ಫನ್- ಪನ್: ಬಿಸಿಲ ಫಸಲು

ಒಂದಾನೊಂದು ಕಾಲದಾಗ ಬಂಡವಾಳ ತೊಡಗಿಸದೆ ಇಳಿವ ದಂಧೆಯೊಂದಿತ್ತು : ರಾಜಕಾರಣ. ಈಗಂತೂ ಬಂಡವಾಳದ ಜೊತೆಗೆ ಸಾಕಷ್ಟು ‘ಭಂಡ’ ವಾಳವೂ ಬೇಕು – ಅಂತಾರೆ ಪುಂಡಲೀಕ್ ಸೇ ಟೂ!   ವರ್ಷಕ್ಕೊಂದುದಿನ ಬಂದ A.C.D ನೋಡಿ, ( anti corruption day ) ಲಂಚಗುಳಿ O.C.D (obsessive compulsive disorder) ನಕ್ಕು ಹೇಳಿತಂತೆ: “ಉಳಿದ ೩೬೪ ದಿನವೂ ನನ್ನದೇ ದರ್ಬಾರ್ ಅಂತ ಅಡ್ಮಿಟ್ ಮಾಡಿಕೊಂಡಹಾಗಾಯ್ತಲ್ಲಾ?” ಅಂತಾ. ಗುಡಿಗೊಬ್ಬ ವಾಚ್ಡಾಗ್ ಪೂಜಾರಿ ಇದ್ದಹಾಗೆ, ರಾಜಕಾರಣಿಗೊಬ್ಬ ಅಡ್ವಾನ್ಸ್ ಪಾರ್ಟಿ, ಮರಿ ಪುಡ್ಹಾರಿ ಇದ್ದಹಾಗೆ, ಮನೆಗೆ ಬಂದು ಹೋಗೋರನ್ನ ವಿಚಾರಿಸಿಕೊಳ್ಳೋಕೆ ನಾಯ್ಸ್ ಇರಲೇಬೇಕು; ‘ಬಿವೇರ್ ಆಫ್ ಡಾಗ್ಸ್’ ಅನ್ನೋ ಬೋರ್ಡ್ ನೊಂದಿಗೆ. ಆಗನ್ತುಕರಾರಾದರೂ ನೇರವಾಗಿ ನುಗ್ಗಿದರೋ ‘ಗುರ್ರರ್’ ಅನ್ನೋಕೆ. (ಗುರ್ರರ್ ಅರ್ಥ: ದಿನಕ್ಕೊಂದ್ ಕೇಜೀ ತಿಂದುಕೊಂಡು, ಮನೆಮುಂದೆ ನಾಯಿ ಲ್ಲಿರೋವಾಗ ನೆಟ್ಟಗೆ ನುಗ್ತಿದ್ದೀಯಲ್ಲಾ? ನಿಂಗೇನ್ ಕಣ್ಣು ಕುಡ್ದಾ?)   ಮನುಷ್ಯನ ದೇಹ ಒಂದು ಆಣೆಕಟ್ಟು. ( dam) ಆಯಸ್ಸನ್ನೋದೆ ( age) ಜಲ. ಜಲ ಏರಿದಂತೆಲ್ಲಾ-ತೀರಿದಂತೆಲ್ಲಾ ಅಣೆಕಟ್ಟಿಗೆ ಡ್ಯಾಮೇಜ್ (dam-age) ಅನಿವಾರ್ಯ!   ಚುನಾವಣೇಲಿ ಆದರ್ಶದ ಕ್ಯಾಂಪೆಯಿನ್ ; ಗೆದ್ದು ಕುರ್ಚಿ ಏರಿದಾಗ ಸ್ಕ್ಯಾಮ್ pain! ನೆಕ್ಸ್ಟ್, ತಿಂತನ ಕಡೆದನಾ?   ಬಹುಮಂದಿಗೆ ಉತ್ಸಾಹ ಅನ್ನೋ ‘ಬತ್ತಿ’ ಹತ್ತಿ, ಹಣ ತೆ ಬೆಳಗೋದು, ಕೈ ತುಂಬಾ ಹಣವಿದ್ದಾಗಲೇ. ಹಣ ತೀರಿದ ಕ್ಷಣ, ಉತ್ಸಾಹ ‘ಬತ್ತಿ’ ಹೋಗುತ್ತೆ.   “ನಿಮ್ಮ ಮೇಲಿನ ಕೇಸುಗಳಿಂದ ಮುಕ್ತರಾಗಿ ಹೊರಬನ್ನಿ., ಆವಾಗ ನಿಮಗೆ ಸೂಕ್ತ ಸ್ಥಾನ ಮಾನಗಳನ್ನು ಕಲ್ಪಿಸಿ ಕೊಡಲಾಗುವುದು” ಮೇಲ್ಕಂಡ ಮಾತುಗಳನ್ನು ಕೇಳಿದಾಗ, ಖ್ಯಾತ ರಂಗ ನಿರ್ದೇಶಕ ಆರ್.ನಾಗೇಶ್ ನಿರ್ದೇಶನದ ಚೋಮನದುಡಿ ನಾಟಕದಲ್ಲಿ ಚೋಮನ ಎತ್ತುಗಳನ್ನು ಕೊಳ್ಳಲು ಬರುವ, ನಿಧಾನಗತಿಯ, ಮಲೆಯಾಳಿ ಆಕ್ಸೆಂಟಿನ ಬ್ಯಾರಿಯ ಡೈಲಾಗ್ ನೆನಪಿಗೆ ಬರುತ್ತದೆ. “ಮುಂದಿನ ಮಳೆಗಾಲದೊಳಗೆ ಮಗಳು ಬೆಳ್ಳಿ, ಕಾಫಿ ತೋಟದ ಸಾಲ ತೀರಿಸಿ ಬರುವಳೆಂದು, ತಾನು ತನ್ನ ಎತ್ತುಗಳನ್ನೇ ಹೂಡಿ ಬೇಸಾಯ ಮಾಡುವುದಾಗಿಯೂ ಚೋಮ ಹೇಳಿದಾಗ, ಬ್ಯಾರಿ: ” ಓಹೋ , ಅದು ನಿನ್ನ ಮಗಳು ಕಾಪೀ ತೋಟದ ಚಾಲ ತೀರಿಚಿ ಬಂದ ನಂತರದ ಮಾತು” ಎಂದು ವ್ಯಂಗ್ಯ ಬೆರೆಸಿ ಆಡುವ ಮಾತನ್ನು, ಪರಿಸ್ತಿತಿಯ ಪಿತೂರಿಗೆ ಹೊಂದಿಸಿ ಆಡಿಸುವ ಒಂದೇ ಸಾಲಿನ ಡೈಲಾಗನ್ನು ‘ಎಳೆದೆಳೆದು’ ಹೇಳಲು ನಟರಲ್ಲಿ ಪೈಪೋಟಿಯೇ ನಡೆದಿತ್ತು. ಸಂದರ್ಭ ಕಲ್ಪಿಸಿಕೊಂಡು ನೀವು ಟ್ರೈ ಮಾಡಬಹುದು.   ಬಹುಸಂಖ್ಯಾತ ಮಧ್ಯಮ ವರ್ಗದವರ ಮಾಹಿತಿ ಮತ್ತು ತಿಳುವಳಿಕೆಗಾಗಿ ಎಂತೋ ಅಂತೆ, ಆಳುವ ವರ್ಗದವರ ‘ಶುದ್ದಿ ಶ್ಯೂರ್’ ಆಗಿ ಆಗಬೇಕೆಂದರೆ, ನಿರಂತರ ಸುದ್ದಿ ಸೂರುಗಳನ್ನು ನೀಡಲ್ ( needle?) ‘ಮಾಧ್ಯಮ’ವರ್ಗದ, ಗುಪ್ತ-ಚಿತ್ರರು ಕಂತೆ ಸಮೇತ ಇರಬೇಕಾದದ್ದು ಸಮಾಜಕ್ಕೆ ಅನಿವಾರ್ಯ.   ತಿಂಗಳಾರರ ಹಿಂದೆ ‘throne in’ ಪಟ್ಟಾಭಿಷೇಕ – ಬಿನ್ನಹ ಮತ ವಿರಲಾಗಿ. ಆರು ತಿಂಗಳ ನಂತರ ‘ thrown out’ ಪಟ್ಟಾಭಿshake- ಭಿನ್ನ ಮತ ಎರವಾಗಿ! ಅನ್ನೋದು ಯಾವ ನ್ಯಾಯಾ? end ಗುಟುಕು ರಂಗಭೂಮಿಯಲ್ಲಿ, ನಾಟಕ ಮುಗಿದ ಮೇಲೆ ಪಾತ್ರಪರಿಚಯ.  ]]>

‍ಲೇಖಕರು G

February 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಿರಿಯಾನಿಯಿಂದ ಫಿರ್ನಿವರೆಗೆ..

ಬಿರಿಯಾನಿಯಿಂದ ಫಿರ್ನಿವರೆಗೆ..

ಕೆ ಮುದ್ದುಕೃಷ್ಣ  ಮೈಸೂರಿಗರಿಗೆ ಒಂದು ಸಿಹಿ ಸುದ್ದಿ. ಬಹಳ ವರ್ಷಗಳಿಂದ ದೊಡ್ಡ ಚರ್ಚ್ ಬಳಿ ಮಾತ್ರವೇ ಇದ್ದ ಪ್ರಸಿದ್ದ “ನಶೇಮನ್” ಹೋಟೆಲ್ ಈಗ...

ಪೂಜೆ!!

ಪೂಜೆ!!

ಎಸ್.ಜಿ.ಶಿವಶಂಕರ್ ನನ್ನ ಚಡ್ಡಿ ಫ್ರೆಂಡು ಸುಬ್ಬು ಯಾನೆ ಸುಭಾಶ್ ಲಂಚ್‍ಗೆ ಮುಂಚೆ ಮನೆಗೆ ಹೋಗಿದ್ದು ತಿಳಿದು ಆತಂಕಗೊಂಡೆ. ಕಾರಣ...

ಇದು ನನ್ನ ಸವಾಲ್..

ಇದು ನನ್ನ ಸವಾಲ್..

ನಾಗೇಂದ್ರ ಶಾ  ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This