ಬಂದಿದ್ದಾರೆ ವೆಂಕಿ, ರೆಡಿಯಾಗ್ತಿದೆ ಬರ್ಗರ್

vnew3.jpgಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ಇನ್ನೂ ನಿನ್ನೆ ಮೊನ್ನೆಯವರೆಗೆ ಸುತ್ತಾಡುತ್ತಿದ್ದ ಹುಡುಗ ಈಗ ಜಗತ್ತಿನ ಉದ್ದಗಲಕ್ಕೂ ಬೆಳೆದು ನಿಂತಿದ್ದಾನೆ.

ವೆಂಕಿಗೆ ಇಡೀ ಜಗತ್ತೇ ಕ್ಯಾನವಾಸ್. ನಿನ್ನೆ ಇಲ್ಲಿದ್ದ. ನಾಳೆ ಅಲ್ಲಿ. ಇನ್ನೊಮ್ಮೆ ನೋಡುವ ವೇಳೆಗೆ ಇನ್ನೆಲ್ಲಿ ಎಂಬಷ್ಟು ಆತ ಜಗತ್ತಿನ ಎಲ್ಲ ದೇಶಗಳನ್ನು ಸುತ್ತುತ್ತಾನೆ. ಆತನಿಗೆ ಹಾಸಿಗೆ ಭೂಮಿಯಲ್ಲೂ ಉಂಟು, ದಟ್ಟ ಮೋಡಗಳ ಆಗಸದಲ್ಲೂ ಉಂಟು.

ಕಾಳೀ ನದಿಯ ದಂಡೆಯುದ್ದಕ್ಕೂ ಚಾರಣ ನಡೆಸುತ್ತಿದ್ದ, ಕುದುರೆಮುಖವನ್ನು ಧೋ ಎನ್ನುವ ಮಳೆಯಲ್ಲಿ ಹತ್ತುತ್ತಿದ್ದ,  ಸೈಕಲ್ ತುಳಿಯುತ್ತಾ ಇಡೀ ಪಶ್ಚಿಮಘಟ್ಟವನ್ನು ಅಳತೆ ಮಾಡುತ್ತಿದ್ದ ವೆಂಕಿ ಅಮೆರಿಕನ್ನರ ಕಣ್ಣಲ್ಲಿ ಮಿಸ್ಟರ್ ವೆಂಕಟೇಶ್ ರಾಘವೇಂದ್ರ. ಅಮೆರಿಕಾದ ಕಲ್ಲಿನ ಗುಹೆಗಳನ್ನು ಹೊಕ್ಕಿ ಬರಲೆಂದು ಹೋದವನು ಈಗ ಜಗತ್ತಿನ ಎಲ್ಲಾ ಕತ್ತಲೆಗೂ ಮಿಣಿಮಿಣಿ ಬೆಳಕಾಗುವಷ್ಟು ಬೆಳೆದು ನಿಂತಿದ್ದಾನೆ.

vnew21.jpgಅಶೋಕ ವೃಕ್ಷದ ವೈಶಿಷ್ಟ್ಯವೇ ಹಾಗೆ. ಅದು ಎಲ್ಲರಿಗೂ ತಂಪು ನೆರಳನ್ನು ನೀಡುತ್ತದೆ. “ಮಣ್ಣಿನ ಮೇಲೊಂದು ಮರವಾಗಿ ಹುಟ್ಟಿದಾರೆ ಪುಣ್ಯವಂತರಿಗೆ ನೆರಳಾದೆ…” ಎಂಬಂತೆ ಅಶೋಕ ವೃಕ್ಷವನ್ನೇ ತನ್ನ ಲೋಗೋ ಆಗಿ ಹೊಂದಿರುವ ಅಶೋಕ ಫೌಂಡೇಷನ್ ನ ಪ್ರಮುಖ ಈತ. ೫೩ ದೇಶಗಳಲ್ಲಿ ನೊಂದವರಿಗೆ ಆಸರೆ ನೀಡುವವರನ್ನು ಗುರುತಿಸಿ ಬೆಂಬಲಿಸುವ ಕೆಲಸ. ಈಗ ನ್ಯೂಯಾರ್ಕ್ ನಲ್ಲಿರುವ “ಅಮೆರಿಕನ್ ಇಂಡಿಯಾ ಫೌಂಡೇಷನ್” ಫಿಲಾಂಥ್ರಫಿ ಮುಖ್ಯಸ್ಥ.

ವಾಷಿಂಗ್ ಟನ್ ನಲ್ಲಿದ್ದ ವೆಂಕಿ ಇದೀಗ ನ್ಯೂಯಾರ್ಕ್ ಗೆ ಜಿಗಿದಿದ್ದಾನೆ. ಜಗತ್ತಿನ ಎಲ್ಲಾ ನಗರಗಳದ್ದು ಒಂದು ತೂಕವಾದರೆ, ನ್ಯೂಯಾರ್ಕ್ ನದ್ದೇ ಒಂದು ತೂಕ. ಜಗಮಗಿಸುವ, ಆಸೆಗಳನ್ನು ಹುಟ್ಟುಹಾಕುವ, ಲಾಲಸೆಗಳನ್ನು ಪೊರೆಯುವ, ಆಕಾಶವನ್ನೇ ಗುದ್ದುತ್ತೇವೆ ಎಂಬಂಥಾ ಮನಸ್ಸು ಹೊಂದಿರುವ, ಸ್ವಚ್ಛಂದ ಹಾರಾಟಕ್ಕೆ ರೆಕ್ಕೆ ತೊಡಿಸುವ ನ್ಯೂಯಾರ್ಕ್ ವೆಂಕಿಯ ವಾಸಸ್ಥಾನ.

ವೆಂಕಿಗೆ ಲೇಖನಿ ಅಪರಿಚಿತವಲ್ಲ. ಅಮೆರಿಕಾಗೆ ಕಾಲಿಟ್ಟ ಮೊದಲ ದಿನದಿಂದ ಇಲ್ಲಿಯವರೆಗೆ ಸುಮಾರು ೭ ವರ್ಷಗಳ ಕಾಲ ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿಗಳಿಗೆ ತಾವು ಕಂಡದ್ದಕ್ಕೆ ಮಾತು ಕೊಟ್ಟಿದ್ದಾರೆ. ಅಕ್ಕ ಸಮ್ಮೇಳನವನ್ನು ಸುಧಾಗಾಗಿ ಹಿಡಿದುಕೊಟ್ಟಿದ್ದಾರೆ.

ಈಗ ವೆಂಕಿ ಅವಧಿಗಾಗಿ ಲೇಖನಿಯನ್ನು ಪಕ್ಕಕ್ಕಿಟ್ಟು ಕೀಬೋರ್ಡ್ ಮುಂದೆ ಕೂತಿದ್ದಾರೆ. ಜಾಗತೀಕರಣದಿಂದಾಗಿ, ಮಸಾಲೆದೋಸೆ ತಿನ್ನುತ್ತಿದ್ದ ಬಾಯಲ್ಲಿ ಬರ್ಗರ್ ಬಂದು ಕೂತಿದೆ. ರಸಂ ಚಪ್ಪರಿಸುತ್ತಿದ್ದ ನಾಲಿಗೆ ಕೋಲಾಗೂ  ಒಗ್ಗಿಕೊಂಡಿದೆ. ಮಸಾಲೆದೋಸೆ ಹಾಗೂ ಬರ್ಗರ್ ಎರಡರ ವಿಚಿತ್ರ ಸಂಗಮವೇ ವೆಂಕಿ ಬರ್ಗರ್. ಅಪ್ಪಟ ಕನ್ನಡ ಮನಸ್ಸೊಂದು ಅಮೆರಿಕಾಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ. ಅವಧಿಯ ಅಡುಗೆ ಮನೆಯಲ್ಲಿ ಪ್ರತಿ ಶನಿವಾರ ಅಮೆರಿಕಾದ vnew11.jpgಟೇಸ್ಟ್ ನೀಡುವ ವೆಂಕಿ ಬರ್ಗರ್ ಸಿದ್ಧ. ಚಪ್ಪರಿಸಿ. ಚೆನ್ನಾಗಿದ್ದರೆ ನಮಗೂ ಹಾಗೂ ವೆಂಕಿಗೂ ಬೆನ್ತಟ್ಟಿ. ಚೆನ್ನಾಗಿಲ್ಲದಿದ್ದರೆ ಒಲೆಯಲ್ಲಿನ ಉರಿ ಸರಿಯಾಗಿರಲಿಲ್ಲ ಎಂದುಕೊಳ್ಳಿ.

ಸಂಪರ್ಕಕ್ಕೆ: [email protected]
ವೆಂಕಿಯವರ ನ್ಯೂಯಾರ್ಕ್ ಮೊಬೈಲ್ ಸಂಖ್ಯೆ: ೮೦೪.೩೩೯.೩೩೨೧

ವೆಲ್ ಕಮ್ ವೆಂಕಿ ಟು ಅವಧಿ.
ತಡ ಯಾಕೆ, ಸೌಟು ಕೈಗೆತ್ತಿಕೊಳ್ಳಿ…

‍ಲೇಖಕರು avadhi

July 28, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: