ಪ್ರಿಯಾಂಕಾ ಯಾವ ಲೆಹೆಂಗಾ ತೊಟ್ಟರೆ ನಮಗೇನು…

-ಎಚ್. ಆನಂದರಾಮ ಶಾಸ್ತ್ರೀ

ಸಂಪದ

ವಿವೇಕ್ ಒಬೆರಾಯ್ ಮತ್ತು ಪ್ರಿಯಾಂಕಾ ಆಳ್ವ ವಿವಾಹದ ಸುದ್ದಿಗೆ ಮಾಧ್ಯಮಗಳು, ಅದರಲ್ಲೂ ದೃಶ್ಯಮಾಧ್ಯಮ, ಅತಿಯಾದ ಪ್ರಾಮುಖ್ಯ ನೀಡಿದವು. ವಿವಾಹದ ವಿವರಗಳನ್ನು ಮೂರ್ನಾಲ್ಕು ದಿನ ಅವು ಬಣ್ಣಿಸಿದ್ದೇ ಬಣ್ಣಿಸಿದ್ದು! ದಿನದಿನದ ಕಾರ್ಯಕ್ರಮಗಳು ಏನೇನು, ವಧು ಯಾವ ದಿನ ಯಾವ ಲೆಹೆಂಗಾ ತೊಡುತ್ತಾಳೆ, ಅದನ್ನು ಹೊಲಿದ ದರ್ಜಿ ಯಾರು, ಅವನೂ ಮದುವೆಗೆ ಬರುತ್ತಾನಾ, ಇಂತಹ ವಿವರಗಳೂ ಧುಮ್ಮಿಕ್ಕಿದವು!
ಈ ವಿವಾಹದ ಕಾರ್ಯಕ್ರಮಗಳನ್ನು ತೆಗೆದುಕೊಂಡು ನಾವೇನು ಮಾಡಬೇಕು? ವಧು ಯಾವ ದಿನ ಯಾವ ಲೆಹೆಂಗಾ ತೊಟ್ಟರೆ ನಮಗೇನು?

ಇಂತಹ ವಿವರಗಳನ್ನು ಬಯಸುವ ಮಂದಿಯಿದ್ದಾರೆಂದು ಮಾಧ್ಯಮಗಳು ತಮ್ಮನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಆ ಮಂದಿಯನ್ನು ಉತ್ತಮ ವಿಷಯಗಳತ್ತ ಸೆಳೆಯುವ ಜವಾಬ್ದಾರಿ ಮಾಧ್ಯಮಗಳಿಗಿರುತ್ತದೆ. ವಿವೇಕವಿವಾಹದ ಸಂದರ್ಭದಲ್ಲೇ ಆರು ಜನ ವಿಜ್ಞಾನಿಗಳಿಗೆ ’ಇನ್ಫೊಸಿಸ್ ಪ್ರಶಸ್ತಿ’ ಘೋಷಿಸಲ್ಪಟ್ಟಿತು. ಆ ವಿಜ್ಞಾನಿಗಳ ಸಾಧನೆಯ ವಿವರಗಳನ್ನು ಮಾಧ್ಯಮಗಳು ನೀಡಬಹುದಿತ್ತು. ಅವರನ್ನು ಸಂದರ್ಶಿಸಿ ಅವರ ಪ್ರಯತ್ನಶೀಲದ ಪರಿಚಯವನ್ನು ಜನರಿಗೆ ಮಾಡಿಕೊಡಬಹುದಿತ್ತು.
ಮಾಧ್ಯಮಗಳಿಗೆ ಕರ್ತವ್ಯಾಕರ್ತವ್ಯಪ್ರಜ್ಞೆ ಪ್ರಖರವಾಗಿರಬೇಕು.

‍ಲೇಖಕರು avadhi

October 29, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

5 ಪ್ರತಿಕ್ರಿಯೆಗಳು

 1. Sanjeev

  ಸೆಲೇಬ್ರಿಟಿಗಳ ಹೀಂದೆ ಹೋದ್ರೆ ಒಂದಷ್ಟು Publicity ಸಿಗಬಹುದೆಂಬ ಹುಚ್ಚುತನದ ಪರಮಾವಧಿ.

  ಪ್ರತಿಕ್ರಿಯೆ
 2. Naveen

  Nothing madness in it, As you wanted to know who won infosys award, whats his achievement, how much his wife suffered, I am also interested in knowing who designed the dress. What sort of artistic it is? Whetehr western art, indian art, which dynasties art? etc etc.

  ಪ್ರತಿಕ್ರಿಯೆ
 3. pradeep

  eegaste sampadalli oodde.. ade comment na illu haakideeeni..

  ಇಂದು ಲೈಫ್ ಸ್ಟೈಲ್ ಬಗ್ಗೆನೇ ತುಂಬಾ ಮಗಜಿನೆ ಗಳು ಇವೆ.. ಇದನ್ನ ಇಷ್ಟ ಪಡೋದು ಜೀವನ ಪ್ರೀತಿಯೇ ಹೊರತು ಬೇರೆ ಏನು ಅರ್ಥ ಇದೆ ಅನಿಸಲ್ಲ…, ಮತ್ತು ಇಂದು ನಮ್ಮ ಜೀವನ ಕೂಡ ನೇರವಾಗಿ ಅಥವಾ ಪರೋಕ್ಷವಾಗಿ ಬೇರೆಯದರಿಂದ ಪ್ರಭಾವ ಬೀರಿದ್ದೆ ಆಗಿದೆ.. . ಹೀಗಿದ್ದಲ್ಲಿ ನಮ್ಮ ಪೇಪರ್ ಗಳಲ್ಲಿ ಸ್ವಲ್ಪ ಈ ತರಹ ವಿಷಯ ಇದ್ದರೆ ಯಾಕೆ ಇಷ್ಟು ವಿರೋಧ (ಬಹುಶಃ ಕಸಿವಿಸಿ ) ಗೊತ್ತಾಗಲ್ಲ….

  ಪ್ರತಿಕ್ರಿಯೆ
 4. shashi

  manassige sensor yake guru….ellavoo barali daari bidi. koleta gobbaradanthaha suddigala naduve irali bidi ee langa …lehanga…itydigalu.

  ಪ್ರತಿಕ್ರಿಯೆ
 5. smitha

  Interests differ. It may not be of any use but we definitely ought to get an idea as to how higher society weddings take place. Right from the invitation to the wedding ceremony it is only thro the media that we get to know such things. It is very sad that the Infosys awards given to the 6 scientists was not given much attention.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: