ ಬಂದವು. ಆದರೆ ಸೆರೆಂಡಿಪಿಟಿ ಮುದ್ರಿತ ಪುಸ್ತಕವಾಗಬೇಕು ಎಂದಾಗ – ಪ್ರಾಯೋಗಿಕವಾಗಿ ನಮ್ಮ ಟೆಕ್‌ ಫಿಜ್‌ನ ಇ-ಪುಸ್ತಕ ತಂತ್ರಾಂಶವನ್ನು ಸವಾಲಿಗೊಡ್ಡುವ ಕೆಲಸ ಶುರುವಾಯಿತು. ಇದು ಯುನಿಕೋಡ್‌ನಲ್ಲೇ ಆಗಬೇಕು ಜೊತೆಗೆ, ಇ-ಪುಸ್ತಕವನ್ನು ಸಿದ್ಧ ಪಡಿಸಿದ್ದಕ್ಕಿಂತ ಹೆಚ್ಚಿನ ಕೆಲಸದ ಹೊರೆ ಬೀಳಬಾರದು ಎನ್ನುವುದು ಈ ಪ್ರಯೋಗದ ಮುಖ್ಯ ನಿರ್ಧಾರವಾಗಿತ್ತು. ಪುಸ್ತಕದ ೬೦ ಪುಟಗಳಲ್ಲಿ ಚಿತ್ರಗಳಿದ್ದು, ಅವನ್ನು ಪುಟಗಳ ಲೇಔಟ್‌ಗೆ ಒಗ್ಗಿಸುವ ಕೆಲಸ ಬರಬಹುದು ಎನ್ನುವ ಅರಿವೂ ಇತ್ತು. 

ಪ್ರಿಂಟ್ ಆನ್ ಡಿಮ್ಯಾಂಡ್

‍ಕನ್ನಡದಲ್ಲಿ ಯುನಿಕೋಡ್ ಫಾಂಟುಗಳ ಕೊರತೆ ಇದೆ, ಇರುವ ಫಾಂಟುಗಳಲ್ಲಿ ಚೆಂದದ ಫಾಂಟು, ಪುಸ್ತಕ ಓದುವವರಿಗೆ ಇಷ್ಟವಾಗುವ, ಪುಸ್ತಕ ಪ್ರಕಟಿಸುವವರಿಗೆ ಇಷ್ಟವಾಗುವ ಫಾಂಟುಗಳು ಎನ್ನುವ ಚರ್ಚೆಯೂ ಆಗಬಹುದು ಎಂದು ಎಣಿಸಿರಲಿಲ್ಲ. ನೋಟೋ ಸ್ಯಾನ್ಸ್ ಕನ್ನಡ (Noto Sans Kannada), ಬಾಲೂ ತಮ್ಮ ೨, ಗುಬ್ಬಿ, ಚಲುವಿ, ಲೋಹಿತ್ ಕನ್ನಡ ಹೀಗೆ ಮುಕ್ತವಾಗಿದ್ದ ಫಾಂಟುಗಳನ್ನು ಬಳಸಿದ್ದೆನೇ ಹೊರತು, ಬರಹ, ನುಡಿ ತಂತ್ರಾಂಶಗಳಲ್ಲಿದ್ದ ಫಾಂಟುಗಳ ಪರಿಚಯ ಈಗಲೂ ಅವಶ್ಯವಿದ್ದಷ್ಟು ಮಾತ್ರ.

ಈಗ ಈ ಫಾಂಟುಗಳನ್ನು ಒಂದೆಡೆ ಸೇರಿಸಿ ತೋರಿಸುವ ಫಾಂಟುಗಳ ಸಂಚಯ ಸೃಷ್ಟಿಸುವ ಕೆಲಸಕ್ಕೂ ಒಂದು ಮುನ್ನುಡಿ ದೊರೆಯಿತು. ಕಡೆಗೆ ಬಳಸಲು ನಿರ್ಧರಿಸಿದ್ದು ನೋಟೋ ಸಾನ್ಸ್ ಕನ್ನಡವನ್ನು (ಇ-ಪುಸ್ತಕಕ್ಕೆ ಇದು ಮೊದಲನೇ ಹಾಗೂ ಅಂತಿಮ ಆಯ್ಕೆ). ಪ್ರಿಂಟ್ ಆನ್ ಡಿಮ್ಯಾಂಡ್ – ಅಂದರೆ ನಮಗೆ ಎಷ್ಟು ಪ್ರತಿಗಳು ಬೇಕೋ ಅಷ್ಟನ್ನೇ ಮುದ್ರಿಸಲು ಸಾಧ್ಯವಾಗಿಸುವ ಮುದ್ರಣ ತಂತ್ರಜ್ಞಾನದ ಹೊಸ ಅವತಾರಕ್ಕೆ ‍ಸೆರೆಂಡಿಪಿಟಿ ಸಿದ್ಧವಾಯಿತು. 

‍ಪಿಡಿಎಫ್ ತಯಾರಾಗಿ ಬಂದಾಗ, ಪುಟಗಳ ಸಂಖ್ಯೆ ಎಷ್ಟಿದೆ, ಅದನ್ನು ಕಡಿಮೆ ಮಾಡಲು ಸಾಧ್ಯವೇ ‍ಇತ್ಯಾದಿಗಳ ಕೆಲಸ ಶುರು. ಇದನ್ನು ಎರಡು ರೀತಿ ಸಾಧ್ಯವಾಗಿಸಬಹುದು. ನಾವು ಮುದ್ರಿಸಲು ಯೋಜಿಸಿರುವ ಪುಸ್ತಕದ ಉದ್ದಗಲದ ಅಳತೆಯ ಮೇಲೆ ಕೆಲಸ ಮಾಡುವುದು ಅಥವಾ ಪುಸ್ತಕದಲ್ಲಿ ಬಳಸುವ ಫಾಂಟಿನ ಗಾತ್ರ ಬದಲಿಸುವುದು. ಜೊತೆಗೆ ಬಳಸಿರುವ ಚಿತ್ರಗಳ ಗಾತ್ರದ ಮೇಲೂ ಗಮನ ಹರಿಸುವುದು ಬಹು ಮುಖ್ಯವಾಯಿತು. 

ಕನ್ನಡದ ಫಾಂಟುಗಳ ತೊಂದರೆಯನ್ನು ಒಂದೆಡೆ ಪಟ್ಟಿ ಮಾಡುವುದು ಇಂದಿನ ಮುಖ್ಯ ಅವಶ್ಯಕತೆಯಾಗಿದೆ. ನೋಟೋ ಸ್ಯಾನ್ಸ್ ಬಳಸುವಾಗ ಇ-ಪುಸ್ತಕದಲ್ಲಿ, ವರ್ಡ್ ಪ್ರಾಸೆಸಿಂಗ್ ತಂತ್ರಾಂಶಗಳು ಇತ್ಯಾದಿಗಳಲ್ಲಿ ತೊಂದರೆ ಕಂಡುಬರಲಿಲ್ಲ. ಆದರೆ ಪುಸ್ತಕ ಪಿಡಿಎಫ್ ರೂಪ ಪಡೆದುಕೊಳ್ಳುವಾಗ ಅರ್ಧಾಕ್ಷರಗಳಲ್ಲಿನ ತೊಂದರೆಯನ್ನು ಗಮನಿಸಿದೆವು. ಆಗಸ್ಟ್ ಹಾಗೂ ಅದರಂತೆಯೇ ಅರ್ಧಾಕ್ಷರದಿಂದ ಕೊನೆಗೊಳ್ಳುವ ಪದಗಳಲ್ಲಿ ಹಲಂತ್ – ‍್ ಅಕ್ಷರದ ಮಧ್ಯದಲ್ಲಿ ಮೂಡಿಬರುತ್ತಿರುವುದನ್ನು ನೋಡಿದೆವು. ‍

ಇದರೊಂದಿಗೆ, ನೋಟೋ ಸ್ಯಾನ್ಸ್ ಕನ್ನಡವನ್ನು ನಮ್ಮ ತಂತ್ರಾಂಶದ ಮೂಲಕ ಸೃಷ್ಟಿಸುವಲ್ಲಿ ಹಿನ್ನೆಡೆಯಾಯ್ತು. ‍ಈ ಒಂದು ತೊಂದರೆ ೨೦೧೬ರಲ್ಲೇ ಸರಿಪಡಿಸಲಾಗಿದ್ದರೂ ಪಿಡಿಎಫ್‌ನಲ್ಲಿ ಸರಿಯಾಗಿ ರೆಂಡರ್ ಆಗುತ್ತಿಲ್ಲದಿರುವುದನ್ನು ಗಮನಿಸಬಹುದು. ಈ ದೋಷದ ಬಗ್ಗೆ ಫಾಂಟ್‌ನ ಗಿಟ್‌ಹಬ್ ನಲ್ಲಿ ಇರುವ ಮಾಹಿತಿಯನ್ನು ಇಲ್ಲಿ ಓದಬಹುದು – https://github.com/googlefonts/noto-fonts/issues/1102 

ಗಿಟ್‌ಹಬ್ ಮೂಲಕ ನೋಟೋ ಸ್ಯಾನ್ಸ್‌ನ ಹೊಸ ಆವೃತ್ತಿಯನ್ನು ಪಡೆದರೂ, ಈ ತೊಂದರೆ ನಿವಾರಣೆ ಆಗಲಿಲ್ಲ. ಇದರ ಬದಲಿಗೆ ಬಾಲೂ ತಮ್ಮ ೨ – ಫಾಂಟನ್ನು ಬಳಸಿ (https://fonts.google.com/specimen/Baloo+Tamma+2) ಪುಸ್ತಕದ ಕಡೆಯ ಪ್ರತಿಯನ್ನು ಸಿದ್ಧಪಡಿಸಲಾಯ್ತು. 

‍71073 ಪದಗಳಿದ್ದ ಈ ಪುಸ್ತಕ ಸರಿಸುಮಾರು ೫೦೦‍ ಪುಟಗಳಷ್ಟು ಪ್ರಿಂಟ್ ಮಾಹಿತಿಯನ್ನು ಹೊಂದಿದೆ. ಪ್ರಿಂಟ್ ಆವೃತ್ತಿ ಬಯಸಿದವರಿಗೆ ಇದನ್ನು ತಲುಪಿಸಲು ಪುಸ್ತಕದ ಗಾತ್ರ, ಅದರಲ್ಲೂ ಅದರಲ್ಲಿನ ಪುಟಗಳ ಸಂಖ್ಯೆಯ ಮೇಲಿನ ಹಿಡಿತ ಹೊಂದುವುದು ಬಹುಮುಖ್ಯವಾಯ್ತು. ನಾವು ನಡೆಸಿದ ‍ಸಮೀಕ್ಷೆಯ ಮೂಲಕವೂ ತಿಳಿದಿದ್ದೇನೆಂದರೆ ಇದಕ್ಕೆ ಓದುಗರು ವ್ಯಯಿಸಲು ಇಚ್ಛಿಸಿದ್ದು ೨೫೦-೩೦೦ ಆಸುಪಾಸಿನಲ್ಲೇ.

ಪ್ರಿಂಟ್ ಖರ್ಚು ಕಡಿಮೆ ಮಾಡಲು ಹೆಚ್ಚು ಹಣಕೊಟ್ಟು ಆಫ್‌ಸೆಟ್ ಪ್ರಿಂಟ್ ಮಾಡುವುದು – ಈಗಾಗಲೇ ೫೦೦೦ಕ್ಕೂ ಹೆಚ್ಚು ಡೌನ್‌ಲೋಡ್ ಆಗಿರುವ ಇಪುಸ್ತಕಕ್ಕೆ ಸೂಕ್ತ ಎನಿಸದಿದ್ದರಿಂದ ಪ್ರಿಂಟ್ ಆನ್ ಡಿಮ್ಯಾಂಡ್ (POD) ನಮ್ಮ ಆಯ್ಕೆ ಆಯ್ತು.  290 ಪುಟಗಳಿಗೆ ಬಂದು ನಿಂತ ‍ಮುದ್ರಿತ ಪ್ರತಿಯನ್ನು ೨೫೦ ರೂ. ಗಳಿಗೆ ಸಿಗುವಂತೆ ಮಾಡಿದೆವು.

ಇಂದು ಈ ಪುಸ್ತಕ ಅಮೆಜಾನ್ ಮೂಲಕ ಈ ಕೊಂಡಿಯಲ್ಲೂ – https://amzn.to/35rZy62 ‍, ‍ಋತುಮಾನ ಸ್ಟೋರ್ ಮೂಲಕವೂ ದೊರೆಯುತ್ತದೆ. ಡಾ. ಕಿರಣ್ ವಿ ಎಸ್ ಪುಸ್ತಕವನ್ನು ಜನರಿಗೆ ಮುಕ್ತವಾಗಿ ಲಭ್ಯವಾಗಿಸಿದಾಗಿನಿಂದಲೂ ಇದರಿಂದ ಯಾವುದೇ ಲಾಭ ನಿರೀಕ್ಷಿಸದಿದ್ದವರು, ಪ್ರಿಂಟ್ ವಿಷಯದಲ್ಲೂ – ಲಾಭ ನಿರೀಕ್ಷಿಸದೆ ಲಾಭವನ್ನು ಕನ್ನಡದ ತಾಂತ್ರಿಕ ಕೆಲಸಕ್ಕೆ ಬಳಸಿ ಎಂದು ಉದಾರವಾಗಿ ಎಲ್ಲ ಲಾಭವನ್ನು ನಮ್ಮ ಸಂಚಿ ಫೌಂಡೇಷನ್ ಹಾಗೂ ಸಂಚಯದ ಕನ್ನಡ ತಾಂತ್ರಿಕ ಅಭಿವೃದ್ಧಿಯ ಯೋಜನೆಗಳಿಗೆ ಬಳಸಿಕೊಳ್ಳಲು ಹೇಳಿದರು. ‍

ಇದನ್ನು ಸಾಧ್ಯವಾಗಿಸುವುದು, ಈಗ ಓದುಗರ ಹಾಗೂ ಕನ್ನಡ ತಾಂತ್ರಿಕ ಬೆಳವಣಿಗೆಗಳಿಗೆ ಬೆಂಬಲಿಸುವ ಆಸ್ಥೆ ಉಳ್ಳವರ ಪಾಲಿಗೆ. 

ಮುಂದಿನ ಲೇಖನದಲ್ಲಿ – ಚಿತ್ರಗಳನ್ನು ಒಟ್ಟುಗೂಡಿಸಿದ ಬಗ್ಗೆ, ಅವುಗಳ ಪರವಾನಗಿ, ಅವನ್ನು ಪುಸ್ತಕದಲ್ಲಿ ಒಪ್ಪವಾಗಿಸಿದ ಬಗ್ಗೆ ತಿಳಿಯೋಣ… 

| ಮುಂದಿನ ಸಂಚಿಕಯಲ್ಲಿ |

‍ಲೇಖಕರು ಓಂಶಿವಪ್ರಕಾಶ್

January 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ...

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This