ಬಡವಾ ನೀ ಮಡಗ್ದಂಗಿರು!

ರಾಘವೇಂದ್ರ ಜೋಶಿ

ಯಾವತ್ತೋ ಕೇಳಿದ್ದ ಕತೆಯೊಂದನ್ನು ಚಿಕ್ಕದಾಗಿ ಹೇಳುವೆ.ಈಗಾಗಲೇ ಕೇಳಿದ್ದರೆ ಕಲ್ಲು ಹೊಡೀಬೇಡಿ.

ಒಂದೂರಲ್ಲಿ ಒಬ್ಬ ರಾಜ.ಅವನಿಗೊಬ್ಬ ಮಂತ್ರಿ.ಹಾಗೇನೇ ಒಬ್ಬ ಸೇವಕ.ಈ ಸೇವಕನದು ಬಲು ಕಷ್ಟದ ಕೆಲಸ.ಬೆಳಿಗ್ಗೆಯಿಂದ ತಡರಾತ್ರಿಯವರೆಗೂ ರಾಜನ ಹಿಂದೆ.ಕಾಲೊತ್ತುವದು,ಗಾಳಿ ಬೀಸುವದು,ಪೀಕುದಾನಿ ಹಿಡಿಯುವದು,ಕುದುರೆ ತೊಳಿಯುವದು-etc etc..ಒಟ್ಟಿನಲ್ಲಿ ಮೈಮುರಿಯೋ ಕೆಲಸ.ಆದರೆ ಸೇವಕನಿಗೆ ತನ್ನ ಸಂಬಳದ ಬಗ್ಗೆ ಸುಖವಿಲ್ಲ.ದಿನದಲ್ಲಿ ಯಾವಾಗಲೋ ಒಮ್ಮೆ ಬಂದು ಮುಖ ತೋರಿಸುವ ಮಂತ್ರಿಯ ಸಂಬಳದ ಬಗ್ಗೆ ಅವನಿಗಿದೆ ತಕರಾರು.ಹೀಗಾಗಿ ಜೋಲುಮುಖ. ಹಿಂಗ್ಯಾಕಿದೀಯೋ ಅಂತ ಕೇಳಿದ ರಾಜನಿಗೆ ಸೇವಕನ ಡೌಟು ಅರ್ಥವಾಯ್ತು.ಆದರೆ ಏನೂ ಹೇಳದೇ ನಕ್ಕ.

ಒಂದು ದಿನ ಊರು ಸುತ್ತಲು ಹೋದ ರಾಜ.ಹಿಂದೆ ಸೇವಕ. ದೂರದಲ್ಲೆಲ್ಲೋ ನೂರಾರು ಜನ ಗುಂಪುಗುಂಪಾಗಿ ಹೋಗುತ್ತಿರುವದನ್ನು ನೋಡಿದ ರಾಜನಿಗೆ ಅಚ್ಚರಿ. “ಯಾರವರು?” ಎಂದು ಸೇವಕನಿಗೆ ಪ್ರಶ್ನೆ.ಈತ ಅಷ್ಟು ದೂರ ಓಡಿ ಹೋಗಿ ವಿಚಾರಿಸಿಕೊಂಡು ಬಂದು ಹೇಳಿದ:ಪಕ್ಕದ ಊರಿನವರು ಸ್ವಾಮೀ..

“ಎಲ್ಲಿಗೆ ಹೋಗ್ತೀದಾರಂತೆ?” ರಾಜನ ಮತ್ತೊಂದು ಪ್ರಶ್ನೆ.ಸೇವಕ ಮತ್ತೇ ಓಡಿ ಹೋಗಿ ತಿಳ್ಕೊಂಡು ಬಂದ:ಪಕ್ಕದ ಇನ್ನೊಂದು ಊರಿಗೆ ಸ್ವಾಮೀ..

“ಯಾಕೆ ಹೋಗ್ತೀದಾರಂತೆ?” ಸೇವಕನ ಓಟ ಮತ್ತೇ ಶುರು:ಅಕ್ಕಿ ಮಾರೋಕೆ ಹೋಗ್ತೀದಾರಂತೆ ಸ್ವಾಮೀ..

“ಅವರೂರಲ್ಲೇ ಯಾಕೆ ಮಾರ್ತಿಲ್ಲ?”

ಸೇವಕನ ಓಟ..ಓಟ..ಓಟ:”ಅವರೂರಲ್ಲಿ ಬೆಲೆ ಬಿದ್ದು ಹೋಗಿದೆಯಂತೆ ಸ್ವಾಮೀ..

ಅಷ್ಟರಲ್ಲಿ ಅಲ್ಲಿಗೆ ಮಂತ್ರಿಯ ಆಗಮನ.ಮಂತ್ರಿಗೂ ರಾಜನ ಅದೇ ಪ್ರಶ್ನೆ: “ಯಾರವರು?”

ಮಂತ್ರಿಯ ಸಮಾಧಾನದ ಉತ್ತರ:

ಸ್ವಾಮೀ,ಅವರು ನಮ್ಮ ರಾಜ್ಯದವರೇ.ಇಂಥ ಊರಿನ ರೈತರು.ಅಕ್ಕಿ ಬೆಳೆದಿದ್ದಾರೆ.ಆದರೆ ಅವರ ಊರಿನಲ್ಲಿ ಅಕ್ಕಿಯ ಬೆಲೆ ಬಿದ್ದೋಗಿದೆ.ಹೀಗಾಗಿ ಇನ್ನೊಂದು ಊರಿಗೆ ಮಾರಲು ಹೋಗುತ್ತಿದ್ದಾರೆ.ಎಲ್ಲರೂ ಅಕ್ಕಿ ಬೆಳೀಬಾರ್ದು ಅಂತ ಹೇಳಿ,ಯಾರ್ಯಾರು ಏನೇನು ಬೆಳೀಬೇಕೂಂತ ಹೇಳಿ ಬಂದಿದೀನಿ.ಆದರೆ ಸುಳ್ಳು ಲೆಕ್ಕ ಕೊಟ್ಟಿದ್ರು.ಲೆಕ್ಕ ಮಾಡಿದೀನಿ.ಸರಿಯಾಗಿ ನೂರ ಹನ್ನೆರಡು ಬಂಡಿಗಳಿವೆ.ಒಂದೊಂದು ಬಂಡಿಯಲ್ಲೂ ಇಪ್ಪತ್ತು ಮೂಟೆಗಳಿವೆ.ಟೋಲ್ ಗೇಟ್ ಅಲ್ಲಿ ಟ್ಯಾಕ್ಸು ಕಟ್ಟುವಂತೆ ಹೇಳಿ ರಸೀತಿ ಹರಿದು ಬಂದಿದ್ದೇನೆ..”

ಇದನ್ನೆಲ್ಲ ಕೇಳುತ್ತಿದ್ದ ಸೇವಕನತ್ತ ರಾಜ ನೋಡಿ ನಕ್ಕ.

ಸೇವಕ ಮತ್ತೆಂದೂ ಸಂಬಳದ ಬಗ್ಗೆ ತಕರಾರು ಮಾಡಿದಂತಿಲ್ಲ..

‍ಲೇಖಕರು G

September 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

2 ಪ್ರತಿಕ್ರಿಯೆಗಳು

 1. praveen kulkarni

  Joshi sir,

  Ide kathe bere version kelidde. Adrallu same sainika vs mantri but naayi mari haakirutte.. baNNa yaavdu, gandu, heNNu estu.. heege saagutte kathe.

  olle kathe mattomme nenapu maadiddakke dhanyavadagaLu.

  ಪ್ರತಿಕ್ರಿಯೆ
 2. ಬಸು ಪಾಟೀಲ

  ಅಹ೯ತೆಯ ಅನುಗುಣವಾಗಿ ಸೌಲಭ್ಯ ಪಡೆಯಬೆಕೆಂಬುದಲ್ಲವೇ ಸರ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: