‘ಫಟಾ ಫಟ್’‌ ವಿಥ್ ಆಕರ್ಷ ಕಮಲ

ಆಕರ್ಷ ಕಮಲ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರವೃತ್ತಿಯಲ್ಲಿ ಹಲವಾರು ಆಸಕ್ತಿಗಳನ್ನು ಹೊಂದಿರುವ ವ್ಯಕ್ತಿ. ‘ಪ್ರೆಸೆಂಟ್‌ ಸರ್’, ‘ಮರೀಚಿ’ ಎಂಬ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ಕೆಂಪಿರ್ವೆ, ಬೀರ್ ಬಲ್‌ ಟ್ರೇಲಜಿ, ಹಾಗೂ ಕಿರುತೆರೆಯ ‘ಮಗಳು ಜಾನಕಿ’ ಧಾರಾವಾಹಿಯಲ್ಲಿಯೂ ಮಿಂಚಿದ್ದಾರೆ.

ಆಕರ್ಷ ಕಾವ್ಯ ಪ್ರಪಂಚದಲ್ಲಿಯೂ ಪರಿಚಿತರೇ. ಅನೇಕ ಕವನ, ಕಥೆಗಳನ್ನು ಬರೆದಿದ್ದಾರೆ. ʼಗ್ರಾಫಿಟಿಯ ಹೂವುʼ ಇವರ ಮೊದಲ ಕವನ ಸಂಕಲನ.  ಆಕರ್ಷ ಇವಿಷ್ಟಕ್ಕೇ ಸೀಮಿತವಾಗಿಲ್ಲ. ಅವರು ಕವಿಯಾಗಿ ಎಷ್ಟು ಶಿಸ್ತಿನಿಂದ ಇರಬಲ್ಲರೋ, ಅಷ್ಟೇ ಸರಳತೆಯ ಕಾಮಿಡಿಯನ್‌ ಕೂಡ ಹೌದು.  ಆಕರ್ಷ ನಡೆಸಿ ಕೊಡುವ ‘ಮೇಟ್ರೋಸಾಗಾ ಕಾಮಿಡಿ’ ಕಾರ್ಯಕ್ರಮವೂ ಇವರೊಳಗಿನ ಕಾಮಿಡಿಯನ್‌ ನ್ನು ಹೊರಹಾಕಿದೆ.

ಕಾಮಿಡಿಯನ್‌ ಆಕರ್ಷ ಜೊತೆಗೆಅವಧಿʼ ನಡೆಸಿದ ಫಟಾ ಫಟ್‌ ಸಂದರ್ಶನ ಇಲ್ಲಿದೆ.

ಕವಿಗೂ ಕಾಮಿಡಿಗೂ ಏನ್‌ ಕನೆಕ್ಷನ್ ?

> ಕನೆಕ್ಷನ್‌ ಅನ್ನೊದಕ್ಕಿಂತ ಕವಿ ಮತ್ತು ಕಾಮಿಡಿಯನ್‌ ಇವೆರೆಡು ನನ್ನೋಳಗಿನ ಎಕ್ಸ್ ಟ್ರೀಮ್‌ ಪರ್ಸನಾಲಿಟಿಗಳು. ಕವಿಯಾಗಿದ್ದಾಗ ಕೊಂಚ ಸೀರಿಯಸ್‌ ಆಗ್ತೀನಿ, ಕಾಮಿಡಿಯನ್‌ ಆಗಿ ಎಲ್ಲರನ್ನು ನಗಿಸ್ತೀನಿ.

ಆಕರ್ಷ ನೀವು, ಕಮಲಾ ಯಾರು ?

> ಎರಡೂ ನಾನೆ. ಅಮ್ಮನ ಹೆಸರು ಕಮಲಾ ಅಪ್ಪನ ಹೆಸರು ರಮೇಶ್‌ ಹೀಗಾಗಿ ನಾನು ಅಪ್ಪ ಅಮ್ಮನ ಇಬ್ಬರ ಹೆಸರನ್ನು ನನ್ನ ಹೆಸರಲ್ಲಿ ಸೇರಿಸಿಕೊಂಡಿದ್ದೇನೆ. ನನ್ನ ಮಗನಿಗೂ ಹಾಗೇ, ನನ್ನ ಮತ್ತು ನನ್ನ ಪತ್ನಿಯ ಹೆಸರನ್ನು ಸೇರಿಸಿದ್ದೇನೆ.

ಮೆಟ್ರೋಸಾಗಾ’ ಕಾಮಿಡಿಗೆ ಐಡಿಯಾಗಳನ್ನ ಎಲ್ಲಿಂದ ತರ್ತಿರಾ ?

> ವೈರಲ್‌ ಆದ ಕಂಟೆಂಟ್‌ ಗಳು, ನಮ್ಮ ಸುತ್ತಮುತ್ತಲಿನವರು, ಸ್ನೇಹಿತರು, ಸಂಬಂಧಿಕರು ಎಲ್ಲ ಪಾತ್ರಗಳು ಕಾಮಿಡಿಯಾಗಬಲ್ಲದು.

ಇಂದ್ರಜಿತ್‌ ಲಂಕೇಶ್‌, ನೀವು ಸಂಬಂಧಿಕರಾ ?

> ಹಿಂದೊಮ್ಮೆ ಪತ್ರಿಕೆಯಲ್ಲಿ ನನ್ನ ಶಾರ್ಟ್‌ ಫಿಲ್ಮ್ ಬಗ್ಗೆ ‘ರೂಡೀಸ್‌ ರಘು’ ಶಾರ್ಟ್‌ ಫಿಲ್ಮ್‌ ನಿರ್ದೇಶನ ಮಾಡಿದ್ದಾರೆ ಅಂತ ಬರೆದಿದ್ದರು. ನಾನು ರೂಡೀಸ್‌ ರಘು , ಇಂದ್ರಜಿತ್‌ ಲಂಕೇಶ್‌ ಎರೆಡೂ ಅಲ್ಲ. ನಾನು ನಾನೇ.

ಕವಿ, ಐಟಿ, ಕಾಮಿಡಿ ಹೇಗೆ ಬ್ಯಾಲೆನ್ಸ್‌ ಮಾಡ್ತೀರಾ  ?

> ಕವಿ, ಐಟಿ , ಕಾಮಿಡಿ ಎಲ್ಲವೂ ನಂಗೆ ಖುಷಿ ಕೊಡುವ ವಿಷಯವೇ. ಖುಷಿಕೊಡುವ ವಿಷಯಗಳಿಗೆ ಟೈಮ್‌ ಕೊಡೋದು ಕಷ್ಟ ಅಲ್ಲ.

‍ಲೇಖಕರು Avadhi

September 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಶೇಷಗಿರಿ’ಯೆಂಬ ರಂಗಪಟ್ಟಣ

‘ಶೇಷಗಿರಿ’ಯೆಂಬ ರಂಗಪಟ್ಟಣ

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This