ಫೋಟೋಗ್ರಫಿಯ 'ಹಕ್ಕ ಮತ್ತು ಬುಕ್ಕ'

kumv-020ಶಿವು.ಕೆ. ಮತ್ತು ಮಲ್ಲಿಕಾರ್ಜುನ.ಡಿ.ಜಿ. ಲಂಡನ್ನಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ(Associate) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.ರಾಯಲ್ ಫೋಟೋಗ್ರಫಿ ಸೊಸೈಟಿಯ ಮನ್ನಣೆಗೆ ಪಾತ್ರರಾಗುವುದು ಹೆಮ್ಮೆಯ ಸಂಗತಿ.
ಶಿವು ಪಿಕ್ಟೋರಿಯಲ್ ವಿಭಾಗದಲ್ಲಿ ಪಡೆದಿದ್ದರೆ, ಮಲ್ಲಿಕಾರ್ಜುನ ನೇಚರ್ ವಿಭಾಗದಲ್ಲಿ ಪಡೆದಿರುವರು.
ಈ ಗೌರವಕ್ಕೆ ಪಾತ್ರ್ರಾಗಲು ಬೇಕಾದ ಅರ್ಹತೆಗಳು:
royal-photographic-societyಪಿಕ್ಟೋರಿಯಲ್ ಅಥವಾ ನೇಚರ್ – ಈ ರೀತಿ ಒಂದೇ ವಿಷಯದ ಬೆನ್ನು ಬಿದ್ದು, ಹಲವು ವರ್ಷಗಳ ಸಾಧನೆ, ಪರಿಶ್ರಮವನ್ನು ತಮಗೆ ಬಂದಿರುವ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಮೂಲಕ ನಿರೂಪಿಸಬೇಕು. ಕನಿಷ್ಟ ಐದು ದೇಶಗಳಲ್ಲಿ ಛಾಯಾಚಿತ್ರಗಳು ಬಹುಮಾನ ಪಡೆದಿರಬೇಕು ಅಥವಾ ಪ್ರದರ್ಶನಗೊಂಡಿರಬೇಕು.
ತಮ್ಮ ಹದಿನೈದು ಉತ್ತಮ ಚಿತ್ರಗಳನ್ನು ರಾಯಲ್ ಫೋಟೋಗ್ರಫಿ ಸೊಸೈಟಿಯವರಿಗೆ ಕಳಿಸಬೇಕು. ಅವನ್ನು ಅವರ ಕಮಿಟಿಯವರು ಪರಿಶೀಲಿಸಿ, ಅತ್ಯುತ್ತಮವಾಗಿದ್ದರೆ ಮಾತ್ರ ಈ ಗೌರವವನ್ನು ಪ್ರಧಾನ ಮಾಡುವರು.
೧೮೫೩ರಲ್ಲಿ  ರಾಯಲ್ ಫೋಟೋಗ್ರಫಿ  ಸೊಸೈಟಿಯಿಂದ  ಇದುವರೆಗೂ  ೧೩೨ ಭಾರತೀಯರು  ಈ  ಗೌರವಕ್ಕೆ  ಪಾತ್ರರಾಗಿದ್ದಾರೆ.  ಈ  ವರ್ಷ  ವಿಶ್ವದಾದ್ಯಂತ  ಈ  ಮನ್ನಣೆ  ೨೯ ಜನ  ಛಾಯಾಗ್ರಾಹಕರಿಗೆ  ಸಿಕ್ಕಿದೆ.  ಅದರಲ್ಲಿ  ಭಾರತೀಯರು  ಇವರಿಬ್ಬರು  ಮಾತ್ರ.

‍ಲೇಖಕರು avadhi

March 20, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

34 ಪ್ರತಿಕ್ರಿಯೆಗಳು

 1. prakash hegde

  ವಾವ್… !!!
  ಸಣ್ಣ ವಯಸ್ಸಿನಲ್ಲಿ ..
  ದೊಡ್ಡ ಸಾಧನೆ ಗೈದ ಇಬ್ಬರಿಗೂ..
  ಹ್ರದಯ ಪೂರ್ವಕ ಅಭಿನಂದನೆಗಳು…
  ನಮ್ಮ ನಾಡು ಹೆಮ್ಮೆ ಪಡುವಂಥ ವಿಷಯ…!!
  ಇಬ್ಬರೂ ಇನ್ನಷ್ಟು ಸಾಧನೆ ಮಾಡಿ..
  ದೇಶಕ್ಕೆ ನಾಡಿಗೆ ಕೀರ್ತಿ ತರಲೆಂದು
  ಹಾರೈಸೋಣ…

  ಪ್ರತಿಕ್ರಿಯೆ
 2. Chitra karkera

  ಮೇರಾ ಭಾರತ್ ಮಹಾನ್…! ತುಂಬಾ ಖುಷಿಯಾಗುತ್ತಿದೆ. ಹಕ್ಕ-ಬುಕ್ಕರಿಗೆ
  ಇದೋ ಅಭಿನಂದನೆಗಳು.
  ಭೇಷ್ ಮಲ್ಲಿಯಣ್ಣ ಮತ್ತು ಶಿವಣ್ಣ
  -ಚಿತ್ರಾ ಕರ್ಕೇರಾ

  ಪ್ರತಿಕ್ರಿಯೆ
 3. Tejaswini

  ಮಲ್ಲಿಕಾರ್ಜುನ ಅವರಿಗೆ ಹಾಗೂ ಶಿವು ಅವರಿಗೆ,
  ಹಾರ್ದಿಕ ಶುಭಾಶಯಗಳು. ನಿಜವಾಗಿಯೂ ಹೆಮ್ಮೆಯೆನಿಸುತ್ತಿದೆ. ಸಾಧನೆಗಳಿಗಾಗಿ ಅಭಿನಂದನೆಗಳು. ಮತ್ತಷ್ಟು ಪ್ರಶಸ್ತಿಗಳು ನಿಮಗೆ ದೊರಕುವಂತಾಗಲಿ. ತನ್ಮೂಲಕ ಭಾರತವೂ ಮೆರೆಯುವಂತಾಗಲಿ.

  ಪ್ರತಿಕ್ರಿಯೆ
 4. ಶ್ರೀದೇವಿ ಕಳಸದ

  ಶಿವು ಹಾಗೂ ಮಲ್ಲಿಕಾರ್ಜುನ್‌ ಅವರೆ ತುಂಬಾ ತುಂಬಾ….ಕಂಗ್ರಾಟ್ಸ್‌! ಹೆಮ್ಮೆ ಎನ್ನಿಸುತ್ತಿದೆ.

  ಪ್ರತಿಕ್ರಿಯೆ
 5. minchulli

  ಸಣ್ಣ ವಯಸ್ಸಿನಲ್ಲಿ ..
  ದೊಡ್ಡ ಸಾಧನೆ ಗೈದ ಇಬ್ಬರಿಗೂ..ಹಾರ್ಧಿಕ ಅಭಿನ೦ದನೆಗಳು.
  ಹೆಮ್ಮೆಯೆನಿಸುತ್ತಿದೆ.
  -shama, nandibetta

  ಪ್ರತಿಕ್ರಿಯೆ
 6. vinutha

  ಹೃತ್ಪೂರ್ವಕ ಅಭಿನಂದನೆಗಳು ಮಲ್ಲಿಕಾರ್ಜುನ್ ಹಾಗೂ ಶಿವುರವರಿಗೆ.

  ಪ್ರತಿಕ್ರಿಯೆ
 7. Manoj

  ಹೆಮ್ಮೆ ಪಡುವ ವಿಚಾರ. ಇಬ್ಬರಿಗೂ ನನ ಅಭಿನಂದನೆಗಳು

  ಪ್ರತಿಕ್ರಿಯೆ
 8. ಶಾಂತಲಾ ಭಂಡಿ

  ಹಕ್ಕ ಮತ್ತು ಬುಕ್ಕರಿಗೆ ಅಭಿನಂದನೆಗಳು ಮತ್ತು ಶುಭಾಶಯ ಕೂಡ.
  ಅಂದ ಹಾಗೆ ಶಿವು ಮತ್ತು ಮಲ್ಲಿಕಾರ್ಜುನ ಅವರನ್ನು ಈ ಗೌರವಕ್ಕೆ ಪಾತ್ರರನ್ನಾಗಿಸಿದ ಸಾಧನಗಳನ್ನು ಅಂದರೆ ಇವರುಗಳು ಕ್ಲಿಕ್ಕಿಸಿದ ಆ ಫೋಟೋಗಳೂ ಸಹ ನೋಡಲು ಸಿಕ್ಕಿದ್ದರೆ ಮತ್ತೆ ಖುಷಿಪಡುತ್ತಿದ್ದೆವು.

  ಪ್ರತಿಕ್ರಿಯೆ
 9. ಜೈಕುಮಾರ್ ಹೆಚ್. ಎಸ್.

  ಅಭಿನ೦ದನೆಗಳು.ಈ ಸಂದರ್ಭದಲ್ಲಿ ಅವಧಿಯು ಈ ನಿಪುಣರ ಫೋಟೋ ಪ್ರಕಟಿಸಿದಲ್ಲಿ ತುಂಬಾ ಧನ್ಯವಾದಗಳು.

  ಪ್ರತಿಕ್ರಿಯೆ
 10. ಗಾಣಧಾಳು ಶ್ರೀಕಂಠ

  ಛಾಯಾಚಿತ್ರ ಲೋಕಕ್ಕೊಂದು ಹೆಮ್ಮೆಯ ಸಂಗತಿ. ಮಲ್ಲಿಕ್ , ಶಿವುಗೆ ಅಭಿನಂದನೆಗಳು.
  ಗಾಣಧಾಳು ಶ್ರೀಕಂಠ

  ಪ್ರತಿಕ್ರಿಯೆ
 11. paraanjape

  ಸತತ ಸಾಧನೆಯಿ೦ದ ಅ೦ತರರಾಷ್ಟ್ರೀಯ ಮನ್ನಣೆಯನ್ನು ತಮ್ಮದಾಗಿಸಿಕೊ೦ಡ ಹಕ್ಕ-ಬುಕ್ಕ, ಶಿವೂ ಮತ್ತು ಮಲ್ಲಿ ಯವರಿಗೆ ಹಾರ್ದಿಕ ಅಭಿನ೦ದನೆಗಳು.

  ಪ್ರತಿಕ್ರಿಯೆ
 12. ಚಂದ್ರಕಾಂತ

  ಶಿವು ಮತ್ತು ಮಲ್ಲಿಕಾರ್ಜುನ್ – ನಿಮ್ಮಿಬ್ಬರಿಗೂ ಈ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ. ಈ ಪ್ರಶಸ್ತಿಗೆ ನೀವಿಬ್ಬರೂ ಅರ್ಹರು.ಈ ಅರ್ಹತೆ ಈ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ನೆಮ್ಮದಿಯ ಸಂಗತಿ. ನಿಮ್ಮಿಬ್ಬರ ಫೋಟೋವನ್ನೂ ನಾವು ನೋಡಿದಂತಾಯಿತು.
  ನಿಮ್ಮಿಬ್ಬರಿಗೂ ಹೃದಯಪೂರ್ವಕ ಅಭಿನಂದನೆಗಳು

  ಪ್ರತಿಕ್ರಿಯೆ
 13. jinke subbanna

  ಹಾರ್ದಿಕ ಅಭಿನ೦ದನೆಗಳು. ರೋಯಲ್ ಫೊಟೋಗ್ರಾಫಿಕ್ ಸೊಸೈಟಿಗೆ ಕಳುಹಿಸಿದ ಆ ೧೫ ಚಿತ್ರಗಳ ಸ್ಲೈಡ್ ಷೋ ಹಾಕ್ತೀರಾ, ಪ್ಲೀಸ್ !
  ಜಿ೦ಕೆ ಸುಬ್ಬಣ್ಣ, ಪುತ್ತೂರು.

  ಪ್ರತಿಕ್ರಿಯೆ
 14. ವಸುಧೇಂದ್ರ

  ಮಲ್ಲಿ ಮತ್ತು ಶಿವು,
  ಹಾರ್ದಿಕ ಅಭಿನಂದನೆಗಳು. ನಮ್ಮ ಬದುಕನ್ನು ಸುಂದರವಾಗಿ
  ಕಾಣಿಸುವ ನಿಮ್ಮ ಕ್ಯಾಮರಾ ಕಣ್ಣುಗಳಿಗೆ ಧನ್ಯವಾದಗಳು.
  ವಸುಧೇಂದ್ರ

  ಪ್ರತಿಕ್ರಿಯೆ
 15. jogi

  ಯಾರೋ ಹೇಳಿದ್ದು: Most things in life are moments of pleasure and a lifetime of embarrassment; photography is a moment of embarrassment and a lifetime of pleasure.
  ನಿಮ್ಮ ಫೋಟೋಗ್ರಫಿ ಸುದ್ದಿ ಕೇಳಿದಾಗ ಯಾಕೋ ನೆನಪಾಯ್ತು. ಅಭಿನಂದನೆ.
  ಜೋಗಿ

  ಪ್ರತಿಕ್ರಿಯೆ
 16. srujan

  Rajesh bedi ..Naresh bedi
  krupakar ..senani..
  eega shivu mathhu malli
  Hardhika abhinandanegalu..
  srujan

  ಪ್ರತಿಕ್ರಿಯೆ
 17. greeshma

  ಹಾರ್ದಿಕ ಅಭಿನಂದನೆಗಳು. . .ವಿಷಯ ಓದಿ ತುಂಬ ಖುಷಿಯಾಯಿತು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: