''ಫಿರ್ ಕಬ್ ಮಿಲೋಗೆ…"

– ಗೋಪಾಲ ವಾಜಪೇಯಿ

“ಫಿರ್ ಕಬ್ ಮಿಲೋಗೆ…?”

ಕಾಕಾ… ನಿನ್ನ ಅಭಿನಯವೇ ಅಭಿನಯ. ಕಣ್ಣಲ್ಲಿ, ತುಟಿಯಲ್ಲಿ, ಬೆರಳಲ್ಲಿ ನೀನು ಹೇಳಬೇಕಾದ್ದನ್ನು ಹೇಳದೆಯೇ ತಿಳಿಸಿಬಿಡುತ್ತಿದ್ದೆ. ಅರಳು ಕಂಗಳಿನ ಆಶಾ ಪಾರೇಖಳೊಂದಿಗೆ, ಗುಳಿ ಗಲ್ಲದ ಶರ್ಮಿಳಾಳೊಂದಿಗೆ, ಕನಸಿನ ಕನ್ಯೆ ಹೇಮಾಳೊಂದಿಗೆ, ಮೊಂಡು ಮೂಗಿನ ಸುಂದರಿ ಮುಮತಾಜಳೊಂದಿಗೆ, ಮುದ್ದುಮುಖದ ನಂದಾಳೊಂದಿಗೆ, ತುಂತುರು ಹನಿಯಂತೆ ಮಾತಾಡುವ ತನುಜಾಳೊಂದಿಗೆ ನೀನು ನಟಿಸಿದ ಚಿತ್ರಗಳು ನಮ್ಮ ನೆನಪಿನಲ್ಲಿ ಉಳಿದದ್ದು ‘ಇತ್ತಫಾಕ್’ ಏನಲ್ಲ. ನೀನು ‘ಆನಂದ’ವನ್ನ ‘ಆರಾಧನಾ’ಭಾವದಲ್ಲಿ ಕಾಣುತ್ತಿದ್ದವನು. ಎಲ್ಲ ಪಡ್ಡೆಗಳು ಡಿಂಪಲ್ ಕಪಾಡಿಯಾಳ ಹುಚ್ಚು ಹಿಡಿಸಿಕೊಂಡು ತಿರುಗುತ್ತಿದ್ದಾಗ ಅವಳನ್ನು ‘ಮನೆ ತುಂಬಿಸಿಕೊಂಡು’ ಅವರೆಲ್ಲರಲ್ಲಿ ಈರ್ಷ್ಯೆ ಮೂಡಿಸಿದವನು. ಅದೇ ಹೊತ್ತಿಗೆ ನಿನ್ನನ್ನು ಮನದಲ್ಲೇ ಮುದ್ದಾಡುತ್ತಿದ್ದ ಲಕ್ಷ ಲಕ್ಷ ಕಾಲೇಜು ಕನ್ಯೆಯರ ಮನಕ್ಕೂ ಗಾಸಿ ಮಾಡಿದವನು. ಎರಡು ನಕ್ಷತ್ರಗಳನ್ನು ನಿನ್ನ ಕೈಗಿತ್ತ ಡಿಂಪಲ್ ಕೈಕೊಟ್ಟಾಗ ‘ಕಟೀ ಪತಂಗ ಹೈ’ ಎಂದೆಲ್ಲ ಅತ್ತುಕೊಂಡು ತಿರುಗಾಡಿದವನು. ಅದೇ ನೋವಿನಲ್ಲಿ ಮದಿರೆಗೆ ಶರಣಾದವನು. ಮೊನ್ನೆ ಮೊನ್ನೆ ನಿನ್ನನ್ನು ಅದಾವುದೋ ಪ್ರಶಸ್ತಿ ಸಮಾರಂಭದಲ್ಲಿ ನೋಡಿದಾಗ ಕರುಳು ಕಿವಿಚಿದಷ್ಟು ಸಂಕಟವಾಯಿತು ನನಗೆ. ನಿನ್ನ ಅಭಿನಯವೇ ಅಭಿನಯ. ಅದಕ್ಕೇ ನೀನು ನಮ್ಮೆಲ್ಲರ ಅಚ್ಚುಮೆಚ್ಚಿನ ‘ಬಾವರ್ಚಿ.’ ಭಾರತೀಯರೆಲ್ಲರ ಅಭಿಮಾನದ ‘ಸೂಪರ್ ಸ್ಟಾರ್.’ ಎಲ್ಲರೂ ಒಂದು ದಿನ ಹೋಗಲೇಬೇಕು ನಿಜ… ಆದರೆ ನೀನು ”ಅಚ್ಚಾ ತೋ ಹಂ ಚಲತೆ ಹೈಂ…” ಎಂದು ಹೇಳಿ ಹೋಗುತ್ತೀ ಅಂದುಕೊಂಡಿದ್ದೆ. ನೀನು ಹೇಳದೆ ಕೇಳ್ದೆ ಹೋಗಿಬಿಟ್ಟೆ. ಇರಲಿ. ನಾವೆಲ್ಲಾ ನಿನಗೆ ಕೇಳುವುದೊಂದೇ ಪ್ರಶ್ನೆ : ”ಫಿರ್ ಕಬ್ ಮಿಲೋಗೆ…”]]>

‍ಲೇಖಕರು G

July 20, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

4 ಪ್ರತಿಕ್ರಿಯೆಗಳು

 1. Dhananjaya Kulkarni

  ಬಹುಶಃ ಕಾಕಾ ಅದಕ್ಕೆ “ಘುಂಗರೂಂಕಿ ತರಾ..ಬಜತಾಹೀ ರಹಾ ಹೂಂ ಮೈ…ಕಭೀ ಇಸ ಪಲ ಮೇ,,ಕಭೀ ಉಸ ಪಲಮೇ..ಬಂದತಾಹೀ ರಹಾ ಹೂಂ ಮೈ….” ಅಂತ ಹಾಡುತ್ತಿರಬೇಕು……

  ಪ್ರತಿಕ್ರಿಯೆ
 2. D.RAVI VARMA

  excellent ….ನಿಮ್ಮ ಬರಹ ಓದುವುದೇ ಒಂದು ವಿಸಿಸ್ಟ ಅನುಭವ, ನನಗಂತೂ ಹೊಸ ಥ್ರಿಲ್ ….. ನಿಮ್ಮ ಚಿಂತನೆ, ಬರಹ ,ನನಗಿನ್ನಿಲ್ಲದ ಕುಶಿ ತಂದು ಕೊಡುತ್ತಿವೆ. ಇತ್ತೀಚಿಗೆ ಹಳೆ ಸಂವಾದ ಓದುತ್ತಿದ್ದೆ,ಅದು ಸಂಗೀತದ ವಿಶೇಷಾಂಕ ,ಅಲ್ಲಿ ನಿಮ್ಮ ಲೇಖನ ಓದಿ ಒಂದಿಸ್ತೊತ್ತು ಮೈಮರೆತು ಬಿಟ್ಟಿದ್ದೆ .
  ರವಿವರ್ಮ ಹೊಸಪೇಟೆ

  ಪ್ರತಿಕ್ರಿಯೆ
 3. vageesh

  ಅವರ ಆನಂದ್ ಸಿನೆಮ ಯಾವಾಗಲು ನೆನಪಾಗುತಿರುತ್ತದೆ , ಹಾಗೆ ಹೋಗಿ ಬಿಟ್ಟರು.

  ಪ್ರತಿಕ್ರಿಯೆ
 4. ಛಾಯಾ

  ಡಿಂಪಲ್ ಕೈಕೊಟ್ಟಿದ್ದು ಅಂದ್ರಲ್ಲಾ ಗುರುಗಳೇ ಕಾಕಾನೇ ಟೀನಾರ ಸಂಪರ್ಕದಲ್ಲಿದ್ರು ಅನ್ನುವ ಅಂಬೋಣವೂ ಇತ್ತಲ್ಲ,ಗಮನಿಸಿ. ಡಿಂಪಲ್ ಕೈಕೊಟ್ಟಿದ್ರೆ ಮತ್ತೆ ಯಾಕೆ ಸಾಥ ನೀಡುತ್ತಿದ್ದಳು. ನೋವಿಗೆ ಕಷ್ಟಕ್ಕೆ ಜೊತೆಯಾದಳಲ್ವಾ? ಯಾಕೆ ಪ್ರತಿಬಾರಿಯೂ ಹೆಣ್ಣಿಗೆ ಬಲಿಪಶುವಾಗುವ ಭಾಗ್ಯ?! ರಾಜೇಶ ಖನ್ನಾರ ಮೇಲೆ ಗೌರವ, ಪ್ರೀತಿ, ಆದರ ಎಲ್ಲವೂ ಇವೆ. ಆದರೂ,,,,, ಆ ರೀತಿಯ ಶಬ್ದಗಳ ಬಳಕೆ ಬೇಡ ಅನ್ಸುತ್ತೆ ಗುರುಗಳೇ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: