ಫ್ರೀಡಮ್ ’ಸೇಲ್’!

ಸಂಯುಕ್ತ ಪುಲಿಗಳ್

ಸಂಜೆ ಸುಮಾರು ಎಂಟಾಗಿತ್ತು. ಆಫೀ ಸಿನ ಕೆಲಸ ಮುಗಿಯುತ್ತಿಲ್ಲ. ಅಮೇರಿಕಾದ ಗ್ರಾಹಕನ ಕೆಲಸ ಅಂದರೆ ಹೇಳಬೇಕೆ, ಹೆಚ್ಚು ಕಡಿಮೆ ನಮಗೆ ಕೆಲಸ ಪ್ರಾರಂಭವಾಗುವುದೇ ಆ ವೇಳೆಗೆ. ಮೊಬೈಲ್ ಸದ್ದಾಯಿತು, ಅಯ್ಯೊ, ಈಗ ಕೆಲಸ ಮುಗಿಸಿ ಮನೆಗೆ ಹೊರಟರೆ ಸಾಕಪ್ಪಾ ಅನ್ನುವಷ್ಟರಲ್ಲಿ ಇದ್ಯಾರಿದು ಮೆಸೇಜ್ ಮಾಡಿ ತಲೆ ತಿನ್ನೋದು ಅನ್ನೋ ಮನಸ್ಥಿತಿಯಲ್ಲಿ ಮೊಬೈಲ್ ಕೀ ಪ್ಯಾಡ್ ಅನ್ ಲಾಕ್ ಮಾಡಿ ನೋಡಿದರೆ, “ಹ್ಯಾವ್ ಅ ಹ್ಯಾಪೀ ಫ್ರೀ ಡಮ್ ಸೇಲ್, ಹ್ಯಾಪೀ ಇಂಡಿಪೆಂಡೆನ್ಸ್ ಡೇ!” ಎಂಬ ಸಂದೇಶ ಬಂದಿತ್ತು. ಅರೆ! ಸ್ವಾತಂತ್ರ ಅಂದರೆ ಏನು? ಈ ಕೊಳ್ಳುಬಾಕ ಸಂಸ್ಕೃತಿಯನ್ನು ಹರಡುವುದೇ? ಅದರಲ್ಲೂ ಎಂತಹ ವಿಪರ್ಯಾಸ ಎಂದರೆ, ಈ ವಿದೇಶೀ ವಸ್ತುಗಳನ್ನು, ಬಟ್ಟೆಗಳನ್ನು ಕೊಳ್ಳಲು ಸ್ವಾತಂತ್ರ್ಯ ದಿನದಂದು ಸೇಲ್! ನಗಬೇಕೋ, ಗಂಭೀರವಾಗಬೇಕೋ ತಿಳಿಯದೆ ಸುಮ್ಮನಾದೆ. ಒಂದು ನಿಟ್ಟುಸಿರು ಬಿಟ್ಟು ಇದರ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲವಲ್ಲ ಎಂದು ನನ್ನ ನಾನೇ ಹಳಿದು ಕೆಲಸ ಮುಂದುವರೆಸಿದೆ. ಸರಿ, ಹೊತ್ತು ಮೀರಿತ್ತು, ಲಗುಬಗೆಯಿಂದ ಕೆಲಸ ಮುಗಿಸಿ ಮನೆಗೆ ಹೊರಟೆ. ದಾರಿಯಲ್ಲೆಲ್ಲಾ ’ಮೇರಾ ಭಾರತ್ ಮಹಾನ್’ ವ್ಯಾಖ್ಯಾನಗಳು! ಭಾರೀ ದೊಡ್ಡ ಬೋರ್ಡುಗಳು, ತಮ್ಮ ’ದೇಶಾಭಿಮಾನ’ವನ್ನು ಸಾರಿ ಹೇಳಿದ್ದವು! ಅವುಗಳಲ್ಲಿ ಅತ್ಯಂತ ಅನುರೂಪವಾಗಿ ಕಂಡದ್ದು ಇದು: “ಈ ಸ್ವಾತಂತ್ರ್ಯ ದಿನವನ್ನು ನಮ್ಮೊಟ್ಟಿಗೆ ಆಚರಿಸಿ, ೧೯೪೭ ರೂ ಖರೀದಿಸಿದರೆ, ೧೯೪೭ ರಷ್ಟು ಉಚಿತ”! ಮುಂಜಾನೆಯ ಗಡಿಬಿಡಿಯಲ್ಲಿ ಕೆಲವೊಮ್ಮೆ ದಿನ ಪತ್ರಿಕೆ ನೋಡಲೂ ಸಮಯವಾಗದು. ಆದ್ದರಿಂದ ಸಂಜೆ ಮನೆಗೆ ಮರಳಿದ ನಂತರ ನ್ಯೂಸ್ ಪೇಪರ್ ಓದುವುದು ವಾಡಿಕೆ. ಎಂದಿನಂತೆ ಬಂದ ಕೂಡಲೇ ಕಾಫೀ ಹೀರುತ್ತಾ ಪೇಪರ್ ಹಿಡಿದರೆ ಅಲ್ಲೂ ಅದೇ ಫ್ರೀ ಡಮ್ ಸೇಲ್, ಇರೋ ಬರೋ ವಿದೇಶೀ ಮಳಿಗೆಗಳಿಗೆಲ್ಲ ಇಂದು ಎಲ್ಲಿಲ್ಲದ ’ದೇಶಾಭಿಮಾನ’! ನಂತರ, ಸ್ವಲ್ಪ ಸುಧಾರಿಸಿ, ಈ ಕಾಲದ ಎಲ್ಲರ ಸಂಗಾತಿಯಾದ ಫೇದಸ್ ಬುಕ್ ನೋಡ ಹತ್ತಿದೆ. ಇಂದು ಇದರಲ್ಲೂ ಉಕ್ಕಿ ಹರಿಯುತ್ತಿದೆ ನಮ್ಮ ದೇಶಾಭಿಮಾನ! ಹೇಗೆ ಅಂದ್ರೆ, ಏಳೆಂಟು ಜನ ಮಕ್ಕಳು ಕೂಡಿ ಪಾಕಿಸ್ತಾನದ ಬಾವುಟದ ಮೇಲೆ ಉಚ್ಚೆ ಹೊಯ್ಯುತ್ತಿರುವ ದೃಶ್ಯ! ಭಾರತದ ಬಾವುಟವನ್ನು ಹೊತ್ತ ಸಿಂಹವೊಂದು ಪಾಕಿಸ್ತಾನದ ಬಾವುಟಹೊತ್ತ ನರಿಯನ್ನು ಬೆನ್ನಟ್ಟಿ ಬರುತ್ತಿರುವುದು, ಪಕ್ಕದಲ್ಲಿ ಹ್ಯಾಪೀ ಇಂಡಿಪೆಂಡೆನ್ಸ್ ಡೇ ಎಂಬ ಸಂದೇಶ! ಮನಸು ಮುದುಡಿತ್ತು! ಇದು ನಿಜವಾದ ಸ್ವಾತಂತ್ರ್ಯದಿನಾಚರಣೆ ಹೌದೇ! ಈ ರೀತಿಯ ಹಿಂದೂ ಮುಸಲ್ಮಾನರ ನಡುವೆ ಕಲಹ ತರುವುದು, ಬೇಕೆಂದೇ ಗಾಯದ ಮೇಲೆ ಬರೆ ಎಳೆಯುವ ಕೆಲಸವಲ್ಲವೇ! ಯಾವುದೋ ಕೆಲವು ಕುತಂತ್ರ ರಾಜಕೀಯಕಾರಣಗಳಿಗಾಗಿ ಬಡಿದೆಬ್ಬಿಸಿದ ಹಳೆಯ ದಂಗೆಗಳನ್ನು ಮತ್ತೆ ಮರುಕಳಿಸಿ, ಅದಕ್ಕೆ ತುಪ್ಪ ಸುರಿಯುವುದು ಸರಿಯೇ! ’ಡಿವೈಡ್ ಅಂಡ್ ರೂಲ್’ ನಮ್ಮಲ್ಲಿ ಎಷ್ಟು ಸರಾಗವಾಗಿ ಜರುಗುವ ತಂತ್ರ ಎಂಬುದು ಐತಿಹಾಸಿಕ. ಈಗಲಾದರೂ ನಾವು ನಮ್ಮ ಮೈನಾರಿಟಿ ಜನರಾದ ನಮ್ಮ ನೆಂಟರೇ ಆದ ಮುಸಲ್ಮಾನರನ್ನು ಹೀಗೆ ಅವಹೇಳನಾಕಾರಿಯಾಗಿ ಪರಿಗಣಿಸುವುದು ಎಷ್ಟು ಸರಿ. ಇದು, ವೈಯಕ್ತಿಕವಾಗಿ ಎಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆ. ಇಂದು ಗಾಂಧೀಜಿರವರು ಬದುಕಿದ್ದರೆ ಏನಾಗಬಹುದಿತ್ತು, ಈ ದಿಕ್ಕೆಟ್ಟ, ಕಂಗೆಟ್ಟ ಕೈಮೀರಿ ಹೋಗುತ್ತಿರುವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದರು ಅಥವಾ ಸಹಿಸುತ್ತಿದ್ದರು ಅನ್ನಿಸಿತು. ಗಾಂಧೀಜಿ ಒಬ್ಬರಲ್ಲ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರಬೇಕಾದರೆ ಎಷ್ಟೆಷ್ಟು ಮಹಾನುಭಾವರು ಎಷ್ಟೆಷ್ಟು ಗಾಂಧೀಗಳು ತಮ್ಮ ಜೀವ ತೆತ್ತರು. ನಮ್ಮ ಬದುಕು ಯಾರ ಹಂಗಿನಲ್ಲೂ ಇರದೆ ನಮ್ಮಷ್ಟಕ್ಕೆ ನಾವು ಸ್ವತಂತ್ರವಾಗಿ ಬೆಳೆಯಲು ಅಹರ್ನಿಶಿ ದುಡಿದವರೆಷ್ಟೋ, ಅವರೆಲ್ಲರ ಪರಿಶ್ರಮ ನೀರು ಪಾಲಾಗುವಂತೆ, ’ಸ್ವಾತಂತ್ರ್ಯ ದಿನ’ ವನ್ನು, ನಾವು ನಮ್ಮ ಸ್ವ-ಪ್ರಲೋಭೆಗಳಿಗೆ ಬಳಸಿಕೊಳ್ಳುತ್ತಿದ್ದೇವಲ್ಲವೇ! ‘ಸ್ವಾತಂತ್ರ್ಯ ದಿನ’ ಇಂದು ಅದರ ಬೆಲೆಯನ್ನು ಅರ್ಥವನ್ನು ಕಳೆದುಕೊಂಡಿದೆ. ಕೆಲವರು ಬೇಕೆಂದು ತಮ್ಮಿಷ್ಟದಿಂದ, ಕೆಲವರು ಮತ್ತೆ ಬೇರೆ ದಾರಿ ತೋಚದೆ, ಇನ್ನು ಕೆಲವರು ಏನೂ ತಿಳಿಯದೆ ಅಂತೂ ಎಲ್ಲರೂ, ನಮ್ಮ ತನವನ್ನು ಕಳೆದು ಕೊಳ್ಳುವುದರಲ್ಲಿ ಮುಂದಾಗಿದ್ದೇವೆ. ಯಾವುದೋ ಒಂದು ತಿಳಿಯದ ಪಾಶಕ್ಕೆ ಸಿಲುಕಿದ್ದೇವೆ. ಇದರ ಹೊಳಹು ಇನ್ನು ಕೆಲವೇ ಕಾಲದಲ್ಲಿ ಬಹಿರಂಗವಾಗಲಿದೆ. ನಾವೆಲ್ಲರೂ ಎಚ್ಚೆತ್ತು ಕೊಳ್ಳಬೇಕಾಗಿದೆ. ಮತ್ತೇನೂ ಇರದಿದ್ದರೂ, ಅಟ್ಲೀಸ್ಟ್, ಹೀಗೆ ಸ್ವಾತಂತ್ರ್ಯ ದಿನವನ್ನು ಮನಸೋ ಇಚ್ಚೆ ಬಳಸದೇ ನಮ್ಮ ಹಿರಿಯರು ಸುರಿಸಿದ ರಕ್ತವನ್ನು, ಅದರ ಬೆಲೆಯನ್ನು ಅರಿಯುವ ಮೂಲಕ ಪ್ರಾರಂಭಿಸಬೇಕಾಗಿದೆ. ನಮ್ಮ ಮುಸಲ್ಮಾನ ಬಂಧುಗಳನ್ನು ಆದರಿಸದಿದ್ದರೂ ಅಟ್ಲೀಸ್ಟ್, ಗೌರವಿಸುವ ಮೂಲಕ ಪಾಪ ಪರಿಹಾರ ಮಾಡಿಕೊಳ್ಳಬೇಕಿದೆ. ಅಲ್ಲವೇ ಗೆಳೆಯರೇ?!]]>

‍ಲೇಖಕರು G

August 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

5 ಪ್ರತಿಕ್ರಿಯೆಗಳು

 1. Mallikarjuna Hosapalya

  ತುಮಕೂರಿನಂತಹ ಜಿಲ್ಲಾ ಕೇಂದ್ರದಲ್ಲಿಯೂ ಸ್ವಾತಂತ್ರ್ಯ ದಿನ ’ಶಾಪಿಂಗ್ ದಿನ’ ವಾಗಿ ಬದಲಾಗಿರುವುದು ಅನುಭವವಾಯಿತು. ರಾಷ್ಟ್ರಧ್ವಜದ ಟಾಟೂ, ಸ್ಟಿಕ್ಕರ್, ಬಳೆ, ಟೋಪಿ, ಮಫ್ಲರ್, ಶಾಲು . . . ಹೀಗೆ ತರಹೇವಾರಿ ವಸ್ತುಗಳ ಮಾರಾಟ. ಮಡದಿ, ಮಕ್ಕಳೂ ಇದಕ್ಕೆ ಬಲಿ ಬಿದ್ದಾಗ ರೇಗಿ ಹೋಯಿತು. ಮಗಳ ಶಾಲೆಯಲ್ಲಿ ಸ್ಲಂಡಾಗ್ ಮಿಲಿಯನೇರ್ ಸಿನಿಮಾದ ಜೈಹೋ ಹಾಡಿಗೆ ಬಾವುಟ ಹಿಡಿದುಕೊಂಡು ಮಕ್ಕಳು ನೃತ್ಯ ಮಾಡಿದರು. ಹಿಂದಿ ಬಾರದ ನನಗೆ ಈ ಹಾಡಿನಲ್ಲಿ ಯಾವ ದೇಶಭಕ್ತಿಯ ಸಂದೇಶವಿದೆ ಎಂದು ತಿಳಿಯಲಿಲ್ಲ.

  ಪ್ರತಿಕ್ರಿಯೆ
 2. shivalatha

  ಎಲ್ಲ ಪ್ರಜ್ಞಾವಂತರ ಅಭಿಪ್ರಾಯವನ್ನೇ ನೀವು ವ್ಯಕ್ತಪಡಿಸಿದ್ದೀರಿ. This is thinking loud.

  ಪ್ರತಿಕ್ರಿಯೆ
 3. samyuktha

  Thank you Natarajuravare. 🙂
  Mallikarjunaravare, nija….idu ondu gambheeravaada vishayave sari. Thank you for the comment.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: