ಫೇಸ್ ಬುಕ್ಕಿನಲ್ಲಿ ಪಸರಿಸಿದ ರೂಮಿ ಪರಿಮಳ

ಜಲಾಲುದ್ದೀನ್ ಮುಹಮ್ಮದ್ ಬಾಲ್ಕಿ – ಈ ಹೆಸರು ಕೇಳಿದರೆ ಹುಬ್ಬೇರಿಸುವವರಿಗೆ ’ರೂಮಿ’ ಅನ್ನುವ ಹೆಸರು ಪರಿಚಿತ.  ರೂಮಿಯ ಸಾಲುಗಳು ಒಂದು ಮಿಂಚಿನಂತೆ, ಒಮ್ಮೆ ಹೊಳೆದು ಅದರ ಪ್ರಭೆಯಲ್ಲಿ ನಾವು ಇದುವರೆಗೂ ಅಂದುಕೊಂಡಿದ್ದೆಲ್ಲಾ ಬೇರೇನೋ ಆಗಿ ಕಂಡಂತೆ, ನಮಗೆ ನಾವೇ ಬೇರೆ ತೆರದಲ್ಲಿ ಕಂಡಂತೆ…

ರೂಮಿಯ ಸಾಲುಗಳನ್ನು ಇತ್ತೀಚೆಗೆ ಫೇಸ್ ಬುಕ್ಕಿನಲ್ಲಿ ನೆನಪು ಮಾಡಿಕೊಂಡವರು ಎಸ್ ಸಿ ದಿನೇಶ್ ಕುಮಾರ್.

ಎಸ್ ಸಿ ದಿನೇಶ್ ಕುಮಾರ್

ಅವರು ಅನುವಾದಿಸಿದ ಕೆಲವು ರೂಮಿ ಮುತ್ತುಗಳು ಇಲ್ಲಿವೆ :

೧.

ನನ್ನನ್ನು ತಲುಪಲೆತ್ನಿಸುವ ನಿನ್ನೆಲ್ಲ ಪ್ರಯತ್ನಗಳು…

ನಿನ್ನನ್ನು ಮುಟ್ಟುವ ನನ್ನ ಪ್ರಯತ್ನಗಳೇ ಆಗಿವೆ…

-ರೂಮಿ

All Your Attempt To Reach Me

Are In Fact My Attempts To Reach You

೨.

ಕಣ್ಣುಗಳನ್ನು ಶುದ್ಧವಾಗಿಟ್ಟುಕೋ

ಶುದ್ಧ ಜಗತ್ತನ್ನು ಕಣ್ತುಂಬ ನೋಡು

ನಿನ್ನ ಬದುಕು ತೇಜೋಮಯ ರೂಪಗಳಿಂದ ತುಂಬಿತುಳುಕುತ್ತದೆ…

-ರೂಮಿ

Purify your eyes, and see the pure world…

Your life will fill with radiant forms…

~ Rumi

೩.

ನನ್ನ ಬದುಕು

ನನ್ನ ಶಕ್ತಿ

ನನ್ನ ವಿಶ್ವಾಸ

ಎಲ್ಲವೂ ನಿನ್ನ ಕೈಗಳಲ್ಲಿವೆ…

ಪ್ರೀತಿಯ ಕಡಲಲ್ಲಿ ನನ್ನ ಹರಿಯಬಿಡು

ಹಾಗೆಯೇ ನನ್ನ ತೇಲುಗೊಡು..

-ರೂಮಿ

My Life

My Strength

My Faith are in Your Hands.

Launch me in The Sea Of Love

And Let Me Sail.~Rumii♥

೪.

ಪ್ರೀತಿಯನ್ನು ಕಂಡುಕೊಂಡ ದಿನ

ನಿನ್ನನ್ನು ನೀನು ಕಂಡುಕೊಳ್ಳುವೆ

-ರೂಮಿ

When You Find Love

You Will Find Yourself.~Rumii♥

೫.

ಇದು ನಾನಲ್ಲದಿದ್ದರೆ

ನಾನು ಯಾರು?

ಈ ನುಡಿಗಳು ನನ್ನವಲ್ಲವಾದರೆ

ಇದನ್ನಾಡುತ್ತಿರುವವರು ಯಾರು?

ನಾನೆಂಬುದು ಬರಿಯ ನಿಲುವಂಗಿಯಾಗಿದ್ದರೆ

ನಾನು ಮುಚ್ಚಿಟ್ಟುಕೊಂಡಿರುವುದಾದರೂ ಯಾರನ್ನು?

-ರೂಮಿ

If this me is not I, then

who am I?

If I am not the one who speaks, then

who does?

If this me is only a robe then

who is

the one I am covering?

~Rumi

೬.

ನೀನು ನನ್ನ ಕಣ್ಣುಗಳಲ್ಲೇ ಇದ್ದೀಯ

ಹಾಗಿರದಿದ್ದರೆ

ನಾನು ಬೆಳಕನ್ನು ನೋಡಲು ಹೇಗೆ ಸಾಧ್ಯವಿತ್ತು?

-ರೂಮಿ

“You’re in my eyes, how else could I see the light?” ~Rumii♥

೭.

ನೀರಿನ ಶಬ್ದದೆಡೆಗೆ ಸಾಗುವ ಹಾದಿಯಲ್ಲಿ

ಬಾಯಾರದೆ ನಮಗೆ ಬೇರೆ ದಾರಿಯಿಲ್ಲ…

-ರೂಮಿ

೮.

ನಾನು ಕಂಡುಕೊಂಡಿರುವುದು

ಪ್ರೀತಿ ಮತ್ತು ಪ್ರೀತಿಯೊಂದೇ…

ಆದಿಯಲ್ಲಿ, ಮಧ್ಯದಲ್ಲಿ ಮತ್ತು ಅಜ್ಞಾತ ಅಂತ್ಯದಲ್ಲಿ

ಯಾರೋ ಕೂಗಿ ಕರೆಯುತ್ತಿದ್ದಾರೆ ನನ್ನನ್ನು

ಬಹುಶಃ ಅದು ನನ್ನ ಆತ್ಮವಿರಬೇಕು

ಬಾಗಿಲು ತೆರೆದುಬಿಡು….

-ರೂಮಿ

Love and love alone , That is all I have Known.

In the begining , In The Middle

And to The End Unknown.

Someone is Calling me

I Think it is My Soul, Open The Door……Rumii♥

೯.

ನಾನು ನಿನ್ನ ಸೂರ್ಯಕಾಂತಿಯಾಗಿದ್ದೇನೆ;

ಹಾಗೆಯೇ ನಿನ್ನ ನೆರಳೂ ಕೂಡ….

-ರೂಮಿ

“I Have Become Your Sunshine

and Also Your Shadow.”

~Rumi

೧೦.

ನಾವು ಉಸಿರು ಕಳೆದುಕೊಂಡ ದಿನ

ಈ ನೆಲದಲ್ಲಿ ಸಮಾಧಿ ಹುಡುಕುವುದಕ್ಕಿಂತ

ಮನುಷ್ಯರ ಹೃದಯದಲ್ಲಿ ಕಂಡುಕೊಳ್ಳುವುದು ಒಳಿತು…

-ರೂಮಿ

When we are dead,

seek not our tomb in the earth,

but find it in the hearts of men…

~ Rumi

ರೂಮಿಯ ಮತ್ತೊಂದು ಅನುವಾದ ರಾಘವೇಂದ್ರ ಜೋಷಿಯವರಿಂದ

ರಾಘವೇಂದ್ರ ಜೋಶಿ

ಮುಂದೇ ಇದೇ ಸಾಲುಗಳು ಹುಟ್ಟು ಹಾಕಿದ ಭಾವಗಳು ಇಲ್ಲಿವೆ :

ಜೋಗಿ

ಮಾತ ಎತ್ತರಿಸು

ದನಿಯನ್ನಲ್ಲ.

ಹೂವು ಬಿರಿಯುವುದು

ಸಿಂಚನದಿಂದ:

ಸಿಡಿಲ ಆರ್ಭಟದಿಂದಲ್ಲ

 

ಮಂಜುಳಾ ಬಬಲಾದಿ

ನನಗೇಕೋ ಬೇರೆ ತರಹ ಅನಿಸುತ್ತಿದೆ.. ಅದೂ ಇಂಗ್ಲೀಷ್ ಆವೃತಿ ನೋಡಿದ ಮೇಲೆ ನೀವು..’ನಿನ್ನೊಳಗಿನ’ ಅಂದಿದ್ದೀರಿ.. ಒಳಗು ಅನ್ನೋ ಶಬ್ದ ಬಳಸಿದ ಮೇಲೆ ಹೀಗೆ ಬರೆದರೆ ಚೆನ್ನವೇನೋ!

ನಿನ್ನೊಳಗಿನ ದನಿಯನ್ನು ಎತ್ತರಿಸು,

ಬರೀ ಶಬ್ದಗಳನ್ನಲ್ಲ..

ಹೂವರಳುವುದು ಹನಿ ಮಳೆಯಿಂದ,

ಗುಡುಗಿನಿಂದಲ್ಲ!

ಒಂದು ಕವನ, ಎಷ್ಟು ಭಾವ! ಫೇಸ್ ಬುಕ್ಕಿನಂತಹ ವೇದಿಕೆ ಒಂದು ಆಸಕ್ತಿ ಪೂರ್ಣ ಚರ್ಚೆಗೆ ವೇದಿಕೆಯಾಗಬಲ್ಲದು ಎನ್ನುವುದಕ್ಕೆ ಇದು ಒಂದು ಉದಾಹರಣೆ ಅಷ್ಟೆ!

‍ಲೇಖಕರು G

September 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

14 ಪ್ರತಿಕ್ರಿಯೆಗಳು

 1. rj

  ಹೌದು.ಸಾಮಾಜಿಕ ತಾಣಗಳು “ಊಟ ಆಯ್ತಾ?”, “chilling out now”, “wanna something?” ಗಳ ನಡುವೆಯೇ ಇಂಥದೊಂದು ಚಟುವಟಿಕೆಗಳಿಗೂ ಸಾಕ್ಷಿಯಾಗುತ್ತಿರುವದು ಖುಷಿ ಕೊಡುವ ಸಂಗತಿ.. 🙂
  -RJ

  ಪ್ರತಿಕ್ರಿಯೆ
 2. ಚಂದಿನ

  ನನ್ನದೊಂದು ಪುಟ್ಟ ಪ್ರಯತ್ನ:

  You are in my eyes, how else I could see the light?

  ನನ್ನ ಕಣ್ಣೊಳಗೇ ನೀನಿರುವೆ, ಇಲ್ಲವಾದಲ್ಲಿ ಬೆಳಕು ಕಾಣಲು ನನಗೇಗೆ ಸಾಧ್ಯ?

  Raise your words, not voice.
  It is rain that grows flowers, not thunder.

  ವಿವೇಕ ವೃದ್ಧಿಸಲಿ, ಸದ್ದಿನ ಸಡಗರವಲ್ಲ.
  ಹೂ ಬಿಡುವುದು ಮಳೆಯಿಂದ, ಸಿಡಿಲ ಅಬ್ಬರದಿಂದಲ್ಲ.

  ಪ್ರೀತಿಯಿಂದ
  – ಚಂದಿನ

  ಪ್ರತಿಕ್ರಿಯೆ
 3. vasudhendra

  ಜೋಗಿ, ಜೋಶಿ ಜೋಡಿ ನನ್ನದೊಂದು ಪ್ರಯತ್ನ:

  ಅರ್ಥ ಹಿಗ್ಗಲಿ
  ವ್ಯರ್ಥ ಶಬ್ದವಲ್ಲ; ಹೂ
  ಬಿಡಲು ಬೇಕು ಮಳೆ
  ಗುಡುಗಲ್ಲ

  ಪ್ರತಿಕ್ರಿಯೆ
 4. vasudhendra

  ಬೆಳಕು ಕಾಣಲಿ ಹೇಗೆ?
  ನೀನಿರದೆ ಕಣ್ಣೊಳಗೆ

  ಗೋರಿ ಹುಡುಕದಿರು ಸತ್ತಾಗ ಭುವಿಯೊಳಗೆ
  ಇರುವೆ ನಾ ರಸಿಕರ ಎದೆಯೊಳಗೆ

  ನಿನ್ನ ಪ್ರಭಾವಳಿಯೂ ನಾನೆ
  ನಿನ್ನ ಕರಿನೆರಳೂ ನಾನೆ

  ಪ್ರತಿಕ್ರಿಯೆ
 5. vasudhendra

  When You Find Love
  You Will Find Yourself

  ನೀನೆ ಕಾಣುವೆಯಲ್ಲಿ
  ಕಂಡಾಗ ಪ್ರೀತಿಯಲಿ

  If this me is not I, then
  who am I?
  If I am not the one who speaks, then
  who does?
  If this me is only a robe then
  who is
  the one I am covering?

  ಈ ನಾನು ನಾನಲ್ಲದಿರೆ, ನಾನ್ಯಾರು?
  ಈ ಮಾತು ನನ್ನದಲ್ಲದಿರೆ, ಮತ್ಯಾರು?
  ಈ ನಾನು ಸುತ್ತಿರುವ ನಿಲುವಂಗಿಯಾದರೆ, ನಾನು ಸುತ್ತಿರುವದು ಅದ್ಯಾರು?

  ಪ್ರತಿಕ್ರಿಯೆ
 6. vasudhendra

  Purify your eyes, and see the pure world…
  Your life will fill with radiant forms…

  ಶುದ್ಧ ಜಗವ ನೋಡಲು ಶುದ್ಧ ಕಣ್ಣಿರಲಿ
  ಬದುಕು ತುಂಬುವದಾಗ ತೇಜಪುಂಜದಲಿ

  ಪ್ರತಿಕ್ರಿಯೆ
 7. vasudhendra

  My Life
  My Strength
  My Faith are in Your Hands.
  Launch me in The Sea Of Love
  And Let Me Sail

  ನನ್ನ ಜೀವನ, ನನ್ನ ಚೇತನ, ನನ್ನ ವಚನವು ನಿನ್ನ ಕೈಯಲ್ಲಿ;
  ನನ್ನ ಯಾನಕೆ ಎಂದೆ ತೇಲಿ ಬಿಡು ನನ್ನನ್ನೆ ನಿನ್ನ ಆ ಪ್ರೇಮದ ಕಡಲಿನಲ್ಲಿ.

  ಪ್ರತಿಕ್ರಿಯೆ
 8. vasudhendra

  All Your Attempt To Reach Me
  Are In Fact My Attempts To Reach You

  ನನ್ನ ಸೇರುವ ನಿನ್ನೆಲ್ಲ ಯತ್ನ
  ನಿನ್ನ ಸೇರುವ ನನ್ನೆಲ್ಲ ಪ್ರಯತ್ನ

  ಪ್ರತಿಕ್ರಿಯೆ
 9. Girish.S

  When you do things from your soul,you feel river moving in you,a joy.
  ನೀನು ಚೈತನ್ಯದಾಯಕವಾಗಿ ಏನಾದರು ಕೆಲಸ ಮಾಡಿದರೆ,ನಿನ್ನೊಳಗೆ ಉಲ್ಲಾಸವೆಂಬ ನದಿ ಹರಿಯುತ್ತದೆ…

  ಪ್ರತಿಕ್ರಿಯೆ
 10. ಸುಧಾ ಚಿದಾನಂದಗೌಡ

  ಜುಳುಜುಳು ಇಂಪು ಈ ಕಾವ್ಯಝರಿಯು
  ಕನ್ನಡದಲ್ಲಿ ಧಾರಾಕಾರ ರೂಮಿಯು
  ರೂಮಿಯೋ ಅಲ್ಲಮನೋ ಅಕ್ಕನೋ
  ಅನುರಾಗಕೆ ಆಧ್ಯಾತ್ಮ ಬೆರೆಸಿ
  ಬದುಕಬಂಡಿ ಹಗುರಾಗಿಸಿಹರು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: