ಫೋಟೋ ಕೇಳ್ತಾರೆ ಹುಷಾರ್!

ನೀವೇನಂತೀರೀ?

-ಅಸೀಮಾ

peeping-tom

ಇವತ್ತು ಬೆಳಗಿನ್ ಪ್ರೇಯರ್ ಮುಗ್ಸಿ ಏಳೋ ಮೊದ್ಲು “ಯಾಕಿನ್ನೂ ಸುಮ್ಮನಿದ್ದೀ? ಏನಾದ್ರೂ ಮಾಡು” ಅಂತಂದಂಗಾಯ್ತು. ನನ್ನವನನ್ನ ಆಫೀಸಿಗೆ ಕಳ್ಸಿ ಬರೀಲೇಬೇಕಂತ ಡಿಸೈಡ್ ಮಾಡ್ದೆ.

ಆ ಮನುಷ್ಯ, ಅವ್ನ್ ಧರ್ಮದೋಳು ಅನ್ನೋ ಕಾರಣಕ್ಕೇ ಅಷ್ಟು ಸದರ ತಗೊಳ್ಳೋದಾ? ಸರೀನಾ? ಅವ್ನೇನ್ ಮಹಾ ಅಂದ್ಕೊಂಡಿದಾನಾ? ಅವಂದೊಂದ್ ಬ್ಲಾಗಿದೆ. ಅವ್ನ್ ಕತೇಗ್ ಪ್ರಶಸ್ತಿ ಬಂದಿದೆ. ಈಗೊಂದ್ ವರ್ಷದಿಂದ ಒಂದ್ ಪೋರ್ಟಲ್ ನಡ್ಸ್‍ತಿದಾನೆ. ಚೆನಾಗೇ ಬರ್ತಿದೆ. ಹಾಗಂತ ಅವ್ನ್ ಬರವಣಿಗೆ ಮೆಚ್ಚಿದ ಹುಡ್ಗೀಗೆ ಹೀಗ್ ಮಾಡೋದ? ಮೆಚ್ಚುಗೆ ಹೇಳೋ ಹಾಗೂ ಇಲ್ವಾ?

ಅವ್ನ ಬ್ಲಾಗ್ ನೋಡ್ತಿದ್ದೆ, ಓದ್ತಿದ್ದೆ. ಬರ್ದಿದ್ದೆಲ್ಲ ಅಲ್ದಿದ್ರೂ, ಕೆಲವೆಲ್ಲ ಇಷ್ಟ ಆಗೋದು. ಪುಟ್ಟ ಪೋರೀನ್ ಕಾಲ್ ಮೇಲ್ ಇಟ್ಕೊಂಡೂ ಓದ್ತಿದ್ದೆ. ಹಾಗೇ ಪರಿಚಯ ಆಯ್ತು. ಚಾಟಿಂಗ್ ಮಾಡ್ತಿದ್ವಿ. ಒಂದೆರ್ಡು ಸಲ ಹೀಗೆ ಮಾತಾಡಿದ್ ಮೇಲೆ- ವಾಯ್ಸ್ ಚಾಟ್ ಹಾಕು, ಏನ್ ಬಟ್ಟೆ ಹಾಕೊಂಡಿದೀಯ, ಜೀನ್ಸ್-ಟೀಶರ್ಟ್ ಹಾಕೋ ಹುಡುಗೀರ್ ನಂಗಿಷ್ಟ, ವೆಬ್ ಕ್ಯಾಮ್ ಹಾಕು, ನಿನ್ ಫೋಟೋ ಕೊಡು ಅಂತೆಲ್ಲ ಕೇಳಕ್ ಶುರು ಮಾಡ್ದ. ನಂಗೆ ಮದ್ವೆ ಆಗಿದೆ, ಮೂರು ವರ್ಷದ್ ಪೋರಿ ಇದಾಳೆ. ನನಗ್ ಮನೇಲ್ ನೆಮ್ಮದೀ ಇದೆ. ಬ್ಲಾಗ್ ಓದು ಟೈಮ್ ಪಾಸ್ ನಂಗೆ. ನಿಮ್ ಬರಹ ಇಷ್ಟ ಆಗಿದೆ ಅಷ್ಟೇ ಅಂದಿದ್ದೆ. ನನ್ ಫ್ಯಾಮಿಲಿ ಫೋಟೋನೇ ಕಳ್ಸ್‍ದೆ. ಸಾಲ್ದಂತೆ ಮಾರಾಯಂಗೆ. ನಂದೊಬ್ಬಳ್ದೇ ಫೋಟೋ ಬೇಕಂತೆ ಕೊಟ್ಟಿಲ್ಲ. ತುಂಬಾ ದಿನ ಮಾತಾಡಿಲ್ಲ ನಾನು. ನಂಗೆ ಬೇಜಾರಾಗಿತ್ತು.

ಕೆಲವ್ ತಿಂಗ್ಳ್ ಬಿಟ್ಬಿಟ್ಟು ಮೊನ್-ಮೊನ್ನೆ ಮತ್ತೆ ಆನ್‌ಲೈನ್ ಸಿಕ್ರೆ ಅದೇ ರಾಗ ಅವಂದು. ಯಾಕ್ ಬೇಕು ಅಂತ ಕೇಳಿದ್ದಿಕ್ಕೆ, ಬೆಳಗಿನ್ ಬಯ್ಕೆ ಅಂತಾನೆ.? ಇವ್ನೇನ್ ಗರ್ಬಿಣಿ ಹೆಣ್ಣಾ ಮಾರ್ನಿಂಗ್ ಸಿಕ್‍ನೆಸ್ ಬರೋಕೆ? ದಿನಾ ಬೆಳಗ್ಗೆ ಸಂಜೆ ನೋಡ್ಕೊಳಕ್ ಬೇಕಂತೆ. ನಿನ್ ಪ್ರೀತಿ ಹೆಂಡ್ತಿ ಫೋಟೋ ಹಾಕ್ಕೋ ಹೋಗ್ ಅಂದೆ. ಚಾಟ್ ಆಫ್ ಮಾಡ್ದೆ. ಈ ತಿಕ್ಲಂಗೆ ಅದೇನ್ ಮಾಡೋದು? ನಂಗ್ ಮಾತ್ರ ಹಾಂಗ್ ಕೇಳ್ತಿದಾನೋ? ಅಥ್ವಾ ಬೇರೆಯೋರ್ನೂ ಹೀಗ್ ಪೀಡಿಸ್ತಾನೊ? ನಂಗಂತೂ ಗೊತ್ತಿಲ್ಲ. ಆವತ್ತಿಂದ ತಲೆಯೆಲ್ಲ ಕೆಟ್ಟಿತ್ತು. ಏನ್ ಮಾಡೋದಂತ ತಿಳೀತಿರ್ಲಿಲ್ಲ. ಇವತ್ತ್ ಆ ದೇವ್ರೇ ಬರೀ ಅಂದಂಗಾಯ್ತು. ಹಗುರ ಅನ್ನುಸ್ತು. ಬರ್ದೆ.

‍ಲೇಖಕರು avadhi

July 10, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

9 ಪ್ರತಿಕ್ರಿಯೆಗಳು

 1. jogi

  ಎಲ್ಲಾ ಸುಳ್ಳು ಸಾರ್, ನನ್ನ ಫೋಟೋ ಯಾರೂ ಕೇಳ್ಲೇ ಇಲ್ಲ, ಇಲ್ಲೀ ತನ್ಕ.

  ಪ್ರತಿಕ್ರಿಯೆ
 2. PRAKASH HEGDE

  ಇದೇ ಥರಹದ್ದು ನಾವುಡ ತಮ್ಮ ಬ್ಲಾಗಿನಲ್ಲಿ ಬರೆದಿದ್ರು…

  ಜೋಗಿಯವರು ಹೇಳಿದ್ದು ಸರಿ…

  ಪ್ರತಿಕ್ರಿಯೆ
 3. leelasampige

  ಇವ್ರು ಒಂಥರಾ ಬ್ಲಾಗ್ ಗಿರಾಕಿಗಳು. ಚಾಟಿಂಗ್ ಗೀಟಿಂಗ್ ಅಂತ ಮುಗ್ದ ಮನಸ್ಸುಗಳ ಜೊತೆ ಹಾದರ ಮಾಡೋರು ಹೆಚ್ಚಾಗ್ತಿದಾರೆ.ಅಂಥವರನ್ನ ಬಯಲು ಮಾಡ್ಬೇಕು. ಬ್ಲಾಗ್ ಒಳಗೆ ನಡೆಯೋ ಈ ಥರದ ಕಿರುಕುಳಿಗಳಿಗೆ ಅವರಿಗೆ ಇದಕ್ಕಿಂತ ಶಿಕ್ಷೆ ಬೇರೆ ಇರೋಲ್ಲ.
  -ಲೀಲಾಸಂಪಿಗೆ

  ಪ್ರತಿಕ್ರಿಯೆ
  • muralidhara

   ಲೀಲಾ ಸಂಪಿಗೆ ಕೆಂಡಸಂಪಿಗೆ ಆಗಿದ್ದಾರಲ್ಲ!

   ಪ್ರತಿಕ್ರಿಯೆ
 4. vikas

  ಅವ್ನ್ ಧರ್ಮದೋಳು ಅಂತೇನಲ್ಲ, ಆತ ಸರ್ವಧರ್ಮಗಳನ್ನೂ ಸಮಾನವಾಗಿ ನೋಡ್ತಾನೆ. ಎಲ್ಲರ photoನು ಕೇಳ್ತಾನೆ, ಯಾವ ಭೇಧ ಭಾವವೂ ಮಾಡೋಲ್ಲ. 🙂 ಯಥಾ ಗುರು ತಥಾ ಶಿಷ್ಯ ! 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: