ಪ೦ಡಿತ್ ಕೆ.ವಿ.ನ೦ದಕುಮಾರ್ ಸ೦ಗೀತ

‍ಲೇಖಕರು G

February 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಜಿ.ಎನ್.ಅಶೋಕ ವರ್ಧನ

    ನಂದ ಕುಮಾರರ ‘ಮನೆಮಾತು’ – ಕರ್ನಾಟಕ ಸಂಗೀತ.ಇವರ ತಂದೆ ವಿಖ್ಯಾತ ವಿದ್ವಾನ್ ಕುರೂಡಿ ವೆಂಕಣ್ಣಾಚಾರ್ ಇವರ ಮೊದಲ ಗುರು ಎಂದೇ ನನ್ನ ತಿಳುವಳಿಕೆ. ಅಂದಿನ ಗ್ಯಾಸ್ (Government Arts & Science) ಕಾಲೇಜಿನಲ್ಲಿ ಇವರು ನನ್ನ ತಂದೆಯ (ಜಿಟಿನಾ) ಪ್ರಿಯ ಶಿಷ್ಯ (ಮತ್ತು ನನಗಿಂತ ಒಂದೆರಡು ವರ್ಷಕ್ಕೆ ಹಿರಿಯ) ಎಂದೇ ನನಗೆ ಪರಿಚಿತ. ಅಲ್ಲೂ ನಾನೊಂದು ಘಟನೆಯನ್ನು ವಿಶೇಷವಾಗಿ ನೆನಪಿಸಿಕೊಳ್ಳಲೇಬೇಕು. ನಾಲ್ವರು ಎನ್.ಸಿ.ಸಿ ಪಟುಗಳು ಹಿಮಾಲಯದಲ್ಲಿ ಸಾಹಸ ಚಾರಣ ನಡೆಸಿ ಅನಾಮಧೇಯ ಶಿಖರವೊಂದನ್ನು ಸಾಧಿಸಿ ಬಂದಾಗ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ಬೆಂಗಳೂರು ವಿವಿನಿಲಯ ಅವರನ್ನು ಸಮ್ಮಾನಿಸುವ ಕಾರ್ಯಕ್ರಮ ನಡೆಸಿದ್ದು ನನಗೆ ಅವಿಸ್ಮರಣೀಯ. ಅಲ್ಲಿ ಸನ್ನಿವೇಶಕ್ಕೆ ತಕ್ಕಂತೆ ನನ್ನ ತಂದೆಯೊಂದು ಸ್ವಾಗತ ಗೀತೆ ರಚನೆ ಮಾಡಿಬಿಟ್ಟಿದ್ದರು. ಅದನ್ನು ತಂದೆಯ ಆಶಯದಂತೆ ನಂದಕುಮಾರ್ ಮನೆಗೊಯ್ದು ಅವರ ತಂದೆಯಿಂದ ರಾಗಬದ್ಧಗೊಳಿಸಿ ಇಬ್ಬರು ಸಹಪಾಠಿ ಮಿತ್ರರೊಡನೆ (ಪುರಂಧರ ಭರಣಿ ನನ್ನ ಪಿಯು-ಸಹಪಾಠಿ, ಮತ್ತೋರ್ವ ನನ್ನ ನೆನಪು ಸರಿಯಾದರೆ ತಿಲಕ್ ಕುಮಾರ್ ಎಂದೇನೋ ಇರಬೇಕು) ಅಭ್ಯಾಸ ಮಾಡಿ ಹಾಡಿದ್ದಂತೂ ಇಂದು ನೆನೆಸುವಾಗಲೂ ನನಗೆ ರೋಮಾಂಚನವಾಗುತ್ತದೆ (ಹಿಮವತ್ ಪರ್ವತ ಶಿಖರದ ಮೇಲೆ ಕನ್ನಡ ಅಣುಗರ ಪ್ರತಾಪಲೀಲೆ. . . . ಹೀಗೇನೋ ಹರಿದಿತ್ತು ಕಾವ್ಯಧಾರೆ). ಕರ್ನಾಟಕ ಸಂಗೀತ ರಾಗರಸಸ್ನಾತ ವಿದ್ವಾನ್ ನಂದಕುಮಾರ್ ಮುಂದೆ ಸ್ವಂತ ಅಪೇಕ್ಷೆಯಿಂದ ಹಿಂದೂಸ್ತಾನೀ ಕಲಿತದ್ದು, ವೆಂಕಣ್ಣಾಚಾರ್ಯರ ಕೀರ್ತಿಪತಾಕೆಯನ್ನು ಅನ್ಯಶಿಖರದ ಮೇಲೂ ಮೆರೆಸಿದ್ದೆಲ್ಲಾ ಈ ಆಮಂತ್ರಣದಲ್ಲಿ ‘ಪಂಡಿತ್’ ಮತ್ತು ಸಮ್ಮಾನದ ಉಲ್ಲೇಖ ನೋಡಿದಾಗ ನೆನಪಿಗೆ ಬಂದು ಸಂತೋಷದ ಹೆದ್ದೆರೆಯಲ್ಲಿ ನಾನು ತೇಲಿಹೋದೆ. ಗೆಳೆಯ ನಂದಕುಮಾರರಿಗೂ ಸಂಗೀತ ಕಚೇರಿಗೂ ನನ್ನ ಅನಂತ ಶುಭಾಶಯಗಳು.
    ಅಶೋಕವರ್ಧನ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಜಿ.ಎನ್.ಅಶೋಕ ವರ್ಧನCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: