ಪ್ರೆಸ್ ಕ್ಲಬ್ ನಲ್ಲಿ ತೇಜಸ್ವಿ

ನಾಟಕ ವಿಮರ್ಶೆ

– ಡಾ.ಎ.ಆರ್. ಗೋವಿಂದಸ್ವಾಮಿ

  ಇತ್ತೀಚೆಗೆ ಬೆಂಗಳೂರಿನ ಪ್ರೆಸ್ ಕ್ಲಬ್ ಲಂಕೇಶರಂಗ ಮಂಚದಲ್ಲಿ ರಂಗ ವಿಸ್ಮಯ ತಂಡವು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನೆನಪಿನಲ್ಲಿ ಅವರ ರಚನೆಯ ಪರಿಸರದ ವಿಶ್ವರೂಪ ಪರಿಚಯ ಮಾಡಿಕೊಡುವ ವಿಸ್ಮಯ ಕೃತಿಯನ್ನು ಅ.ನಾ.ರಾವ್ ಜಾಧವ್ ರಂಗರೂಪಗೊಳಿಸಿ, ದಿಗ್ಧಶರ್ಿಸಿ, ‘ತೇಜಸ್ವಿ ಪರಿಸರ ಲೋಕ’ ಹೆಸರಿನಲ್ಲಿ ಅಭಿನಯಿಸಿದರು. ತೇಜಸ್ವಿ ಅವರ ವಿಸ್ಮಯ ಕಥೆಗಳು ಮೂರು ಭಾಗಗಳಲ್ಲಿ ಪ್ರಕಟವಾಗಿದೆ. ಇವರು ಕಥೆಗಾರರಾಗಿಯೇ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶ ಮಾಡಿದವರು. ನಂತರ ಕಥೆ, ಕಾದಂಬರಿ, ವೈಚಾರಿಕ ಬರಹ, ವೈಜ್ಞಾನಿಕ ಬರಹಗಳಿಂದ ಕನ್ನಡ ಸಾಹಿತ್ಯಕ್ಕೆ ವೈವಿಧ್ಯವನ್ನು, ವಿಶೇಷತೆಯನ್ನು ತಂದು ಕೊಟ್ಟಿರುವರು. ಇವರು ಕೃಷಿ, ವಿಜ್ಞಾನ, ವಿಸ್ಮಯಗಳನ್ನು ಕುರಿತು ಬೇರೆ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯ ವಲಯಗಳನ್ನು ವಿಸ್ತರಿಸಿದವರು. ಇವರ ಸಾಹಿತ್ಯದ ಕೇಂದ್ರ ಪ್ರಜ್ಞೆ ಪರಿಸರವೆ. ಪರಿಸರ ಎಂದಾಗ ಮರ-ಗಿಡ, ಬೆಟ್ಟ-ಗುಡ್ಡ, ಪ್ರಾಣಿ-ಪಕ್ಷಿ ಮಾತ್ರವಲ್ಲ, ಅದರೊಟ್ಟಿಗೆ ಇರುವ ಅಖಂಡವಾದ ಜಗತ್ತು, ಅದರೊಳಗಿನ ಮಾನವ, ಅವನ ಆಲೋಚನ ಕ್ರಮಗಳನ್ನು ಕುರಿತು ಕೃತಿ ಮಾತನಾಡುತ್ತದೆ. ತೇಜಸ್ವಿ ಅವರ ಪರಿಸರ ಲೋಕದ ರಂಜನೀಯ, ಮೋಜಿನ ಪ್ರಸಂಗಗಳನ್ನು ಒಂದು ‘ರಂಗಕೃತಿ’ಯಾಗಿ ರಂಗದಲ್ಲಿ ಮೂಡಿದೆ ತೇಜಸ್ವಿ ಅವರು ‘ಯಮಳ ಪ್ರಶ್ನೆ’ ಎಂಬ ಏಕೈಕ ನಾಟಕವನ್ನು ಪ್ರಕಟಿಸಿದ್ದರೂ ಅವರ ಬರಹಗಳೆಲ್ಲವೂ ನಾಟಕೀಯ ಗುಣ ಹೊಂದಿರುವುದು ವಿಶೇಷ. ರಂಗಕೃತಿಯು ಸರಳವಾಗಿಯೇ ಹಳ್ಳಿಯ ಪರಿಸರದಲ್ಲಿ ಜರುಗುವ ಸಣ್ಣ ಸಣ್ಣ ಘಟನೆಗಳನ್ನೇ ಕುರಿತು ಮಾತನಾಡುತ್ತಾ ಸಾಗುತ್ತದೆ. ಗಾರೆಕೆಲಸದ ಸೀನಪ್ಪ ಎಲ್ಲರಿಂದಲೂ ಗಾರೆ ಕೆಲಸ ಮಾಡಲು ಮುಂಗಡ ಪಡೆದು ಅರ್ಧಂಬರ್ಧ ಕೆಲಸ ಮಾಡಿ ಯಜಮಾನರ ಕೈಗೆ ಸಿಕ್ಕು ನಡೆಯುವ ಸ್ವಾರಸ್ಯಕರ ಘಟನೆಗಳು, ಕಥೆಗಾರ (ಅ.ನ.ರಾವ್ ಜಾದವ್) ಒಂದು ರೀತಿ ತೇಜಸ್ವಿ ಅವರ ಪ್ರತೀಕದಂತೆಯೇ ಅವರೆ ಮಾತನಾಡುವಂತೆಯೇ ಸೂತ್ರದಾರಿಕೆಯಲ್ಲಿ ಕಥೆಯನ್ನು ಮುನ್ನಡೆಸುತ್ತಾರೆ. ಅವರು ಹೇಳುವ ತಿರುಪತಿಯಲ್ಲಿ ತಲೆ ಬೋಳಿಸುವವನು ಎಲ್ಲರ ತಲೆಯನ್ನು ಸ್ವಲ್ಪ ಕೆರೆದು ಅವರು ಅವನನ್ನು ಬಿಟ್ಟು ಹೋಗಿರುವ ನೂರಾರು ತಂತ್ರ ಹೇಳುತ್ತಾನೆ. ಹೀಗೆ ಈ ಸಣ್ಣ ಸಣ್ಣ ವಿಷಯ, ಘಟನೆಗಳು ಸಹ ಜೀವನದಲ್ಲಿ ಮಹತ್ವದ್ದು ಎಂಬುದನ್ನು ಪ್ರಯೋಗ ಬಹುತೇಕ ನಿರೂಪಣಾ ಶೈಲಿಯಲ್ಲಿಯೇ ಹಾಸ್ಯಾಮಯವಾಗಿ ಹೇಳುವ ಕ್ರಮ ನಿರಸವಾಗದಂತೆ ಮೂಡಿತು. ಇಲ್ಲಿ ಚಪ್ಪಲಿ ಕದಿಯುವ ನಾಯಿ(ಕಿವಿ), ಆಳು ಪ್ಯಾರ, ಮಾರ, ಎಲ್ಲರೂ ಎಡಬಿಡಂಗಿಗಳಂತೆ, ಬುದ್ದಿವಂತರಂತೆ ಏಕಕಾಲದಲ್ಲಿ ಕಾಣುತ್ತಾರೆ. ಇವರು ಕಥೆಗಾರನ ಜೊತೆ ಸ್ವಾರಸ್ಯಮಯವಾಗಿ, ಸಹಜವಾಗಿ ಅಭಿನಯಿಸುವ ಘಟನೆಗಳು ನೆನಪಿನಲ್ಲಿ ಉಳಿಯುತ್ತವೆ. ಮಾರ ದೇವಿಚೌಡಿಗೆ ಕಾಸಿನ ಕಾಣಿಕೆ ಕಟ್ಟ್ವಿ, ಕುಂಕುಮ ಹಾಕಿ ತೋಟದಲ್ಲಿ ಕದಿಯುವವರಿಗೆ ಕೇಡು ಮಾಡಲು ಪ್ರಾಥರ್ಿಸಿದಾಗ, ಕೆಳಗಿನ ಕೇರಿಯ ಚಿಕ್ಕಮಾರಪ್ಪ, ರುದ್ರಣ್ಣ ಹೆದರಿ ಕಥೆಗಾರರಿಗೆ ವಿಷಯ ಮುಟ್ಟಿಸುವ ದೃಶ್ಯ ರಂಜನೀಯ. ಹಳ್ಳಿಯಲ್ಲಿ ಭತ್ತಕ್ಕೆ ಬರುವ ಹಂದಿ ಕಥೆಗಾರರ ಗಿಡ್ಡ, ಭತ್ತ ಮುಟ್ಟದೆ ಎತ್ತರದ ಭತ್ತಕ್ಕೆ ಲಗ್ಗೆ ಹಾಕುವುದು, ಕೋತಿಗಳನ್ನು ಬಂದೂಕಿನಿಂದ ಸುಟ್ಟು ಓಡಿಸುವುದು ಸಾರಾಯಿ+ದೊಣ್ಣೆ ಕೋತಿಗಳಿಗಾಗಿ ಇಡುವುದು, ಕೋತಿಗಳ ಬೋನಿನಲ್ಲಿ ಸಿಕ್ಕಿ ಹಾಕಿಕೊಳ್ಳುವ ಗಾಡ್ಲಿ ದೃಶ್ಯಗಳನ್ನು ಕಥೆಗಾರ ಸಹ ಪಾತ್ರಗಳು ಕಣ್ಣು ಕಟ್ಟುವಂತೆ ಹೇಳುವ ಪರಿ ಚೆನ್ನಾಗಿದ್ದರೂ ಸಹ ಪ್ರಯೋಗ ಬಹುತೇಕ ಮಾತಿನ ಮಂಟಪವೇ ಆಗಿಬಿಟ್ಟಿತು. ಕೆಲವೊಂದು ದೃಶ್ಯಗಳು ಉದಾ: ಕೋತಿಗಳನ್ನು ಹಿಡಿದು ಕಾಡಿಗೆ ಬಿಡುವ ಗಾಡ್ಲಿಯ ದೃಶ್ಯಗಳನ್ನು ನಾಟಕೀಯ ಘಟನೆಯೊಂದಿಗೆ ಘಟನೆ ರಂಗದಲ್ಲಿ ಘಟಿಸಿ, ನಾಟಕೀಯ ಸಂಘರ್ಷ ಇದಿದ್ದರೆ ಪ್ರಯೋಗ ಇನ್ನಷ್ಟು ಪರಿಣಾಮಕಾರಿ ಎನಿಸುತ್ತಿತ್ತು. ಒಟ್ಟಾರೆ ಪ್ರಯೋಗವು ಪರೋಕ್ಷವಾಗಿ ರೈತರಿಗೆ, ಹಳ್ಳಿಜನರಿಗೆ ಅನೇಕ ಒಳ್ಳೆಯ ಟಿಪ್ಸ್ ಗಳನ್ನು ಹೇಳಿ ಕೊಡುತ್ತಾರೆ. ಪ್ರಯೋಗವನ್ನು ಭಾಷಣಕ್ಕೆ ಹೊಂದುವಂತಹ ಲಂಕೇಶರ ರಂಗ ಮಂಚದಲ್ಲಿ ಅದೂ ಹಗಲಿನಲ್ಲಿ ಪ್ರಯೋಗಿಸಿದ್ದರಿಂದ ನಟರಿಗೆ ತಾಂತ್ರಿಕ ತೊಡರುಗಳು ಉದ್ಭವಿಸಿತು. ಬ್ಲಾಕ್ ಔಟ್ ಇರಲಿಲ್ಲ ಗ್ರೀನ್ ರೂಮ್ ಇರಲಿಲ್ಲ, ಪ್ರವೇಶ ನಿರ್ಗಮನಕ್ಕೆ ತೊಂದರೆಯಾಗಿದ್ದು ಬಿಟ್ಟರೆ ರಂಜನೆಗೆ ತೊಂದರೆಯಾಗಲಿಲ್ಲ. ಪ್ರೆಸ್ಕ್ಲಬ್ ಪರಿಸರದ ಕುಚರ್ಿ ಟೇಬಲುಗಳಲ್ಲಿಯೇ ಬಹುತೇಕ ಪತ್ರಕರ್ತರು ಕುಳಿತು ಕಾಫಿ.. ಹೀರುತ್ತಾ ತಿಂಡಿ ತಿನ್ನುತ್ತಲೇ ಆನಂದಿಸಿದ್ದು ವಿಶೇಷ. ಪ್ರಯೋಗವನ್ನು ಅ.ನಾ.ರಾವ್ ಜಾದವ್ ಅವರು ನೈಜರಂಗ ಶೈಲಿಯಲ್ಲಿ ಕಟ್ಟಿದ್ದಾರೆ ಅಲ್ಪ ರಂಗ ಪರಿಕರ ಬಳಕಿ ಇದೆ. ಬಹುತೇಕ ಯುವ ಕಲಾವಿದರು ಭರವಸೆಯೊಂದಿಗೆ ಉತ್ತಮವಾಗಿ ಅಭಿನಯಿಸಿದರು. ಅದರಲ್ಲೂ ಮಲೆನಾಡಿನ ಕನ್ನಡದಲ್ಲಿಯೇ ಭಾವಪೂರ್ಣವಾಗಿ, ಸಹಜ ಕೆಲಸಗಾರನಂತೆ ಅಭಿನಯಿಸಿದ ಆಳು ಮಾರ(ರಾಘವೇಂದ್ರ ಬಿ.ಎಸ್.) ಎಲ್ಲರ ಗಮನ ತನ್ನತ್ತ ಸೆಳೆದರು. ಜಾದವ್ ಸಹ ಬಹುತೇಕ ತಮ್ಮ ಮಾತಿನಲ್ಲಿಯೇ ಪ್ರೇಕ್ಷಕರನ್ನು ಕಡೆಯವರೆವಿಗೂ ಹಿಡಿದಿಟ್ಟ ಪರಿ ಅನನ್ಯ. ಜಾದವ್ ಈ ಹಿಂದೆಯೂ ತೇಜಸ್ವಿ ಅವರ ಕಿರಗೂರಿನ ಗಯ್ಯಾಳಿಗಳು ಮತ್ತು ಕವರ್ಾಲೋ ಕೃತಿಗಳನ್ನು ರಂಗಕ್ಕೆ ಯಶಸ್ವಿಯಾಗಿ ತಂದ ಹೆಗ್ಗಳಿಕೆ ಪಡೆದವರು. ಕಾಳಪ್ಪನಾಗಿ-ಕೌಶಿಕ್ ಚಂದ್ರು, ಅಣ್ಣೇಗೌಡನಾಗಿ-ನವೀನ್. ಎನ್. ಕುಮಾರ್, ಸೀನಪ್ಪ- ಚೇತನ್ ಕುಮಾರ್. ಎನ್, ಪ್ಯಾರ-ವಿಘ್ನೇಶ್, ಗಾಡ್ಲಿ-ಸುದರ್ಶನ , ಚಿಕ್ಕಮಾರ- ಸಂತೋಷ್ , ಚಂದ್ರು- ಶ್ರೀನಿವಾಸ್ ದೇಸಾಯಿ ಅಭಿನಯಿಸಿದರು. ಒಟ್ಟಾರೆ ಪ್ರಯೋಗ ತೇಜಸ್ವಿ ಅವರನ್ನು ಮನನ ಮಾಡಿಸಿತು.      ]]>

‍ಲೇಖಕರು G

April 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: