ಪ. ಸ. ಅವರ ರೇಖಾ…

img_6777.jpgಪ ಸ ಕುಮಾರ್ ಅವರ ವರ್ಣಚಿತ್ರಗಳು ‘ಅವಧಿ’ ಓದುಗರಿಗೆ ಮೋಡಿ ಹಾಕಿದೆ. ಅವರ ರೇಖಾಚಿತ್ರಗಳನ್ನು ನೀಡುವಂತೆ ಬಹುತೇಕ ಮಂದಿ ‘ಹಕ್ಕೊತ್ತಾಯ’ ಮಂಡಿಸಿದ್ದಾರೆ. ಇಲ್ಲಿದೆ ಅವರ ಇನ್ನೊಂದು ಬಗೆಯ ಪ್ರತಿಭೆಯ ಮಿಂಚು. ಇದಲ್ಲದೆ ಇನ್ನಷ್ಟು ಪಕ್ಕದ ನಮ್ಮ ಫೋಟೋ ಗ್ಯಾಲರಿಯಲ್ಲಿದೆ.

ಒಳಗೂ…ಹೊರಗೂ… ಬ್ಲಾಗ್ ನ ‘ಅಲೆಮಾರಿ’ಯವರ ನೆನಪುಗಳೂ ಇವೆ.

gawnthina.jpg

ಅಲೆಮಾರಿ | [email protected] | olagoo-horagoo.blogspot.com |

ಪ.ಸ.ಕುಮಾರ್-
ನನಗೆ ತುಂಬಾ ಇಷ್ಟದ ಕಲಾವಿದರು. ಅವರೊಂದಿಗೆ ಇದ್ದ ಎಲ್ಲ ಸಂದರ್ಭಗಳಲ್ಲಿ ಅವರ ಆಸಕ್ತಿ, ಉತ್ಸಾಹಗಳನ್ನು ಕಂಡು ನಾಚಿದ್ದೂ ಇದೆ. ಯಾಕೆಂದರೆ ಅವರು ಅಷ್ಟರ ಮಟ್ಟಿಗೆ ಆಕ್ಟಿವ್. ಅವರ ಉತ್ಸಾಹ ಎಂದಾಗ ಅವರೇ ಹೇಳಿದ ಮಾತೊಂದು ನೆನಪಾಗುತ್ತಿದೆ. “ನವರಂಗ ಕಡೆಗೆ ವಾಕ್ ಹೋಗಿದ್ದೆ (ಬಹುಶಃ ಸಂಜೆ). ಎದುರಿಗೆ ಬಂದವರೆಲ್ಲಾ ರಿಟೈರ್ ಆದವರು. ಜೋಲು ಮುಖ ಹೊತ್ತು ಸೋತವರ ಹಾಗೆ ಎದುರಿಗೆ ಬರುತ್ತಿದ್ದರು. ಎಷ್ಟು ದೂರ ಹೋದರೂ ಇಂಥವರೆ. ಅದಕ್ಕೆ ನಾನು ಮಾರನೆ ದಿನದಿಂದ ಆ ಕಡೆ ಹೋಗಲೇ ಇಲ್ಲ. ಅವರನ್ನು ನೋಡಿ ನನ್ನ ಉತ್ಸಾಹ ಕಳೆದುಕೊಳ್ಳೋಕೆ ತಯಾರಿಲಿಲ್ಲ. ಯಾಕಂದರೆ ನಾನಿನ್ನೂ ಯಂಗ್ ಮ್ಯಾನ್.”
ಹೀಗಂದು ಮನಃಪೂರ್ವಕವಾಗಿ ನಕ್ಕಿದ್ದರು.
ಕುಮಾರ್ ಸರ್ ಇಂಥ ಉತ್ಸಾಹಿ ಅನ್ನೋದರ ಜೊತೆಗೆ ಸಹೃದಯಿ ಓದುಗ, ಒಳ್ಳೆಯ ಗಾಯಕ. ಮತ್ತೆ ಅವರಂಥ ಫ್ರೆಂಡ್ ಮತ್ತೊಬ್ಬರು ಇರಲಿಕ್ಕಿಲ್ಲ.
ಅವರ ರೇಖಾ ಚಿತ್ರಗಳ ಮೋಡಿಯನ್ನು ನಾನು ನೋಡಿದ್ದೇನೆ. ಅವರು ರೂಪಕಗಳನ್ನು ಗ್ರಹಿಸಿಕೊಳ್ಳುವ ರೀತಿಯನ್ನು ಅವರ ಬಾಯಿಂದಲೇ ಕೇಳಿದ್ದೇನೆ. ಅಕ್ಷರಗಳನ್ನು ಒಂದು ಪ್ರತಿಮೆಯನ್ನು ಕಟ್ಟಿಕೊಟ್ಟರೆ, ಅದರಷ್ಟೇ, ಅದಕ್ಕಿಂತ ಹೆಚ್ಚು ಸಮರ್ಥವಾದ ಪ್ರತಿಮೆಯೊಂದನ್ನು ಅವರ ರೇಖೆಗಳು ಕಟ್ಟಿಕೊಟ್ಟಿದನ್ನು ನೋಡಿದ್ದೇನೆ. ಇದು ಕುಮಾರ್ ಅವರ ಹೆಗ್ಗಳಿಕೆ.
ಹೀಗಿದ್ದೂ ಒಬ್ಬ ಅಪರಿಚಿತ ಕಲಾವಿದನೊಬ್ಬ ಕಲಾಕೃತಿಯನ್ನು ನೋಡಿದಾಗ ಅವರು ಬೆರಗಿನಿಂದ ನೋಡುತ್ತಿದ್ದರು. “ಇಷ್ಟು ದಿನವಾದರೂ ಒಂದು ಒಳ್ಳೆಯ ಕಲಾಕೃತಿ ಮಾಡಲಾಗಲಿಲ್ಲ. ಇವರು ನೋಡು ಎಂಥೆಂಥ ವರ್ಕ್ ಮಾಡಿದ್ದಾರೆ ” ಅನ್ನುತ್ತಾರೆ.
ನನ್ನ ಅಸಡ್ಡೆಯನ್ನು, ಸೋಮಾರಿತನವನ್ನು ಬೈಯುತ್ತಲೇ ಅವರು ಸಾಹಿತ್ಯ, ಸಂಗೀತ, ಸಿನಿಮಾಗಳ ಬಗ್ಗೆ ಹರಟಿದ್ದಾರೆ.
ನಿಜಕ್ಕೂ ಕುಮಾರ್ ಸರ್ ನಮ್ಮ ಜಗತ್ತಿನ ಗ್ರೇಟ್ ಕಲಾವಿದ.

mooti.jpg

‍ಲೇಖಕರು avadhi

February 28, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This