ಫೇಸ್ ಬುಕ್ : ಲಾಂಗ್ ಲಿವ್ ಕಾರ್ಟೂನಿಂಗ್..

– ಪ್ರಕಾಶ್ ಶೆಟ್ಟಿ

ಈ ವರ್ಷದ ಆರಂಭಕ್ಕೆ ನಾನು ಪ್ರಕಟಿಸಿದ ‘ವಾರೆಕೋರೆ’ ಯಲ್ಲಿ ‘ನಿದ್ರಾಭಂಗ ಮಾಡಿದ ವ್ಯಂಗ್ಯಚಿತ್ರಗಳ’ ಬಗ್ಗೆ ಸಚಿತ್ರ ಮಾಹಿತಿ ಇದೆ…. ಪ್ರಪಂಚದಲ್ಲೆಲ್ಲಾ ಪ್ರಕಟವಾಗುವ ಹಲವಾರು ವ್ಯಂಗ್ಯಚಿತ್ರಗಳು ಅದೆಷ್ಟು ಮೊನಚಾಗಿರುತ್ತವೆಯೆಂದರೆ ಅವುಗಳು ಅನೇಕ ಮಂದಿಯ ನಿದ್ದೆಗೆಡಿಸಬಲ್ಲುದು. ಆದರೆ ಹಾಗಾಗುವುದು ಬಹಳ ಕಡಿಮೆ. ಈ ನಡುವೆ ಅಪರೂಪಕ್ಕೊಮ್ಮೆ ಇಂತಹ ಚೂಟಿ ವ್ಯಂಗ್ಯಚಿತ್ರಗಳು ಅಪ್ಪಿತಪ್ಪಿ ಸಂಬಂಧಿಸಿದವರ ಮೂಗಿನ ನೇರಕ್ಕೆ ಬಂದು, ತಲೆಗೆ ಏರಿ ರಾದ್ಧಾಂತವಾಗುವುದಿದೆ… ಇದು ಅದರ ಟಿಪ್ಪಣಿ. ಯಾವ ಕೆಟ್ಟಗಳಿಗೆಯಲ್ಲಿ ಇದು ಪ್ರಕಟವಾಯಿ ತೋ ಅಂದಿನಿಂದ ದೇಶದಲ್ಲಿ ವ್ಯಂಗ್ಯಚಿತ್ರಹರಣ ನಡೆಯುತ್ತಿದೆ! ಶಂಕರ್ ಅವರ ಕಾರ್ಟೂನ್ಸ್ ಆಯಿತು. ವ್ಯಂಗ್ಯಚಿತ್ರಕಾರನೊಬ್ಬನ ಮೇಲೆ ಮಮತಾ ದೀದಿಯ ದಾದಾಗಿರಿ-ಗಿಟ್ಲೆ ನಡೆಯಿತು. ಈಗ ನೋಡಿ! ತ್ರಿವೇದಿ ಎಂಬ ಕಾರ್ಟೂನಿಸ್ಟನಿಗೆ ‘ದೇಶದ್ರೊಹ “‘ ಎಂಬ ‘ಬಿರುದು’! ದೇಶದಲ್ಲಿ ನಡೆಯುವ ಅನಾಚಾರಗಳನ್ನು ರಾಷ್ಟ್ರ ಲಾಂಛನ, ಪಾರ್ಲಿಮೆಂಟ್, ಭಾರತ ಮಾತೆಯ ಅತ್ಯಾಚಾರ ಮುಂತಾದವುಗಳ ಮೂಲಕ ಪತಿಬಿಂಬಿಸಿರುವುದು ಮಹಾ ದೇಶ ಭಕ್ತ ವಕೀಲನೊಬ್ಬನ ಕಣ್ಣಿಗೆ ಗುರಿಯಾಗಿದೆ. ಕಾನೂನಿನ ಅರಿವಿರಬೇಕಾದ ಈತ ಮೊಕದ್ದಮೆ ಹೂಡುವ ಬದಲು, ನೇರ ಪೊಲೀಸ್ ದೂರು ನೀಡಿದ್ದಾನೆ! ಅದೂ ‘ದೇಶದ್ರೋಹ’ದ ಆರೋಪ!

ಮೊದಲನೇದಾಗಿ, ಈ ದೇಶದ್ರೋಹ ಕಾನೂನು ಭಾರತೀಯರೆಲ್ಲರೂ ಉಗಿಯುತ್ತಿದ್ದ ಹಳೇ ಬ್ರಿಟೀಷರ ಅಸ್ತ್ರ. ಎರಡನೇಯದಾಗಿ, ಒಬ್ಬ ವ್ಯಂಗ್ಯ ಚಿ ತ್ರಕಾರನನ್ನು ಎಕ್‌ದಂ ಬಂಧಿಸುವುದಕ್ಕೆ ಈಗ ತುರ್ತು ಪರಿಸ್ಥಿತಿ ಘೋಷಣೆಯನ್ನು ಯಾರೂ ಮಾಡಿಲ್ಲವಲ್ಲ! ಭಾರತದಲ್ಲಿನ ಪ್ರಸ್ತುತ ಸ್ಥಿತಿ ನೋಡಿದರೆ ತ್ರಿವೇದಿಯ ಕೋಪ ಮಿ ಶ್ರಿತ ವ್ಯಂಗ್ಯವನ್ನು ಭಾರತೀಯರೆಲ್ಲರೂ ಅರ್ಥ ಮಾಡಿಕೊಳ್ಳಬಹುದು. ಅವರ ಕಾರ್ಟೂನ್ ಗಳಲ್ಲಿ ದೇಶಕ್ಕೆ ಕಂಟಕಪ್ರಾಯವಾಗಿರುವ ಭ್ರಷ್ಟಾಚಾರದ ಬಗ್ಗೆ ಕಳವಳ ಇದೆ. ಇಲ್ಲಿ ಗಮನಿಸ ಬೇಕಾದ ಸಂಗತಿಯೆಂದರೆ , ಈತ ಯಾವುದೇ ಪತ್ರಿಕೆಗೆಂದು ಕಾರ್ಟೂನುಗಳನ್ನು ಮಾಡಿಲ್ಲ. ಆತನದ್ದು ಪ್ರತಿಭಟನೆಯ ಕಾರ್ಟೂನುಗಳು .ವೆಬ್ ಸೈಟ್, ಪ್ರದರ್ಶನಗಳು ಆತನಿಗೆ ವೇದಿಕೆ . ಯಾವನೇ ಭಾಷಣಕಾರನಿಗಾಗಲಿ, ಬರಹಗಾರನಿಗಾಗಲಿ ಹೇಳಲಾಗದನ್ನು ಈ ವ್ಯಂಗ್ಯಚಿತ್ರಕಾರ ಮಾಡಿದ್ದಾನೆ! ಇದು ಒಬ್ಬ ವ್ಯಂಗ್ಯ ಚಿತ್ರಕಾರನ ಶಕ್ತಿ! ವ್ಯಂಗ್ಯ ಚಿತ್ರರಂಗ ಇನ್ನೂ ಜೀವಂತವಿದೆಯಲ್ಲಾ, ಬಚಾವ್! ಲಾಂಗ್ ಲಿವ್ ಕಾರ್ಟೂನಿಂಗ್.  ]]>

‍ಲೇಖಕರು G

September 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: