ಪ್ರೇಮ Recommends

– ಡಾ ಪ್ರೇಮ ಎಚ್ ಎಸ್ ಒಂದು ಓದಲೇ ಬೇಕದ ಪುಸ್ತಕ ಉಷ ಪಿ.ರೈ ರವರ ’ಯಾವ ನಾಳೆಗಳೂ ನಮ್ಮದಲ್ಲ’ ಅವರ ಅಂತರಂಗದಿಂದ ಹರಿದುಬಂದ ಅಂತರಗಂಗೆ ಸ್ವಚ್ಚ ಮತ್ತು ತಿಳಿ.ಮೊನ್ನೆ ಕೈಗೆ ಸಿಕ್ಕ ಪುಸ್ತಕ ವೃತ್ತಿಯ ಬಿಡುವನ ನಡುವೆ ಬಿಡದೆ ಓದಿಸಿಕೊಂಡು ಹೋದ ಒಂದು ಆತ್ಮಕಥನ. ಉಷ ನೋಡಲು ಹೇಗೆ ಚೆಲುವೆಯೂ ಹಾಗೆಯೇ ಅವರ ಮನಸ್ಸು ಮತ್ತು ಬದುಕನ್ನು ನೋಡುವ ಪರಿಯೂ ಚೆಲುವು.ಪ್ರಾರಂಭದಲ್ಲಿ ಯಾವ ವಿಷೇಶ ಘಟನೆಗಳೂ ಇಲ್ಲದಿದ್ದರೂ ಬರೆದಿರುವ ಶೈಲಿ ನಮ್ಮನು ಓದಿಸಿಕೊಂಡು ಹೋಗುತ್ತದೆ, ಆದರೆ ಕಡೆ ಕಡೆಯಲ್ಲಿ ಅವರ ಜೀವನದಲ್ಲಿನ ತಿರುವುಗಳು, ಘಟನೆಗಲೂ ಸಾದರಣರನ್ನು ಬೆಚ್ಚಿಬೀಳಿಸಿದರೆ ಉಷಾರವರು ವಿಷೇಶವಾಗುವುದು ಇಲ್ಲಯೇ. ಅವರ ಗಟ್ಟಿತನ ಹಿಮಾಲಯದಂತೆ ಅಚಲ. ’ಒಂದು ಕಡೆ ……ಮುಚ್ಚಿದ ಬಾಗಿಲಿನಲ್ಲಿ ಉಸಿರುಗಟ್ಟಿ ಇರಲು ಸಾದ್ಯವಿಲ್ಲವಲ್ಲಾ’ ಎನ್ನುವ ಉಷಾರವರು, ಜೀವನದಲ್ಲಿ ಹತಾಷರಾದವರುಗೆ ಮಾದರಿಯಾಗುತ್ತಾರೆ. ’ಈ ಬ್ರೈಟ್ ನೆಸ್ ನ ಹಿಂದೆ ಬಹಳ ಉರಿ ಇದೆ ಇದು ಯಾರಿಗೂ ಕಾಣುವುದಿಲ್ಲ’ ಎನ್ನುವಾಗ ಕಣ್ಣುಗಳು ಒದ್ದೆಯಾಗುತ್ತದೆ. ’ಬದುಕುವುದು ಸಾಕಿನ್ನು. ಸಾವು ಬೇಗ ಬರಲಿ” ಎಂದಾಗ ನಮ್ಮ ಗಂಟಲು ಗಗ್ಧದಿತವಾದರೂ, ಇದು ಉಷಾರವರ ಅಂತರಂಗದಿಂದ ಬಂದದ್ದಲ್ಲ. ಎಲ್ಲೂ ನೋವಿನ ಬರದಲ್ಲಿ ಹಾಗೊಮ್ಮೆ ಅವರಿಗೆ ಅನಿಸಿ ಹೋಗಿರಬೇಕು ಎನಿಸುತ್ತದೆ. ’ಅಜ್ಜೀ ಯು ಶುಡ್ ಲಿವ್ ಟಿಲ್ ಐ ಬಿಕಮ್ ಬಿಗ್’ ಎನ್ನುವ ಮೊಮ್ಮಗನೊಂದಿಗೆ ಸಾಥ್ ಕೊಡುತ್ತಾ “ಉಷಾ ಯು ಶುಡ್ ಲಿವ್ ಟಿಲ್ ವಿ ಗೆಟ್ ಟೆಯರ್ಡ್ ಆಫ್ ಯುವರ್ ಬುಕ್ಸ್ ಅಂಡ್ ಪೇಂಟಿಂಗ್” ಎಂದು ನಾವು ನಿಮ್ಮಮೊಮ್ಮಗನೊಡನೆ ಸೇರಿಕೊಳ್ಳುತ್ತೇವೆ. ಬದುಕನ್ನು ನೋಡುವ ರೀತಿಯನ್ನು ನಾವೆಲ್ಲಾ ಉಷಾರವರಿಂದ ಕಲಿಯಬೇಕು ಅನಿಸುತ್ತದೆ. ಉಷಾ, ನಿಮ್ಮಿಂದಾ ಸೊಗಸಾದ ಬರವಣಿಗೆಗಳನ್ನೂ ಮತ್ತು ಪೇಂಟಿಂಗ್ ಗಳನ್ನು ನೋಡಲು ಕಾಯುತ್ತಿರುವ ನಮಗೆಲ್ಲಾ ನೀವು ಬೇಕು    ]]>

‍ಲೇಖಕರು G

June 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

೧ ಪ್ರತಿಕ್ರಿಯೆ

  1. sumithra.l c

    ಹೌದು, ಪ್ರೇಮಾ ನಾನು ಪುಸ್ತಕ ಕೈಗೆ ಸಿಕ್ಕ ಕೂಡಲೆ ಮೊದಲಿಂದ ತುದಿತನಕ ಓದಿದೆ.ಉಷಾ ಅವರ ಘನವಾದ ವ್ಯಕ್ತಿತ್ವ ,ನಿಷ್ಕಲ್ಮಷ ಮನಸ್ಸು ಒಂದು ಒಳ್ಳೆಯ ಪುಸ್ತಕ ಓದಿದ ಸಾರ್ಥಕ ಭಾವ ಮೂಡಿಸುತ್ತವೆ. ಅವರ ಇಚ್ಚಾಶಕ್ತಿ
    ಅವರ ಜೀವನೋತ್ಸಾಹಗಳು ಹೀಗೆಯೇ ಅವರಿಂದ ಒಳ್ಳೆಯ ಪುಸ್ತಕಗಳು, ಚಿತ್ರಗಳು ಸೃಷ್ಟಿಯಾಗುವಂತೆ ಮಾಡಲಿ.
    ಎಲ್, ಸಿ, ಸುಮಿತ್ರಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: