’ಬಡತನವೆಂಬುದು ಒಂದು ವ್ಯವಸ್ಥೆ ನಿಜ’, ಆದರೆ..

ಅಭಿವೃದ್ಧಿಯ ಆತಂಕಗಳು

– ಡಾ.ಎನ್. ಜಗದೀಶ್ ಕೊಪ್ಪ

ಕಳೆದ ಎರಡು ದಶಕಗಳಲ್ಲಿ ಭಾರತವೂ ಸೇರಿದಂತೆ ಇಡೀ ಜಗತ್ತು ನಾವು ನಂಬಲಾರದ ವೇಗದಲ್ಲಿ ಬದಲಾವಣೆಯತ್ತ ಸಾಗಿದೆ. ಗಮ್ಯವಿಲ್ಲದ ಪಯಣವೇನೊ ಎಂಬಂತೆ ಸಾಗುತ್ತಲೇ ಇದೆ. ಮಾಹಿತಿ ತಂತ್ರ ಜ್ಞಾನ ಮತ್ತು ದೂರ ಸಂಪರ್ಕ ಕ್ಷೇತ್ರದಲ್ಲಾದ ಕ್ಷಿಪ್ರ ಕ್ರಾಂತಿಯ ಫಲ ಮತ್ತು ಅಮೇರಿಕಾದ ಕನಸಿನ ಕೂಸಾದ ಜಾಗತೀಕರಣದ ಮತ್ತು ಮುಕ್ತಮಾರುಕಟ್ಟೆ ಪ್ರಭುತ್ವದ ಪ್ರತಿಫಲವಾಗಿ ಇಂದು ದೇಶ ದೇಶ ಗಳ ನಡುವೆ ಇದ್ದ ಗಡಿರೇಖೆಗಳು ಅಳಿಸಿ ಹೋಗುತ್ತಿವೆ. ಇದರ ಫಲವೆಂಬಂತೆ ಸೃಷ್ಟಿಯಾದ ಕೊಳ್ಳುಬಾಕ ಸಂಸ್ಕೃತಿಯ ಪ್ರಭಾವದಿಂದ ಆಧುನಿಕತೆಯ ನಾಗರೀಕ ಜಗತ್ತು ಅನುಭೋಗ ಮತ್ತು ಲೋಲುಪತೆಯ ತುತ್ತ ತುದಿಯಲ್ಲಿ ತೇಲಾಡುತ್ತಿದೆ. ವರ್ತಮಾನ ಜಗತ್ತಿನ ಮನುಷ್ಯ ತಾನು ನಿಮರ್ಿಸಿಕೊಂಡಿರುವ ಈ ಭ್ರಮಾತ್ಮಕ, ಕೃತಕ ಜಗತ್ತನ್ನು ಶಾಶ್ವತವೆಂದು ನಂಬುವ ವಿಸ್ಮೃತಿಗೆ ದೂಡಲ್ಪಟ್ಟಿದ್ದಾನೆ. ಇಂತಹ ಅಯೋಮಯ ಸ್ಥಿತಿಯಲ್ಲಿ ದೇಶಗಳ ಆಥರ್ಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕುರಿತಂತೆ ನಮ್ಮ ಮಾನದಂಡಗಳು, ವ್ಯಾಖ್ಯಾನಗಳು, ನಿರ್ವಚನಗಳು ಎಲ್ಲವೂ ಬದಲಾಗಿದ್ದು, ಯಾವುದು ಸತ್ಯ? ಯಾವುದು ಮಿಥ್ಯ? ಎಂಬ ದ್ವಂದ್ವದಲ್ಲಿ ಮುಳುಗಿ ಹೋಗಿರುವ ಪ್ರಜ್ಙಾವಂತರು ಕಕ್ಕಾಬಿಕ್ಕಿಯಾಗಿದ್ದಾರೆ. ಇಡೀ ಜಗತ್ತಿನಾದ್ಯಂತ ಆಯಾ ನೆಲದ ಬೌಗೂಳಿಕ ಲಕ್ಷಣ ಮತ್ತು ಪರಿಸರಕ್ಕೆ ಅನುಗುಣವಾಗಿ ಬೆಳೆದು ಬಂದಿದ್ದ ನಮ್ಮ ಆಚಾರ, ವಿಚಾರ, ಆಹಾರ, ಉಡುಪು, ಮುಂತಾದವುಗಳ ಸಂಸ್ಕೃತಿ ಇಂದು ಜಾಗತೀಕರಣದ ಏಕಮುಖ ಸಂಸ್ಕೃತಿಯ ಬಿರುಗಾಳಿಗೆ ಸಿಲುಕಿ, ಎಲ್ಲೆಡೆ ಅನುಭೋಗ ಸಂಸ್ಕೃತಿಯಾಗಿ ರೂಪುಗೊಳ್ಳುತ್ತಿದೆ. ಇಪ್ಪತ್ತೊಂದನೇ ಶತಮಾನದ ಮೂಲ ಮಂತ್ರವೆಂದರೆ, ಎಲ್ಲವೂ ಬೃಹತ್ ಎಂಬ ಪರಿಕಲ್ಪನೆ ಎಂಬಂತಾಗಿದೆ. ನಾವು ನಿರ್ಮಿಸುವ ಹೆದ್ದಾರಿಗಳು, ಸೇತುವೆಗಳು, ಅಣೆಕಟ್ಟುಗಳು, ಮಲ್ಟಿಪ್ಲೆಕ್ಷ್ ಥಿಯಟರ್ಗಳು ಮಾಲ್ಗಳು ಎಲ್ಲವೂ ಬೃಹತ್ ಆಗಿರಬೇಕು. ಇಲ್ಲಿ ಸಣ್ಣ ಪ್ರಮಾಣ ಎಂಬ ಮಾತಿಗೆ ಅವಕಾಶವಿಲ್ಲ ಅಷ್ಟೇ ಅಲ್ಲ, ನಾವು ತಿನ್ನುವ ಆಹಾರ, ಧರಿಸುವ ಉಡುಪು, ಕುಡಿಯುವ ತಂಪುಪಾನಿಯ ಇವು ಕೂಡ ಸಿದ್ಧಪಡಿಸಿದವುಗಳಾಗಿರಬೇಕು. ಈ ಜಗತ್ತಿಗೆ ಸಣ್ಣದು ಸುಂದರ ಎಂಬ ಕೃತಿಯನ್ನು ನೀಡಿದ ಪ್ರಖ್ಯಾತ ಅರ್ಥಸಾಸ್ತ್ರಜ್ಞ ಹಾಗೂ ಗಾಂಧಿ ಚಿಂತನೆಗಳಿಂದ ಪ್ರೇರಣೆಗೊಂಡಿದ್ದ ಶೂ ಮಾಕರ್ ನ ಪರಿಭಾಷೆ ಈಗ ಅರ್ಥಕಳೆದುಕೊಂಡಿದೆ ಕಳೆದ ಎರಡು ದಶಕಗಳಲ್ಲಿ ಭಾರತವೂ ಸೇರಿದಂತೆ, ಇಡೀ ಜಗತ್ತು ತೀವ್ರ ಗತಿಯಲ್ಲಿ ಬದಲಾವಣೆ ಹೊಂದಿದೆ,. ಇದಕ್ಕೆ ಪೂರಕವಾಗಿ ನಮ್ಮ ಮಾಧ್ಯಗಳು ಕೂಡ ಜಾಗತೀಕರಣದ ಪ್ರಕ್ರಿಯೆಗೆ ಪೂರಕವಾಗಿ ವರ್ತಿಸಲಾರಂಬಿಸಿವೆ.

ನಾಗರೀಕ ಜಗತ್ತಿನಲ್ಲಿ ಗ್ರಾಹಕ ಮತ್ತು ಉತ್ಪಾದನಾ ಸಂಸ್ಥೆಯ ನಡುವೆ ಹಾಗೂ ಪ್ರಭುತ್ವ ಮತ್ತು ಪ್ರಜೆಗಳ ನಡುವೆ ನಿರ್ಣಾಯಕ ಪಾತ್ರ ವಹಿಸಬೇಕಿದ್ದ ಆದರ್ಶ ಕರಗಿ ಹೋಗಿದ್ದು ಈಗ ಲಾಭವೇ ಅಂತಿಮ ಗುರಿಯೆನೊ ಎಂಬಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಇವತ್ತಿನ ಜಗತ್ತಿನ ಬಹುತೇಕ ಸುದ್ಧಿ ಮಾಧ್ಯಮ ಸಂಸ್ಥೆಗಳ ಒಡೆತನ ಬಹುರಾಷ್ಟ್ರೀಯ ಕಂಪನಿಗಳು, ಇಲ್ಲವೆ ಕಾರ್ಪೋರೇಟ್ ಸಂಸ್ಥೆಗಳ ಕೈಯಲ್ಲಿದೆ. ಇಲ್ಲಿ ಸಿದ್ಧಪಡಿಸುವ ಮರೆಮಾಚಿದ ನಿಲುವಳಿಗಳು ಎನ್ನಬಹುದಾದ ಹಿಡೆನ್ ಅಜೆಂಡಗಳು ಸುದ್ಧಿ ಹೆಸರಿನಲ್ಲಿ ಅಥವಾ ಜಾಹಿರಾತು ಮೂಲಕ ಜನಸಾಮಾನ್ಯರ ಮೇಲೆ ಹೇರಲ್ಪಡುತ್ತಿವೆ. ನಾವು ಬದುಕುತ್ತಿರುವ ಈ ಜಗತ್ತಿನಲ್ಲಿ ಎಲ್ಲಾ ತಂತ್ರಜ್ಙಾನಗಳು ಮನುಷ್ಯನ ಬೆರಳತುದಿಗೆ ಬಂದು ಕುಳಿತಿರುವಾಗ, ತಾನು ಕುಳಿತ ಸ್ಥಳದಿಂದ ವಿಶ್ವದರ್ಶನ ಮಾಡುತ್ತಿರುವ ನಾಗರೀಕನಿಗೆ ಮಾಧ್ಯಮದಲ್ಲಿ ಪ್ರಸಾರವಾಗುವ ಇಲ್ಲವೇ ಮುದ್ರಣವಾಗುವ ಎಲ್ಲಾ ಅಂಶಗಳು ಸತ್ಯ ಎಂಬ ಭ್ರಮೆ ಆವರಿಸಕೊಳ್ಳತೊಡಗಿದೆ. ತಾನು ಹುಟ್ಟಿದ ನೆಲದ ಸಂಸ್ಕೃತಿಗೆ ಪೂರಕವಾಗಿ, ಪರಿಸರಕ್ಕೆ ಎರವಾಗದಂತೆ ಬದುಕಿದ್ದ ನಮ್ಮ ಪೂರ್ವಿಕರ ಜ್ಞಾನ ಪರಂಪರೆ ನಾಶವಾಗಿ ಪಕೃತಿಯ ಕೊಡುಗೆಗಳಾದ ನೆಲ,ಜಲ,ವಾಯು ಎಲ್ಲವೂ ಮನುಷ್ಯನ ಅನುಭೋಗಕ್ಕೆ ಮೀಸಲಾದ ಪುಕ್ಕಟೆ ಕೊಡುಗೆಗಳು ಎಂಬ ಅಹಂಕಾರ ಅರಿವಲ್ಲದೆ ಇತ್ತೀಚೆಗಿನ ದಿನಗಳಲ್ಲಿ ಮನುಷ್ಯರನ್ನು ಆವರಿಸಕೊಳ್ಳತೊಡಗಿದೆ. ಈ ಕಾರಣಕ್ಕಾಗಿ ಪರಿಸರವೇ ಕಲುಷಿತಗೊಂಡು, ಎಲ್ಲವೂ ಸರಕಿನಂತೆ ಮಾರಾಟವಾಗುತ್ತಿವೆ. ಆದುನಿಕ ಜಗತ್ತಿನಲ್ಲಿ ಬೆಲೆ ಪಟ್ಟಿ ಧರಿಸಿಕೊಂಡಿರುವ ಒಂದು ಲೀಟರ್ ಹಾಲಿಗೂ, ನೀರಿಗೂ ಇದ್ದ ಮೌಲ್ಯದ ವೆತ್ಯಾಸ ನಿಧಾನವಾಗಿಅಳಿಸಿಹೋಗುತ್ತಿದೆ. ಒಂದು ಶತಮಾನದ ಹಿಂದೆ ಯಾವುದೇ ಒಂದು ಪ್ರದೇಶದ ಮೇಲೆ ಅಥವಾ ಒಂದು ದೇಶದ ಮೇಲೆ ಹಿಡಿತ ಸಾಧಿಸಲು ಯುದ್ದದ ಅನಿವಾರ್ಯವಾಗಿತ್ತು. ಆದರೆ, ಈಗಿನ ಪಾಶ್ಚಿಮಾತ್ಯ ಜಗತ್ತು ಯುದ್ಧವಿಲ್ಲದ ತಂತ್ರೋಪಾಯಗಳನ್ನು ಕಂಡುಕೊಂಡಿದೆ. ಇಲ್ಲಿ ಯುದ್ಧ ವಿಮಾನಗಳಾಗಲಿ, ಸೈನಿಕರಾಗಲಿ, ಬಾಂಬ್ಗಳಾಗಲಿ ಅವಶ್ಯಕತೆ ಇಲ್ಲ. ಗುರಿ ಇಟ್ಟುಕೊಂಡಿರುವ ಪ್ರದೇಶದ ಜನರ ಅಭಿರುಚಿ ಮತ್ತು ಆಹಾರ ಸಂಸ್ಕೃತಿಯನ್ನು ಬದಲಿಸದರೆ ಸಾಕು ಇಡೀ ಪ್ರದೇಶದ ಜನರನ್ನು ಒಳಗೊಂಡು ದೇಶವೇ ಶರಣಾಗುವ ಸ್ಥಿತಿ ಬಂದಿದೆ. ಈ ಕುಟಿಲ ತಂತ್ರೋಪಾಯಗಳಿಗೆ ಬೇಕಾಗಿರುವುದು ಕೇವಲ ಮಾಧ್ಯಮಗಳು ಮಾತ್ರ. ಜಾಹಿರಾತಿನ ಪ್ರಲೋಭನೆ ಮುಖಾಂತರ ಜೀವನ ಶೈಲಿಯನ್ನು, ಜನರ ಸಂಸ್ಕೃತಿಯನ್ನು ಬದಲಾಯಿಸಬಹುದು ಎಂಬುದನ್ನು ಜಾಗತೀಕರಣ ವ್ಯವಸ್ಥೆ ಆದುನಿಕ ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದೆ. ಈ ಕಾರಣಕ್ಕಾಗಿ ನಮ್ಮ ಬರಗೂರು ರಾಮಚಂದ್ರಪ್ಪ ಜಾಗತೀಕರಣವನ್ನು ಶಬ್ಧವಿಲ್ಲದ ನಿಶ್ಯಬ್ಧ ಯುದ್ಧ ಎಂದು ಅರ್ಥಪೂರ್ಣವಾಗಿ ಕರೆದಿದ್ದಾರೆ. ಇದಕ್ಕೆ ಉದಾಹರಣೆಯಾಗಿ ವರ್ತಮಾನ ಜಗತ್ತಿನ ಆಹಾರ, ಉಡುಪು, ನಾವು ಕೇಳುವ ಸಂಗೀತ, ನೋಡುವ ಸಿನಿಮಾ, ಯುವತಲೆಮಾರಿನ ಚಿಂತನೆಯ ಮಾದರಿಗಳು ಇವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ನಮ್ಮ ಅಭಿವೃದ್ಧಿಯ ಪಥ ಯಾವ ದಿಕ್ಕಿನತ್ತ ಚಲಿಸುತ್ತಿದೆ ಎಂಬುದನ್ನು ಗ್ರಹಿಸಬಹುದು. ಬಹುಮುಖಿ ಸಂಸ್ಕೃತಿಯ ನೆಲವಾದ ಭಾರತದ ವೈವಿಧ್ಯತೆಯ ಭಾಷೆ ಧರ್ಮ, ಆಚಾರ ವಿಚಾರಗಳ, ಜಾತಿ, ಇವುಗಳ ನಡುವೆಯೂ ಒಂದು ಉದಾತ್ತ ಸಂಸ್ಕೃತಿಯೊಂದು ಬೆಳೆದು ಬಂದಿತ್ತು. ಪರಧರ್ಮ, ಜಾತಿ ಸಹಿಷ್ಣು ಮನೋಭಾವ ಈ ಉದಾತ್ತ ಮನೋಭಾವ ಮತ್ತು ಸಂಸ್ಕೃತಿಯ ಜೀವಾಳವಾಗಿತ್ತು. ನಮ್ಮ ಪೂರ್ವಿಕರ ದೇಶಿ ಜ್ಞಾನ ಪರಂಪರೆ, ಅದರ ಕೊಡುಗೆಗಳಾದ ಯೋಗ, ಧ್ಯಾನ, ಆಯುರ್ವೇದಿಕ ಔಷದ ಪದ್ಧತಿ, ನಮ್ಮ ಸಾಕು ಪ್ರಾಣಿಗಳಾದ ಜಾನುವಾರುಗಳಿಗೆ ನೀಡುತಿದ್ದ ಗಿಡಮೂಲಿಕೆಗಳ ಔಷಧಗಳು, ಹವಾಮಾನಕ್ಕೆ ಅನುಗುಣವಾಗಿ ಬದಲಾಗುತಿದ್ದ ನಮ್ಮ ಆಹಾರ ಪದ್ಧತಿ ಇವೆಲ್ಲವೂ ಆಧುನಿಕತೆಯ ಅಭಿವೃದ್ಧಿಯ ರಥದ ಗಾಲಿಯಡಿ ಸಿಲುಕಿ ನುಚ್ಚು ನೂರಾಗಿವೆ. ನಮ್ಮ ಬಹು ಸಂಸ್ಕೃತಿ ನಮ್ಮೆಲ್ಲರ ಅರಿವಿಗೆ ಬಾರದಂತೆ ಏಕಮುಖ ಸಂಸ್ಕೃತಿಯತ್ತ ಜಾರಿದೆ. ಇದು ಮರೆಯಲ್ಲಿ ಕುಳಿತು ಮಾರುಕಟ್ಟೆಯ ಪ್ರಭುತ್ವದ ಸೂತ್ರ ಹಿಡಿದಿರುವ ವ್ಯವಸ್ತೆಯೊಂದರ ಕಾಣದ ಕೈವಾಡ ಎಂದು ಅರ್ಥೈಸಿಕೊಳ್ಳಲಾರದ ವಿಸ್ಮೃತಿಗೆ ನಾವು ತಳ್ಳಲ್ಪಟ್ಟಿದ್ದೇವೆ. ಅನ್ನ ತಿನ್ನುವ ಬಾಯಿಗೆ ನ್ಯೂಡಲ್ಸ್ ಮತ್ತು ಪಿಜ್ಜಾಗಳನ್ನು ತುರುಕಲಾಗುತ್ತಿದೆ. ಮಜ್ಜಿಗೆ, ಎಳನೀರು ಕುಡಿಯುತಿದ್ದ ಗಂಟಲಿಗೆ ಪೆಪ್ಸಿ, ಕೊಕಾಕೋಲಾ ಸುರಿಯಲಾಗುತ್ತಿದೆ, ಚಕ್ಕುಲಿ, ಕೋಡುಬಳೆ ಹಿಡಿಯುತಿದ್ದ ಕೈಗಳಿಗೆ ಲೇ ಮತ್ತ ಕುರ್ ಕುರೆ ಚಿಪ್ಸ್ ಪಾಕೇಟ್ ಹಾಗೂ ಕೆಂಟುಕಿ ಚಿಕನ್ ನೀಡಲಾಗಿದೆ. ಅರಿಶಿನ, ಶ್ರೀಗಂಧ ಬಳಿದು ಕೊಳ್ಳುತಿದ್ದ ಮುಖಗಳಿಗೆ ಮಾರುಕಟ್ಟೆಯಲ್ಲಿರುವ ನೂರಾರು ಕ್ರೀಮ್ ಗಳನ್ನು ಬಳಿಯಲಾಗುತ್ತಿದೆ. ಕೇವಲ ಹದಿನೈದು ದಿನಗಳಲ್ಲಿ ಕಪ್ಪಗಿದ್ದವರನ್ನು ಬೆಳ್ಳಗೆ ಮಾಡುವ, ದಪ್ಪಗಿದ್ದವರನ್ನ ಸಣ್ಣಗೆ ಮಾಡುವ, ಬೋಳುತಲೆಯಲ್ಲಿ ಸೊಂಪಾಗಿ ತಲೆ ಕೂದಲು ಬೆಳಸುವ ಇವಿಷ್ಟೆ ಅಲ್ಲದೇ ಇಡೀ ರಾತ್ರಿ ನಿಮ್ಮ ಸಂಗಾತಿಗೆ ನಿರಂತರ ಸುಖ ನೀಡುವ ಮಾತ್ರೆಗಳನ್ನು ರೂಪಿಸಲಾಗಿದೆ! ಇವುಗಳ ಖಚಿತತೆಯ ಬಗ್ಗೆ ಶೋಧನೆಯಾಗಲಿ, ವಿವೇಚನೆಯಾಗಲಿ ಇಲ್ಲದೆ, ಮದ್ಯಮ ವರ್ಗದ ಗ್ರಾಹಕ ಜಗತ್ತು ಶರಣಾಗಿದೆ. ಈ ನಕಲಿ ಸಂಸ್ಕೃತಿಗೆ ನಮ್ಮ ಮಾಧ್ಯಮಗಳು ಏಜೆಂಟರಂತೆ ಕಾರ್ಯನಿರ್ವಹಿಸುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳ ಇಂತಹ ಪ್ರಲೋಭನೆಗಳು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬೇಕೆ ಎಂಬುದರ ಬಗ್ಗೆ ನಾವು ಗಂಭೀರವಾಗಿ ಆಲೋಚಿಸಬೇಕಾಗಿದೆ. ನಾಲ್ಕು ಜನ ಉಳ್ಳವರ ನೆಮ್ಮದಿಯ ಬದುಕಿಗಾಗಿ ನಲವತ್ತು ಜನರ ನೆಮ್ಮದಿಯ ಬದುಕನ್ನು ಕಿತ್ತುಕೊಳ್ಳವ ಇಂದಿನ ಅಭಿವೃದ್ಧಿ ಯೋಜನೆಗಳ ಬಗೆಗಿನ ಚಿಂತನೆಗಳನ್ನು ನಾವೀಗ ಪರಾಮರ್ಶಿಸಬೇಕಿದೆ. ಅಭಿವೃದ್ಧಿಯ ಬಗ್ಗೆ ಪುಂಖಾನು ಪುಂಖವಾಗಿ ವಿಚಾರ ಲಹರಿಯನ್ನು ಹರಿಯ ಬಿಡುವ ಜಾಗತೀರಣ ಅಥವಾ ಮಾರುಕಟ್ಟೆ ಪ್ರಭುತ್ವದ ವಕ್ತಾರರು, ಈ ದೇಶದಲ್ಲಿ ನಿವಾರಣೆಯಾಗದ ಬಡತನ, ಸುಧಾರಣೆಯಾಗದ ಆರೋಗ್ಯ ಕ್ಷೇತ್ರ, ದುಬಾರಿಯಾದ ಬಡವರ ಪಾಲಿನ ಜೀವರಕ್ಷಕ ಔಷದಗಳು, ಮಧ್ಯಮವರ್ಗದ ಜನತೆಗೆ ನಿಲುಕದ ಉನ್ನತ ಶಿಕ್ಷಣ,ಮಕ್ಕಳ ಅಪೌಷ್ಟಿಕತೆ, ರೈತರ ಧಾರುಣ ಆತ್ಮಹತ್ಯೆ, ಆದಿವಾಸಿಗಳ ಅತಂತ್ರ ಬದುಕು, ಕಲ್ಮಶವಾಗುತ್ತಿರುವ ನೀರಿನ ಮೂಲಗಳು ಬತ್ತಿಹೋಗುತ್ತಿರುವ ನದಿಗಳು, ಪದೇ ಪದೇ ಕಿತ್ತುಹೋಗಿ ರಿಪೇರಿಯಾಗುವ ರಾಷ್ಟ್ರೀಯ ಹೆದ್ದಾರಿಗಳು ಇವುಗಳ ಹಿಂದಿನ ಹುನ್ನಾರವೇನು? ಯಾರಾದರೂ ಅರ್ಥೈಸಿ ಹೇಳಬಲ್ಲರೆ? ಅಥವಾ ವಿಶ್ಲೇಷಿಸಬಲ್ಲರೆ? ದಿಕ್ಕೆ 28 ರೂಪಾಯಿ ದುಡಿಯಬಲ್ಲ ವ್ಯಕ್ತಿ ಬಡವನಲ್ಲ ಎಂದು ಈ ದೇಶಧ ರಾಷ್ಟ್ರೀಯ ಆಯೋಗ ಘೋಷಣೆ ಮಾಡಿದೆ. ಬಡವ ಬಲ್ಲಿದ ಎಂಬ ಬೇಧ ಭಾವವಿಲ್ಲದೆ ನಾವು ತಿನ್ನುವ ಅಕ್ಕಿಯ ಬೆಲೆ ಕಿ.ಲೋ. ಒಂದಕ್ಕೆ 36 ರೂಪಾಯಿ, ಜೋಳ 28 ರೂಪಾಯಿ, ಗೋಧಿಯ ಬೆಲೆ 26 ರೂಪಾಯಿ ಇದೆ. ಇಂತಹ ದುಬಾರಿಯಾದ ಅಗತ್ಯವಸ್ತುಗಳ ಬೆಲೆ ಏರಿಕೆಯ ಪ್ರಪಂಚದಲ್ಲಿ ಬಡವರು ಹೇಗೆ ಬದುಕ ಬೇಕು? ಇದಕ್ಕೆ ಯಾರಲ್ಲಿ ಉತ್ತರ ಪಡೆಯೋಣ? ಯಾವುದೇ ಒಂದು ದೇಶದ ಅಭಿವೃದ್ಧಿಯನ್ನು ಆ ದೇಶದ ಜನರ ತಲಾ ವರಮಾನ ಅಥವಾ ಒಟ್ಟು ರಾಷ್ಟ್ರೀಯ ಉತ್ಪನ್ನಗಳ(ಜಿ.ಡಿ.ಪಿ.) ಮಾನದಂಡದಿಂದ ಅಳೆದರಷ್ಟೇ ಸಾಲದು, ಅಲ್ಲಿನ ಜನರ ಬದುಕಿನ ಬೌತಿಕ ಸ್ಥಿತಿ ಗತಿ ಕೂಡ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬುದು ಇತ್ತೀಚೆಗಿನ ಆರ್ಥಿಕ ತಜ್ಞರ ವಾದವಾಗಿದೆ. ಇದಕ್ಕೆ ಚಾಲನೆ ನೀಡಿದವರು ನಮ್ಮವರೇ ಆದ ನೋಬಲ್ ಪ್ರಶಸ್ತಿ ವಿಜೇತ ಅಮಾತ್ರ್ಯ ಸೇನ್. ವ್ಯಕ್ತಿಯೊಬ್ಬನ ಧಾರಣಾ ಸಾಮಥ್ರ್ಯ ಅಂದರೆ, ಆತನಿಗೆ ಸಿಗುತ್ತಿರುವ ಸಾಮಾಜಿಕ ಸೌಲಭ್ಯಗಳು, ಶಿಕ್ಷಣ, ಆರೋಗ್ಯ ಮುಂತಾದ ಸವಲತ್ತುಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಸೇನ್ ಒತ್ತಾಯಿಸಿದ್ದಾರೆ. ಕೇವಲ ಬೌತಿಕ ಸಂಪತ್ತು ನಿಜವಾದ ಮಾನದಂಡವಾಗಲಾರದು ಎಂಬುದು ಅವರ ನಿಲುವು. (ಈ ಕುರಿತಂತೆ ಅವರ ದ ಐಡಿಯಾ ಆಪ್ ಜಸ್ಟೀಸ್ ಹಾಗೂ ಡೆವಲಪ್ ಮೆಂಟ್ ಅಂಡ್ ಫ್ರೀಡಂ ಕೃತಿಯನ್ನು ಅವಲೋಕಿಸಬಹುದು) ಇದಕ್ಕಿಂತ ಭಿನ್ನವಾದ ಪರಿಕಲ್ಪನೆಯೊಂದನ್ನ ಭೂತಾನ್ ದೇಶದ ದೊರೆ ಹುಟ್ಟುಹಾಕಿದ್ದಾನೆ. ಅವನ ದೃಷ್ಟಿಯಲ್ಲಿ ರಾಷ್ಟ್ರವೊಂದರ ಜಿ.ಡಿ.ಪಿ. ( ಒಟ್ಟು ರಾಷ್ಟ್ರೀಯ ಉತ್ಪನ್ನ)ಗಿಂತ ರಾಷ್ಟ್ರದ ಜನರ ನೆಮ್ಮದಿ ಮುಖ್ಯ ಎಂಬುದು ಭೂತಾನ್ ದೊರೆಯ ಅಬಿಮತ. ಅಮಾತ್ರ್ಯಸೇನ್ ಸಿದ್ಧಾಂತವನ್ನು ನಾವು ಪರಿಗಣಿಸುವುದಾದರೆ, ನಾವು ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವೆಂದು ಪರಿಗಣಿಸಲು ಸಾಧ್ಯವಿಲ್ಲ.ಏಕೆಂದರೆ, ಇಲ್ಲಿನ 120ಕೋಟಿ ಜನಸಂಖ್ಯೆಯಲ್ಲಿ ಶೇ.70ರಷ್ಟು ಜನತೆ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಆರೋಗ್ಯ ಮತ್ತು ಉನ್ನತ ಶಿಕ್ಷಣ, ಮುಂತಾದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಇದು ಈ ದೇಶದ ವೈರುಧ್ಯವೊ ಅಥವಾ ವರ್ತಮಾನದ ವೈಂಗ್ಯವೊ ತಿಳಿಯಲಾಗದು. ಭಾರತದಲ್ಲಿ 50 ಕೋಟಿಗೂ ಅಧಿಕ ಜನ ಶೌಚಾಲಯಗಳಿಂದ ವಂಚಿತರಾಗಿದಾರೆ. ಆದರೆ, 120ಕೋಟಿ ಜನಸಂಖ್ಯೆಗೆ 92ಕೋಟಿ ಮೊಬೈಲ್ ಚಂದಾದಾರರಿದ್ದಾರೆ. ಭಾರತದ ಅಭಿವೃದ್ಧಿಯನ್ನು ಮೊಬೈಲ್ ಚಂದಾದಾರರ ಮೂಲಕ ಅಳೆಯಬೇಕೋ? ಅಥವಾ ಶೌಚಾಲಯ ವಂಚಿತರಿಂದ ಅಳೆಯಬೇಕೊ? ನೀವೆ ನಿರ್ಧರಿಸಿ. ಇದೀಗ ನಮ್ಮ ಪ್ರಧಾನ ಮಂತ್ರಿ ಬಡತನ ರೇಖೆಯ ಕೆಳಗಿರುವ ಕುಟುಂಬಗಳಿಗೆ ಉಚಿತ ಮೋಬೈಲ್ ಹಾಗೂ ತಿಂಗಳಿಗೆ ಇನ್ನೂರು ರೂಪಾಯಿಗಳ ಮಾತನಾಡುವ ಸಮಯ ನೀಡಲು ಮುಂದಾಗಿದ್ದಾರೆ. 2011 ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಏಳು ಕೋಟಿ ಐವತ್ತು ಲಕ್ಷ ಹಳ್ಳಿಗಳು ವಿದ್ಯುತ್ ಸೌಲಭ್ಯಗಳಿಂದ ವಂಚಿತವಾಗಿವೆ. 2004ರಲ್ಲಿ ಕೇಂದ್ರ ಸಕರ್ಾರ ಹಮ್ಮಿಕೊಂಡ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತ್ ಯೋಜನೆಯ ಪ್ರಕಾರ ಐದು ವರ್ಷದ ಅವಧಿಯಲ್ಲಿ ದೇಶದ ಎಲ್ಲಾ ಮನೆಗಳಿಗೂ ಬೆಳಕು ಹರಿಯಬೇಕಿತ್ತು. ಈಗ ಯೋಜನೆಯ ಗುರಿಯನ್ನು 2017ಕ್ಕೆ ವಿಸ್ತರಿಸಲಾಗಿದೆ. ದೇಶದಲ್ಲಿ ಪ್ರತಿವರ್ಷ ಶೇ.15ರಷ್ಟು ವಿದ್ಯುತ್ ಬೇಡಿಕೆ ಇದ್ದು , ಹೊಸದಾಗಿ ಉತ್ಪಾದನೆಯಾಗುತ್ತಿರುವುದು ಕೇವಲ ಶೇ.9ರಷ್ಟು ಮಾತ್ರ. ಉತ್ಪಾದನೆಯಾಗುತ್ತಿರುವ ವಿದ್ಯುತ್ ನಲ್ಲಿ ವಿತರಣೆಯ ಸಮಯದಲ್ಲಿ ಕಳಪೆ ತಾಂತಿಕ ಗುಣಮಟ್ಟ ಮತ್ತು ನಿರ್ವಹಣೆಯಿಂದಾಗಿ ಶೇ25ರಿಂದ ಶೇ.40 ರಷ್ಟು ಬಳಕೆಗೆ ಬಾರದೆ ಸೋರಿಹೋಗುತ್ತಿದೆ. ಇವತ್ತಿನ ಬಡಜನತೆಗೆ ಅಗತ್ಯವಾಗಿ ಬೇಕಾಗಿರುವುದು, ಮೊಬೈಲ್ಗಳಲ್ಲ, ಬದಲಾಗಿ ರೋಗ ಮುಕ್ತ ಜೀವನ. ಆ ಕುಟುಂಬಗಳಿಗೆ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಸೊಳ್ಳೆ ಪರದೆ ವಿತರಣೆಯಾದರೆ ಮಲೇರಿಯಾ, ಡೆಂಗ್ಯೂ ಮುಂತಾದ ಕಾಯಿಲೆಗಳಿಂದ ಈ ಅಮಾಯಕರನ್ನು ರಕ್ಷಿಸಬಹುದು ಎಂಬ ಕನಿಷ್ಠ ತಿಳುವಳಿಕೆ ಮತ್ತು ಜ್ಞಾನ ವಿಶ್ವವಿಖ್ಯಾತ ಆಥರ್ಿಕ ತಜ್ಞರೆನಿಕೊಂಡ ನಮ್ಮ ಪ್ರಧಾನಿಗೆ ಇಲ್ಲವಾದರೆ ದೇಶದ ಗತಿಯೇನು? ಈ ಜನರ ಭವಿಷ್ಯವೇನು? ಈ ದೇಶದ ಆರೋಗ್ಯ ವಲಯವಂತೂ ಸುಧಾರಿಸಲಾಗದ ಹಂತವನ್ನು ತಲುಪಿದೆ. ಆರೋಗ್ಯ ಸೇವೆ ಬಡವರ ಪಾಲಿಗೆ ನಿಲುಕದ ನಕ್ಷತ್ರದಂತಾಗಿದೆ. ಜಾಗತೀಕರಣದ ಫಲವಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳ ಸಕರ್ಾರಗಳು ಸಾಮಾಜಿಕ ಕಲ್ಯಾಣ ಕಾರ್ಯಗಳಿಂದ ಹಿಂದೆ ಸರಿದು ಖಾಸಾಗೀಕರಣಕ್ಕೆ ಹಾದಿ ಮಾಡಿಕೊಟ್ಟಿವೆ. ಕಳೆದ ಐದು ವರ್ಷಗಳಲ್ಲಿ ಜೀವ ರಕ್ಷಕ ಔಷಧಗಳ ಬೆಲೆ ದುಪ್ಪಟ್ಟಾಗಿದೆ. ಈಗಾಗಲೇ ಪಾಶ್ಚಿಮಾತ್ಯ ದೇಶಗಳಲ್ಲಿ ಜೀವಕ್ಕೆ ಅಡ್ಡಪರಿಣಾಮಗಳಿಂದ ಅಪಾಯ ಎಂದು ತಿರಸ್ಕರಿಸುವ ಸುಮಾರು ನಲವತ್ತು ವಿವಿಧ ಬಗೆಯ ಔಷಧಗಳು ಭಾರತದ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿವೆ. ಇದಲ್ಲದೆ ಯಾವುದೇ ಪೂರ್ವ ಪ್ರಯೋಗಗಳಿಲ್ಲದೆ ಮಾರುಕಟ್ಟೆಗೆ 33 ಔಷಧಗಳು ಬಿಡುಗಡೆಯಾಗಿವೆ. ಈ ಬಗ್ಗೆ ಕೇಂದ್ರ ಸಕರ್ಾರ ತನಿಖೆಗೆ ಉನ್ನತ ಸಮಿತಿಯೊಂದನ್ನು ನೇಮಕ ಮಾಡಿದ ಮರುದಿನವೇ ಕೇಂದ್ರ ಆರೋಗ್ಯ ಸಚಿವರ ಕಛೇರಿಯಲ್ಲಿ ಈ ಹಗರಣದ ಫೈಲು ಕಾಣೆಯಾಗಿದೆ. ನಾವು ಎಂತಹ ಕೀಳು ಮಟ್ಟದ ಅಭಿರುಚಿಯ ಆರೋಗ್ಯ ಸಚಿವರನ್ನು (ಗುಲಾಮ್ ನಭಿಅಜಾದ್) ಪಡೆದಿದ್ದೇವೆ ಎಂದರೆ, ಜನಸಂಖ್ಯೆಯ ನಿಯಂತ್ರಣಕ್ಕೆ ಪ್ರತಿ ಮನೆಯಲ್ಲಿ ಟಿ.ವಿ. ಇರಬೇಕು ಎಂಬುದು ಅವರ ಅಭಿಮತ. ಏಕೆಂದರೆ, ತಡರಾತ್ರಿ ಜನತೆ ಧಾರವಾಹಿಗಳನ್ನು ನೋಡುವುದರಿಂದ ಲೈಂಗಿಕ ಕ್ರಿಯೆಯಿಂದ ದೂರವಿರುತ್ತಾರೆ ಎಂಬುದು ನಮ್ಮ ಆರೋಗ್ಯ ಸಚಿವರ ನೂತನ ಸಂಶೋಧನೆ! ( ದಿನಾಂಕ 12-7-12 ರ ದೆಹಲಿ ಆವೃತ್ತಿ ಡಿ.ಎನ್.ಎ. ಇಂಗ್ಲೀಷ್ ದೈನಿಕಕ್ಕೆ ನೀಡಿರುವ ಹೇಳಿಕೆ)

CORRUPTION CRIPPLES EVERYTHING

ಈ ದಿನ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರೇ ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರ ಪಾಲಿಗೆ ಸಂಜೀವಿನಿಯಾಗಿದ್ದ ಗಾಮ್ರಾಂತರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯರಿಲ್ಲದೆ ಪಾಳುಬಿದ್ದಿವೆ.ಇತ್ತೀಚೆಗಿನ ದಿನಗಳಲ್ಲಿ ದುಬಾರಿಯಾದ ವೈದ್ಯಕೀಯ ಶಿಕ್ಷಣದಿಂದಾಗಿ ಪ್ರತಿಯೊಬ್ಬ ವೈದ್ಯನೂ, ಕಡಿಮೆ ವೇತನದ ಸರ್ಕಾರಿ ಹುದ್ದೆಗೆ ಬದಲಾಗಿ ಖಾಸಾಗಿಯಾಗಿ ದುಡಿಯಲು ಪ್ರಯತ್ನಿಸುತಿದ್ದಾನೆ. 2008ರ ಮಾರ್ಚ್ ಅಂತ್ಯದ ವೇಳೆಗೆ ಭಾರತದಲ್ಲಿ ನೊಂದಣಿಯಾದ ವೈದ್ಯರ ಸಂಖ್ಯೆ 95524 ಅಂದರೆ, ಸರಾಸರಿ ಪ್ರತಿ ಹತ್ತು ಸಾವಿರ ಜನಸಂಖ್ಯೆಗೂ ಒಬ್ಬ ವೈದ್ಯನಿಲ್ಲದ ಸ್ಥಿತಿ. ಚೀನಾದಲ್ಲಿ ಪ್ರತಿಸಾವಿರಕ್ಕೆ 14 ವೈದ್ಯರಿದ್ದಾರೆ. ಐರೋಪ್ಯ ರಾಷ್ಡ್ರಗಳಲ್ಲಿ ಪ್ರತಿ ನೂರು ಜನಸಂಖ್ಯೆಗೆ ಒಬ್ಬ ದಾದಿ ಇದ್ದರೆ, ಭಾರತದಲ್ಲಿ ಪ್ರತಿ 2115 ಜನಸಂಖ್ಯೆಗೆ ಒರ್ವ ದಾದಿ ಇದ್ದಾಳೆ. ವಿಶ್ವ ಅರೋಗ್ಯ ಸಂಸ್ಥೆಯ ಸಮೀಕ್ಷೆಯಂತೆ ಆಫ್ರಿಕಾ ದೇಶಗಳಲ್ಲಿ ಅಲ್ಲಿನ ಸರ್ಕಾರಗಳು ತಮ್ಮ ಆಯ ವ್ಯಯದ ಶೇ.6.2ರಷ್ಟನ್ನು ವಿನಿಯೋಗಿಸುತಿದ್ದರೆ, ಭಾರತದಲ್ಲಿ ವಿನಿಯೋಗದ ಪ್ರಮಾಣ ಶೇ.4.1ರಷ್ಟು ಮಾತ್ರ. 2020 ನೇ ಇಸವಿ ವೇಳೆಗೆ ಭಾರತಕ್ಕೆ ಗ್ರಾಮೀಣ ಪ್ರದೇಶಗಳೂ ಸೇರಿದಂತೆ 7.42 ಲಕ್ಷ ಸಹಾಯಕ ದಾದಿಯರು 4.4 ಲಕ್ಷ ಪುರುಷ ಶುಷ್ರೂಕರು, 14.9 ಲಕ್ಷ ನುರಿತ ನರ್ಸ್ಗಳು, 3.67 ಲಕ್ಷ ವೈದ್ಯರು, 2ಲಕ್ಷ ತಜ್ಞವೈದ್ಯರು ಬೇಕಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರನ್ನು ಸೃಷ್ಟಿಸಬೇಕಾದ ಭಾರತೀಯ ವೈದ್ಯಕೀಯ ಮಂಡಲಿ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿ ಹೋಗಿದೆ. ಇದರ ಅಧ್ಯಕ್ಷ (ಕೇತನ್ ದೇಸಾಯಿ) ಎಂಬ ವ್ಯಕ್ತಿಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿ ಸರೆಮನೆಯಲ್ಲಿ ಕಂಬಿ ಏಣಿಸುತಿದ್ದಾನೆ. ಇಂತಹ ದಯನೀಯವಾದ ಸ್ಥಿತಿಯಲ್ಲಿ ಅಭಿವೃದ್ಧಿ ಕುರಿತಂತೆ ಮಾನದಂಡವನ್ನು ಹೇಗೆ ಬಳಸಬೇಕು? ಅರ್ಥಶಾಸ್ತ್ರಜ್ಞರು ಉತ್ತರಿಸಬೇಕಿದೆ. ವಿಶ್ವಸಂಸ್ಥೆಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗ ನಡೆಸಿದ ಜಗತ್ತಿನ 169 ರಾಷ್ಟ್ರಗಳ ಸಮೀಕ್ಷಾ ವರದಿಯ ಪ್ರಕಾರ 2009ರಲ್ಲಿ ಮಾನವ ಅಭಿವೃದ್ಧಿಯಲ್ಲಿ 119 ನೇ ಸ್ಥಾನದಲ್ಲಿದ್ದ ಭಾರತ 2011ರಲ್ಲಿ 134 ನೇ ಸ್ಥಾನಕ್ಕೆ ಕುಸಿದಿದೆ. ಅಚ್ಚರಿಯ ಸಂಗತಿಯೆಂದರೆ, ಜನಾಂಗೀಯ ಕಲಹದಲ್ಲಿ ನಲುಗಿದ ಶ್ರೀಲಂಕಾ 101 ನೇ ಸ್ಥಾನ ಪಡೆದಿದೆ. ಬಡತನ ಮತ್ತು ಜಾಗತೀಕರಣದ ಪರಿಣಾಮಗಳ ಕುರಿತಂತೆ ಭಾರತ ಮತ್ತು ಚೀನಾ ರಾಷ್ಟ್ರಗಳ ಬಗ್ಗೆ ತೌಲನಿಕ ಅಧ್ಯಯನ ನಡೆಸಿ Chinese And Indian Strategic Bihavior’’ ಎಂಬ ಕೃತಿ ಪ್ರಕಟಿಸಿರುವ ಜೆ. ಗಿಲ್ ಬಾಯ್ ಮತ್ತು ಎರಿಕ್ ಹಿಗ್ಗಿನ್ ಬಾತಮ್ ಎಂಬುವರು, ಚೀನಾ ದೇಶದಲಿ 1981 ರಲ್ಲಿ ಶೇ.84ರಷ್ಟು ಇದ್ದ ಬಡತನ 2005ರ ವೇಳೆಗೆ ಶೇ.16ಕ್ಕೆ ಇಳಿದಿರುವುದನ್ನು ಪ್ರಸ್ತಾಪಿಸುತ್ತಾ, ಚೀನಾದಲ್ಲಿ ಭ್ರಷ್ಟಾಚಾರ ನಿಗ್ರಹ ಕುರಿತಂತೆ ಗಲ್ಲು ಶಿಕ್ಷೆಯಂತಹ ಕಠಿಣ ಕಾನೂನುಗಳು ಜಾರಿಯಲ್ಲಿರುವುದರಿಂದ ಅಲ್ಲಿ ಅಭಿವೃದ್ಧಿಗೆ ವಿನಿಯೋಗಿಸುವ ಹಣ ಸದ್ಬಳಕೆಯಾಗುತಿದ್ದು ಬಡತನ ನಿವಾರಣೆಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ ಭಾರತದ ಬಡತನ 1981ರಿಂದ 2005ರ ಸಮಯದಲ್ಲಿ ಶೇ.60ರಿಂದ ಶೇ.42ಕ್ಕೆ ಇಳಿದಿರುವುದನ್ನು ಅವರು ಗುರುತಿಸಿದ್ದಾರೆ. ಜಾಗತೀಕರಣದ ಬಗ್ಗೆ ಅಥವಾ ಅದರ ಕೂಸಾದ ಮುಕ್ತ ಮಾರುಕಟ್ಟೆಯ ಪ್ರಕ್ರಿಯೆಗಳ ಬಗ್ಗೆ ಅರ್ಥಶಾಸ್ರ್ತಜ್ಞರು, ಇಲ್ಲವೇ ಅವುಗಳ ವಕ್ತಾರರು ಏನೇ ಹೇಳಲಿ, ಇವತ್ತಿಗೂ ಜಗತ್ತಿನಾದ್ಯಂತ ಪ್ರತಿ ಏಳು ಮಂದಿಗೆ ಒಬ್ಬ ಪ್ರಜೆ ಹಸಿವಿನಿಂದ ಬಳಲುತಿದ್ದಾನೆ. ಜಗತ್ತಿನ ಏಳನೂರು ಕೋಟಿ ಜನ ಸಂಖ್ಯೆಯಲ್ಲಿ 92ಕೋಟಿ 50ಲಕ್ಷ ಜನತೆ ಹಸಿವಿನಿಂದ ಕಂಗೆಟ್ಟಿದ್ದಾರೆ. ಮುಂದುವರಿದ ರಾಷ್ಟ್ರಗಳೆಂದು ಗುರುತಿಸಿಕೊಂಡಿರುವ ಅಮೇರಿಕಾ, ಬ್ರಿಟನ್, ಪ್ರಾನ್ಸ್ ಕೆನಡಾ ರಾಷ್ಟ್ರಗಳಲ್ಲಿ 1ಕೋಟಿ 90 ಲಕ್ಷ ಜನತೆ, ಬ್ರೆಜಿಲ್, ಅರ್ಜ೦ಟೈನಾ, ಚಿಲಿ ಸೇರಿದಂತೆ ಲ್ಯಾಟಿನ್ ಅಮೇರಿಕಾ ರಾಷ್ಟ್ರಗಳಲ್ಲಿ 5ಕೋಟಿ 30ಲಕ್ಷ ಜನತೆ, ಉತ್ತರ ಮತ್ತು ಪೂರ್ವ ಆಫ್ರಿಕಾ ರಾಷ್ಟ್ರಗಳಲ್ಲಿ 3ಕೋಟಿ 50ಲಕ್ಷಜನತೆ, ಸೋಮಾಲಿಯ, ಇಥಿಯೊಪಿಯಾ, ರುವಾಂಡ ಸೇರಿದಂತೆ ಸಬ್ ಸಹರಾ ಪ್ರಾಂತ್ಯದ ರಾಷ್ಟ್ರಗಳಲ್ಲಿ 2ಕೋಟಿ 39ಲಕ್ಷ ಜನತೆ, ಮತ್ತು ಚೀನಾ, ಭಾರತ, ಪಾಕಿಸ್ತಾನ, ಬಾಂಗ್ಲಾ, ನೇಪಾಳ ಸೇರಿದಂತೆ ಏಷ್ಯಾ ರಾಷ್ಟ್ರಗಳಲ್ಲಿ 5ಕೋಟಿ 78ಲಕ್ಷ ಜನತೆ ಹಸಿವಿನ ಬಲೆಯೊಳಗೆ ಬಂಧಿಯಾಗಿದ್ದಾರೆ. ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಅತಿ ಮುಖ್ಯವಾದ ಆಧಾರ. ಇಂತಹ ಸಂಪನ್ಮೂಲವನ್ನು ಸೃಷ್ಟಿಸುವಲ್ಲಿ ಶಿಕ್ಷಣ ವ್ಯವಸ್ಥೆ ಇದಕ್ಕೆ ಅಡಿಪಾಯವಾಗಿರುತ್ತದೆ. ಅಭಿವೃದ್ಧಿಶೀಲ ರಾಷ್ಟ್ರ ಮತ್ತು ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿ ಎಂದೆಲ್ಲಾ ಗುರುತಿಸಿಕೊಂಡಿರುವ ಭಾರತದ ಶಿಕ್ಷಣ ವ್ಯವಸ್ಥೆ ನಿಜಕ್ಕೂ ಗಾಬರಿ ಪಡುವಂತಹದ್ದು. ಇಲ್ಲಿನ ಪ್ರೈಮರಿ ಶಾಲೆಯಿಂದ ಹಿಡಿದು, ಉನ್ನತ ಶಿಕ್ಷಣದವರೆಗೆ, ಎಲ್ಲವೂ ಖಾಸಾಗಿ ಸಂಸ್ಥೆಗಳ ಕಪಿಮುಷ್ಟಿಗೆ ಸಿಲುಕಿದ್ದು, ಇದರಿಂದ ಜನ್ಮ ಪಡೆದ ಕ್ಯಾಪಿಟೇಷನ್ ಮಾಫಿಯ ಇವತ್ತು ಸರ್ಕಾರಗಳನ್ನು ಉರುಳಿಸಬಲ್ಲ ಶಕ್ತಿಯನ್ನು ದಕ್ಕಿಸಿಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಸರ್ಕಾರಗಳು ಜನತೆಗೆ ನೀಡಬೇಕಾದ ಶಿಕ್ಷಣ, ಆರೋಗ್ಯಸೇವೆ ಮುಂತಾದ ಸವಲತ್ತುಗಳಿಂದ ತಮ್ಮ ಜವಾಬ್ದಾರಿಯನ್ನು ಕಳೆದುಕೊಂಡು ಖಾಸಾಗೀಕರಣಗೊಳಿಸುತ್ತಿರುವುದು ನಿಜಕ್ಕೂ ಆತಂಕಕಾರಿಯಾದುದು. ಈಗ ಉಳ್ಳವರಿಗಷ್ಟೇ ಶಿಕ್ಷಣ ಎಂಬಂತಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ, ದೇಶದ ಬಹುತೇಕ ಉನ್ನತ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳು ಇಲ್ಲಿನ ರಾಜಕಾರಣಿಗಳು,ಇಲ್ಲವೇ ಧಾರ್ಮಿಕ ಸಂಸ್ಥೆಗಳಾದ ಒಡೆತನದಲ್ಲಿವೆ. ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರಗಳು ತಾಳಿದ ನಿರ್ಲಕ್ಷ್ಯ ಧೋರಣೆಯಿಂದಾಗಿ ಒಂದೊಂದಾಗಿ ಕಣ್ಮುಚ್ಚುತ್ತಿವೆ. ದುಭಾರಿ ಶಿಕ್ಷಣ ಶುಲ್ಕ ಮತ್ತು ಡೊನೇಶನ್ ನಂತಹ ಅಪಾಯಕಾರಿ ಬೆಳವಣಿಯಿಂದಾಗಿ ಇವತ್ತಿಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ವಿಧ್ಯಾಥರ್ಿಗಳ ಸಂಖ್ಯೆ ಶೇ.11ರಷ್ಟನ್ನು ದಾಟಿಲ್ಲ. ಈ ದೇಶದಲ್ಲಿ ನೂರಾರು ವಿಶ್ವ ವಿದ್ಯಾನಿಲಯಗಳಿವೆ. ಅಲ್ಲಿ ಪ್ರತಿವರ್ಷ ಸಂಶೋಧನೆ ಹೆಸರಿನಲ್ಲಿ ಚಟುವಟಿಕೆಗಳು ನಡೆಯುತ್ತಿವೆ. ಡಾಕ್ಟರೇಟ್ ಪದವಿಗಳು ವಿತರಣೆಯಾಗುತ್ತಿವೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಂತಹ ಒಂದೆರೆಡು ಸಂಸ್ಥೆಗಳನ್ನು ಹೊರತು ಪಡಿಸಿದರೆ, ಇಲ್ಲಿನವಿ.ವಿ.ಗಳು ಪದವಿ ನೀಡಿರುವ ಸಂಶೋಧನೆಗಳಿಂದ ದೇಶಕ್ಕೆ ಎಷ್ಟರ ಮಟ್ಟಿಗೆ ಪ್ರಯೋಜನವಾಗಿದೆ? ಎಷ್ಟು ಪ್ರಬಂಧಗಳು ಪ್ರಕಟವಾಗಿವೆ? ಯಾರಲ್ಲೂ ಸೃಷ್ಟ ಮಾಹಿತಿಯಿಲ್ಲ. ಇಂದಿಗೂ ಜಗತ್ತಿನ ನೂರು ಶ್ರೇಷ್ಠ ವಿ.ವಿ.ಗಳ ಪೈಕಿ ಭಾರತದ ಯಾವ ವಿಶ್ವ ವಿದ್ಯಾನಿಲಯವೂ ಸ್ಥಾನ ಪಡೆದಿಲ್ಲ. ಇದು ನಮ್ಮ ಶಿಕ್ಷಣ ವ್ಯವಸ್ಥೆಯ ನಾಚಿಕೆಗೇಡಿನ ಸಂಗತಿ ಎಂದೂ ಯಾರಿಗೂ ಅನಿಸಿಲ್ಲ. ಕರ್ನಾಟಕದ ಉದಾಹರಣೆ ತೆಗೆದುಕೊಂಡರೆ, ರಾಜಕೀಯ ಕಾರಣದಿಂದಾಗಿ ಇಲ್ಲಿ ಪ್ರತಿವರ್ಷ ಎರಡು ಹೊಸ ವಿಶ್ವ ವಿದ್ಯಾನಿಲಯಗಳು ನಾಯಿಕೊಡೆಯಂತೆ ಹುಟ್ಟುತ್ತಿವೆ. ಹೊಸ ವಿ.ವಿ.ಗಳಲ್ಲಿ ಶೇ.60 ರಷ್ಟು ಉಪನ್ಯಾಸಕರು, ಪ್ರಾಧ್ಯಾಪಕರು ನೇಮಕವಾಗಿಲ್ಲ. ಹಳೆಯ ವಿ.ವಿ.ಗಳಲ್ಲಿ ಭಡ್ತಿ, ಮೀಸಲಾತಿ ಮುಂತಾದ ಕಾರಣಗಳಿಂದ ಶೇ.40ರಷ್ಟು ಸ್ಥಾನಗಳು ಭರ್ತಿಯಾಗಿಲ್ಲ. ಕರ್ನಾಟಕದ ಅತೀ ಹಳೆಯದಾದ ಎರಡನೇ ವಿ.ವಿ. ಎಂಬ ಹೆಗ್ಗಳಿಕೆಗೆ ಗುರಿಯಾಗಿರುವ ಧಾರವಾಡದ ಕರ್ನಾಟಕದ ವಿಶ್ವವಿದ್ಯಾನಿಲಯದಲ್ಲಿ ಕಳೆದ ಎರಡು ವರ್ಷದಿಂದ ಎಲ್ಲಾ ವಿಧವಾದ ಸಂಶೋಧನೆ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮಾರ್ಗದರ್ಶಿ ಅಧ್ಯಾಪಕರ ಕೊರತೆಯ ನೆಪದಲ್ಲಿ ಪಿ.ಹೆಚ್.ಡಿ. ಸಂಶೋಧನೆಯ ಅವಕಾಶಗಳಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಅಮೇರಿಕಾದಲ್ಲಿ ಅಲ್ಲಿ ಪ್ರಮುಖ ಸಂಸ್ಥೆಯಾದ ನಾಸಾ ಸಂಸ್ಥೆಯಿಂದ ಹಿಡಿದು ವಿಜ್ಞಾನ ಮತ್ತು ಆರೋಗ್ಯ ವಿಷಯಗಳಲ್ಲಿ ನಿರತವಾಗಿರುವ ಸಂಸ್ಥೆಗಳಲ್ಲಿ ಎರಡು ಲಕ್ಷ ಪ್ರತಿಭಾವಂತ ಭಾರತೀಯ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರೆ, ನಮ್ಮ ಶಿಕ್ಷಣ ವಲಯದ ಅವ್ಯವಸ್ಥೆಗೆ ಇದಕ್ಕಿಂತ ಬೇರೆ ಕೈಗನ್ನಡಿ ಬೇಕೆ? ಇವತ್ತಿಗೂ ಭಾರತದ ಬೆನ್ನಲುಬಾಗಿ ಇಲ್ಲಿನ ಆರ್ಥಿಕ ಚಟುವಟಿಕೆಯ ಅಡಿಪಾಯವಾಗಿದ್ದುಕೊಂಡು ಶೇ.70ರಷ್ಟು ಜನಕ್ಕೆ ಉದ್ಯೋಗ ನೀಡಿರುವ ಕೃಷಿಯ ರಂಗವನ್ನು ವ್ಯವಸ್ಥಿತವಾಗಿ ಶೋಷಣೆಗೆ ಒಳಪಡಿಸಿರುವುದನ್ನು ನೋಡಿದರೆ, ಈ ದೇಶದಲ್ಲಿ ಪ್ರಜಾ ಪ್ರಭುತ್ವ ವ್ಯವಸ್ಥೆಯೊಳಗಿನ ಸರ್ಕಾರದಲ್ಲಿ ನಾವು ಬದುಕುತಿದ್ದವೆ ಎಂದು ಹೇಳಿಕೊಳ್ಳವುದಕ್ಕೆ ಮುಜಗರವಾಗುತ್ತದೆ. ಒಂದುಕಡೆ ಸಾಂಪ್ರದಾಯಕವಾಗಿ ಅನುಕರಿಸಿಕೊಂಡು ಬಂದಿದ್ದ ರೈತರ ಕೃಷಿ ಜ್ಞಾನವನ್ನು ಕಿತ್ತು ಹಾಕಿ, ಅವರನ್ನು ಬಿತ್ತನೆ ಬೀಜದಿಂದ ಹಿಡಿದು ರಸಾಯನಿಕ ಗೊಬ್ಬರ, ಕೀಟನಾಶಕ ಮುಂತಾದ ಕೃಷಿಚಟುವಟಿಕೆಗಳ ಮೂಲಭೂತ ಅಗತ್ಯಗಳಿಗೆ ಪರಾವಲಂಬಿಯನ್ನಾಗಿ ಮಾಡಲಾಯಿತು. ಇನ್ನೊಂದೆಡೆ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಂತೆ ಮಾಡಿ ಅವನ ಶ್ರಮದ ಪ್ರತಿಫಲವನ್ನು ಕಾಣದ ಕೈಗಳು ಅನುಭವಿಸುವಂತಾಯಿತು. ರೈತರ ಶೋಷಣೆಗೆ ಎಷ್ಟೊಂದು ಮುಖಗಳು ಮತ್ತು ಕೈಗಳು ಎಂಬುದಕ್ಕೆ ಇದೊಂದು ಉದಾಹರಣೆ ಸಾಕು. ಇದೇ ವರ್ಷ ಪೆಬ್ರವರಿ ತಿಂಗಳಿನಲ್ಲಿ ಹುಬ್ಬಳ್ಳಿಯ ಕೃಷಿ ಮಾರುಕಟ್ಟೆ ರೈತರು ತಂದ ಈರುಳ್ಳಿ ಬೆಲೆ ದಿಡೀರನೆ ಕ್ವಿಂಟಾಲ್ ಒಂದಕ್ಕೆ 350 ರೂಪಾಯಿಗಳಿಗೆ ಕುಸಿದು ಹೋಯಿತು. ಅದೇ ದಿನ ಮಾರುಕಟ್ಟೆಯಿಂದ ಕೇವಲ 8ಕಿಲೋಮೀಟರ್ ದೂರದಲ್ಲಿರುವ ಹುಬ್ಬಳ್ಳಿ ಮತ್ತು ಧಾರವಾಡ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆ.ಜಿ.ಒಂದಕ್ಕೆ 10 ರೂಪಾಯಿನಂತೆ ಮಾರಾಟವಾಗುತಿತ್ತು. ಅಂದರೆ, ಕ್ವಿಂಟಾಲ್ ಗೆ ಸಾವಿರ ರೂಪಾಯಿ. ಈ 650ರೂಪಾಯಿಗಳು ಯಾರಿಗೆ ಸೇರುತ್ತಿದೆ ಎಂಬುದು ಈವತ್ತಿಗೂ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಬೇಡಿಕೆ ಮತ್ತು ಸರಬರಾಜು ವಿನ ಮೇಲೆ ವಸ್ತುವಿನ ಬೆಲೆ ನಿರ್ಧಾರವಾಗುತ್ತದೆ ಎಂಬ ಆರ್ಥಿಕ ಸಿದ್ಧಾಂತವಾಗಲಿ, ಮಾರುಕಟ್ಟೆ ತನ್ನ ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಲಾಭ ಮತ್ತು ನಷ್ಟವನ್ನು ನಿರ್ಧರಿಸುತ್ತದೆ ಎಂಬ ಜಾಗತೀಕರಣದ ವಕ್ತಾರರ ಖಾಲಿ ಮಾತುಗಳೆಲ್ಲಾ ಅರ್ಥಕಳೆದುಕೊಂಡಿವೆ ಎಂದು ವಿವರಿಸಲು ಇದಕ್ಕಿಂತ ಬೇರೆ ಯಾವ ಉದಾಹರಣೆ ಬೇಕು? ಈ ಕಾರಣಕ್ಕಾಗಿ ನಮ್ಮ ದೇಶದ ಖ್ಯಾತ ಆರ್ಥಿಕ ತಜ್ಞರಲ್ಲಿ ಒಬ್ಬರಾದ ಅಮಿತ್ ಬಾಧುರಿಯವರು ತಮ್ಮThis Face you Wera Apraid to See ಎಂಬ ಕೃತಿಯಲ್ಲಿ ಕೃಷಿಲೋಕದ ವಂಚನೆಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ರೈತರ ಫಲವತ್ತಾದ ಕೃಷಿಭೂಮಿ ಕೈಗಾರಿಕೆಗಳ ವಿಶೇಷ ಆಥರ್ಿಕ ವಲಯಗಳ ನೆಪದಲ್ಲಿ ಬೃಹತ್ ಕಂಪನಿಗಳ ಪಾಲಾಗುತಿದ್ದರೆ, ಈ ನೆಲದ ನಿಜವಾದ ಮಕ್ಕಳಾದ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗ ಅತಂತ್ರರಾಗಿದ್ದಾರೆ. ಅವರ ಜೀವನಾಡಿಯಾದ ಅರಣ್ಯದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ ತಮ್ಮ ತಮ್ಮ ನೆಲೆಗಳಿಂದ ಹೊರದೂಡಲ್ಪಟ್ಟಿದ್ದಾರೆ. ಮಧ್ಯಪ್ರದೇಶ, ಒರಿಸ್ಸಾ, ಛತ್ತೀಸ್ಗಡ ಈ ಮೂರು ರಾಜ್ಯಗಳಲ್ಲಿ ಲಕ್ಷಾಂತರ ಆದಿವಾಸಿ ಕುಟುಂಬಗಳು ಬೀದಿಗೆ ಬಿದ್ದಿವೆ. ಅರಣ್ಯದಲ್ಲಿ ವಾಸಿಸಲು ಹಾಗೂ ಅಲ್ಲಿನ ಕಿರು ಉತ್ಪನ್ನಗಳನ್ನು ಸಂಗ್ರಹಿಸಿಕೊಂಡು ಜೀವನ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅರಣ್ಯ ಕಾಯ್ದೆ ಅಸ್ತಿತ್ವಕ್ಕೆ ಬಂದಿದ್ದರೂ ಸಹ , ಖಾಸಾಗಿಬೃಹತ್ ಕಂಪನಿಗಳ ಜೊತೆ ಶಾಮೀಲಾಗಿರುವ ಸ್ಥಳಿಯ ಸರ್ಕಾರಗಳು ಈ ಅನಕ್ಷರಸ್ಥ ಅಮಾಯಕರನ್ನು ಅರಣ್ಯದಿಂದ ನಿರ್ಧಯವಾಗಿ ಹೊರದೂಡುತ್ತಿವೆ. ಇವರಿಗೆ ಸಧ್ಯಕ್ಕೆ ಅರಣ್ಯ ಪ್ರದೇಶಗಳಲ್ಲಿ ಹೆಚ್ಚು ಕ್ರಿಯಾಶೀಲರಾಗಿರುವ ನಕ್ಸಲಿಯರು ಮಾತ್ರ ಆಪತ್ಬಾಂಧವರೆನಿಸಿದ್ದಾರೆ. ಬುಡಕಟ್ಟು ಜನಾಂಗದ ಅತಂತ್ರ ಸ್ಥಿತಿ ಪರೋಕ್ಷವಾಗಿ ನಕ್ಸಲಿಯರಿಗೆ ವರವಾಗಿದೆ. ಅನೇಕ ಗುಂಪುಗಳಾಗಿ ಒಡೆದು ಹೋಗಿರುವ ಮಾವೋವಾದಿ ನಕ್ಸಲಿಯರ ತಂಡಗಳಿಗೆ ಖಾಸಾಗಿ ಗಣಿ ಕಂಪನಿಗಳಿಂದ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಫ್ತಾ ಹೆಸರಿನಲ್ಲಿ ಹರಿದು ಬರುತ್ತಿದೆ. ವರ್ತಮಾನದ ಭಾರತದಲ್ಲಿ ಜಾರಿಯಲ್ಲಿರುವ ಅಭಿವೃದ್ಧಿಯ ಮಾದರಿಗಳನ್ನ ನೋಡಿದಾಗ, ಅಭಿಮಾನಕ್ಕಿಂತ ಆತಂಕವೇ ಸೃಷ್ಟಿಯಾಗುತ್ತಿದೆ. ಇದೇ ಅಗಸ್ಟ್ 17 ರಂದು ಸಂಸತ್ತಿನಲ್ಲಿ ಮಂಡಿಸಲಾದ ಕೇಂದ್ರ ಮಹಾಲೇಖಪಾಲರ ವರದಿ ಅಭಿವೃದ್ಧಿಯ ಕರಾಳ ಮುಖವನ್ನು ಅನಾವರಣಗೊಳಿಸಿದೆ. ಕಲ್ಲಿದ್ದಲು ನಿಕ್ಷೇಪ ಹರಾಜಿನಲ್ಲಿ 1.86 ಲಕ್ಷ ಕೋಟಿ ಮತ್ತು ದೆಹಲಿ ವಿಮಾನ ನಿಲ್ದಾಣದ ನಿರ್ವಹಣೆಯ ಗುತ್ತಿಗೆಯಲ್ಲಿನ ಅವ್ಯವಹಾರದಿಂದ 88ಸಾವಿರದ 337 ಕೋಟಿ ಹಾಗೂ ಹೆಚ್ಚುವರಿ ಕಲ್ಲಿದ್ದಲು ನಿಕ್ಷೇಪ ಹರಾಜಿನಿಂದ 29ಸಾವಿರದ 33ಕೋಟಿ ರೂಪಾಯಿಗಳು ಬೊಕ್ಕಸಕ್ಕೆ ನಷ್ಟವಾಗಿದೆ. ಸಿ.ಎ.ಜಿ. ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದು ಅಭಿವೃದ್ಧಿಯ ಮುಖವಾಡ ಹಾಕಿಕೊಂಡು ಬಡತನ ನಿವಾರಣೆಯ ನೆಪದಲ್ಲಿ ನಡೆಯುತ್ತಿರುವ ಶೋಷಣೆಯ ನಾಟಕವಲ್ಲದೆ ಮತ್ತೇನು? ನೋಬಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಹಾಗೂ ನೆರೆಯ ಬಂಗ್ಲಾ ದೇಶದ ಗ್ರಾಮೀಣ ಬ್ಯಾಂಕ್ ನ ಸಂಸ್ಥಾಪಹ ಮಹಮದ್ ಯೂನಸ್ ರವರು 2009ರಲ್ಲಿ ದೆಹಲಿಯ ಇಂಡಿಯನ್ ಇನ್ಸಿಟ್ಯೂಟ್ ಆಪ್ ಸೋಷಿಯಲ್ ಸೈನ್ಸ್ ಸಂಸ್ಥೆಯಲ್ಲಿ ಭಾರತದ ಶ್ರೇಷ್ಠ ಆರ್ಥಿಕ ಚಿಂತಕರಾಗಿದ್ದ ಪ್ರೊ. ಡಿ.ಟಿ.ಲಕ್ಡವಾಲ ಸ್ಮಾರಕ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಬಡತನಮುಕ್ತ ಜಗತ್ತು ಕುರಿತು ಮಾತನಾಡುತ್ತಾ ‘ ಬಡತನವೆಂಬುದು ಒಂದು ವ್ಯವಸ್ಥೆ ನಿಜ. ಇದು ಬಡವರಿಂದ ನಿರ್ಮಿತವಾಗಿಲ್ಲ, ಸರ್ಕಾರಗಳಿಂದ ಮತ್ತು ಅವುಗಳ ಅಂಗ ಸಂಸ್ಥೆಗಳಿಂದ ನಿರ್ಮಾಣವಾಗಿದೆ ಎಂದು ಪ್ರತಿಪಾದಿಸಿದ್ದರು. ಇವತ್ತಿನ ಅಭಿವೃದ್ಧಿಯ ಮಾದರಿಗಳನ್ನು ಅವಲೋಕಿಸಿದರೆ, ಅವರ ಮಾತು ನಿಜವೆನಿಸುತ್ತಿದೆ.  ]]>

‍ಲೇಖಕರು G

August 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This